For Quick Alerts
ALLOW NOTIFICATIONS  
For Daily Alerts

ಭಗವಾನ್ ಕೃಷ್ಣನನ್ನು ಪರೀಕ್ಷಿಸಲು ಹೋಗಿ ಸೋತ ಬ್ರಹ್ಮ ದೇವ!

By Manohar Shetty
|

ವಿಷ್ಣು ಭಗವಾನರ ಇನ್ನೊಂದು ರೂಪವಾಗಿರುವ ಶ್ರೀಕೃಷ್ಣನನ್ನು ಮೆಚ್ಚದವರು ಯಾರೂ ಇಲ್ಲ. ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಶ್ರೀಕೃಷ್ಣನೆಂದರೆ ಅಚ್ಚುಮೆಚ್ಚು. ಅತಿಯಾಗಿ ತುಂಟತನ ಮಾಡುವ ಮಕ್ಕಳನ್ನು ಕೃಷ್ಣನಿಗೆ ಹೋಲಿಸುವುದುಂಟು, ಕೃಷ್ಣನ ಹೆಸರಿನಿಂದ ಕರೆಯುವುದೂ ಇದೆ. ತಮ್ಮ ಪ್ರತಿಯೊಂದು ಅವತಾರದಲ್ಲಿ ಕೂಡ ಲೋಕಕಲ್ಯಾಣದ ಉದ್ದೇಶವನ್ನಿಟ್ಟುಕೊಂಡಿರುವ ಭಗವಾನ್ ಕೃಷ್ಣನ ದ್ವಾಪರ ಯುಗದ ಅವತಾರವು ಲೋಕಕಲ್ಯಾಣವನ್ನು ಪ್ರತಿಪಾದಿಸುತ್ತದೆ.

ಪಾಂಡವರಿಗೆ ಸಹಾಯ ಮಾಡುವ ಕೃಷ್ಣ ಪರಮಾತ್ಮನು ಧರ್ಮದ ಕಡೆಗೆ ಇರುತ್ತಾರೆ. ಮಾನವ ರೂಪಲ್ಲಿ ಭಗವಂತನು ಧರೆಗಿಳಿದು ಬಂದು ಮಾನವರಂತೆಯೇ ಬದುಕಿ ಜನರನ್ನು ಸನ್ಮಾರ್ಗಕ್ಕೆ ತರುವ ಕಾರ್ಯವನ್ನು ಭಗವಾನ್ ಕೃಷ್ಣನು ಎಲ್ಲಾ ಯುಗದಲ್ಲಿಯೂ ಮಾಡುತ್ತಲೇ ಬಂದಿದ್ದಾರೆ. ಬಾಲ್ಯದ ದಿನಗಳನ್ನು ಕೃಷ್ಣನು ತುಂಟಾಟಗಳಿಂದಲೇ ಕಳಿಯುತ್ತಾರೆ. ಸೆರೆಮನೆಯಲ್ಲಿ ಹುಟ್ಟಿ ದ್ವಾರಕೆಯಲ್ಲಿ ಬೆಳೆಯುವ ಕೃಷ್ಣನಿಗೆ ಎಲ್ಲರೂ ಸಮಾನರೇ. ಬೇಧವನ್ನು ಮಾಡದೆಯೇ ಎಲ್ಲರೊಂದಿಗೂ ಬೆರೆತುಕೊಳ್ಳುವ ಮನಸ್ಸು ಪುಟ್ಟ ಕಂದಮ್ಮ ಕೃಷ್ಣನದ್ದಾಗಿದೆ.

ಅಷ್ಟೇ ಏಕೆ, ನಮಗೆಲ್ಲರಿಗೂ ಗೊತ್ತಿರುವ ಹಾಗೆ ಶ್ರೀಕೃಷ್ಣನು ಪ್ರೀತಿ ಮತ್ತು ಅನುರಾಗಕ್ಕೆ ಇನ್ನೊಂದು ಹೆಸರಾಗಿದ್ದಾರೆ. ನಮಗೆಲ್ಲರಿಗೂ ಸ್ಫೂರ್ತಿದಾಯಕರು ಎಂದೆನಿಸಿರುವ ಕೃಷ್ಣನ ಪ್ರೀತಿ ಅದು ಬೆಲೆಕಟ್ಟಲು ಸಾಧ್ಯವಾಗದೇ ಇರುವಂತಹದ್ದು. ರಾಧೆಯ ಬಗೆಗಿನ ಅವರ ಪ್ರೀತಿಯಾಗಿರಬಹುದು ಇದು ಶತಶತಮಾನಗಳವರೆಗೂ ಎಲ್ಲಾ ಪ್ರೇಮಿಗಳಿಗೂ ಒಂದು ಪ್ರೇರಣೆಯಾಗಿದೆ. ತನ್ನ ಬಾಲಲೀಲೆಗಳು, ಅಮ್ಮನನ್ನು ಕಾಡಿಸಿದ್ದು, ಗೋಪಿಕಾ ಸ್ತ್ರೀಯರು ಕೃಷ್ಣನ ಮೇಲೆ ಇರಿಸಿದ್ದ ಅನುರಾಗ ಇಂತಹ ಅಂಶಗಳನ್ನು ನಾವು ತಿಳಿದುಕೊಳ್ಳುತ್ತಾ ಹೋದಂತೆ ಕೃಷ್ಣನು ಎಷ್ಟು ತುಂಟರಾಗಿದ್ದರು ಮತ್ತು ಅವರ ಸ್ನೇಹಕ್ಕೆ ಎಲ್ಲರು ಹೇಗೆ ಹಾತೊರೆಯುತ್ತಿದ್ದರು ಎಂಬುದನ್ನು ಗಮನಿಸಿಕೊಳ್ಳಬಹುದಾಗಿದೆ.

ತನ್ನ ಊರಿನ ಪ್ರಜೆಗಳನ್ನು ರಕ್ಷಿಸಲು ಗೋವರ್ಧನ ಗಿರಿಯನ್ನು ಕಿರುಬೆರಳಿನಲ್ಲಿ ಎತ್ತಿದ ಕೃಷ್ಣನ ಸಾಹಸವನ್ನು ಎಲ್ಲರೂ ಮೆಚ್ಚಿಕೊಳ್ಳುತ್ತಾರೆ. ತನ್ನ ಭಕ್ತರನ್ನು ಕಷ್ಟದ ಸಮಯದಲ್ಲಿ ಕೃಷ್ಣನು ಕಾಪಾಡುತ್ತಿದ್ದ ವಿಧಾನ ನೋಡಿದಾಗ ಭಕ್ತರ ಮೇಲೆ ಅವರಿಗಿದ್ದ ಪ್ರೇಮ ಮತ್ತು ಅನುರಾಗವನ್ನು ಅಳೆಯಲು ಸಾಧ್ಯವೇ ಇಲ್ಲ. ಒಮ್ಮೆ ಕೃಷ್ಣನ ಗೆಳೆಯರು ಸಂಕಷ್ಟದಲ್ಲಿದ್ದಾಗ ಭಗವಂತ ಕೃಷ್ಣನು ಏನು ಮಾಡಿದರು ಎಂಬುದನ್ನು ಇಂದಿನ ಲೇಖನದಲ್ಲಿ ನಾವು ವಿವರಿಸುತ್ತಿದ್ದೇವೆ.

ತನ್ನ ಗೆಳೆಯರೊಂದಿಗೆ ಆಟವಾಡುತ್ತಿದ್ದಾಗ

ತನ್ನ ಗೆಳೆಯರೊಂದಿಗೆ ಆಟವಾಡುತ್ತಿದ್ದಾಗ

ಗೋಕುಲದ ಉದ್ಯಾನದಲ್ಲಿ ಒಂದೊಮ್ಮೆ ಕೃಷ್ಣನು ತನ್ನ ಸ್ನೇಹಿತರೊಂದಿಗೆ ಆಟವಾಡುತ್ತಿದ್ದರು. ಬ್ರಹ್ಮನಿಗೆ ಕೃಷ್ಣನ ಪ್ರೀತಿಯನ್ನು ಪರೀಕ್ಷಿಸುವ ಮನಸ್ಸಾಗುತ್ತದೆ. ತನ್ನ ಗೆಳೆಯರು ಮತ್ತು ಗೋವುಗಳೊಂದಿಗೆ ಕೃಷ್ಣನು ಹೇಗೆ ಪ್ರೀತಿಯಲ್ಲಿರುತ್ತಾರೆ ಎಂಬುದನ್ನು ಪರಿಶೀಲಿಸುವ ಮನಸ್ಸು ಬ್ರಹ್ಮನಿಗೆ ಉಂಟಾಗುತ್ತದೆ. ಕೃಷ್ಣನು ಇಲ್ಲದಿರುವ ಸಮಯದಲ್ಲಿ ಬ್ರಹ್ಮನು ಗೋವುಗಳನ್ನು ಮತ್ತು ಕೃಷ್ಣನ ಸ್ನೇಹಿತರುನ್ನು ಮರೆಮಾಡುತ್ತಾರೆ. ಕೃಷ್ಣನು ಸ್ವತಃ ಭಗವಂತನಾಗಿದ್ದು ಆತನಿಗೆ ಹಿಂದಿನ ಮತ್ತು ಭವಿಷ್ಯತ್ತಿನ ಅರಿವು ಇದ್ದೇ ಇರುತ್ತದೆ. ಆತನಿಂದ ಯಾರೂ ಏನನ್ನೂ ಮುಚ್ಚಿಡಲು ಸಾಧ್ಯವಿಲ್ಲ.

ಗೋವುಗಳನ್ನು ಮತ್ತು ಸ್ನೇಹಿತರನ್ನು ಅಡಗಿಸಿದ ಬ್ರಹ್ಮ

ಗೋವುಗಳನ್ನು ಮತ್ತು ಸ್ನೇಹಿತರನ್ನು ಅಡಗಿಸಿದ ಬ್ರಹ್ಮ

ಬ್ರಹ್ಮನು ಅವರೆಲ್ಲರನ್ನೂ ಯೋಗನಿದ್ದೆಗೆ ಒಳಪಡಿಸಿದರು. ಯೋಗನಿದ್ದೆಯಲ್ಲಿ ತನ್ನ ಸುತ್ತಮುತ್ತ ಏನು ನಡೆಯುತ್ತಿದೆ ಎಂಬುದು ವ್ಯಕ್ತಿಗೆ ಅರಿವಿರುವುದಿಲ್ಲ. ತಮ್ಮನ್ನು ಯಾರು ಕರೆದೊಯ್ದರು ಎಲ್ಲಿಗೆ ಕರೆದೊಯ್ದರು ಎಂಬುದೂ ಅವರಿಗೆ ಅರಿವಿರುವುದಿಲ್ಲ. ಅದೇ ರೀತಿ ಅವರಿಗೆ ಏನೂ ನೆನಪಿರುವುದಿಲ್ಲ. ಬ್ರಹ್ಮನ ಈ ಪರೀಕ್ಷೆಯ ಕುರಿತು ಕೃಷ್ಣನು ಮೊದಲೇ ತಿಳಿದಿರುತ್ತಾರೆ. ಅಸಾಧ್ಯವಾಗಿರುವಂತಹದ್ದನ್ನು ಸಾಧ್ಯವಾಗಿಸುವ ಶಕ್ತಿ ಕೃಷ್ಣನಿಗಿದೆ. ಆತ ತನ್ನ ಸ್ನೇಹಿತರು ಮತ್ತು ಗೋವುಗಳು ಎಲ್ಲಿವೆ ಎಂಬುದನ್ನು ಕಂಡುಕೊಳ್ಳುತ್ತಾರೆ.

ಕೃಷ್ಣನನ್ನು ನೋಡಲು ಬ್ರಹ್ಮ ಪುನಃ ಬರುತ್ತಾರೆ

ಕೃಷ್ಣನನ್ನು ನೋಡಲು ಬ್ರಹ್ಮ ಪುನಃ ಬರುತ್ತಾರೆ

ಬ್ರಹ್ಮನು ಕೆಲವು ದಿನಗಳವರೆಗೆ ಕೃಷ್ಣನ ಪ್ರಕ್ರಿಯೆಗಾಗಿ ಕಾಯುತ್ತಾರೆ. ಆದರೆ ಪರಿಸ್ಥಿತಿಯ ಬಗ್ಗೆ ಅವರು ಯಾವುದೇ ಮಾಹಿತಿಯನ್ನು ನೀಡುವುದಿಲ್ಲ. ಏನಾಗುತ್ತಿದೆ ಎಂಬುದನ್ನು ಕುರಿತು ಬ್ರಹ್ಮನೇ ಸ್ವತಃ ವಿಸ್ಮಯಕ್ಕೆ ಒಳಗಾಗಬೇಕು ಎಂಬುದು ಕೃಷ್ಣನ ಬಯಕೆಯಾಗಿರುತ್ತದೆ. ಒಬ್ಬ ಕೃಷ್ಣನಲ್ಲದೆ ಹಲವಾರು ಕೃಷ್ಣನು ಗೋಕುಲದಲ್ಲಿದ್ದಾರೆ ಎಂಬ ವಿಸ್ಮಯವನ್ನು ನೋಡಿ ಬ್ರಹ್ಮನು ಬೆರಗಾಗುತ್ತಾರೆ. ಕೆಲವು ದಿನಗಳವರೆಗೆ ಯಾವುದೇ ಪ್ರತಿಕ್ರಿಯೆ ಬರದಿರುವುದನ್ನು ನೋಡಿ ತಮ್ಮ ದೈವ ಶಕ್ತಿಯಿಂದ ದೇವಲೋಕದಿಂದಲೇ ಬ್ರಹ್ಮನು ಅನ್ವೇಷಣೆಯನ್ನು ಪ್ರಾರಂಭಿಸುತ್ತಾರೆ. ತಾನು ಮಾಯ ಮಾಡಿದ ಮಕ್ಕಳು ಅವರ ಮನೆಗಳಲ್ಲಿ ಸುರಕ್ಷಿತವಾಗಿರುತ್ತಾರೆ. ಗೋವುಗಲೂ ಗೋಮಾಳದಲ್ಲಿ ಇರುತ್ತವೆ. ಇದನ್ನರಿತ ಬ್ರಹ್ಮ ದೇವನು ಕೃಷ್ಣನ ಆಲೋಚನೆಯನ್ನು ಸ್ವೀಕರಿಸುತ್ತಾರೆ. ಕೃಷ್ಣನು ಸರ್ವಂತರ್ಯಾಮಿ ಎಂಬುದನ್ನು ಅವರು ಮನಗಾಣುತ್ತಾರೆ.

ಕೃಷ್ಣನ ಪ್ರೀತಿಯ ಅರಿವು ಬ್ರಹ್ಮನಿಗೆ ಆಗುತ್ತದೆ

ಕೃಷ್ಣನ ಪ್ರೀತಿಯ ಅರಿವು ಬ್ರಹ್ಮನಿಗೆ ಆಗುತ್ತದೆ

ವಿಷ್ಣುವೇ ಕೃಷ್ಣನಾಗಿದ್ದು ಲೋಕರಕ್ಷಣೆಗಾಗಿ ಅವರು ಅವತಾರವನ್ನು ಎತ್ತಿದ್ದನ್ನು ಬ್ರಹ್ಮನು ಮನಗಾಣುತ್ತಾರೆ. ಅವರನ್ನೇ ಪರೀಕ್ಷಿಸುವ ತನ್ನ ಅರಿವನ್ನು ನೆನೆದು ಸ್ವತಃ ಬ್ರಹ್ಮ ದೇವರೇ ನಗುತ್ತಾರೆ. ಯೋಗನಿದ್ದೆಯಲ್ಲಿದ್ದ ಗೋವುಗಳನ್ನು ಮತ್ತು ಮಕ್ಕಳನ್ನು ಅವರು ಪುನಃ ಗೋಕುಲಕ್ಕೆ ಕಳುಹಿಸುತ್ತಾರೆ. ಕೃಷ್ಣನು ಸುಪ್ರೀಮ್ ಶಕ್ತಿಯಾಗಿದ್ದು ತನ್ನ ಭಕ್ತರನ್ನು ಅವರು ಸದಾಕಾಲ ರಕ್ಷಿಸುತ್ತಾರೆ ಎಂಬುದನ್ನು ಕೃಷ್ಣನು ಸ್ವತಃ ಮನಗಾಣುತ್ತಾರೆ. ಕಷ್ಟದಲ್ಲಿರುವ ತಮ್ಮ ಭಕ್ತರನ್ನು ರಕ್ಷಿಸಿ ಪೊರೆಯುತ್ತಾರೆ ಎಂಬುದನ್ನು ಕೃಷ್ಣನು ಮನಗಾಣುತ್ತಾರೆ.

ಭಗವಾನ್ ಕೃಷ್ಣನ ಜನನದ ಕಥೆ

ಭಗವಾನ್ ಕೃಷ್ಣನ ಜನನದ ಕಥೆ

ದುರುಳ ಕಂಸನು ಪ್ರಾಣಭಯದಿಂದ ತಂಗಿ ದೇವಕಿಯ ಎಲ್ಲಾ ಮಕ್ಕಳನ್ನು ಸಾಯಿಸುತ್ತಾನೆ. ಎಂಟನೆಯ ಮಗುವಿನಿಂದ ತನ್ನ ಮರಣ ಕಾದಿದಿ ಎಂಬ ಅಶರೀರವಾಣಿಯನ್ನು ಕೇಳಿಸಿಕೊಂಡ ಕಂಸನು ಶ್ರೀಕೃಷ್ಣ ಹುಟ್ಟುತ್ತಿದ್ದಂತೆಯೇ ಮಗುವನ್ನು ಕೊಲ್ಲುವ ಸಂಚನ್ನು ರೂಪಿಸುತ್ತಾನೆ. ಆದರೆ ತನ್ನ ಶಕ್ತಿಯಿಂದ ಸೆರೆಮನೆಯ ಕಾವಲುಗಾರರನ್ನು ಮಲಗಿಸುವ ಕೃಷ್ಣನು ತಂದೆ ವಸುದೇವನು ತನ್ನನ್ನು ನಂದನ ಮನೆಗೆ ಸುರಕ್ಷಿತವಾಗಿ ತಲುಪಿಸುವಂತೆ ಮಾಡಿಕೊಳ್ಳುತ್ತಾನೆ. ನಂದನು ತನ್ನ ಮಗಳನ್ನು ವಸುದೇವನಿಗೆ ಒಪ್ಪಿಸಿ ಕೃಷ್ಣನನ್ನು ಪಡೆದುಕೊಳ್ಳುತ್ತಾನೆ. ವಸುದೇವನು ಪುಟ್ಟ ಕೃಷ್ಣನನ್ನು ಬುಟ್ಟಿಯಲ್ಲಿಟ್ಟು ಕೊಂಡೊಯ್ಯುವಾಗ ಮಳೆಯಿಂದ ಪುಟ್ಟ ಕಂದನನ್ನು ಹಾವುಗಳ ರಾಜ ವಾಸುಕಿಯು ಕಾಪಾಡುತ್ತಾನೆ.

ಬಾಲಕೃಷ್ಣ ಮತ್ತು ಪೂತನಿ

ಬಾಲಕೃಷ್ಣ ಮತ್ತು ಪೂತನಿ

ಕೃಷ್ಣನು ಸುರಕ್ಷಿತವಾಗಿದ್ದಾನೆ ಎಂಬುದನ್ನು ತಿಳಿದುಕೊಂಡ ಕಂಸನು ಆತನನ್ನು ಕೊಲ್ಲಲು ತನ್ನ ದುಷ್ಟಶಕ್ತಿಗಳನ್ನು ಬಳಸಿಕೊಳ್ಳುತ್ತಾನೆ. ಅದರಲ್ಲಿ ಪೂತನಿ ಕೂಡ ಒಬ್ಬಳು. ಸುಂದರವಾದ ಹೆಂಗಸಿನ ರೂಪದಲ್ಲಿ ಬಂದು ಕೃಷ್ಣನಿಗೆ ವಿಷವಿರುವ ಮೊಲೆಹಾಲು ಉಣಿಸಿ ಕೊಲ್ಲುವ ಸಂಚನ್ನು ರೂಪಿಸುತ್ತಾಳೆ. ಈ ತಂತ್ರಗಾರಿಕೆಯನ್ನು ಅರಿತುಕೊಂಡ ಕೃಷ್ಣನು ಆಕೆಯನ್ನು ಸಾಯಿಸುತ್ತಾನೆ.

ಕೃಷ್ಣನ ಬೆಣ್ಣೆ ಪ್ರೀತಿ

ಕೃಷ್ಣನ ಬೆಣ್ಣೆ ಪ್ರೀತಿ

ಕೃಷ್ಣನ ಬಗೆಗೆ ಎಷ್ಟೇ ಕಥೆಗಳಿದ್ದರೂ ಬೆಣ್ಣೆಯೊಂದಿಗೆ ಕೃಷ್ಣನ ನಂಟು ಬಿಡಿಸಲಾಗದೇ ಇರುವಂತಹದ್ದಾಗಿದೆ. ಗೋಪಿಕೆಯರಿಗೆ ಅರಿಯದಂತೆ ಅವರ ಮಡಿಕೆಗಳಿಂದ ಬೆಣ್ಣೆಯನ್ನು ಕದ್ದು ತಿನ್ನುವುದು ಮುದ್ದು ಕೃಷ್ಣನ ಲೀಲೆಗಳಲ್ಲಿ ಒಂದಾಗಿದೆ. ತನ್ನ ಸ್ನೇಹಿತರನ್ನು ಕೃಷ್ಣನು ಈ ಕಾಯಕಕ್ಕೆ ಬಳಸಿಕೊಳ್ಳುತ್ತಾನೆ. ಜನ್ಮಾಷ್ಟಮಿಯಂದು ಅದಕ್ಕಾಗಿಯೇ ಬೆಣ್ಣೆಯನ್ನು ಕೃಷ್ಣನಿಗೆ ಅರ್ಪಿಸುತ್ತಾರೆ.

ಪುಟ್ಟ ಕೃಷ್ಣ ಮತ್ತು ಕಾಲಿಯ ಸರ್ಪ

ಪುಟ್ಟ ಕೃಷ್ಣ ಮತ್ತು ಕಾಲಿಯ ಸರ್ಪ

ಯಮುನಾ ತಟದಲ್ಲಿ ಕೃಷ್ಣನು ತನ್ನ ಸ್ನೇಹಿತರೊಂದಿಗೆ ಆಟವಾಡುತ್ತಿದ್ದಾಗ ನದಿಯ ಮಧ್ಯದಿಂದ ಕಾಲಿಯ ಸರ್ಪವು ಎದ್ದುಬರುತ್ತದೆ. ಸರ್ಪವನ್ನು ಸೋಲಿಸಿದ ಕೃಷ್ಣನು ವೃಂದಾವನವನ್ನು ಅದು ತ್ಯಜಿಸಿ ಹೋಗುವಂತೆ ಮಾಡುತ್ತಾನೆ.

ಕೃಷ್ಣ ಮತ್ತು ಗೋವರ್ಧನ ಗಿರಿ

ಕೃಷ್ಣ ಮತ್ತು ಗೋವರ್ಧನ ಗಿರಿ

ಮಳೆಯ ದೇವತೆ ಇಂದ್ರನನ್ನು ವೃಂದಾವನದಲ್ಲಿ ವಾಸಿಸುವವರು ಪೂಜಿಸುತ್ತಿರುತ್ತಾರೆ. ಆದರೆ ಕೃಷ್ಣನು ಗೋವರ್ಧನ ಬೆಟ್ಟವನ್ನು ಪೂಜಿಸುವಂತೆ ಜನರಿಗೆ ಸಲಹೆ ನೀಡುತ್ತಾನೆ. ಇದರಿಂದ ಕೋಪಗೊಂಡ ಇಂದ್ರನು ವರುಣನನ್ನು ಕಳುಹಿಸಿ ಭೀಕರ ಮಳೆ ಬರಿಸುವಂತೆ ಸಲಹೆ ನೀಡಿ ವೃಂದಾವನವನ್ನು ನಾಶಗೊಳಿಸುವಂತೆ ತಿಳಿಸುತ್ತಾನೆ. ತನ್ನ ಕಿರುಬೆರಳಿನಿಂದ ಗೋವರ್ಧನ ಬೆಟ್ಟವನ್ನು ಎತ್ತಿ ವೃಂದಾವನದ ಪುಟ್ಟ ಕರು, ಪ್ರಾಣಿಗಳು ಮತ್ತು ಜನರನ್ನು ಕೃಷ್ಣನು ಕಾಪಾಡುತ್ತಾನೆ

ಕೃಷ್ಣ ಮತ್ತು ಯಶೋಧೆ

ಕೃಷ್ಣ ಮತ್ತು ಯಶೋಧೆ

ಪುಟ್ಟ ಹಸುಳೆ ಕೃಷ್ಣನು ಧೂಳು ಮತ್ತು ಮಣ್ಣನ್ನು ತಿನ್ನುತ್ತಾನೆ ಎಂಬುದಾಗಿ ಆತನ ಸ್ನೇಹಿತರು ಯಶೋಧೆಗೆ ದೂರು ನೀಡುತ್ತಾರೆ. ಇದರಿಂದ ಕೋಪಗೊಂಡ ಯಶೋಧೆಯು ಕೃಷ್ಣನಿಗೆ ಬಾಯಿ ತೆರೆಯುವಂತೆ ಹೇಳುತ್ತಾಳೆ.

ಕೃಷ್ಣ ಮತ್ತು ಯಶೋಧೆ

ಕೃಷ್ಣ ಮತ್ತು ಯಶೋಧೆ

ಆದರೆ ತೆರೆದ ಬಾಯಿಯಲ್ಲಿ ಆಕೆ ಮೂರು ಲೋಕವನ್ನೇ ಕಾಣುತ್ತಾಳೆ. ಹೀಗೆ ಕೃಷ್ಣನ ಜನ್ಮರಹಸ್ಯವು ಹೆಚ್ಚು ರೋಚಕವಾಗಿದ್ದು ಅರ್ಥಪೂರ್ಣ ಎಂದೆನಿಸಿದೆ. ನಿಮ್ಮ ಮಕ್ಕಳಿಗೂ ಕೃಷ್ಣನ ಲೀಲಾವಿನೋದಗಳನ್ನು ತಿಳಿಸುತ್ತಾ ಜನ್ಮಾಷ್ಟಮಿಯನ್ನು ಸಂಭ್ರಮದಿಂದ ಆಚರಿಸಿ.

English summary

What Krishna Did When Brahma Abducted His Friends

The interesting anecdotes from the lives of Lord Krishna have always been an inspiration for us. There are stories about his love with Radha, which are today a source of inspiration for millions. The various stories about his mischievous behaviour, and the way he used to make it so complicated for his mother to deal with the ladies in Gokul, whose butter he would steal away; the way he used to rescue his friends and the people of Gokul when they were in trouble, are no less than wonders.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more