For Quick Alerts
ALLOW NOTIFICATIONS  
For Daily Alerts

ಸೂರ್ಯಗ್ರಹಣ ದಿನದಂದೇ 'ರಾಹು ಕೇತು'ವಿನ ಜನ್ಮವಾಯಿತಂತೆ!

By Hemanth
|
ಸೂರ್ಯ ಗ್ರಹಣ ರಾಹು ಕೇತು ಜನ್ಮದಿನದ ಪ್ರತೀಕ | ಇಲ್ಲಿದೆ ಕುತೂಹಲಕಾರಿ ಕಥೆ | Oneindia Kannada

ಪುರಾಣಗಳ ಪ್ರಕಾರ ದೇವಲೋಕದಲ್ಲಿ ಸಂಪತ್ತು ಹಾಗೂ ಸಮೃದ್ಧಿಯ ದೇವತೆ ಲಕ್ಷ್ಮೀ ದೇವಿಯು ಒಂದು ಸಲ ತನ್ನ ಪತಿ ವಿಷ್ಣುವಿನೊಂದಿಗೆ ಮನಸ್ತಾಪ ಮಾಡಿಕೊಂಡು ಅಲ್ಲಿಂದ ತೆರಳುವಳು. ಇದರಿಂದ ದೇವಲೋಕದಲ್ಲಿ ಸಂಪತ್ತು ಹಾಗೂ ಸಂಪನ್ಮೂಲಗಳ ಕೊರತೆ ಉಂಟಾಗುವುದು.

ಎಲ್ಲವೂ ಶೀಘ್ರವೇ ಸಾಮಾನ್ಯವಾಗಲಿ ಎಂದು ಎಲ್ಲಾ ದೇವದೇವತೆಯರು ಕೂಡ ಪ್ರಾರ್ಥಿಸುತ್ತಿದ್ದರು. ತನ್ನೊಂದಿಗೆ ಸಮೃದ್ಧಿ ಹಾಗೂ ಸಂಪತ್ತು ತರುವ ಲಕ್ಷ್ಮೀ ದೇವಿಯನ್ನು ಆದಷ್ಟು ಬೇಗ ಮರಳಿ ಕರೆತರುವುದು ಹೇಗೆ ಎನ್ನುವ ಪ್ರಶ್ನೆ ಮಾತ್ರ ಪ್ರತಿಯೊಬ್ಬರನ್ನು ಕಾಡುತ್ತಲಿತ್ತು. ಲಕ್ಷ್ಮೀ ದೇವಿಯನ್ನು ಸಂಸ್ಕೃತದಲ್ಲಿ ಶ್ರೀ ಎಂದು ಕರೆಯಲಾಗುತ್ತದೆ. ಶ್ರೀ ಎಂದರೆ ಸಮೃದ್ಧಿ ಎನ್ನುವ ಅರ್ಥವಿದೆ....

ವಿಷ್ಣು ದೇವರು ಬ್ರಹ್ಮ ದೇವರ ಬಳಿಗೆ ಬಂದರು…

ವಿಷ್ಣು ದೇವರು ಬ್ರಹ್ಮ ದೇವರ ಬಳಿಗೆ ಬಂದರು…

ತನ್ನ ಸಂಕಷ್ಟಗಳನ್ನು ಇಟ್ಟುಕೊಂಡು ಬ್ರಹ್ಮದೇವರ ಬಳಿಗೆ ವಿಷ್ಣು ಬಂದು ಎಲ್ಲವನ್ನು ಹೇಳಿಕೊಂಡರು. ಈ ವೇಳೆ ಬ್ರಹ್ಮ ದೇವರು ಸಲಹೆಯೊಂದನ್ನು ನೀಡಿ, ಲಕ್ಷ್ಮೀ ದೇವಿಯು ಸಮುದ್ರರಾಜ ಪುತ್ರಿಯಾಗಿರುವ ಕಾರಣದಿಂದ ಆಕೆ ಹೋಗಿ ಕ್ಷೀರಸಾಗರ(ಹಾಲಿನ ದೊಡ್ಡ ಸಮುದ್ರ)ದ ಆಳಕ್ಕೆ ಹೋಗಿ ಧ್ಯಾನದಲ್ಲಿ ಮುಳುಗಿರ ಬಹುದು. ಹಾಲಿನ ಸಾಗರವನ್ನು ಮಂಥನ ಮಾಡಿದಾಗ ಆಕೆಗೆ ಎಚ್ಚರವಾಗಬಹುದು ಮತ್ತು ಮರಳಿ ಬರುವಂತೆ ಮನವಿ ಮಾಡಬಹುದು.

ದೇವತೆಗಳು ರಾಕ್ಷಸರನ್ನು ಕರೆದರು!

ದೇವತೆಗಳು ರಾಕ್ಷಸರನ್ನು ಕರೆದರು!

ಕ್ಷೀರಸಾಗರವನ್ನು ಮಂಥನ ಮಾಡುವುದು ಕೇವಲ ದೇವತೆಗಳಿಂದ ಸಾಧ್ಯವಾಗದ ಮಾತಾಗಿತ್ತು. ಕೇವಲ ದೇವತೆಗಳಿಂದ ಇದು ಅಸಾಧ್ಯ ಎಂದು ಬ್ರಹ್ಮ ದೇವರು ಹೇಳಿದ್ದರು ಮತ್ತು ರಾಕ್ಷಸರ ನೆರವು ಪಡೆಯಲು ಸೂಚಿಸಿದ್ದರು. ಆದರೆ ದೇವತೆಗಳಿಗೆ ಸಮೃದ್ಧಿ ಮರಳಿ ತರಲು ರಾಕ್ಷಸರು ಸಮುದ್ರ ಮಂಥನಕ್ಕೆ ಬರುವುದಿಲ್ಲವೆಂದು ವಿಷ್ಣುವಿಗೆ ಕೂಡ ತಿಳಿದಿತ್ತು. ಇದಕ್ಕಾಗಿ ರಾಕ್ಷಸರ ಮನವೊಲಿಸಲು ವಿಷ್ಣು ಯೋಜನೆ ರೂಪಿಸಿದ. ಇದರ ಪ್ರಕಾರ ರಾಕ್ಷಸರ ನೆರವು ಪಡೆಯಬಹುದು ಎಂದು ತಿಳಿದಿತ್ತು. ಸಮುದ್ರದ ಒಳಗಡೆ ಅಮೃತದಿಂದ ತುಂಬಿರುವಂತಹ ಹಡಗು ಇದೆ ಮತ್ತು ಇದರಿಂದ ಅಮರತ್ವ ಪಡೆಯಬಹುದು ಎಂದು ರಾಕ್ಷಕರಿಗೆ ತಿಳಿಸಿದ. ರಾಕ್ಷಸರು ಕೂಡ ಅಮರತ್ವ ಪಡೆಯಬೇಕೆಂದು ಬಯಸಿ, ದೇವತೆಗಳ ಜತೆಗೆ ಸೇರಿ ಕ್ಷೀರಸಾಗರ ಮಂಥನ ಮಾಡಲು ನಿರ್ಧರಿಸಿದರು. ಹಡಗು ಮತ್ತು ಅಮೃತವನ್ನು ಸಮಾನವಾಗಿ ಹಂಚುವುದಾಗಿ ದೇವತೆಗಳು ಹಾಗೂ ರಾಕ್ಷಸರಲ್ಲಿ ಒಪ್ಪಂದ ನಡೆಯಿತು.

ಸಮುದ್ರದಿಂದ ಹಡಗು ಮೇಲೆ ಬಂದಾಗ

ಸಮುದ್ರದಿಂದ ಹಡಗು ಮೇಲೆ ಬಂದಾಗ

ಕ್ಷೀರಸಾಗರದಲ್ಲಿ ದೇವತೆಗಳು ಹಾಗೂ ರಾಕ್ಷಸರು ಜತೆಯಾಗಿ ಮಂಥನದಲ್ಲಿ ತೊಡಗಿದ್ದಾಗ ಕೆಲವೊಂದು ಶಕ್ತಿಶಾಲಿ ವಸ್ತುಗಳು ಹೊರಬರಲು ಆರಂಭವಾದವು. ಇದರಲ್ಲಿ ವಿಷವನ್ನು ಶಿವ ದೇವರು ಕುಡಿದರು. ಪವಿತ್ರ ಶಂಖ ಇತ್ಯಾದಿಗಳು ಬಂದವು. ಇದರೊಂದಿಗೆ ಲಕ್ಷ್ಮೀ ದೇವಿಯು ಪ್ರತ್ಯಕ್ಷರಾದರು. ಅಂತಿಮವಾಗಿ ಅಮೃತದ ಹಡಗು ಮೇಲೆ ಬಂತು. ಇದು ಮೇಲೆ ಬರುತ್ತಿರುವಂತೆ ಎರಡು ಪಕ್ಷಗಳು ತಮ್ಮ ಪಾಲನ್ನು ಅತೀ ಬೇಗ ಪಡೆಯಲು ಬಯಸಿದರು. ರಾಕ್ಷಸರಿಗೆ ಅಮೃತ ನೀಡಿ ಅವರಿಗೆ ಅಮರತ್ವ ನೀಡುವುದು ಸರಿಯಾದ ನಿರ್ಧಾರವೇ? ಖಂಡಿತವಾಗಿಯೂ ಅಲ್ಲ. ವಿಷ್ಣು ಎಷ್ಟು ಜಾಣನೆಂದು ಪ್ರತಿಯೊಬ್ಬರಿಗೂ ತಿಳಿದಿತ್ತು ಮತ್ತು ರಾಕ್ಷಸರ ದೌರ್ಬಲ್ಯವೇನೆಂದು ಆತ ಸರಿಯಾಗಿ ಅರ್ಥ ಮಾಡಿಕೊಂಡಿದ್ದ. ಇದರಿಂದ ಆತ ತಕ್ಷಣ ಅಪ್ಸರೆಯ ರೂಪ ಧಾರಣೆ ಮಾಡಿಕೊಂಡು ರಾಕ್ಷಸ ಗಮನ ಬೇರೆಡೆ ಸೆಳೆಯು ಸಲುವಾಗಿ ಅವರ ಮುಂದೆ ಪ್ರತ್ಯಕ್ಷನಾಗಿ, ಪ್ರತಿಯೊಬ್ಬರಿಗೂ ತಾನೇ ಅಮೃತ ಬಾಯಿಗೆ ಹಾಕುತ್ತೇನೆಂದು ಹೇಳುತ್ತಾನೆ.

ವಿಷ್ಣು ಮೋಹಿನಿಯ ರೂಪ ತಳೆದ

ವಿಷ್ಣು ಮೋಹಿನಿಯ ರೂಪ ತಳೆದ

ವಿಷ್ಣು ದೇವರು ರಾಕ್ಷಸರನ್ನು ಮೂರ್ಖರನ್ನಾಗಿಸಲು ಅಪ್ಸರೆಯಾಗಿರುವ ಮೋಹಿನಿ ರೂಪ ಧರಿಸಿದರು. ಈ ವೇಳೆ ಅಮೃತ ನೀಡುವಾಗ ದೇವತೆಗಳ ಬಾಯಿಗೆ ಅಮೃತ ಮತ್ತು ರಾಕ್ಷಸರ ಬಾಯಿಗೆ ನೀರನ್ನು ಹಾಕಿದರು. ಆರಂಭದಲ್ಲಿ ರಾಕ್ಷಸರಿಗೆ ಇದು ತಿಳಿದುಬರಲಿಲ್ಲ. ಆದರೆ ರಾಹುಕೇತು ಎಂಬವರು ಮೋಹಿನಿಯ ಈ ಕಪಟವನ್ನು ಪತ್ತೆ ಹಚ್ಚಿದರು.

ರಾಹುಕೇತು ಎರಡಾದರು : ರಾಹು ಮತ್ತು ಕೇತು

ರಾಹುಕೇತು ಎರಡಾದರು : ರಾಹು ಮತ್ತು ಕೇತು

ಅಮೃತ ಕುಡಿಯಬೇಕೆಂಬ ಕಾರಣಕ್ಕಾಗಿ ಇವರು ದೇವತೆಗಳ ಮಧ್ಯದಲ್ಲಿ ಬಂದು ಸೇರಿಕೊಂಡರು. ಅದಾಗ್ಯೂ, ರಾಹುಕೇತುಗೆ ಇದರಲ್ಲಿ ಯಶಸ್ಸು ಕೂಡ ಸಿಕ್ಕಿತು. ಇದು ದೇವತೆಗಳಿಗೆ ತಿಳಿಯುವಾಗ ತುಂಬಾ ವಿಳಂಬವಾಗಿತ್ತು. ಇದರಿಂದ ಕುಪಿತಗೊಂಡ ವಿಷ್ಣು ದೇವರು ರಾಹುಕೇತುವಿನ ತಲೆ ಕಡಿದರು. ಆದರೆ ಈಗಾಗಲೇ ಅಮೃತ ಸೇವನೆ ಮಾಡಿದ್ದ ಪರಿಣಾಮ ತಲೆ ಬೇರ್ಪಟ್ಟರೂ ಆತ ಸಾಯಲಿಲ್ಲ. ರಾಹುಕೇತುವಿನ ತಲೆಯನ್ನು ರಾಹು ಎಂದೂ ಶರೀರವನ್ನು ಕೇತು ಎಂದು ನಂಬಲಾಗುತ್ತಿದೆ. ರಾಹು ಮತ್ತು ಕೇತು ಕ್ರಮವಾಗಿ ಚಂದ್ರನ ಉತ್ತರ ಹಾಗೂ ದಕ್ಷಿಣ ಬಿಂದುಗಳೆಂದು ಹೇಳಲಾಗುತ್ತದೆ. ಸೂರ್ಯ ಮತ್ತು ಚಂದ್ರ ಛೇದಿಸುವ ಉತ್ತರ ಹಾಗೂ ದಕ್ಷಿಣದ ಬಿಂದುಗಳೆಂದು ರಾಹು ಹಾಗೂ ಕೇತುವನ್ನು ಗುರುತಿಸಲಾಗಿದೆ.

ರಾಹು ಮತ್ತು ಕೇತು ಮೊದಲ ಸೂರ್ಯಗ್ರಹಣ ಉಂಟು ಮಾಡಿದರು

ರಾಹು ಮತ್ತು ಕೇತು ಮೊದಲ ಸೂರ್ಯಗ್ರಹಣ ಉಂಟು ಮಾಡಿದರು

ಹಿಂದೂ ಪುರಾಣಗಳ ಪ್ರಕಾರ ರಾಹುವಿನ ತಲೆ ಕಡಿದ ಬಳಿಕ ಆತ ಸೂರ್ಯ ದೇವರ ಪಥಕ್ಕೆ ಅಡ್ಡಿಯುಂಟು ಮಾಡಿದ. ಇದರಿಂದಾಗಿ ಭೂಮಿ ಮೇಲೆ ಹಲವಾರು ರೀತಿಯ ಸಮಸ್ಯೆಗಳು ಕಾಣಿಸಿಕೊಂಡವು. ಈ ವೇಳೆ ಋಷಿಮುನಿಗಳಾದ ಅತ್ರಿ ಅವರು ನೆರವಿಗೆ ಬರುವರು. ತನ್ನ ದೈವಿಶಕ್ತಿ ಬಳಸಿಕೊಂಡು ಅವರು ರಾಹುವನ್ನು ಸೂರ್ಯನ ಪಥದಿಂದ ತೆಗೆಯುವರು ಮತ್ತು ಭೂಮಿ ಮೇಲೆ ಸೂರ್ಯನ ಬೆಳಕು ಬೀಳುವಂತಾಗುವುದು. ಈ ದಿನವನ್ನು ಮೊದಲ ಸೂರ್ಯಗ್ರಹಣದ ದಿನವೆನ್ನಲಾಗುತ್ತದೆ. ಇದು ರಾಹು ಮತ್ತು ಕೇತು ಅಮರತ್ವ ಪಡೆದ ಕಥೆಯಾಗಿದೆ. ಸೂರ್ಯಗ್ರಹಣವನ್ನು ರಾಹು ಮತ್ತು ಕೇತುವಿನ ಜನ್ಮ ದಿನವೆನ್ನಲಾಗುತ್ತದೆ.

English summary

Were Rahu And Ketu Born On A Solar Eclipse Day?

The story goes back to the time when Goddess Lakshmi was disappointed with Lord Vishnu. She had left his abode and as is obvious, the whole of the Dev Loka was facing a shortage of resources in the absence of the goddess of wealth. While all wanted things to get back to normal soon, the biggest question was how to get the goddess of wealth back as quickly as possible since she brings prosperity and wealth along with her always. That is why Goddess Lakshmi is also known by the Sanskrit name Shri, which translates to prosperity.
X
Desktop Bottom Promotion