For Quick Alerts
ALLOW NOTIFICATIONS  
For Daily Alerts

ನವರಾತ್ರಿ 2021: ವಿದ್ಯಾರಂಭಕ್ಕೆ ಶುಭದಿನ, ಆಚರಣೆ, ಮಹತ್ವ ಹಾಗೂ ವಿಧಾನ

|

ಹಿಂದೂ ಧರ್ಮದಲ್ಲಿ ಹಲವಾರು ಸಂಪ್ರದಾಯಗಳಿವೆ, ಎಲ್ಲಕ್ಕೂ ಒಂದು ಕಾರಣ, ಹಿನ್ನೆಲೆ ಹಾಗೂ ಅನನ್ಯ ಅರ್ಥವಿದೆ. ಇಂಥ ಆಚರಣೆಯಲ್ಲಿ ಮಕ್ಕಳ ವಿದ್ಯಾರಂಭ ಅಥವಾ ಅಕ್ಷರಾಭ್ಯಾಸ ಸಹ ಒಂದು. ಮಕ್ಕಳ ಮುಂದಿನ ಶೈಕ್ಷಣಿಕ ಉಜ್ವಲವಾಗಿರಲಿ ಎಂದು ಹಾರೈಸಿ ಪೋಷಕರು ಮಕ್ಕಳಿಗೆ ಶುಭ ದಿನ, ಸಮಯ ನೋಡಿ ವಿದ್ಯಾರಂಭ ಮಾಡಿಸುತ್ತಾರೆ.

ವಿದ್ಯಾರಂಭಂ ಒಂದು ಸುಂದರ ಆಚರಣೆ ಮತ್ತು ಹಿಂದೂ ಪದ್ಧತಿಯಲ್ಲಿ ಅಂಬೆಗಾಲಿಡುವ ಮಕ್ಕಳನ್ನು ಜ್ಞಾನದ ಜಗತ್ತಿಗೆ ಪರಿಚಯಿಸುವ ಸುಕ್ಷಣ ಇದು. ಅದರಲ್ಲೂ ನವರಾತ್ರಿಯ ಸರಸ್ವತಿ ಪೂಜೆ ಹಾಗೂ ವಿಜಯದಶಮಿ ತಮ್ಮ ಮಕ್ಕಳಿಗೆ ವಿದ್ಯಾರ್ಜನೆಯ ಆರಂಭಕ್ಕೆ ಪವಿತ್ರವಾದ ಶುಭ ಸಮಯ ಎಂದು ಹೇಳಲಾಗುತ್ತದೆ.

ವಿದ್ಯಾರಂಭ ಎಂದರೇನು?

ವಿದ್ಯಾರಂಭ ಎಂದರೇನು?

ವಿದ್ಯಾ ಎಂದರೆ "ಜ್ಞಾನ" ಮತ್ತು ಆರಂಭಮ್ ಎಂದರೆ "ಪ್ರಾರಂಭ". ಹೀಗಾಗಿ ಇದು ಒಂದು ಆಚರಣೆಯಾಗಿದ್ದು, ಇದು ಮಕ್ಕಳನ್ನು ಔಪಚಾರಿಕವಾಗಿ ಮೊದಲ ಬಾರಿಗೆ ಮಕ್ಕಳಿಗೆ ಸ್ಲೇಟು, ಬಳಪ, ಪುಸ್ತಕ, ಪೆನ್ಸಿಲ್‌, ಪೆನ್ನು ನೀಡಿ ಮೊದಲ ಬಾರಿಗೆ ಪೋಷಕರ ಕೈಹಿಡಿದು ಬರಸುವ ಪದ್ಧತಿ.

ವಿದ್ಯಾರಂಭಕ್ಕೆ ಸರಿಯಾದ ವಯಸ್ಸು ಎಷ್ಟು?

ವಿದ್ಯಾರಂಭಕ್ಕೆ ಸರಿಯಾದ ವಯಸ್ಸು ಎಷ್ಟು?

ಇದು ಜ್ಞಾನದ ಆರಂಭವನ್ನು ಸೂಚಿಸುವುದರಿಂದ, ಈ ಆಚರಣೆಯನ್ನು 2-5 ವರ್ಷದೊಳಗಿನ ಮಕ್ಕಳಿಗೆ ಮಾಡಲು ಹಿರಿಯರು ಸೂಚಿಸುತ್ತಾರೆ. ಇದರಲ್ಲಿ ಗಂಡು ಮಕ್ಕಳು ಹಾಗೂ ಹೆಣ್ಣು ಮಕ್ಕಳು ಎಂಬ ಯಾವುದೇ ಬೇಧವಿಲ್ಲ. ಎಲ್ಲ ಮಕ್ಕಳಿಗೂ ಇದೇ ವಯಸ್ಸು, ಇದೇ ಪದ್ಧತಿ. ಈ ಸಂದರ್ಭದಲ್ಲಿ ಪೋಷಕರು ಸಾಕಷ್ಟು ಬುದ್ಧಿವಂತಿಕೆಯಿಂದ ತಮ್ಮ ಮಕ್ಕಳು ಆಶೀರ್ವದಿಸಲ್ಪಡಲಿ ಎಂದು ಹಾರೈಸುತ್ತಾರೆ.

ವಿದ್ಯಾರಂಭಕ್ಕೆ ಶುಭ ದಿನ

ವಿದ್ಯಾರಂಭಕ್ಕೆ ಶುಭ ದಿನ

ಸರಸ್ವತಿ ದೇವಿಯನ್ನು ಜ್ಞಾನ ಮತ್ತು ಬುದ್ಧಿವಂತಿಕೆಯ ದೇವತೆ ಎಂದು ಪರಿಗಣಿಸಲಾಗುತ್ತದೆ ಮತ್ತು ಆದ್ದರಿಂದ ವಿದ್ಯಾರಂಭವನ್ನು ಸರಸ್ವತಿ ದೇವಿಗೆ ಸಮರ್ಪಿಸಲಾಗಿದೆ. ಈ ಸಮಾರಂಭವನ್ನು ಸಾಮಾನ್ಯವಾಗಿ ನವರಾತ್ರಿಯ ಕೊನೆಯ ದಿನ ಅಂದರೆ ವಿಜಯದಶಮಿಯಂದು ನಡೆಸಲಾಗುತ್ತದೆ. ಈ ವರ್ಷ, 2021 ರಲ್ಲಿ, ವಿಜಯದಶಮಿ 15ನೇ ಅಕ್ಟೋಬರ್‌ನಲ್ಲಿ ಆಚರಿಸಲಾಗುತ್ತಿದೆ.

ವಿದ್ಯಾರಂಭದ ವೇಳೆ ಹೇಳಬೇಕಾದ ಶ್ಲೋಕ

ವಿದ್ಯಾರಂಭದ ವೇಳೆ ಹೇಳಬೇಕಾದ ಶ್ಲೋಕ

"ಸರಸ್ವತಿ ನಮಸ್ತುಭ್ಯಂ ವರದೇ ಕಾಮ-ರೂಪಿಣಿ |

ವಿದ್ಯಾರಂಭಂ ಕರಿಷ್ಯಾಮಿ ಸಿದ್ಧೀರ್-ಭವತು ಮೇ ಸದಾ" ||

ನಮಗೆ ವರಗಳನ್ನು ನೀಡುವ ಮತ್ತು ಎಲ್ಲಾ ಆಸೆಗಳನ್ನು ಈಡೇರಿಸುವ ಸರಸ್ವತಿ ದೇವಿಗೆ ಎಲ್ಲರೂ ತಲೆಬಾಗೋಣ,

ನಾನು ನನ್ನ ಅಧ್ಯಯನವನ್ನು ಪ್ರಾರಂಭಿಸಿದಾಗ, ಸರಿಯಾದ ತಿಳುವಳಿಕೆಯ ಸದ್ಗುಣವನ್ನು ಯಾವಾಗಲೂ ನನಗೆ ನೀಡು ತಾಯಿ.

ಅಕ್ಷರಾಭ್ಯಾಸ ಸಮಾರಂಭವನ್ನು ಹೇಗೆ ಮಾಡುವುದು?

ಅಕ್ಷರಾಭ್ಯಾಸ ಸಮಾರಂಭವನ್ನು ಹೇಗೆ ಮಾಡುವುದು?

ವಿದ್ಯಾರಂಭವನ್ನು ಹಿರಿಯರ ಮಾರ್ಗದರ್ಶನದಲ್ಲಿ ಮನೆಯಲ್ಲೇ ಮಾಡಬಹುದು ಅಥವಾ ದೇವಿ ದೇವಾಲಯ, ಶೃಂಗೇರಿಯ ಸರಸ್ವತಿ ಸನ್ನಿಧಿ, ಕೊಲ್ಲೂರು ಮೂಕಾಂಬಿಕಾ ದೇವಾಲಯದಲ್ಲಿ ಪೂಜಾರಿಗಳ ಮಾರ್ಗದರ್ಶನದಲ್ಲಿ ಸಹ ಮಾಡಬಹುದು.

ವಿದ್ಯಾರಂಭ ಮಾಡುವ ದಿನ ಪಾಲಿಸಬೇಕಾದ ಆಚರಣೆಗಳು

1. ಮಕ್ಕಳನ್ನು ಮೊದಲು ಸ್ನಾನ ಮಾಡಿಸಿ ಹೊಸದಾದ ಸಾಂಪ್ರದಾಯಿಕ ಬಟ್ಟೆಗಳನ್ನು ಹಾಕಿ, ನಮ್ಮ ಹಿಂದೂ ಪದ್ಧತಿಯ ಪ್ರಕಾರ ಅಲಂಕರಿಸಿ.

2. ಸಮೀಪದ ದೇವಿ ದೇವಾಲಯದಲ್ಲಿ ಪೂಜಾರಿಗಳ ಸಲಹೆಯಂತೆ ವಿದ್ಯಾರಂಭ ಮಾಡುತ್ತಾರೆ.

3. ವಿದ್ಯಾರಂಭದ ವೇಳೆ ಮಕ್ಕಳು ಗುರುಗಳು/ಪೋಷಕರ ಮಡಿಲಲ್ಲಿ ಅಥವಾ ಕುಟುಂಬದ ಹಿರಿಯ ವ್ಯಕ್ತಿಯ ಮಡಿಲಲ್ಲಿ ಕುಳಿತುಕೊಳ್ಳುತ್ತಾರೆ. ಈ ವೇಳೆ ಮಂತ್ರ ಘೋಷಿಸುತ್ತಾ ಪೂಜಾ ವಿಧಾನದ ಪ್ರಕ್ರಿಯೆಯೊಂದಿಗೆ ವಿದ್ಯಾರಂಭ ಪೂಜೆ ಆರಂಭವಾಗುತ್ತದೆ. ಇದೇ ಆಚರಣೆಯನ್ನು ಮನೆಯಲ್ಲಿ ಸಹ ಪಾಲಿಸಿ ಮಾಡಿಸಬಹುದು.

4. ವಿದ್ಯಾರಂಭದ ವೇಳೆ ಅಕ್ಕಿಯಿಂದ ತುಂಬಿದ ತಟ್ಟೆಯಲ್ಲಿ ‘ಓಂ ಹರಿ ಶ್ರೀ ಗಣಪತಯೇ ನಮಃ' ಎಂದು ಬರೆಯುವುದರೊಂದಿಗೆ ಆರಂಭವಾಗುತ್ತದೆ. ಸಾಮಾನ್ಯವಾಗಿ, ಮಗುವಿನ ತೋರು ಬೆರಳನ್ನು ಹಿಡಿದಿಟ್ಟುಕೊಳ್ಳಲಾಗುತ್ತದೆ ಮತ್ತು ಈ ಮಂತ್ರವನ್ನು ನಿಮ್ಮ ಭಾಷೆಯಲ್ಲಿ ಬರೆಯುವಂತೆ ಹಿರಿಯರು ಹೇಳುತ್ತಾರೆ.

5. ಮಂತ್ರವನ್ನು ಮರಳು ಮತ್ತು ಅಕ್ಕಿಯ ಮೇಲೆ ಬರೆಯುವುದು ಪದ್ಧತಿ. ಮರಳು ಮತ್ತು ಅಕ್ಕಿಯ ಎರಡೂ ಬರಹಗಳು ತಮ್ಮದೇ ಆದ ಮಹತ್ವವನ್ನು ಹೊಂದಿವೆ. ಮರಳಿನ ಮೇಲೆ ಬರೆಯುವುದು ಅಭ್ಯಾಸವನ್ನು ಸೂಚಿಸುತ್ತದೆ ಆದರೆ ಅಕ್ಕಿಯ ಮೇಲೆ ಬರೆಯುವುದು ಜ್ಞಾನದ ಕಾರಣದಿಂದ ಸಮೃದ್ಧಿಯನ್ನು ಸೂಚಿಸುತ್ತದೆ.

6. ಓಂ ಹರಿ ಶ್ರೀ ಗಣಪತ್ಯೇ ನಮಃ ಮಂತ್ರ ಬರೆದ ನಂತರ ಮಗುವಿನ ನಾಲಿಗೆಯ ಮೇಲೆ ಚಿನ್ನ ಎಂದು ಬರೆಯಲಾಗುತ್ತದೆ ಮತ್ತು ಚಿನ್ನವನ್ನು ಮುಟ್ಟಿಸಲಾಗುತ್ತದೆ. ಇದು ಮಗುವಿನ ನಾಲಿಗೆಯ ಮೇಲೆ ಸರಸ್ವತಿ ದೇವಿಯು ಇರುವುದನ್ನು ಸೂಚಿಸುತ್ತದೆ ಇದರಿಂದ ಮಗು ಭವಿಷ್ಯದಲ್ಲಿ ಕಲಿಕೆಯ ರೇಖೆಯನ್ನು, ಉತ್ತಮ ಜ್ಞಾನವನ್ನು ಸೂಚಿಸುತ್ತದೆ.

7. ನಂತರ ಕುಟುಂಬಕ್ಕೆ ಅಥವಾ ಅತಿಥಿಗಳಿಗೆ ಸಿಹಿಯನ್ನು ಮಾಡಲು ಅಕ್ಕಿಯನ್ನು ನೀಡಬಹುದು.

8. ವಿದ್ಯಾರಂಭ ಸಮಾರಂಭ ಮುಗಿದ ನಂತರ ಸ್ಲೇಟ್‌ ಮತ್ತು ಪೆನ್ಸಿಲ್‌ಗಳನ್ನು ಇತರ ಮಕ್ಕಳಿಗೆ ವಿತರಿಸಬಹುದು.

ಈ ಆಚರಣೆಗಾಗಿ ಮಕ್ಕಳನ್ನು ಸಿದ್ಧಪಡಿಸುವ ಮುನ್ನ ನೀವು ಈ ಬಗ್ಗೆ ಕಾಳಜಿ ವಹಿಸಿ

ಈ ಆಚರಣೆಗಾಗಿ ಮಕ್ಕಳನ್ನು ಸಿದ್ಧಪಡಿಸುವ ಮುನ್ನ ನೀವು ಈ ಬಗ್ಗೆ ಕಾಳಜಿ ವಹಿಸಿ

1. ನೀವು ವಿದ್ಯಾರಂಭ ಮಾಡಲು ಬಯಸುವ ದೇವಾಲಯದ ಸಮಯವನ್ನು ಮೊದಲು ಪರಿಶೀಲಿಸಿ.

2. ವಿಜಯದಶಮಿಯ ಸಮಯದಲ್ಲಿ ದೇವಸ್ಥಾನಗಳು ಹೆಚ್ಚು ಜನಸಂದಣಿಯಿಂದ ಕೂಡಿರುವುದರಿಂದ ದೇವಸ್ಥಾನಕ್ಕೆ ಬೇಗನೆ ಭೇಟಿ ನೀಡುವುದು ಉತ್ತಮ.

3. ನಿಮ್ಮ ಮಕ್ಕಳನ್ನು ಸಾಂಪ್ರದಾಯಿಕವಾಗಿ ಸಿದ್ಧಮಾಡಿ, ಆದರೆ ಬಟ್ಟೆಗಳು ಮೃದುವಾಗಿರುವುದನ್ನು ಖಚಿತಪಡಿಸಿಕೊಳ್ಳಿ ಮತ್ತು ಮಕ್ಕಳನ್ನು ನೋಯಿಸಬೇಡಿ. ಸರತಿ ಸಾಲಿನಲ್ಲಿ ನಿಲ್ಲಬೇಕಾಗಬಹುದು ಮತ್ತು ಮೃದುವಾದ ಬಟ್ಟೆಗಳಿಲ್ಲದಿದ್ದರೆ ಮಕ್ಕಳು ಹೆಚ್ಚು ಗಲಾಟೆ ಮಾಡಬಹುದು.

4. ಮಕ್ಕಳಿಗೆ ಅಗತ್ಯವಾದ ವಸ್ತುಗಳು, ನೀರು, ಆಹಾರ ಎಲ್ಲವೂ ತೆಗೆದುಕೊಂಡು ಹೋಗಿ.

"ಜ್ಞಾನ"ದ ಈ ಆರಂಭವು ಮಕ್ಕಳ ಬದುಕಿಗೆ ಬಹಳ ಮುಖ್ಯವಾದ ಸಮಾರಂಭ. ನಮ್ಮ ಮಕ್ಕಳಿಗೆ ಪೋಷಕರಾಗಿ ನಾವು ನೀಡಬಹುದಾದ ಅತ್ಯುತ್ತಮ ಉಡುಗೊರೆ "ಜ್ಞಾನ ಮತ್ತು ಬುದ್ಧಿವಂತಿಕೆ". ಸರಸ್ವತಿ ದೇವಿಯ ಕೃಪೆ ನಮ್ಮ ಮಗುವಿನ ಮೇಲಿರಲಿ ಎಂದು ಆಶಿಸೋಣ.

English summary

Vidyarambham 2021 Date, Time, Right Age and How to do Vidyarambham Puja at Home in kannada

Here we talking aout Vidyarambham 2021 Date, Time, Right Age, How to do Vidyarambham Puja at Home and Things to carry for your Vidyarambham ceremony at the Temple in kannad. read more.
X
Desktop Bottom Promotion