For Quick Alerts
ALLOW NOTIFICATIONS  
For Daily Alerts

ವಾಸ್ತು ಟಿಪ್ಸ್: ಅದೃಷ್ಟ ಒಲಿಯಲು ಹೊಸ ವರ್ಷದಂದು ಏನು ಮಾಡಬೇಕು?

|

ಹೊಸ ವರ್ಷವನ್ನು ಸ್ವಾಗತಿಸುವ ಸಂಭ್ರಮ ಎಲ್ಲೆಡೆ ಕಂಡು ಬರುತ್ತಿದೆ. ಹೊಸ ವರ್ಷದಲ್ಲಿ ನಮ್ಮ ಬದುಕಿನಲ್ಲಿ ಶುಭ ಘಟನೆಗಳು ನಡೆಯಲಿ ಎಂಬುವುದೇ ಪ್ರತಿಯೊಬ್ಬರ ಬಯಕೆ. ಹೊಸ ವರ್ಷವನ್ನು ಕೆಲವರು ಸೆಲೆಬ್ರೇಷನ್‌ ಮೂಲಕ ಸ್ವಾಗತಿಸಿದರೆ, ಇನ್ನು ಕೆಲವರು ಆ ದಿನ ದೇವರಿಗೆ ದೀಪ ಹಚ್ಚಿ, ಈ ವರ್ಷ ನಮಗೆ ಶುಭ ವರ್ಷ ಆಗಿರುವಂತೆ ಮಾಡು ದೇವರೆ ಎಂದು ಪ್ರಾರ್ಥಿಸಿ ಹೊಸ ವರ್ಷವನ್ನು ಸ್ವಾಗತಿಸುತ್ತಾರೆ... ಹೊಸ ವರ್ಷ ಎಲ್ಲಾ ರೀತಿಯ ಒಳಿತನ್ನು ಉಂಟು ಮಾಡಲಿ ಎಂಬುವುದೇ ನಮ್ಮೆಲ್ಲರ ಆಶಯ.

ಅದೃಷ್ಟ ಒಲಿಯಲು ಹೊಸ ವರ್ಷದಂದು ಏನು ಮಾಡಿದರೆ ಒಳ್ಳೆಯದೆಂದು ವಾಸ್ತು ಶಾಸ್ತ್ರದಲ್ಲಿ ಸಲಹೆಗಳಿವೆ, ಅವು ಏನೆಂದು ತಿಳಿಯೋಣ ಬನ್ನಿ:

1. ಮನೆ-ಮನಸ್ಸು ಸ್ವಚ್ಛವಾಗಿರಲಿ

1. ಮನೆ-ಮನಸ್ಸು ಸ್ವಚ್ಛವಾಗಿರಲಿ

ಹೊಸ ವರ್ಷದಂದು ಮನೆಯನ್ನು ಸ್ವಚ್ಛವಾಗಿಡಿ, ಕಸ, ಹಾಳಾದ-ಮುರಿದ ವ್ಸತುಗಳಿದ್ದರೆ ಅವುಗಳನ್ನು ಬಿಸಾಡಿ. ಮನೆಯ ಪರಿಸರ ಧನಾತ್ಮ ಶಕ್ತಿಯನ್ನು ಸ್ವಾಗತಿಸುವಂತೆ ಇರಬೇಕು, ಅಲ್ಲದೆ ನಮ್ಮ ಮನಸ್ಸು ಕೂಡ ಒಳ್ಳೆಯದನ್ನೇ ಯೋಚಿಸಬೇಕು. ನಮ್ಮ ಮನಸ್ಸು ತುಂಬಾ ಶಕ್ತಿಯನ್ನು ಹೊಂದಿದೆ. ನಮ್ಮ ಯೋಚನೆಯಂತೆ ಬದುಕು ಇರುವುದು, ಒಳ್ಳೆಯದನ್ನೇ ಆಲೋಚಿಸಿದರೆ ಒಳ್ಳೆಯದೇ ಆಗುವುದು.

2. ಯಾವ ಬಣ್ಣ ಒಳ್ಳೆಯದು

2. ಯಾವ ಬಣ್ಣ ಒಳ್ಳೆಯದು

ಹೊಸ ವರ್ಷದಂದು ಕಿತ್ತಳೆ, ಹಳದಿ, ಕೆಂಪು, ಪಿಂಕ್‌ ಇವು ಅದೃಷ್ಟದ ಬಣ್ಣಗಳಾಗಿವೆ. ಬಿಳಿ, ನೀಲಿ ಈ ರೀತಿ ಬಣ್ಣದ ಡ್ರೆಸ್‌ಗಳನ್ನು ಧರಿಸದಿರುವುದು ಒಳ್ಳೆಯದು.

3. ಗಿಡ ನೆಡಿ, ಸಿಹಿ ತಿನ್ನಿ

3. ಗಿಡ ನೆಡಿ, ಸಿಹಿ ತಿನ್ನಿ

ಹೊಸ ವರ್ಷದಂದು ಒಂದು ಗಿಡವನ್ನು ನೆಡಿ. ಮನೆಯಲ್ಲಿ ಸಿಹಿ ತಯಾರಿಸಿ ಮನೆಯವರ ಜೊತೆ ಸವಿಯಿರಿ.

4. ಹೊಸ ವರ್ಷದ ರೆಸ್ಯೂಲೇಷನ್‌

4. ಹೊಸ ವರ್ಷದ ರೆಸ್ಯೂಲೇಷನ್‌

ಹೊಸ ವರ್ಷದಲ್ಲಿ ಏನು ಏನು ಮಾಡಬೇಕು ಎಂದು ನಿರ್ಧಾರ ಮಾಡಿದ್ದರೆ ಅದನ್ನು ಪೇಪರ್‌ನಲ್ಲಿ ಬರೆದು ನಿಮ್ಮ ವರ್ಕ್‌ ಟೇಬಲ್ ಅಥವಾ ದಿನಾ ನಿಮಗೆ ಕಾಣುವ ಕಡೆ ಇಡಿ. ಇದು ನಿಮ್ಮಲ್ಲಿ ಗುರಿಯನ್ನು ತಲುಪುವಂತೆ ಪ್ರೇರೇಪಿಸುವುದು.

5. ಸೂರ್ಯೋದಕ್ಕೆ ಮುಂಚೆ ಎದ್ದೇಳಿ

5. ಸೂರ್ಯೋದಕ್ಕೆ ಮುಂಚೆ ಎದ್ದೇಳಿ

ಹೊಸ ವರ್ಷದಂದು ಸೂರ್ಯೋದಯಕ್ಕೆ ಮುಂಚೆ ಎದ್ದು ಸೂರ್ಯನಿಗೆ ನಮಸ್ಕರಿಸಿ, ನಂತರ ನೀರನ್ನು ಪ್ರಸಾದ ಎಂದು ಪರಿಗಣಿಸಿ ಸೇವಿಸಿ.

6. ಹೊಸ ವರ್ಷದ ಕ್ಯಾಲೆಂಡರ್

6. ಹೊಸ ವರ್ಷದ ಕ್ಯಾಲೆಂಡರ್

ಹೊಸ ವರ್ಷದ ಕ್ಯಾಲೆಂಡರ್ ಅನ್ನು ಪೂರ್ವದ ದಿಕ್ಕಿನಲ್ಲಿ ನೇತು ಹಾಕಿ. ಆಗ್ನೇಯ ದಿಕ್ಕಿನಲ್ಲಿ ಅಕ್ವೇರಿಯಂ ಇಡಿ. ಗಿಡ ಅಥವಾ ಹೂವಿನ ಫೋಟೋಗಳನ್ನು ಆಗ್ನೇಯ ದಿಕ್ಕಿನಲ್ಲಿಡಿ. ಮನೆಯವರ ಫೋಟೋಗಳನ್ನು ಪಶ್ಚಿಮ ದಿಕ್ಕಿನಲ್ಲಿಡಿ.

ಉತ್ತರ ಭಾಗದ ಕಿಟಕಿಗಳನ್ನು ತೆರೆದಿಡಿ.

English summary

Vastu tips you can follow for a prosperous New Year in Kannada

Vastu tips you can follow for a prosperous New Year in Kannada, read on...
X
Desktop Bottom Promotion