For Quick Alerts
ALLOW NOTIFICATIONS  
For Daily Alerts

ಒಂದೇ ದಿನದಲ್ಲಿ ಬಂದಿದೆ ವಟ ಸಾವಿತ್ರಿ ವ್ರತ ಹಾಗೂ ಶನಿ ಜಯಂತಿ: ಈ ಕಾಕತಾಳೀಯಗಳು ಸಂಭವಿಸಲಿದೆ

|

ಜ್ಯೇಷ್ಠ ಮಾಸದ ಅಮಾವಾಸ್ಯೆಯಂದು ಶನಿ ಜಯಂತಿಯನ್ನು ಆಚರಿಸಲಾಗುತ್ತದೆ. ಶನಿ ಜಯಂತಿಯ ದಿನವು ಶನಿ ದೇವನನ್ನು ಪೂಜಿಸಲು ಮತ್ತು ಅವನ ಕೋಪದಿಂದ ಪರಿಹಾರವನ್ನು ಪಡೆಯಲು ಪ್ರಮುಖ ದಿನವಾಗಿದೆ. ಆದ್ದರಿಂದ, ಧರ್ಮ ಮತ್ತು ಜ್ಯೋತಿಷ್ಯದಲ್ಲಿ, ಶನಿ ಜಯಂತಿಯ ದಿನದಂದು ಉಪವಾಸ, ಪೂಜೆ ಮತ್ತು ಕ್ರಮಗಳನ್ನು ಕೈಗೊಳ್ಳಲು ಸಲಹೆ ನೀಡಲಾಗುತ್ತದೆ. ಈ ವರ್ಷ, ಶನಿ ಜಯಂತಿಯಂದೇ ವಟ ಸಾವಿತ್ರಿ ವ್ರತ ಬಂದಿದೆ. ಆದ್ದರಿಂದ ಈ ದಿನ ನೀವು ಮಾಡುವ ಪೂಜೆಗಳಿಗೆ ಕರ್ಮ ಫಲ ಅಧಿಕವಿರುತ್ತದೆ.

ನೀವು ಈ ದಿನ ಒಳ್ಳೆಯ ಕಾರ್ಯಗಳನ್ನು ಮಾಡಿದರೆ ಹೆಚ್ಚಿನ ಪುಣ್ಯ ದೊರೆಯುವುದು. ಜೊತೆಗೆ ಈ ಎರಡೂ ಒಂದೇ ದಿನ ಬಂದಿರುವುದರಿಂದ ಅನೇಕ ಕಾಕತಾಳೀಯಗಳು ಸಮಭವಿಸಲಿದೆ,ಅದೇನು ಎಂದು ನೋಡೋಣ ಬನ್ನಿ:

ಶನಿ ಜಯಂತಿ 2022: ಶನಿ ಜಯಂತಿಯ ಶುಭ ಮುಹೂರ್ತ

ಶನಿ ಜಯಂತಿ 2022: ಶನಿ ಜಯಂತಿಯ ಶುಭ ಮುಹೂರ್ತ

ಜ್ಯೇಷ್ಠ ಮಾಸದ ಅಮಾವಾಸ್ಯೆ ತಿಥಿಯು 29ನೇ ಮೇ 2022 ರಂದು ಭಾನುವಾರ ಮಧ್ಯಾಹ್ನ 2:54 ಕ್ಕೆ ಪ್ರಾರಂಭವಾಗುತ್ತದೆ ಮತ್ತು ಮೇ 30 ರಂದು ಸಂಜೆ 4:59 ಕ್ಕೆ ಮುಕ್ತಾಯವಾಗುತ್ತದೆ. ಹಾಗಾಗಿ ಮೇ 30 ರಂದು ಉದಯ ದಿನಾಂಕದಂದು ಶನಿ ಜಯಂತಿಯನ್ನು ಆಚರಿಸಲಾಗುವುದು.

ಶನಿ ಜಯಂತಿ ಮತ್ತು ವಟ ಸಾವಿತ್ರಿ ಒಂದೇ ದಿನ

ಶನಿ ಜಯಂತಿ ಮತ್ತು ವಟ ಸಾವಿತ್ರಿ ಒಂದೇ ದಿನ

2022 ರಲ್ಲಿ ಜ್ಯೇಷ್ಠ ಮಾಸದ್ಲಿ ಅಮವಾಸ್ಯೆ ಮೇ 29 ಹಾಗೂ ಮೇ 30ಕ್ಕೆ ಬಂದಿದೆ. ದಿನಾಂಕದ ಸಂಯೋಜನೆಯನ್ನು ಮೇ 30 ರಂದು ಮಾಡಲಾಗುವುದು. ಹೀಗಾಗಿ ಈ ವರ್ಷ ವಟ ಸಾವಿತ್ರಿ ವ್ರತ ಹಾಗೂ ಶನಿಒ ಜಯಂತಿ ಎರಡೂ ಒಂದೇ ದಿನ ಬಂದಿದೆ. ಈ ದಿನದಂದು ಇನ್ನೂ ಅನೇಕ ಮಂಗಳಕರ ಯೋಗಗಳು ಇರುವುದರಿಂದ ಈ ವರ್ಷದ ಶನಿ ಜಯಂತಿಯ ಮಹತ್ವವು ಹೆಚ್ಚಾಗಿದೆ.

ಈ ವಿಶೇಷ ಯೋಗಗಳು ಕೂಡಿ ಬಂದಿದೆ:

ಈ ವಿಶೇಷ ಯೋಗಗಳು ಕೂಡಿ ಬಂದಿದೆ:

ಮೇ 30ರಂದು ದಿನವು ತುಂಬಾ ಮಂಗಳಕರವಾಗಿದೆ. ಈ ದಿನ ಸರ್ವಾರ್ಥಸಿದ್ಧಿ ಯೋಗ, ಸುಕರ್ಮ ಯೋಗದಂತಹ ಹಲವು ಅಪರೂಪದ ಶುಭ ಯೋಗಗಳಿವೆ. ಈ ದಿನ ಮುತ್ತೈದೆಯರು ಗಂಡನ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುತ್ತಾರೆ ಜೊತೆಗೆ ಶನಿ ದೇವನ ಪೂಜೆಯನ್ನೂ ಮಾಡುವುದರಿಂದ ಒಳ್ಳೆಯ ಕರ್ಮ ಫಲದಿಂದ ಒಳ್ಳೆಯದೇ ಆಗುತ್ತದೆ.

ಸೋಮಾವತಿ ಅಮವಾಸ್ಯೆ

ಸೋಮಾವತಿ ಅಮವಾಸ್ಯೆ

ಈ ತಿಂಗಳು ಅಮವಾಸ್ಯೆ ಮೇ 30 ಅಂದರೆ ಸೋಮವಾರದಮದು ಬಂದಿದೆ. ಅಮವಾಸ್ಯೆ ಸೋಮವಾರ ಬಂದರೆ ಅದನ್ನು ಸೋಮಾವತಿ ಅಮವಾಸ್ಯೆಯೆಂದು ಕರೆಯಲಾಗುವುದು. ಸೋಮಾವತಿ ಅಮವಾಸ್ಯೆಯನ್ನು ತುಂಬಾ ಮಂಗಳಕರ ಎಂದು ಪರಿಗಣಿಸಲಾಗಿದೆ. ಆದ್ದರಿಂದ ಗಂಡನ ಆಯುಸ್ಸು ವೃದ್ಧಿಗೆ, ಕಷ್ಟಗಳನ್ನು ನೀಗಲು ಉಪವಾಸವಿದ್ದು ಮಾಡುವ ಪೂಜೆಗೆ ಹೆಚ್ಚಿನ ಫಲ ಸಿಗುವುದು. ಈ ದಿನ ಶಿವನ ವಿಶೇಷ ಕೃಪೆಗೆ ಕೂಡ ಪಾತ್ರರಾಗುವಿರಿ.

ಈ ದಿನ ಏನು ಮಾಡಬೇಕು?

ಈ ದಿನ ಏನು ಮಾಡಬೇಕು?

ಅಮಾವಾಸ್ಯೆಯ ದಿನ ಬ್ರಹ್ಮ ಮುಹೂರ್ತದಲ್ಲಿ ಎದ್ದು ಸ್ನಾನ ಮಾಡಿ ನಂತರ ಶನಿದೇವನನ್ನು ಸ್ಮರಿಸಿ ಉಪವಾಸದ ಸಂಕಲ್ಪ ಮಾಡಿ. ನಂತರ ಶನಿ ದೇವನ ಪೂಜೆ ಹಾಗೂ ವಟಸಾವಿತ್ರಿ ವ್ರತದ ಪೂಜೆಗಳನ್ನು ಮಾಡಿ. ಈ ದಿನ ನೀವು ಹನುಮಾನ್ ಹಾಗೂ ಸೋಮವಾರವಾದ ಕಾರಣ ಈಶ್ವರನಿಗೆ ಪೂಜೆ ಸಲ್ಲಿಸಿ.

ದಾನ ಮಾಡಿ

ದಾನ ಮಾಡಿ

ಈ ದಿನ ಮಾಡುವ ದಾನ ಕಾರ್ಯಗಳಿಗೆ ತುಂಬಾನೇ ಫಲ ಇದೆ. ಈ ದಿನ ನೀವು ಬಡ ಬಗ್ಗರಿಗೆ ದಾನ ಮಾಡುವುದರಿಂದ ನಿಮ್ಮ ಪುಣ್ಯದ ಫಲ ಹೆಚ್ಚುವುದು. ಬಡವರಿಗೆ ಕಪ್ಪು ರಗ್‌, ಸಾಸಿವೆಯೆಣ್ಣೆ, ಎಳ್ಳು ಇವುಗಳನ್ನು ದಾನ ಮಾಡಿ, ಇದರಿಂದ ಶನಿದೋಷ ನಿವಾರಣೆಯಾಗುವುದು. ನೀವು ಮಾಡುವ ದಾನ ಕಾರ್ಯದಿಂದ ಮನೆಯಲ್ಲಿ ಸಂತೋಷ, ನೆಮ್ಮದಿ, ಸಂಪತ್ತು ಹೆಚ್ಚುವುದು. ಮನೆ ಸದಸ್ಯರ ಆರೋಗ್ಯ ಚೆನ್ನಾಗಿರುತ್ತದೆ.

English summary

Vat Savitri Vrat and Shani Jayanti Special Coincidence Made On Same Day

Vat Savitri Vrat and Shani Jayanti Special Coincidence Made On Same Day, read on...
Story first published: Wednesday, May 25, 2022, 11:28 [IST]
X
Desktop Bottom Promotion