For Quick Alerts
ALLOW NOTIFICATIONS  
For Daily Alerts

ವಾಸ್ತು ಪ್ರಕಾರ, ದೀಪಾವಳಿಯ ಮನೆ ಅಲಂಕಾರ ಹೀಗಿರಲಿ

|

ದೀಪಾವಳಿ ಎಂದರೆ,ಅದು ದೀಪಗಳ ಹಬ್ಬ. ಕತ್ತಲಿನಿಂದ ಬೆಳಕಿನೆಡೆಗೆ ಕೊಂಡೊಯ್ಯುವ ಹಬ್ಬ. ಭಗವಾನ್ ರಾಮನು ಅಯೋಧ್ಯೆಗೆ ಹಿಂದಿರುಗಿದ ಸಂತೋಷದಲ್ಲಿ ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತದೆ. ರಾಮಾಯಣದ ಪ್ರಕಾರ, ಅಯೋಧ್ಯೆಯ ಜನರು ಇಡೀ ನಗರವನ್ನು ದೀಪಗಳಿಂದ ಅಲಂಕರಿಸುವ ಮೂಲಕ ದೀಪೋತ್ಸವವನ್ನು ಆಚರಿಸಿದರೆನ್ನಲಾಗುತ್ತದೆ.

ಇದರೊಂದಿಗೆ ಈ ದಿನದಂದು ಮನೆಗೆ ಲಕ್ಷ್ಮಿ ದೇವಿಯ ಆಗಮನದ ನಿಯಮವೂ ಇದೆ. ಅದಕ್ಕಾಗಿಯೇ ಜನರು ದೀಪಾವಳಿಯಂದು ತಮ್ಮ ಮನೆಗಳನ್ನು ಸ್ವಚ್ಛಗೊಳಿಸಿ, ಲಕ್ಷ್ಮಿಯನ್ನು ಅಲಂಕರಿಸಿ ಪೂಜಿಸುತ್ತಾರೆ. ದೀಪಾವಳಿಯಂದು ಮನೆಯನ್ನು ಅಲಂಕರಿಸುವಾಗ ಅನುಸರಿಸಬೇಕಾದ ಕೆಲವು ವಾಸ್ತು ಸಲಹೆಗಳನ್ನು ನಾವು ನಿಮಗೆ ಹೇಳಲಿದ್ದೇವೆ. ವಾಸ್ತು ಶಾಸ್ತ್ರದ ಪ್ರಕಾರ, ಸಜ್ಜುಗೊಳಿಸಿದರೆ, ನಿಮ್ಮ ಮನೆಯಲ್ಲಿ ಸಾಮರಸ್ಯವನ್ನುಂಟು ಮಾಡಿ, ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ.

ದೀಪಾವಳಿಯಂದು ಮನೆಯನ್ನು ಅಲಂಕರಿಸಲು ಅನುಸರಿಬೇಕಾದ ವಾಸ್ತುಸಲಹೆಗಳನ್ನು ಈ ಕೆಳಗೆ ನೀಡಲಾಗಿದೆ:

1. ಮುಖ್ಯದ್ವಾರ:

1. ಮುಖ್ಯದ್ವಾರ:

ದೀಪಾವಳಿಯಂದು ಮನೆಯನ್ನು ಅಲಂಕರಿಸುವಾಗ, ಮುಖ್ಯ ದ್ವಾರದ ಮೇಲೆ ಗಣೇಶ ಅಥವಾ ಸೂರ್ಯ ಯಂತ್ರದ ಚಿತ್ರವನ್ನು ಇಡಿ. ಹೀಗೆ ಮಾಡುವುದರಿಂದ ಮಗೆ ಬರುವ ಎಲ್ಲಾ ಅಡೆತಡೆಗಳು ಮತ್ತು ತೊಂದರೆಗಳು ತಾನಾಗಿಯೇ ದೂರವಾಗುತ್ತವೆ.

2. ಡ್ರಾಯಿಂಗ್ ರೂಮ್:

2. ಡ್ರಾಯಿಂಗ್ ರೂಮ್:

ಡ್ರಾಯಿಂಗ್ ರೂಮಿನಲ್ಲಿ ಪೀಠೋಪಕರಣಗಳು ಮತ್ತು ಭಾರವಾದ ವಸ್ತುಗಳನ್ನು ನೈಋತ್ಯ ದಿಕ್ಕಿನಲ್ಲಿ ಇಡಿ. ಕಿಟಕಿ ಬಾಗಿಲುಗಳಿಗೆ ತಿಳಿ ಬಣ್ಣದ ಪರದೆಗಳನ್ನು ಹಾಕಿ. ಹೀಗೆ ಮಾಡುವುರಿಂದ ಮನೆಯಲ್ಲಿ ಸಕಾರಾತ್ಮಕತೆ ಇರುತ್ತದೆ.

3.ಬೆಡ್‌ರೂಮ್ :

3.ಬೆಡ್‌ರೂಮ್ :

ಮಲಗುವ ಕೋಣೆಯನ್ನು ಅಲಂಕರಿಸುವಾಗ, ಅದರ ಬಣ್ಣವನ್ನು ತಿಳಿ ಗುಲಾಬಿ ಅಥವಾ ನೇರಳೆ ಬಣ್ಣದಲ್ಲಿ ಇಡಬೇಕು ಜೊತೆಗೆ ರಾಧಾ ಕೃಷ್ಣರ ಚಿತ್ರವನ್ನು ಮಲಗುವ ಕೋಣೆಯಲ್ಲಿ ಇಡಬೇಕು. ಇದರಿಂದಾಗಿ ಪರಸ್ಪರ ಪ್ರೀತಿ ಪ್ರೀತಿಯಾಗಿ ಉಳಿಯುತ್ತದೆ ಮತ್ತು ಸಂಬಂಧವು ಬಲಗೊಳ್ಳುತ್ತದೆ.

4. ಗೋಡೆಗಳು:

4. ಗೋಡೆಗಳು:

ದೀಪಾವಳಿಯಂದು ತಾಯಿ ಲಕ್ಷ್ಮಿಯ ಆಶೀರ್ವಾದ ಪಡೆಯಲು, ಮನೆಯ ಉತ್ತರ ಗೋಡೆಯ ಮೇಲೆ ಲಕ್ಷ್ಮಿಯ ಚಿತ್ರವನ್ನು ಇಡಿ. ಕಮಲದ ಆಸನದ ಮೇಲೆ ಕುಳಿತು ತನ್ನ ಕೈಗಳಿಂದ ಚಿನ್ನದ ನಾಣ್ಯಗಳನ್ನು ಬೀಳಿಸುವ ಧನ ಲಕ್ಷ್ಮಿಯ ಚಿತ್ರವನ್ನು ಹೊಂದುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ.

5. ಹೂದಾನಿ:

5. ಹೂದಾನಿ:

ಉದ್ಯೋಗ ಅಥವಾ ವ್ಯವಹಾರದಲ್ಲಿ ಸಮಸ್ಯೆಯಿದ್ದರೆ, ಮನೆಯ ಈಶಾನ್ಯ ದಿಕ್ಕಿನಲ್ಲಿ ಹಸಿರು ಹೂವಿನ ಹೂದಾನಿ ಅಥವಾ ಗಿಡವನ್ನು ನೆಡಿ. ವ್ಯವಹಾರದಲ್ಲಿ ಪ್ರಗತಿಯ ಮುಚ್ಚಿದ ಬಾಗಿಲು ತೆರೆಯುತ್ತದೆ.

6. ಕನ್ನಡಿ:

6. ಕನ್ನಡಿ:

ಮನೆಯ ಉತ್ತರ ಅಥವಾ ಪೂರ್ವ ಗೋಡೆಯ ಮೇಲೆ ಕನ್ನಡಿಯನ್ನು ಇಡಿ. ಇದು ಮನೆಯ ಆದಾಯದ ಮೂಲವನ್ನು ಹೆಚ್ಚಿಸುತ್ತದೆ.

7. ಕೋಣೆಗಳು:

7. ಕೋಣೆಗಳು:

ಮನೆಯ ಪ್ರತಿಯೊಂದು ಕೋಣೆಯೂ ಸಾಕಷ್ಟು ಬೆಳಕನ್ನು ಹೊಂದಿರಬೇಕು. ಜೊತೆಗೆ ಆಗಾಗ ಗೋಡೆಯ ತೇವವನ್ನು ತೆಗೆದುಹಾಕಲು ಪ್ರಯತ್ನಿಸಬೇಕು. ಗೋಡೆಗಳಲ್ಲಿ ತೇವ ನಿಂತರೆ ಹಣಕಾಸಿನ ನಿರ್ಬಂಧಗಳನ್ನು ಉಂಟುಮಾಡುತ್ತದೆ.

English summary

Vastu Tips for Diwali : Tips to get Economic Progress in kannada

Here we talking about Vastu Tips for Diwali : Tips to get Economic Progress in kannada, read on
Story first published: Tuesday, November 2, 2021, 10:50 [IST]
X
Desktop Bottom Promotion