Just In
Don't Miss
- News
ಉದ್ಧವ್ ಠಾಕ್ರೆ ರಾಜೀನಾಮೆ; ಸಿಹಿ ಹಂಚಿ ಸಂಭ್ರಮಿಸಿದ ಬಿಜೆಪಿ
- Sports
IND vs ENG: ಮೊದಲ ಟಿ20 ಕಳೆದುಕೊಳ್ಳಲಿದ್ದಾರೆ ಕೊಹ್ಲಿ, ಪಂತ್, ಜಸ್ಪ್ರೀತ್ ಬುಮ್ರಾ; ಕಾರಣ?
- Education
CBSE Result 2022 : 10 ಮತ್ತು 12ನೇ ತರಗತಿ ಫಲಿತಾಂಶ ಪ್ರಕಟ ಯಾವಾಗ ?
- Movies
'ಕೆಜಿಎಫ್ 2' ನಟನ ಬೆಂಜ್ ಕಾರು ಅಪಘಾತ: ನಟ ಜಸ್ಟ್ ಮಿಸ್!
- Finance
ಜೂ.29ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Automobiles
ಸುರಕ್ಷತಾ ಮಾನದಂಡಗಳನ್ನು ರಾಜಿ ಮಾಡಿಕೊಳ್ಳಲು ಕಾರು ಕಂಪನಿಗಳ ಸಭೆ ಕರೆದ ನಿತಿನ್ ಗಡ್ಕರಿ
- Technology
ಅಮೆಜಾನ್ ಫ್ಯಾಬ್ ಫೋನ್ಸ್ ಫೆಸ್ಟ್ ಸೇಲ್ನಲ್ಲಿ ಈ ಫೋನ್ಗಳಿಗೆ ಬಿಗ್ ಆಫರ್!
- Travel
ದೇವಿ ಮೂಕಾಂಬಿಕೆಯ ದೈವಿಕ ಸನ್ನಿಧಿಯ ಸ್ಥಳ - ಕೊಲ್ಲೂರು
ವಟ ಸಾವಿತ್ರಿ ವ್ರತ ಯಾವಾಗ? ಪತಿಯ ಪತಿಯ ಆಯುರ್-ಐಶ್ವರ್ಯ ವೃದ್ಧಿಗೆ ಈ ದಿನ ಏನು ಮಾಡಬೇಕು?
ಪತಿಯ ಆಯುರ್ -ಐಶ್ವರ್ಯ ವೃದ್ಧಿಗಾಗಿ ಮಾಡುವ ಆಚರಣೆಯೇ ವಟ ಸಾವಿತ್ರಿ . ಈ ವರ್ಷ ಇದನ್ನು ಕರ್ನಾಟಕದಲ್ಲಿ ಮೇ 30ರಂದು ಆಚರಿಸಲಾಗುವುದು. ಭಾರತೀಯ ಮಹಿಳೆಯರು ಮತ್ತೈದೆ ಸಾವನ್ನು ಬಯಸುತ್ತಾರೆ, ತಮ್ಮ ಪತಿ ದೀರ್ಘಾಯುಷ್ಯದಿಂದ ಬಾಳಬೇಕು ಎಂದು ವ್ರತ ನಿಯಮಗಳನ್ನು ಪಾಲಿಸುತ್ತಾರೆ, ಅದರಲ್ಲೊಂದು ವಟ ಸಾವಿತ್ರಿ ವ್ರತ.
ಹಿಂದೂ ಪುರಾಣದಲ್ಲಿ ಸತ್ಯವಾನ್ ಸಾವಿತ್ರಿ ಕತೆಯಿದೆ. ಅದರಲ್ಲಿ ಸಾವಿತ್ರಿಯ ಅಲ್ಪಾಯುಷಿಯಾದ ಪತಿ ಸತ್ಯವಾನ್ನನ್ನು ಯಮನ ಪಾಶದಿಂದ ರಕ್ಷಿಸಲು ಮಾಡುತ್ತಾಳೆ, ಆಕೆಯ ವ್ರತದಿಂದ ಶಕ್ತಿಯಿಂದ ಪತಿಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಾಳೆ.
ಸತ್ಯವಾನ ಅಲ್ಪಾಯುಷಿ ಎಂಬುದು ತಿಳಿದೂ ಆತನನ್ನೇ ವರಿಸಿ, ನಂತರ ತನ್ನ ಸಚ್ಚಾರಿತ್ರ್ಯ, ಚತುರ ಮಾತುಗಳಿಂದ ಯಮನನ್ನೇ ಗೆದ್ದು ಪತಿಯನ್ನು ಉಳಿಸಿಕೊಂಡ ಮಹಾನ್ ಪತಿವ್ರತೆ ಸಾವಿತ್ರಿ. ವ್ರತದ ಮೂಲಕ ಯಮನನ್ನು ಮೆಚ್ಚಿಸಿದ ಸಾವಿತ್ರಿಯ ನೆನಪಿಗಾಗಿ ಈ ದಿನವನ್ನು ವಟ ಸಾವಿತ್ರಿ ವ್ರತವನ್ನಾಗಿ ಆಚರಿಸಲಾಗುತ್ತದೆ.

ಜ್ಯೇಷ್ಠ ಮಾಸದ ಅಮಾವಾಸ್ಯೆಯಂದು ವಟ ಸಾವಿತ್ರಿ ವ್ರತ ಆಚರಣೆ
ವಟ ಸಾವಿತ್ರಿ ವ್ರತವನ್ನು ಮುತ್ತೈದೆಯರು ಜ್ಯೇಷ್ಠ ಮಾಸದ ಅಮಾವಾಸ್ಯೆಯಂದು ಆಚರಿಸುತ್ತಾರೆ. ವಟ ಸಾವಿತ್ರಿ ವ್ರತದ ದಿನದಂದು ವಿವಾಹಿತ ಮಹಿಳೆಯರು ಉಪವಾಸವಿದ್ದು ಪತಿಯ ದೀರ್ಘಾಯುಷ್ಯಕ್ಕಾಗಿ ವ್ರತ ನಿಯಮಗಳನ್ನು ಪಾಲಿಸಲಾಗುವುದು.

ಈ ಬಾರಿ ಜ್ಯೇಷ್ಠ ಅಮಾವಾಸ್ಯೆ 2 ದಿನಗಳು ಬರುವ ಕಾರಣ ಯಾವ ದಿನ ಆಚರಿಸಲಾಗುವುದು?
ಈ ಬಾರಿ ಜ್ಯೇಷ್ಠ ಅಮಾವಾಸ್ಯೆ 2 ದಿನಗಳು ಬರುವ ಕಾರಣ ವಟ ಸಾವಿತ್ರಿ ವ್ರತ ಯಾವ ದಿನ ಆಚರಿಸಲಾಗುವುದು ಎಂಬ ಗೊಂದಲ ಜನರಲ್ಲಿದೆ.
ಸ್ಕಂದ ಪುರಾಣ ಮತ್ತು ಭವಿಷ್ಯೋತ್ತರ ಪುರಾಣದ ಪ್ರಕಾರ, ಜ್ಯೇಷ್ಠ ಮಾಸದ ಅಮವಾಸ್ಯೆಯಂದು ವಟ ಸಾವಿತ್ರಿ ಉಪವಾಸವನ್ನು ಆಚರಿಸಲಾಗುತ್ತದೆ. , ಈ ವರ್ಷ ಜ್ಯೇಷ್ಠ ಮಾಸದ ಅಮವಾಸ್ಯೆ ಮೇ 29 ರಂದು ಮಧ್ಯಾಹ್ನ 02:54 ಕ್ಕೆ ಪ್ರಾರಂಭವಾಗಿ ಮೇ 30, 2022 ರಂದು ಸಂಜೆ 04:59 ಕ್ಕೆ ಕೊನೆಗೊಳ್ಳುತ್ತದೆ . ಆದ್ದರಿಂದ ಮೇ 30 ರಂದು ಉದಯ ತಿಥಿಯ ಪ್ರಕಾರ ಈ ಉಪವಾಸವನ್ನು ಆಚರಿಸಲಾಗುತ್ತದೆ.

ವಟ ಸಾವಿತ್ರಿ ವ್ರತ 2022 ದಿನಾಂಕ
ಅಮವಾಸ್ಯೆ ತಿಥಿಯಿಂದ ಆರಂಭ: ಮೇ 29, 2022 ಮಧ್ಯಾಹ್ನ 02:54 ಕ್ಕೆ
ಅಮಾವಾಸ್ಯೆ ತಿಥಿಯ ಅಂತ್ಯ: ಮೇ 30, 2022 ಸಂಜೆ 04:59 ರವರೆಗೆ
ವಟ ಸಾವಿತ್ರಿ ವ್ರತವನ್ನು ಸೋಮವಾರ, 30 ಮೇ 2022 ರಂದು ಆಚರಿಸಲಾಗುತ್ತದೆ.

ವಟ ಸಾವಿತ್ರಿ ಪೂಜಾ ವಿಧಿ
ವ್ರತದ ದಿನ ಬೆಳಗ್ಗೆ ನಸುಕಿನಲ್ಲೇ ಎದ್ದು ತಲೆಸ್ನಾನ ಮಾಡಿ, ಮಡಿಬಟ್ಟೆ ಧರಿಸಿ ವ್ರತ ಮಾಡಬೇಕು. ಈ ವ್ರತ ಆಚರಣೆ ಮಾಡುವವರು ಮಣೆಯ ಮೇಲೆ ಅಥವಾ ಮನೆಯ ಗೋಡೆಯ ಮೇಲೆ ಯಮ, ಸಾವಿತ್ರಿ, ಸತ್ಯವಾನ, ಆಲದ ಮರಗಳನ್ನು ಗಂಧದಲ್ಲಿ ಬರೆಯುತ್ತಾರೆ. ನಂತರ ನೆಲದ ಮೇಲೆ ಅಕ್ಕಿಯನ್ನು ಹರವುತ್ತಾರೆ. ಸಾವಿತ್ರಿ ಮತ್ತು ಸತ್ಯವಾನನ ಬೊಂಬೆ ಅಥವಾ ಮೂರ್ತಿಯನ್ನು ಬಟ್ಟಲಿನಲ್ಲಿಟ್ಟು ಪೂಜಿಸುತ್ತಾರೆ. ಈ ಪೂಜೆಗೆ ಗಂಧದ ಬಟ್ಟಲಾದರೆ ಶ್ರೇಷ್ಠ ಎಂದು ಹೇಳಲಾಗುತ್ತದೆ. ಈ ಬಟ್ಟಲಿನಲ್ಲಿ ಆಲದ ಮರದ ಎಲೆಗಳನ್ನು ಇಟ್ಟು ಮಂತ್ರ ಹೇಳುತ್ತಾ ಪೂಜಿಸುತ್ತಾರೆ.
ಮನೆಯ ಒಳಗಡೆ ಪೂಜೆ ಮಾಡಿದ ಬಳಿಕ ಹೊರಗಿರುವ ಆಲದ ಮರವನ್ನು ಪೂಜಿಸುತ್ತಾರೆ. ಆಲದ ಮರದ ಸುತ್ತ ದಾರವನ್ನು ಕಟ್ಟಿ, ತಾಮ್ರ ಅಥವಾ ಯಾವುದೇ ನಾಣ್ಯಗಳನ್ನಿಟ್ಟು ಪತಿಯ ಆಯುಷ್ಯ ವೃದ್ಧಿಗೆ ಪ್ರಾರ್ಥಿಸುತ್ತಾರೆ. ಹಿರಿಯ ಮಹಿಳೆಯರು ಕಿರಿಯ ಮಹಿಳೆಯರಿಗೆ, 'ನೀನೂ ಸಾವಿತ್ರಿಯಂತಾಗು' ಎಂದು ಹಾರೈಸುತ್ತಾರೆ. ಈ ವ್ರತವನ್ನು ಪ್ರತಿವರ್ಷ ಶ್ರದ್ಧೆ ಭಕ್ತಿಯಿಂದ ಮಾಡಿದರೆ ಪತಿಯ ಆಯುಸ್ಸು-ಆರೋಗ್ಯ ಹೆಚ್ಚಾಗುತ್ತದೆ ಎಂಬ ನಂಬಿಕೆಯಿದೆ.