For Quick Alerts
ALLOW NOTIFICATIONS  
For Daily Alerts

ಕೇರಳಿಗರ ಅಚ್ಚುಮೆಚ್ಚಿನ 'ಓಣಂ' ಹಬ್ಬದ ವಿಶೇಷತೆ ಹಾಗೂ ಮಹತ್ವ

By Suhani B
|

ಕೇರಳಿಗರಿಗೆ ಓಣಂ ಕೇವಲ ಹಬ್ಬ ಮಾತ್ರವಲ್ಲ ಸಮೃದ್ಧಿಯ ದಿನ. ‌ ಓಣಂ ದಕ್ಷಿಣ ಭಾರತದ ಕೇರಳ ರಾಜ್ಯದಲ್ಲಿ ನಡೆಯುವ ಅತಿದೊಡ್ಡ ಹಬ್ಬವಾಗಿ ದೆಸಡಗರ, ಸಂಭ್ರಮದಿಂದ ಆಚರಿಸುವ ಓಣಂ ಹಬ್ಬ ತನ್ನದೇ ಆದ ವೈಶಿಷ್ಟ್ಯಗಳನ್ನು ಪಡೆದುಕೊಂಡಿದ್ದು, ಎಲ್ಲ ದುಃಖ ದುಮ್ಮಾನಗಳನ್ನು ಮರೆಯುವ ಕಾಲ.

ಈ ಹಬ್ಬವನ್ನು ಮಲಯಾಳಿ ಪಂಚಾಂಗದ ಮೊದಲ ತಿಂಗಳು ಚಿಂಗಮ್ ಅಂದರೆ ಆಗಸ್ಟ್-ಸೆಪ್ಟೆಂಬರ್ ತಿಂಗಳಿನಲ್ಲಿ, ಪುರಾಣಪ್ರಸಿದ್ಧ ಸಾಮ್ರಾಟ ಮಹಾಬಲಿಯು ಮನೆಗೆ ಮರಳಿ ಬಂದ ಕುರುಹಾಗಿ ಸಂಭ್ರಮದಿಂದ ಆಚರಿಸಲಾಗುತ್ತದೆ. ಹತ್ತು ದಿನಗಳವರೆಗೆ ಸಡಗರದಿಂದ ಜರುಗುವ ಈ ಹಬ್ಬವು ಕೇರಳದ ಹಲವಾರು ಸಾಂಸ್ಕೃತಿಕ ಮತ್ತು ಸಾಂಪ್ರದಾಯಿಕತೆಯ ಎಳೆಗಳೊಂದಿಗೆ ಬೆಸೆದುಕೊಂಡಿದೆ.

Onam festival

ತುಂಬಾ ಕ್ಲಿಷ್ಟ ವಿನ್ಯಾಸದ ಪುಷ್ಪ ಚಿತ್ತಾರಗಳು, ಬಗೆ ಬಗೆಯ ಭಕ್ಷ್ಯಗಳು, ಹಾವು ದೋಣಿಯಾಟದ ಸ್ಪರ್ಧೆಗಳು, ಕೈಕೊತ್ತಿಕಲಿ ನೃತ್ಯ - ಇವೆಲ್ಲ ಈ ಉತ್ಸವದ ಪ್ರಮುಖ ಆಕರ್ಷಣೆಗಳಾಗಿವೆ. ಈ ಹಬ್ಬಕ್ಕಾಗಿ ಇಲ್ಲಿನ ಜನರು ಹೊಸಬಟ್ಟೆಗಳನ್ನು ತೊಡುವುದು ವಾಡಿಕೆ. ಪುರುಷರು ಅಂಗಿ ಮತ್ತು ಮುಂಡು ಎಂದು ಕರೆಯಲಾಗುವ ಸ್ಕರ್ಟ್ ತರದ ಉಡುಪನ್ನು(ಪಂಚೆ)ಧರಿಸಿದರೆ, ಮಹಿಳೆಯರು ಅದೇ ತರಹದ ಮುಂಡುವಿನ ಮೇಲೊಂದು ಚಿನ್ನದ ಬಣ‍್ಣದ ನರಿಯತ್ತು ಎಂದು ಕರೆಯಲಾಗುವ ಮೇಲಂಗಿಯನ್ನು ತೊಟ್ಟು ಸಂಭ್ರಮಿಸುತ್ತಾರೆ. ಬಾಲಕಿಯರು ಪಾವಡವೆಂಬ ಲಂಗ, ಮೇಲೊಂದು ರವಿಕೆಯನ್ನು ತೊಟ್ಟು ಸಡಗರದಿಂದ ಓಡಾಡುತ್ತಿರುತ್ತಾರೆ. ಓಣಂ ಕೇರಳದ ಸುಗ್ಗಿಯ ಹಬ್ಬವೂ ಹೌದು.

ಓಣಂ, ಆಧುನಿಕ ಕಾಲಮಾನದಲ್ಲಿಯೂ ಉಳಿಸಿ, ಆಚರಿಸಿಕೊಂಡು ಬರಲಾಗುತ್ತಿರುವ ಅತ್ಯಂತ ಪುರಾತನ ಹಬ್ಬವಾಗಿದೆ. ಭತ್ತದ ಸುಗ್ಗಿಯ ಸಂಭ್ರಮ ಮತ್ತು ಮಳೆಗಾಲದ ಹೂಫಸಲು - ಇವೆರಡರ ಸಂಗಮದ ಕುರುಹಾಗಿ ಮತ್ತು ಅರಸ ಮಾವೆಳಿಯು ಪಾತಾಳಲೋಕದಿಂದ ಭೂಮಿಗೆ ವಾರ್ಷಿಕ ಭೇಟಿಯ ನೆನಪಿನಲ್ಲಿ, ಮಲಯಾಳಿ ತಿಂಗಳು ಚಿಂಗಂನಲ್ಲಿ ಈ ಹಬ್ಬವನ್ನು ಆಚರಿಸುತ್ತಾರೆ. ಅನಾದಿ ಕಾಲದಿಂದಲೂ ಅರಸ ಮಾವೆಳಿಯನ್ನು ಕೇರಳದ ಜನತೆ ಆರಾಧಿಸುತ್ತ ಬಂದಿರುವುದರಿಂದ ಓಣಂ ಹಬ್ಬಕ್ಕೆ ಅದರದ್ದೇ ಆದ ವಿಶಿಷ್ಟತೆ ಇದೆ.

ಪುರಾಣ ಐತಿಹ್ಯಗಳ ಪ್ರಕಾರ, ಮಹಾಬಲಿ ಚಕ್ರವರ್ತಿಯ ಕಾಲದಲ್ಲಿಯೇ ಕೇರಳವು ಸುವರ್ಣ ಯುಗಕ್ಕೆ ಸಾಕ್ಷಿಯಾಗಿತ್ತು. ಅವನ ರಾಜ್ಯಭಾರದ ಸಮಯದಲ್ಲಿ ಪ್ರತಿಯೊಬ್ಬ ಪ್ರಜೆಯೂ ಸಂತಸ, ನೆಮ್ಮದಿ ಮತ್ತು ಸಂತೃಪ್ತಿಯಿಂದಿದ್ದು, ಅರಸನೂ ಕೂಡ ಅವರೆಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದಾಗಿ ತಿಳಿದು ಬರುತ್ತದೆ. ಈ ಎಲ್ಲ ವಿಶೇಷತೆಗಳ ಹೊರತಾಗಿಯೂ ಮಹಾಬಲಿ ಚಕ್ರವರ್ತಿಯಲ್ಲಿ ಒಂದು ನ್ಯೂನತೆ ಇತ್ತು. ಅವನು ಅಹಂಕಾರಿಯಾಗಿದ್ದ. ಇಷ್ಟೆಲ್ಲದರ ನಡುವೆಯೂ ಮಹಾಬಲಿ ತನ್ನ ಒಳ್ಳೆಯ ಗುಣಗಳ ಫಲವಾಗಿ ದೇವರಿಂದ ಅವನೊಂದು ವರ ಪಡೆದುಕೊಂಡಿದ್ದ. ಅದೆಂದರೆ, ವರ್ಷಕ್ಕೊಮ್ಮೆ ಅವನು ತೀರಾ ಆತ್ಮೀಯರಾಗಿದ್ದ ತನ್ನ ಜನರನ್ನು ಭೇಟಿಯಾಗಲು ಸಾಧ್ಯವಿತ್ತು.

ಮಲೆಯಾಳಿಗರ ಅಚ್ಚುಮೆಚ್ಚಿನ 'ಓಣಂ' ಹಬ್ಬದ ವಿಶೇಷತೆ ಹಾಗೂ ಮಹತ್ವ

ಅವನು ಭೂಲೋಕವನ್ನು ಭೇಟಿ ಮಾಡುವ ಆ ದಿವಸವನ್ನೇ ಅಲ್ಲಿ ಓಣಂ ಆಗಿ ಪ್ರತಿ ವರ್ಷವೂ ಆಚರಿಸುತ್ತಾರೆ. ಅಲ್ಲಿನ ಜನರು ಈ ಹಬ್ಬವನ್ನು ತಮ್ಮ ಪ್ರೀತಿಪಾತ್ರ ಅರಸನೆಡೆಗೆ ತಮಗಿರುವ ಅಭಿಮಾನ ಮತ್ತು ಸಂತಸವನ್ನು ಕೃತಜ್ಞತಾಪೂರ್ವಕವಾಗಿ ವ್ಯಕ್ತಪಡಿಸಲು ಅತ್ಯಂತ ಅದ್ದೂರಿಯಾಗಿ ಆಚರಿಸುತ್ತಾರೆ.

ಹತ್ತು ದಿನಗಳ ಕಾಲ ಜರುಗುವ ಈ ವಿಶೇಷ ಉತ್ಸವದಲ್ಲಿ ಕೇರಳದ ಸಾಂಸ್ಕೃತಿಕ ವೈಭವವೆಲ್ಲ ಮೈದಾಳಿರುತ್ತದೆಯಲ್ಲದೆ, ಜನರ ಉತ್ಸಾಹ, ಸಂಭ್ರಮಗಳು ಮುಗಿಲು ಮುಟ್ಟಿರುತ್ತವೆ. ಓಣಂ ಉತ್ಸವಾಚರಣೆಯ ಅತ್ಯಂತ ಆಕರ್ಷಣೀಯ ಅಂಶವೆಂದರೆ ತಿರುಓಣಂನ ದಿವಸ ತಯಾರಿಸಲಾಗುವ ಓಣಸಾದ್ಯ ಎಂಬ ಅದ್ಭುತ ತಿನಿಸು. ಇದು 9 ತರದ ಭೋಜನವಾಗಿದ್ದು, 11 ರಿಂದ 13 ಬಗೆಯ ತರಾವರಿ ಖಾದ್ಯಗಳನ್ನು ಹೊಂದಿರುತ್ತದೆ. ಓಣಸಾದ್ಯವನ್ನು ಬಾಳೆಯ ಎಲೆಗಳ ಮೇಲಿಟ್ಟು ಬಡಿಸಲಾಗುತ್ತದೆ ಮತ್ತು ಜನರು ಕೂಡ ನೆಲದ ಮೇಲೆ ಹಾಸಿದ ಚಾಪೆಗಳ ಮೇಲೆ ಕೂತು ಈ ಭೋಜನವನ್ನು ಸವಿಯುತ್ತಾರೆ.

ಓಣಂ ಹಬ್ಬಕ್ಕೆ ಪಾಯಸ ಮೇಳದ ಮೆರುಗು

ಓಣಂ ಉತ್ಸವದ ಮತ್ತೊಂದು ಮೋಡಿಮಾಡುವ ಅಂಶವೆಂದರೆ ವಲ್ಲಂಕಲಿ ಎನ್ನುವ ಹಾವು ದೋಣಿ ಪಂದ್ಯ. ಈ ಪಂದ್ಯವನ್ನು ಪಂಪಾ ನದಿಯಲ್ಲಿ ಆಯೋಜಿಸಲಾಗುತ್ತದೆ. ಕಣ್ಮನ ಸೆಳೆಯುವಂತೆ ಸಿಂಗಾರಗೊಂಡಿರುವ ದೋಣಿಗಳಲ್ಲಿ ನೂರಾರು ನಾವಿಕರು ಕೇಕೆ ಹಾಕುತ್ತ ಕೂತು, ಮೇರೆ ಮೀರಿದ ಉತ್ಸಾಹ ಮತ್ತು ಆನಂದದಿಂದ ಹಾಡುಗಳನ್ನು ಹೇಳಿಕೊಂಡು ದೋಣಿ ನಡೆಸುವುದನ್ನು ನೋಡಲು ಅಸಂಖ್ಯಾತ ಜನ ನೆರೆದಿರುತ್ತಾರೆ. ಅದನ್ನು ನೋಡುವುದೇ ಕಣ್ಣಿಗೆ ಹಬ್ಬ.

ಓಣಂನ ದಿವಸ ಓಣಕಲಿಕಾಲ್ ಎನ್ನುವ ಆಟವನ್ನು ಗುಂಪು ಗುಂಪಾಗಿ ಆಡುವ ಸಂಪ್ರದಾಯವೂ ಇದೆ. ಹೆಚ್ಚು ದೈಹಿಕ ಶ್ರಮವನ್ನು ಹಾಕಿ ಆಡಲಾಗುವ ಆಟಗಳಾದ ತಳಪ್ಪಂತುಕಲಿ (ಇಲ್ಲಿ ಚೆಂಡನ್ನು ಬಳಸಲಾಗುತ್ತದೆ), ಆಮ್ಬೆಯಲ್(ಬಿಲ್ಲಿನಾಟ), ಕುಟುಕುಟು ಮತ್ತು ಕಯ್ಯಮಕಲಿ ಹಾಗೂ ಅತ್ತಕಳಂ ಎಂಬುವ ಕಾಳಗದ ಆಟಗಳನ್ನು ಪುರುಷರು ಆಯ್ಕೆ ಮಾಡಿಕೊಳ್ಳುತ್ತಾರೆ. ಮಹಿಳೆಯರು ಹೆಚ್ಚಾಗಿ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಾರೆ.

ಓಣಂಗೆ ಬಾಳೆಕಾಯಿ ಚಿಪ್ಸ್ ನೀವೇ ಮಾಡಬಹುದು

ಅವರು ಮಹಾಬಲಿ ಚಕ್ರವರ್ತಿಯನ್ನು ಸ್ವಾಗತಿಸುವ ಕುರುಹಾಗಿ ಅವರವರ ಮನೆಗಳ ಮುಂದೆ ತುಂಬಾ ಸುಂದರವೂ, ಸಂಕೀರ್ಣವೂ ಆದ ಪೂಕ್ಕಳಂ ಎಂಬ ಪುಷ್ಪ ರಂಗವಲ್ಲಿಗಳನ್ನು ಹಾಕಿರುತ್ತಾರೆ. ಓಣಂ ಸಂದರ್ಭದಲ್ಲಿ ಕೈಕೊತ್ತಿ ಕಲಿ ಮತ್ತು ತುಂಬಿ ತುಳ್ಳಾಲ್ ಎಂಬೆರಡು ಬಗೆಯ ಅತ್ಯಂತ ಮನೋಹರವಾದ ನೃತ್ಯಪ್ರಕಾರಗಳನ್ನು ಮಹಿಳೆಯರು ಪ್ರದರ್ಶಿಸುತ್ತಾರೆ. ಜಾನಪದ ನೃತ್ಯ ಪ್ರಕಾರಗಳಾದ ಕುಮ್ಮಟ್ಟಿಕಲಿ ಮತ್ತು ಪುಲಿಕಲಿಗಳಂತೂ ಇಡೀ ಉತ್ಸವದ ಮೇರು ಆಕರ್ಷಣೆಗಳಾಗಿವೆ.

English summary

Ways Onam Festival Is Celebrated in Kerala

Onam or the Harvest festival is the National festival of Kerala. It is the biggest festival of Kerala and people of all ages take an active part in celebrating this festival. No matter which community the people belong to, they celebrate this festival with great pomp and excitement, thereby drawing people from in and around the world. The festival of Onam is celebrated according to the Malayalam Calendar, also referred to as the Kolla Varsham.
X
Desktop Bottom Promotion