For Quick Alerts
ALLOW NOTIFICATIONS  
For Daily Alerts

ಯುಗಾದಿ ಆಚರಣೆ ಹೀಗಿರಲಿ- ಸುಖ, ಶಾಂತಿ, ಸಮೃದ್ಧಿ ನಿಮ್ಮದಾಗುತ್ತದೆ

ಯುಗಾದಿ ಎನ್ನುವುದು ಎರಡು ಸಂಸ್ಕೃತ ಪದಗಳಿಂದ ಬಂದಿದೆ. ಯುಗ' ಎಂದರೆ ವರ್ಷ ಆದಿ' ಎಂದರೆ ಆರಂಭವೆಂದು ಅರ್ಥ. ಚೈತ್ರ ಮಾಸದ ಮೊದಲ ದಿನವನ್ನು ಯುಗಾದಿಯೆಂದು ಆಚರಿಸಲಾಗುತ್ತದೆ.

By Hemanth
|
ಯುಗಾದಿ 2018 : ಹಬ್ಬದ ಆಚರಣೆ ಹೀಗಿರಲಿ | ಹಬ್ಬಕ್ಕೆ ಏನೆಲ್ಲಾ ಬೇಕು? | Oneindia Kannada

ಪ್ರತಿಯೊಂದು ಹಬ್ಬಕ್ಕೂ ಅದರದ್ದೇ ಆದಂತಹ ಪ್ರಾಮುಖ್ಯತೆ ಇರುತ್ತದೆ. ಯುಗಾದಿ ಕೂಡ ಹಾಗೆ. ದಕ್ಷಿಣ ಭಾರತದಲ್ಲಿ ಯುಗಾದಿಯನ್ನು ಹಿಂದೂಗಳ ಹೊಸವರ್ಷವೆಂದು ಆಚರಣೆ ಮಾಡಲಾಗುತ್ತದೆ. ದೇಶದ ಇತರ ಭಾಗಗಳಲ್ಲಿ ಯುಗಾದಿಯನ್ನು ವಿವಿಧ ಹೆಸರಿನಿಂದ ಆಚರಿಸಲಾಗುತ್ತದೆ. ಆದರೆ ಎಲ್ಲಾ ರಾಜ್ಯಗಳ ಆಚರಣೆಯ ಮಹತ್ವ ಮಾತ್ರ ಹೊಸ ವರ್ಷವನ್ನು ಸ್ವಾಗತಿಸುವುದು. ಯುಗಾದಿ ಎಂದರೆ ಏನು? ಅದರ ಪ್ರಾಮುಖ್ಯತೆ ಏನು ಎನ್ನುವ ಬಗ್ಗೆ ಬೋಲ್ಡ್ ಸ್ಕೈ ಮೂಲಕ ಈ ಲೇಖನದಲ್ಲಿ ತಿಳಿದುಕೊಳ್ಳುವ. ಬೇವು- ಬೆಲ್ಲ ಸವಿಯುವ ಯುಗಾದಿ ಹಬ್ಬದ ವೈಶಿಷ್ಟ್ಯತೆ

ಯುಗಾದಿ ಎನ್ನುವುದು ಎರಡು ಸಂಸ್ಕೃತ ಪದಗಳಿಂದ ಬಂದಿದೆ. ಯುಗ' ಎಂದರೆ ವರ್ಷ ಆದಿ' ಎಂದರೆ ಆರಂಭವೆಂದು ಅರ್ಥ. ಚೈತ್ರ ಮಾಸದ ಮೊದಲ ದಿನವನ್ನು ಯುಗಾದಿಯೆಂದು ಆಚರಿಸಲಾಗುತ್ತದೆ. ಹಿಂದೂ ಪುರಾಣಗಳ ಪ್ರಕಾರ ಬ್ರಹ್ಮ ದೇವನು ಯುಗಾದಿಯಂದು ಈ ಬ್ರಹ್ಮಾಂಡವನ್ನು ಸೃಷ್ಟಿಸಿದ ಮತ್ತು ಅದನ್ನು ಸುಂದರವಾಗಿಸಲು ಹಲವಾರು ತಿದ್ದುಪಡಿಗಳನ್ನು ಮಾಡಿದ. ಬೋಲ್ಡ್ ಸ್ಕೈ ಅಡುಗೆ ಮನೆಯಲ್ಲಿ 8 ಯುಗಾದಿ ಖಾದ್ಯಗಳು

ಮನುಷ್ಯ ಕೂಡ ತನ್ನ ಹಿಂದಿನ ತಪ್ಪುಗಳನ್ನು ತಿದ್ದಿಕೊಂಡು ಜೀವನದಲ್ಲಿ ಹೊಸ ಗುರಿಯನ್ನು ಇಟ್ಟುಕೊಂಡು ಸಾಧನೆಗಳನ್ನು ಮಾಡಬೇಕು. ಇದರಿಂದ ಸುಖ, ಶಾಂತಿ ಹಾಗೂ ಸಮೃದ್ಧಿ ಸಿಗುತ್ತದೆ. ಈ ಸಲದ ಯುಗಾದಿಯಂದು ಕೆಲವೊಂದು ಆಚರಣೆಗಳನ್ನು ಮಾಡಿಕೊಂಡು ನಿಮ್ಮ ಜೀವನವನ್ನು ಸಮೃದ್ಧಿಯಾಗಿಸಿ....

ಯುಗಾದಿಯ ಆರಂಭ

ಯುಗಾದಿಯ ಆರಂಭ

ಯುಗಾದಿಯು ಬೆಳಿಗ್ಗೆ 4.30ಕ್ಕೆ ಆರಂಭವಾಗುತ್ತದೆ. ಮನೆಯ ಹಿರಿಯರು ಈ ವೇಳೆ ಎದ್ದು ಮಂತ್ರ ಪಠಿಸಬೇಕು ಮತ್ತು ಭಜನೆ ಮಾಡಬೇಕು. ಯುಗಾದಿಯಂದು ಇದನ್ನು ತಪ್ಪದೆ ಮಾಡಲೇಬೇಕು.

ತೈಲಅಭ್ಯಂಜನ

ತೈಲಅಭ್ಯಂಜನ

ಯುಗಾದಿಯಂದು ಮಾಡಲೇಬೇಕಾದ ಮತ್ತೊಂದು ಆಚರಣೆಯೆಂದರೆ ಎಣ್ಣೆಸ್ನಾನ. ನಾವು ದೀಪಾವಳಿಗೆ ಹೀಗೆ ಮಾಡುತ್ತೇವೆ. ಆದರೆ ಯುಗಾದಿಯಂದು ಕೂಡ ಎಣ್ಣೆ ಹಚ್ಚಿಕೊಂಡು ಸ್ನಾನ ಮಾಡಬೇಕು. ಇದನ್ನು `ತೈಲಅಭ್ಯಂಜನ ಸ್ನಾನ'ವೆಂದು ಕರೆಯಲಾಗುತ್ತದೆ. ಯುಗಾದಿಯಂದು ಬೇಗನೆ ಎದ್ದು ಪ್ರತಿಯೊಬ್ಬರು ಎಣ್ಣೆಸ್ನಾನ ಮಾಡಬೇಕು. ಈ ದಿನದಂದು ಬ್ರಹ್ಮ ಪೂಜೆಯನ್ನು ಮಾಡಬೇಕು. ಯುಗಾದಿಯಂದು ಬ್ರಹ್ಮದೇವರು ಬ್ರಹ್ಮಾಂಡವನ್ನು ಸೃಷ್ಟಿಸಿದ ಕಾರಣದಿಂದಾಗಿ ಬ್ರಹ್ಮ ಪೂಜೆ ಮಾಡಲಾಗುತ್ತದೆ.

ಯುಗಾದಿ ಪೂಜೆ

ಯುಗಾದಿ ಪೂಜೆ

ಪ್ರತಿಯೊಂದು ಮನೆಯಲ್ಲೂ ಯುಗಾದಿಯಂದು ದೇವದೇವತೆಗಳನ್ನು ಪೂಜಿಸಲಾಗುತ್ತದೆ. ಭಕ್ತರು ಗಣಪತಿ ಪೂಜೆ, ಲಕ್ಷ್ಮೀ ಪೂಜೆ, ಉಮಾಮಹೇಶ್ವರ ಪೂಜೆ, ನಾರಾಯಣ ಪೂಜೆ, ಸಚಿಇಂದ್ರ ಪೂಜೆ, ವಾಣಿ ಹಿರಣ್ಯಗರ್ಭ ಪೂಜೆ, ಆರುಂಧತಿ ವೈಶಿಷ್ಠ ಪೂಜೆ ಇತ್ಯಾದಿಗಳನ್ನು ಮಾಡಲಾಗುತ್ತದೆ. ಜೀವನದಲ್ಲಿ ಸುಖ ಹಾಗೂ ಸಂತೋಷ ಬೇಕಾದರೆ ಈ ಪೂಜೆಗಳನ್ನು ಮಾಡಲೇಬೇಕು.

ಯುಗಾದಿ ಪೂಜೆ

ಯುಗಾದಿ ಪೂಜೆ

ಯುಗಾದಿಯಂದು ವಿವಿಧ ರೀತಿಯ ಅಡುಗೆಗಳನ್ನು ಮಾಡಲಾಗುತ್ತದೆ. ಯುಗಾದಿಯಂದು ಕರ್ನಾಟಕದಲ್ಲಿ ಬೇವುಬೆಲ್ಲವನ್ನು ನೀಡಿಲಾಗುತ್ತದೆ ಮತ್ತು ಆಂಧ್ರಪ್ರದೇಶದಲ್ಲಿ ಯುಗಾದಿ ಪಚಡಿ ಮಾಡಲಾಗುತ್ತದೆ. ಈ ಪಚಡಿಯನ್ನು ಕಹಿ, ಹುಳಿ, ಸಿಹಿ, ಉಪ್ಪು ಮತ್ತು ಕರವಾಗಿ ಮಾಡಲಾಗುತ್ತದೆ. ಇದು ಜೀವನದ ಆರು ಭಾವನಾತ್ಮಕ ಅಂಶಗಳೆಂದು ಪರಿಗಣಿಸಲಾಗಿದೆ. ಇದನ್ನು ಪೂಜೆ ಮಾಡಿ ಪ್ರಸಾದದ ರೂಪದಲ್ಲಿ ವಿತರಿಸಲಾಗುತ್ತದೆ. ಹೊಸ ವರ್ಷಕ್ಕೆ ಇರಲೇಬೇಕು 'ಯುಗಾದಿ ಪಚಡಿ'

ಯುಗಾದಿ ಪಂಚಾಂಗ ಪೂಜೆ

ಯುಗಾದಿ ಪಂಚಾಂಗ ಪೂಜೆ

ಯುಗಾದಿಯಂದು ಪಂಚಾಂಗ ಶ್ರವಣ ಮಾಡುವುದು ಪ್ರಮುಖ ಅಂಶವಾಗಿದೆ. ಇದನ್ನು ಯುಗಾದಿಯಂದು ಸಂಜೆ ವೇಳೆ ಮಾಡಲಾಗುತ್ತದೆ. ಪಂಚಾಂಗವನ್ನು ಒಂದು ಕಾಲ್ಮಣೆಯಲ್ಲಿ ಇಟ್ಟುಕೊಂಡು ಅದರ ಮೇಲೆ ಹೂ, ಅರಶಿನ, ಗಂಧ ಮತ್ತು ಅಕ್ಕಿಯನ್ನು ಹಾಕಿ. ಇದರ ಬಳಿಕ ಪೂಜೆ ಮಾಡಲಾಗುತ್ತದೆ. ಈ ವೇಳೆ ವರ್ಷದ ಜ್ಯೋತಿಷ್ಯವನ್ನು ಹೇಳಲಾಗುತ್ತದೆ.

ಚಳಿವೇಂದ್ರಂ

ಚಳಿವೇಂದ್ರಂ

ಯುಗಾದಿ ವೇಳೆ ಉರಿಬಿಸಿಲು ಹೆಚ್ಚಾಗಿ ಬರ ಸಮಸ್ಯೆ ಉಂಟಾಗುವ ಕಾರಣದಿಂದಾಗಿ ಹಲವಾರು ಮಂದಿ ಯುಗಾದಿಯಂದು ನೀರಿನ ಶಿಬಿರಗಳನ್ನು ಆಯೋಜಿಸುತ್ತಾರೆ. ಇದು ನಾಲ್ಕು ತಿಂಗಳ ತನಕ ಮುಂದುವರಿಯುತ್ತದೆ. ಇದನ್ನು ಚಳಿವೇಂದ್ರಂ ಎಂದು ಕರೆಯಲಾಗುತ್ತದೆ.

English summary

What You Need To Do On Ugadi Festival

Ugadi is the name of the celebration of Hindu New Year in Karnataka and Andhra Pradesh. This is celebratedt hroughout the country in different names. It is celebrated in the name of Gudi Padwa in Maharashtra and people in West Bengal celebrate it as Nobo-borsho. The feelings of the occasion are the same everywhere and that is to welcome New Year with new hope, aspiration, happiness and prosperity.
X
Desktop Bottom Promotion