For Quick Alerts
ALLOW NOTIFICATIONS  
For Daily Alerts

ವಾಸ್ತು ಸಲಹೆ: ಶಿವನ ಚಿತ್ರ/ವಿಗ್ರಹವನ್ನು ಹೀಗೆ ಇಟ್ಟರೆ ಮನೆಯ ಶಾಂತಿ, ಸಮೃದ್ಧಿಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ

|

ಹಿಂದೂ ಧರ್ಮದಲ್ಲಿ ದೇವರ ಚಿತ್ರಗಳನ್ನು ಮನೆಯಲ್ಲಿ ಇಡುವುದು ಸಕಾರಾತ್ಮಕ ಶಕ್ತಿಯನ್ನು ತುಂಬುತ್ತದೆ, ಮನಸ್ಸಿಗೆ ನೆಮ್ಮದಿ ಶಾಂತಿ ಲಬಿಸುತ್ತದೆ ಎಂಬ ನಂಬಿಕೆ ಇದೆ. ಆದರೆ ದೇವರ ವಿಗ್ರಹಗಳನ್ನು ಹೀಗೆಯೇ ಇಡಬೇಕು ಇಲ್ಲವಾದರೆ ಮನೆಯಲ್ಲಿ ನಕಾರಾತ್ಮಕತೆ ತುಂಬುತ್ತದೆ ಎನ್ನುತ್ತಾರೆ ವಾಸ್ತುಶಾಸ್ತ್ರಜ್ಞರು.

ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಶಿವನ ಚಿತ್ರ ಅಥವಾ ವಿಗ್ರಹವನ್ನು ಪ್ರತಿಷ್ಠಾಪಿಸುವಾಗ ಕೆಲವು ವಿಷಯಗಳ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ಕೆಲವು ನಿಯಮಗಳನ್ನು ಪಾಲಿಸಲೇಬೇಕು. ಏಕೆಂದರೆ ಸೌಮ್ಯನ ಜೊತೆಗೆ ತನ್ನ ಉಗ್ರ ರೂಪಕ್ಕೆ ಹೆಸರುವಾಸಿಯಾದ ಶಿವನನ್ನು ವಿನಾಶದ ದೇವತೆ ಎಂದು ಹೇಳಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಮನೆಯಲ್ಲಿ ದೇವರ ಚಿತ್ರಣವನ್ನು ತಪ್ಪಾಗಿ ಇಡುವುದರಿಂದ ಹಲವಾರು ಸಮಸ್ಯೆಗಳು ಎದುರಾಗುತ್ತವೆ. ಶುಭ ಫಲಿತಾಂಶಗಳು ಸಿಗುವುದಿಲ್ಲ, ಬದಲಾಗಿ ಕೆಟ್ಟ ಪರಿಣಾಮ ಬೀರಬಹುದು. ಶಿವನ ಯಾವ ರೀತಿಯ ಚಿತ್ರ ಅಥವಾ ವಿಗ್ರಹವನ್ನು ಇಡಬಾರದು, ಯಾವ ದಿಕ್ಕಿನಲ್ಲಿ ಹೇಗೆ ಇಡಬೇಕು ಮುಂದೆ ತಿಳಿಯಿರಿ:

ತಾಂಡವ ನೃತ್ಯ ಭಂಗಿಯ ಶಿವನ ಚಿತ್ರವನ್ನು ಮನೆಯಲ್ಲಿ ಇಡಬೇಡಿ

ತಾಂಡವ ನೃತ್ಯ ಭಂಗಿಯ ಶಿವನ ಚಿತ್ರವನ್ನು ಮನೆಯಲ್ಲಿ ಇಡಬೇಡಿ

ವಾಸ್ತು ಪ್ರಕಾರ ನಟರಾಜನ ವಿಗ್ರಹವನ್ನು ಮನೆಯಲ್ಲಿ ಇಡಬಾರದು. ಏಕೆಂದರೆ ನಟರಾಜನ ವಿಗ್ರಹ ಅಥವಾ ಚಿತ್ರವನ್ನು ಶಿವನ ತಾಂಡವ ನೃತ್ಯ ಭಂಗಿಯಲ್ಲಿ ಚಿತ್ರಿಸಲಾಗಿದೆ, ಇದನ್ನು ವಿನಾಶದ ಸಂಕೇತವೆಂದು ಪರಿಗಣಿಸಲಾಗಿದೆ. ಆದ್ದರಿಂದ, ಇದನ್ನು ಮನೆಯಲ್ಲಿ ಇಡುವುದರಿಂದ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಮನೆಯಲ್ಲಿ ವಾಸಿಸುವ ಜನರಲ್ಲಿ ಕಹಿ ಹೆಚ್ಚಾಗಬಹುದು ಎನ್ನುತ್ತಾರೆ ವಾಸ್ತುಶಾಸ್ತ್ರಜ್ಞರು.

ಶಿವನ ಚಿತ್ರ ಕುಟುಂಬ ಸಹಿತ ಇರಲಿ

ಶಿವನ ಚಿತ್ರ ಕುಟುಂಬ ಸಹಿತ ಇರಲಿ

ವಾಸ್ತು ಪ್ರಕಾರ, ಮನೆಯಲ್ಲಿ ಕುಟುಂಬ ಸಹಿತ ಇರುವ ಶಿವನ ಚಿತ್ರವನ್ನು ಇರಿಸಿ. ಇದರಲ್ಲಿ ತಾಯಿ ಪಾರ್ವತಿಯೊಂದಿಗೆ ಕಾರ್ತಿಕೇಯ ಮತ್ತು ಗಣಪತಿ ಇರುವಂಥ ಚಿತ್ರವನ್ನು ಇಡುವುದರಿಂದ ಮನೆಯಲ್ಲಿ ಸಂತೋಷ ಮತ್ತು ಶಾಂತಿ ನೆಲೆಸುತ್ತದೆ.

ಕೋಪದ ರೂಪದಲ್ಲಿರುವ ಶಿವ

ಕೋಪದ ರೂಪದಲ್ಲಿರುವ ಶಿವ

ವಾಸ್ತು ಪ್ರಕಾರ, ಶಿವನ ಚಿತ್ರವು ಕೋಪ, ಅಸಹನೆ, ಸಿಟ್ಟಿನ ರೂಪದಲ್ಲಿ ಇದ್ದರೆ ಅದನ್ನು ಮನೆಯಲ್ಲಿ ಎಂದಿಗೂ ಇಡಬಾರದು. ಏಕೆಂದರೆ ಕೋಪಗೊಂಡ ಸ್ಥಿತಿಯಲ್ಲಿ ಭಗವಾನ್ ಶಿವನ ಚಿತ್ರವನ್ನು ಸ್ಥಾಪಿಸುವುದು ಶುಭ ಫಲಿತಾಂಶಗಳನ್ನು ನೀಡುವುದಿಲ್ಲ.

 ಶಿವನ ಚಿತ್ರ ಇಂತಹ ಸ್ಥಿತಿಯಲ್ಲಿರಬಾರದು

ಶಿವನ ಚಿತ್ರ ಇಂತಹ ಸ್ಥಿತಿಯಲ್ಲಿರಬಾರದು

ವಾಸ್ತು ಪ್ರಕಾರ, ಶಿವನ ಚಿತ್ರ ಅಥವಾ ವಿಗ್ರಹವನ್ನು ಧ್ಯಾನ ಭಂಗಿಯಲ್ಲಿ ಕುಳಿತುಕೊಳ್ಳುವ ಭಂಗಿಯಲ್ಲಿ ಇಡಬೇಕು. ಅವನು ನಿಂತಿರುವಂತೆ ಕಾಣುವ ಚಿತ್ರವನ್ನು ಎಂದಿಗೂ ಹಾಕಬೇಡಿ. ಅಂತಹ ಚಿತ್ರವನ್ನು ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ.

ಶಿವನಿರುವ ಸ್ಥಳವನ್ನು ಸ್ವಚ್ಛವಾಗಿಟ್ಟುಕೊಳ್ಳಿ

ಶಿವನಿರುವ ಸ್ಥಳವನ್ನು ಸ್ವಚ್ಛವಾಗಿಟ್ಟುಕೊಳ್ಳಿ

ಶಿವನ ಚಿತ್ರವಿರುವ ಸ್ಥಳವನ್ನು ಯಾವಾಗಲೂ ಸ್ವಚ್ಛವಾಗಿಟ್ಟುಕೊಳ್ಳಿ ಮತ್ತು ಸ್ವಲ್ಪವೂ ಧೂಳು ನೆಲೆಗೊಳ್ಳಲು ಬಿಡಬೇಡಿ. ವಾಸ್ತು ಪ್ರಕಾರ, ಅದನ್ನು ಸ್ವಚ್ಛವಾಗಿಟ್ಟುಕೊಳ್ಳದ ಕಾರಣ, ಅದು ವ್ಯತಿರಿಕ್ತ ಪರಿಣಾಮವನ್ನು ಬೀರಲು ಪ್ರಾರಂಭಿಸುತ್ತದೆ.

ಶಿವನ ಚಿತ್ರವನ್ನು ಈ ದಿಕ್ಕಿನಲ್ಲಿಡಿ

ಶಿವನ ಚಿತ್ರವನ್ನು ಈ ದಿಕ್ಕಿನಲ್ಲಿಡಿ

ವಾಸ್ತು ಪ್ರಕಾರ ಶಿವನ ಚಿತ್ರವನ್ನು ಉತ್ತರ ದಿಕ್ಕಿನಲ್ಲಿ ಇಡಬೇಕು. ಏಕೆಂದರೆ ಕೈಲಾಸ ಪರ್ವತವು ಈ ದಿಕ್ಕಿನಲ್ಲಿದೆ. ಉತ್ತರ ದಿಕ್ಕಿಗೆ ಶಿವನ ಚಿತ್ರ ಇಡುವುದರಿಂದ ಮನೆಗೆ ಹಾಗೂ ಕಚೇರಿಗೆ ಶುಭ ಫಲ ಸಿಗುತ್ತದೆ.

English summary

Vastu Tips for Lord Shiva Statue: Never put this kind of Lord Shiva Pictures at home in Kannada

Here we are discussing about Vastu Tips for Lord Shiva Statue: Never put this kind of Lord Shiva Pictures at home in Kannada. Read more.
Story first published: Wednesday, May 11, 2022, 15:17 [IST]
X
Desktop Bottom Promotion