For Quick Alerts
ALLOW NOTIFICATIONS  
For Daily Alerts

ಜೀವನದಲ್ಲಿ ಇಂತಹ ಕೆಲಸಗಳನ್ನು ಮಾಡಿ- ಭಗವಾನ್ ಶನಿ ಸಂತುಷ್ಟನಾಗುವನು

|

ಕಷ್ಟಕಾರ್ಪಣ್ಯಗಳು ಮಾನವ ಜೀವನದಲ್ಲಿ ಅಧಿಕವಾದಾಗ ಇದಕ್ಕೆ ಶನಿಯೇ ಕಾರಣ ಎಂದು ಹೇಳುತ್ತಾರೆ. ಗ್ರಹದಲ್ಲಿ ಶನಿಯು ಅತ್ಯಂತ ಶಕ್ತಿಶಾಲಿಯಾಗಿದ್ದು ಮಾನವರನ್ನು ಕಷ್ಟಕ್ಕೆ ತಳ್ಳಿ ಅವರ ಮೇಲೆ ತನ್ನ ಪ್ರಭಾವವನ್ನು ಬೀರುತ್ತಾರೆ. ಸುಖದಲ್ಲಿಯೇ ಇರುವ ಮಾನವ ಒಮ್ಮೆಗೆ ದುಃಖದ ಕೂಪಕ್ಕೆ ಬಿದ್ದಾಗ ದಿಕ್ಕೇ ತೋಚದಂತೆ ಪರಿತಪಿಸುತ್ತಾನೆ. ಒಂದು ರೀತಿಯಲ್ಲಿ ತನ್ನ ನೆನಪನ್ನು ಮಾನವ ಮಾಡಬೇಕು ಎಂಬುದಕ್ಕಾಗಿಯೇ ದೇವರು ಮನುಷ್ಯರನ್ನು ಕಷ್ಟಕ್ಕೆ ನೂಕುತ್ತಾರೆ ಎಂಬುದು ಹಿಂದಿನವರು ಹೇಳುವ ಮಾತಾಗಿದೆ. ಹಾಗಾಗಿ ಮನುಷ್ಯ ಕಷ್ಟ ಸುಖವನ್ನು ಜೀವನದಲ್ಲಿ ಸಮನಾಗಿ ಸ್ವೀಕರಿಸಲೇಬೇಕು.

ನಿಮ್ಮ ಜೀವನದಲ್ಲಿ ಬರುವ ಕಷ್ಟಗಳ ನಿವಾರಣೆಗೆ ನೀವು ಶನಿ ದೇವರನ್ನು ಒಲಿಸಿಕೊಳ್ಳಬೇಕು. ಕಾಗೆಯನ್ನು ತನ್ನ ವಾಹನವನ್ನಾಗಿ ಮಾಡಿಕೊಂಡಿರುವ ಶನಿಯು ಭಯವನ್ನುಂಟು ಮಾಡುವ ದೇವರು ಎಂದು ಕರೆಯುತ್ತಾರೆ. ಅಂದರೆ ಅವರ ಶಕ್ತಿಗೆ ಪ್ರತಿಯೊಬ್ಬರೂ ಹೆದರುತ್ತಾರೆ. ಪ್ರತಿಯೊಂದನ್ನು ಅವರು ಕಷ್ಟಕ್ಕೆ ನೂಕುತ್ತಾರೆ. ಸೂರ್ಯ ಮತ್ತು ಛಾಯಾ ದಂಪತಿಗಳ ಪುತ್ರನಾಗಿರುವ ಶನಿಯು ಚಿಕ್ಕಂದಿನಲ್ಲಿಯೇ ತಂದೆ ಸೂರ್ಯನಿಂದ ತಿರಸ್ಕರಿಸಲ್ಪಟ್ಟಿರುತ್ತಾರೆ. ಆದರೆ ಸೂರ್ಯ ಕೂಡ ಶನಿಯ ಪ್ರಭಾವದಿಂದ ಸ್ವಯಂ ಅನ್ನು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.

ಒಮ್ಮೆ ರಾವಣನು ತನ್ನ ಪುತ್ರ ಇಂದ್ರಜಿತ್‌ಗೆ ಗ್ರಹಗಳಿಂದ ಯಾವ ಸಂಕಷ್ಟ ಕೂಡ ಬರಬಾರದೆಂದು ಗ್ರಹಗಳನ್ನು ಬಂಧಿಸಿ ಸೆರೆಮನೆಯಲ್ಲಿ ಇಟ್ಟಿರುತ್ತಾನೆ. ಸೀತಾ ಮಾತೆಯನ್ನು ಹುಡುಕಿಕೊಂಡು ಬಂದ ಸಂದರ್ಭದಲ್ಲಿ ಹನುಮಂತನು ಇಡಿಯ ಲಂಕೆಯನ್ನು ತನ್ನ ಬಾಲದಿಂದ ಸುಟ್ಟಾಗ ಗ್ರಹಗಳು ಸೆರೆಮನೆಯಿಂದ ತಪ್ಪಿಸಿಕೊಳ್ಳುತ್ತವೆ. ಹನುಮನು ಶನಿಯನ್ನು ಕೂಡ ಸೆರೆಮನೆಯಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡಿರುತ್ತಾರೆ. ಇದರಿಂದ ಪ್ರಸನ್ನರಾದ ಶನಿಯು ಹನುಮನನ್ನು ಪೂಜಿಸಿದರೆ ನಾನು ಅವರ ಕಷ್ಟಗಳನ್ನು ದೂರ ಮಾಡುವುದಾಗಿ ಅನುಗ್ರಹಿಸುತ್ತಾರೆ. ಆದ್ದರಿಂದ ಶನಿ ದೋಷವುಳ್ಳವರು ಹನುಮನ ಗುಡಿಗೆ ಹೋಗಿ ಎಳ್ಳೆಣ್ಣೆಯನ್ನು ಅರ್ಪಿಸಬಹುದು. ಅಂತೆಯೇ ಶನಿ ಗುಡಿಗೆ ಹೋಗಿ ಅಲ್ಲಿಯೂ ದೇವರಿಗೆ ಎಳ್ಳೆಣ್ಣೆಯನ್ನು ನೀಡಬಹುದು. ಶನಿಯು ತನ್ನ ಭಕ್ತರಿಂದ ಕೆಲವೊಂದು ಧನಾತ್ಮಕ ಅಂಶಗಳನ್ನು ಬಯಸುತ್ತಿದ್ದು ಭಕ್ತರು ಅದನ್ನು ಅನುಸರಿಸಿದಲ್ಲಿ ಶನಿಯು ಅವರಿಗೆ ಉಪಟಳವನ್ನು ನೀಡುವುದಿಲ್ಲವಂತೆ. ಇಂದಿನ ಲೇಖನದಲ್ಲಿ ಆ ನಿಯಮಗಳೇನು ಎಂಬುದನ್ನು ತಿಳಿದುಕೊಳ್ಳೋಣ...

ಶಿಷ್ಟಾಚಾರ

ಶಿಷ್ಟಾಚಾರ

ನಮ್ಮ ಜೀವನದಲ್ಲಿ ನಾವು ಶಿಸ್ತಿನಿಂದ ಇರಬೇಕು ಎಂದು ಶನಿ ದೇವರು ಬಯಸುತ್ತಾರೆ. ನಮ್ಮನ್ನು ನಾವು ಶುಚಿಯಾಗಿರಿಸಿ ಕೊಳ್ಳಬೇಕು. ನಮ್ಮ ಮನೆಯನ್ನು ಸ್ವಚ್ಛವಾಗಿರಿಸಿಕೊಳ್ಳಬೇಕು. ನಮ್ಮ ನಿತ್ಯದ ದಿನಚರಿಗಳನ್ನು ಚಾಚೂ ತಪ್ಪದೆ ಪಾಲಿಸಬೇಕು. ನಿಮ್ಮ ಜೀವನದಲ್ಲಿ ಶಿಸ್ತು ಇಲ್ಲ ಎಂದಾದರೆ ನೀವು ಜೀವನದಲ್ಲಿ ಏನೂ ಗಳಿಸಲು ಸಾಧ್ಯವಿಲ್ಲ.

ದುಡಿಮೆ

ದುಡಿಮೆ

ಶಿಸ್ತಿನ ಜೀವನ ಮತ್ತು ಕಷ್ಟಪಟ್ಟು ದುಡಿಯುವುದು ಎಂದರೆ ಶನಿಗೆ ಅಚ್ಚುಮೆಚ್ಚು. ಅವರು ಕ್ರಿಯೆಗಳ ದೇವರಾಗಿದ್ದಾರೆ. ನೀವು ಏನೇ ಕೆಲಸ ಮಾಡಿ ಆದರೆ ಕಷ್ಟಪಟ್ಟು ದುಡಿಯಿರಿ. ಯಶಸ್ಸನ್ನು ಪಡೆಯಲು ಸಣ್ಣ ಹಾದಿಗಳನ್ನು ಬಳಸದಿರಿ. ವಂಚನೆಗಳನ್ನು ಮಾಡದಿರಿ. ನೀವು ಕಷ್ಟಪಟ್ಟರೆ ಶನಿ ದೇವರು ನಿಮಗೆ ಉತ್ತಮ ಫಲಿತಾಂಶಗಳನ್ನು ನೀಡುತ್ತಾರೆ.

ಸರಳತೆ

ಸರಳತೆ

ನಮ್ಮ ಜೀವನದಲ್ಲಿ ನಾವು ಸರಳತೆಯನ್ನು ಅನುಸರಿಸಬೇಕು. ಆದಷ್ಟು ಸರಳವಾಗಿರಲು ಪ್ರಯತ್ನಿಸಿ. ಸರಳ ಆಹಾರವನ್ನು ಸೇವಿಸಿ. ನಾವು ಆದಷ್ಟು ಸರಳವಾಗಿರುವುದು ನಮಗೆ ಒಳಿತಾಗಿದೆ. ಆದರೆ ಈ ಜೀವನದಲ್ಲಿ ಸರಳವಾಗಿರುವುದು ತುಸು ಕಷ್ಟದ ಮಾತೇ ಆಗಿದೆ.

ಸತ್ಯತೆ

ಸತ್ಯತೆ

ಶನಿಯ ಅನುಗ್ರಹಕ್ಕೆ ನೀವು ಒಳಗಾಗಬೇಕು ಎಂದಾದಲ್ಲಿ ಯಾವಾಗಲೂ ಸತ್ಯವನ್ನೇ ನುಡಿಯಲು ಪ್ರಯತ್ನಿಸಿ. ಇದು ನಿಮ್ಮ ಜೀವನದಲ್ಲಿ ತುಸು ಕಷ್ಟವೇ ಆಗಿದ್ದರೂ ಇದರಿಂದ ನಿಮಗೆ ದೊರೆಯುವ ಪ್ರತಿಫಲ ಉತ್ತಮವಾಗಿರುತ್ತದೆ.

ತಾಳ್ಮೆ

ತಾಳ್ಮೆ

ನಮ್ಮ ತಾಳ್ಮೆಯನ್ನು ಪರಿಶೀಲಿಸಲು ಶನಿಯು ಕಷ್ಟಗಳನ್ನು ನಮಗೆ ನೀಡುತ್ತಾರೆ. ನಮ್ಮ ಕೆಲಸವನ್ನು ನಾವು ಮಾಡಿ ಉಳಿದುದನ್ನು ಅವರಿಗೆ ಬಿಟ್ಟರೆ ಅವರು ನಮ್ಮನ್ನು ಖಂಡಿತ ಅನುಗ್ರಹಿಸುತ್ತಾರೆ. ತಾಳ್ಮೆಯಿಂದ ಕಾಯಲು ನಿಮ್ಮಿಂದ ಸಾಧ್ಯವಿಲ್ಲದಿದ್ದರೆ ಇನ್ನಷ್ಟು ಕಷ್ಟಗಳನ್ನು ನೀವು ಅನುಭವಿಸಬೇಕಾಗುತ್ತದೆ.

ನೈಜತೆಯನ್ನು ಎದುರಿಸುವುದು

ನೈಜತೆಯನ್ನು ಎದುರಿಸುವುದು

ನಿಮ್ಮ ಸ್ಥಿತಿ ಮತ್ತು ನೀವು ಯಾವುದಕ್ಕೆ ಜವಬ್ದಾರರಾಗಿದ್ದೀರಿ ಎಂಬುದನ್ನು ಶನಿ ನಿಮಗೆ ತೋರಿಸುತ್ತಾರೆ. ನೀವು ಶ್ರೀಮಂತರೇ ಆಗಿರಿ ಇಲ್ಲದಿದ್ದರೆ ಬಡವರೇ ಆಗಿರಿ ನೀವು ನೈಜತೆಯನ್ನು ಅರ್ಥಮಾಡಿಕೊಂಡು ಅದಕ್ಕೆ ತಕ್ಕಂತೆ ಯೋಜನೆಯನ್ನು ರೂಪಿಸಿಕೊಳ್ಳಬೇಕು.

ಒಳ್ಳೆಯ ಕೆಲಸಗಳು

ಒಳ್ಳೆಯ ಕೆಲಸಗಳು

ಇನ್ನೊಬ್ಬರಿಗೆ ಒಳಿತನ್ನು ಮಾಡುವವರನ್ನು ಶನಿಯು ಎಂದಿಗೂ ಅನುಗ್ರಹಿಸುತ್ತಾರೆ. ಅದರಲ್ಲೂ ಅಶಕ್ತರಿಗೆ ಮತ್ತು ಕೈಲಾಗದವರಿಗೆ ಸಹಾಯ ಮಾಡಬೇಕು. ಹಿರಿಯರಿಗೆ ನೀವು ಗೌರವ ನೀಡಬೇಕು. ಅಂತೆಯೇ ಜನರಿಗೆ ಸಹಾಯ ಮಾಡಲು ಎಂದಿಗೂ ಸಿದ್ಧರಾಗಿರಬೇಕು. ಯಾವುದೇ ಹೇಯ ಕೃತ್ಯಗಳನ್ನು ಮಾಡಬಾರದು. ಯಾರನ್ನೂ ವಂಚಿಸಬಾರದು.

ಕಪ್ಪು ಎಳ್ಳು ಬೆರೆಸಿದ ಹಾಲಿನ ಅಭಿಷೇಕ

ಕಪ್ಪು ಎಳ್ಳು ಬೆರೆಸಿದ ಹಾಲಿನ ಅಭಿಷೇಕ

ಕಪ್ಪು ಎಳ್ಳನ್ನು ಸೇರಿಸಿದ ಹಸಿಹಾಲನ್ನು ಶಿವಲಿ೦ಗದ ಮೇಲೆ ಪ್ರತಿದಿನವೂ ಇಲ್ಲವೇ ನಿರ್ದಿಷ್ಟವಾಗಿ ಪ್ರತೀ ಶನಿವಾರಗಳ೦ದು ಭಕ್ತಿಪೂರ್ವಕವಾಗಿ ಅಭಿಷೇಕ ಮಾಡಿಸುವುದರಿ೦ದ ಶನಿದೇವನ ಕೆಟ್ಟ ಪ್ರಭಾವವನ್ನು ಅಥವಾ ವಕ್ರದೃಷ್ಟಿಯನ್ನು ಶಾ೦ತಗೊಳಿಸಲು ಸಹಾಯವಾಗುತ್ತದೆ.

ಭಕ್ತಿಯಂದ ಶನಿ ಮ೦ತ್ರ ಪಠಿಸಿ

ಭಕ್ತಿಯಂದ ಶನಿ ಮ೦ತ್ರ ಪಠಿಸಿ

"ನೀಲಾ೦ಜನ ಸ೦ಭಾಸ೦ ರವಿಪುತ್ರ೦ ಯಮಾಗ್ರಜ೦ ಛಾಯಾ ಮಾರ್ತ೦ಡ ಸ೦ಭೂತ೦ ತ೦ ನಮಾಮಯೇ ಶನೈಶ್ಚರ೦" ಈ ಮ೦ತ್ರವನ್ನು ಶನಿವಾರಗಳ೦ದು ಎಷ್ಟು ಬಾರಿ ಸಾಧ್ಯವೋ ಅಷ್ಟು ಬಾರಿ ಪಠಿಸಿರಿ. ಈ ಮ೦ತ್ರವನ್ನು ಕನಿಷ್ಟ ಪಕ್ಷ ನೂರಾ ಎ೦ಟು ಬಾರಿಯಾದರೂ ಪಠಿಸಲು ನೀವು ಪ್ರಯತ್ನವನ್ನು ಮಾಡಬೇಕು.

ಶನಿಯ ಧನಾತ್ಮಕ ಪರಿಣಾಮ

ಶನಿಯ ಧನಾತ್ಮಕ ಪರಿಣಾಮ

ಯಾವುದೇ ಭಾಷೆಯ ಮೇಲೆ ಹಿಡಿತ

ಕ್ರಿಯಾತ್ಮಕತೆ ಮತ್ತು ಭಾವಿಸುವುದು

ಪ್ರತಿಯೊಂದರಲ್ಲೂ ಕ್ಷಿಪ್ರತೆ

ಬುದ್ಧಿವಂತಿಕೆ

ಆರೋಗ್ಯ,ಹಣ ಮತ್ತು ಕೀರ್ತಿ

ಶನಿಯ ಋಣಾತ್ಮಕ ಪರಿಣಾಮ

ಶನಿಯ ಋಣಾತ್ಮಕ ಪರಿಣಾಮ

ಮನೆಯಲ್ಲಿ ಕಲಹ

ಉದಾಸೀನ ಮತ್ತು ಮನಸ್ಸಿಲ್ಲದೇ ಇರುವುದು

ನಿಧಾನಗತಿ

ಹುಚ್ಚು, ಬೇಸರ, ಖಿನ್ನತೆ

ದುಡ್ಡು ಇಲ್ಲದೇ ಇರುವುದು, ಖಾಲಿ ಜೇಬು ಮತ್ತು ಅನಾರೋಗ್ಯ

ನೀವು ಏನು ಮಾಡಬಹುದು

ನೀವು ಏನು ಮಾಡಬಹುದು

ಶನಿ ದೇವರ ವಿಗ್ರಹದ ಮುಂದೆ ಎಳ್ಳೆಣ್ಣೆಯನ್ನು ಬಳಸಿಕೊಂಡು ದೀಪ ಹಚ್ಚಿ ಅಂತೆಯೇ ಶನಿ ಮಂತ್ರವಾದ 'ಓಂ ಶಾಂಗ್ ಶನೇಶ್ಚರಾಯ ನಮಃ' ಎಂದು ಪ್ರತೀ ಶನಿವಾರ ಪಠಿಸಿ

ಶನಿವಾರ ಮಾಂಸಾಹಾರ ಮತ್ತು ಮದ್ಯ ಸೇವಿಸದಿರಿ

ಹನುಮಂತನನ್ನು ಪೂಜಿಸಿ

*ಶನಿವಾರಗಳಂದು ಕಪ್ಪು ಮತ್ತು ಗಾಢ ನೀಲಿ ದಿರಿಸುಗಳನ್ನು ಧರಿಸಿ

*ಪ್ರತಿ ಶನಿವಾರ ಆಲದ ಬಿಳಲಿನ ಮೇಲೆ ಎಳ್ಳೆಣ್ಣೆ ಹುಯ್ಯಿರಿ ಮತ್ತು ಸೂರ್ಯೋದಯಕ್ಕೂ ಮುಂಚೆ ಆಲದ ಮರಕ್ಕೆ ಪೂಜೆ ಮಾಡಿ

ಶನಿವಾರ ಕಾಗೆಗಳಿಗೆ ಸಿಹಿಯನ್ನು ತಿನಿಸಿ,ಒಳ್ಳೆಯದನ್ನು ಮಾಡಲು ಖಂಡಿತ ಮರೆಯದಿರಿ

*ಇದನ್ನು ಶನಿದೇವರು ತಮ್ಮ ಭಕ್ತರಿಂದ ಬಯಸುತ್ತಾರೆ - ಸಾಡೇ ಸಾತಿ ದೋಷದಿಂದ ಮುಕ್ತಿ ಪಡೆದುಕೊಳ್ಳಬೇಕು

ಎಂದಾದಲ್ಲಿ ಈ ಸಲಹೆಗಳನ್ನು ಪಾಲಿಸಿ. ಈ ಪರಿಹಾರಗಳನ್ನು ಅನುಸರಿಸಲು ನಿಮಗೆ ಇಷ್ಟವಿಲ್ಲ ಎಂದಾದಲ್ಲಿ ಶನಿ ದೇವರು ಭಕ್ತರಿಗೆ ಮಾಡುವ ಒಳಿತು ಮತ್ತು ಕೆಡುಕುಗಳನ್ನು ಮರೆಯದರಿ *ಶನಿ ದೇವರು ನಿಮ್ಮಿಂದ ಬಯಸುವ ಸರಳ ಕೆಲಸಗಳನ್ನು ಮಾಡಿ. ನೀವು ಅವರನ್ನು ಪೂಜಿಸಿ ಒಳ್ಳೆಯ ಕೆಲಸಗಳನ್ನು ಮಾಡಬೇಕು. ಇದರಿಂದ ಋಣಾತ್ಮಕ ಅಂಶಗಳು ನಿಮ್ಮಿಂದ ದೂರಾಗುತ್ತದೆ. ನಿಮಗೆ ಉತ್ತಮ ಫಲಿತಾಂಶ ದೊರೆತು ಶನಿ ದೇವರ ಅನುಗ್ರಹ ದೊರೆಯಲಿದೆ.

English summary

What Does Lord Shani Want From His Devotees?

What Shani Dev wants from devotees – According to Hindu Mythology, Lord Shani (Saturn) is the son of Lord Surya (Sun) and his wife, Chhaya (Shadow). He is also known as Chhayaputra (Son of Shadow). He is the most feared God and is known to ruin the person upon whom he sets his eyes. He is also known to spread negativity. He rides a buffalo or a crow (or vulture) and is the King of all the 9 planets.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more