For Quick Alerts
ALLOW NOTIFICATIONS  
For Daily Alerts

ಏಪ್ರಿಲ್ 18, ವರುಥಿನಿ ಏಕಾದಶಿ: ಮಾಡಬೇಕಾದ ಮತ್ತು ಮಾಡಬಾರದ ಸಂಗತಿಗಳು

|

ಏಪ್ರಿಲ್ 18, ಶನಿವಾರ ರಂದು ವರುಥಿನಿ ಏಕಾದಶಿ. ದೇವರಿಗೆ ಹತ್ತಿರವಾಗಲು ಆಡಂಬರದ ಪೂಜೆಗಳ ಅಗತ್ಯವಿಲ್ಲ ಭಕ್ತಿಯಿಂದ ಒಂದು ದಿನ ಮಾಡುವ ಉಪವಾಸ ಕೂಡ ದೇವರ ಪ್ರೀತಿಗೆ ಪಾತ್ರವಾಗಲು ಸಾಕಾಗುತ್ತದೆ ಎಂದು ನಂಬಲಾಗುತ್ತದೆ.

ವೈಶಾಖ ತಿಂಗಳ ಕೃಷ್ಣ ಪಕ್ಷದಲ್ಲಿ ವರುಥಿನಿ ಏಕಾದಶಿಯನ್ನು ಆಚರಿಸಲಾಗುತ್ತದೆ. ಈ ಏಕಾದಶಿಯ ಉತ್ತಮ ವಿಷಯವೆಂದರೆ, ಉತ್ತರ ಭಾರತ ಮತ್ತು ದಕ್ಷಿಣ ಭಾರತ ಈ ಎರಡೂ ಕಡೆಯೂ ಈ ಏಕಾದಶಿಯನ್ನು ಒಂದೇ ದಿನಾಂಕದಂದು ಆಚರಿಸಲಾಗುತ್ತದೆ. ಅಂದರೆ ಇತರ ಏಕಾದಶಿಗಳು ಬೇರೆ ಬೇರೆ ದಿನಾಂಕದಂದು ಆಚರಿಸಲ್ಪಡುತ್ತವೆ. ಈ ವರ್ಷ ವರುಥಿನಿ ಏಕಾದಶಿಯು ಏಪ್ರಿಲ್ 18 ರಂದು ಬರುತ್ತದೆ.

Varuthini Ekadashi 2020

ವರುಥಿತಿ ಏಕಾದಶಿಯಂದು ಭಕ್ತರು ಏನು ಮಾಡಬೇಕು ಏನನ್ನು ಮಾಡಬಾರದು ಎಂಬುದರ ಬಗ್ಗೆ ನಾವು ತಿಳಿಸಿಕೊಡುತ್ತೇವೆ.
ಉಪವಾಸ

ಉಪವಾಸ

ಏಕಾದಶಿಯಂದು ಮಾಡುವ ಉಪವಾಸ ಅತ್ಯಂತ ಶ್ರೇಷ್ಠ ಎಂದು ಹೇಳಲಾಗುತ್ತದೆ. ಕೆಲವೊಮ್ಮೆ ಸತತ ಎರಡು ದಿನಗಳಲ್ಲಿ ವರುಥಿನಿ ಏಕಾದಶಿ ಉಪವಾಸವನ್ನು ಸೂಚಿಸಲಾಗುತ್ತದೆ. ಆದಾಗ್ಯೂ, ಒಬ್ಬ ವ್ಯಕ್ತಿಯು ಎರಡೂ ದಿನಗಳೂ ಕೂಡ ಉಪವಾಸವನ್ನು ಮಾಡುವುದು ಅನಿವಾರ್ಯವಲ್ಲ. ಒಬ್ಬ ವ್ಯಕ್ತಿಯು ಒಂದು ದಿನ ಉಪವಾಸವನ್ನು ಇಟ್ಟುಕೊಳ್ಳಬಹುದು, ನಂತರ ಅವರ ಕುಟುಂಬ ಸದಸ್ಯರಲ್ಲೊಬ್ಬರು ಮರುದಿನ ಉಪವಾಸವನ್ನು ಮಾಡಬಹುದು.

ಪ್ರಾಮುಖ್ಯತೆ

ಪ್ರಾಮುಖ್ಯತೆ

ಹಿಂದೂ ಪುರಾಣಗಳಲ್ಲಿ ವರುಥಿನಿ ಏಕಾದಶಿ ಬಹಳ ಮುಖ್ಯವಾದ ಉಪವಾಸ ಎಂದು ಹೇಳಲಾಗುತ್ತದೆ. ಈ ಉಪವಾಸವನ್ನು ಮಾಡುವವನು ಉತ್ತಮ ಜೀವನವನ್ನು ಸಾಧಿಸುತ್ತಾನೆ, ಸಂಪತ್ತನ್ನು ಸಂಪಾದಿಸುತ್ತಾನೆ ಮತ್ತು ಜೀವನದ ಎಲ್ಲಾ ಯುದ್ಧಗಳಲ್ಲಿ ಗೆಲುವನ್ನು ಪಡೆಯುತ್ತಾನೆ ಎಂಬ ಪ್ರತೀತಿಯಿದೆ. ಇದು ನಮ್ಮ ಮನಸ್ಸು ಮತ್ತು ಆತ್ಮವನ್ನೂ ಶುದ್ಧೀಕರಿಸುತ್ತದೆ ಎಂಬ ನಂಬಿಕೆಯಿದೆ.

ಪ್ರಯೋಜನಗಳು

ಪ್ರಯೋಜನಗಳು

ಹಿಂದೂ ಶಾಸ್ತ್ರಗಳ ಪ್ರಕಾರ, ನಿಮ್ಮ ಮರಣಾನಂತರದ ಜೀವನದಲ್ಲಿ (ಜೀವಿತಾವಧಿಯಲ್ಲಿ ಮಾಡಿದ) ನಾವು ಮಾಡಿದ ಎಲ್ಲಾ ಒಳ್ಳೆಯ ಮತ್ತು ಕೆಟ್ಟ ಕೆಲಸಗಳ ದಾಖಲೆಯನ್ನು ಇಟ್ಟುಕೊಂಡಿರುವ ಚಿತ್ರ ಗುಪ್ತನೂ ಕೂಡ ಈ ರೀತಿಯ ಏಕಾದಶಿಯ ಪ್ರಯೋಜನಗಳನ್ನು ಅಳೆಯಲು ಸಾಧ್ಯವಿಲ್ಲ. ಈ ಏಕಾದಶಿ ಇತರ ಏಕಾದಶಿಗಳಿಗಿಂತ 100 ಪಟ್ಟು ಹೆಚ್ಚು ಶುಭವಾಗಿದೆ ಎಂದು ಹೇಳಲಾಗುತ್ತದೆ. ವರುಥಿನಿ ಏಕಾದಶಿಯ ದಿನ ನೀವು ಏನು ಮಾಡಬೇಕು ಎಂಬ ಮಾಹಿತಿ ಇಲ್ಲಿದೆ.

ವರ್ಮಿಲಿಯನ್ (ಕುಂಕುಮ)

ವರ್ಮಿಲಿಯನ್ (ಕುಂಕುಮ)

ನಿಮ್ಮ ಹಾಗೂ ಕುಟುಂಬದವರ ಆರೋಗ್ಯ ಮತ್ತು ಸಂತೋಷಕ್ಕಾಗಿ, ಇಂದು ಶ್ರೀ ನಾರಾಯಣನ ಮೂರ್ತಿ ಅಥವಾ ಚಿತ್ರಕ್ಕೆ ವರ್ಮಿಲಿಯನ್ ಪೌಡರ್ (ಸಿಂದೂರ) ಅನ್ನು ಅನ್ವಯಿಸಿ. ಅಷ್ಟು ಮಾತ್ರವಲ್ಲ, ನೀವು ಇಂದು ವಿಷ್ಣುವಿಗೆ ಕೆಲವು ಕಮಲದ ಎಲೆಗಳನ್ನು ಸಹ ಅರ್ಪಿಸಿದರೆ ಒಳ್ಳೆಯದು. ಹೀಗೆ ಮಾಡುವುದರಿಂದ ನಿಮಗೆ ಆರೋಗ್ಯ ಮತ್ತು ಜೀವನದಲ್ಲಿ ಸಂತೋಷವನ್ನು ತರುತ್ತದೆ.

ತುಳಸಿ

ತುಳಸಿ

ನಿಮ್ಮ ಕೆಲಸದಲ್ಲಿ ನೀವು ಇನ್ನೂ ಹೆಚ್ಚು ಗಮನಹರಿಸಲು ಬಯಸಿದರೆ, ವಿಷ್ಣುವಿನ ಮೂತಿಗೆ ಕೆಲವು ತುಳಸಿ ಎಲೆಗಳನ್ನು ಅರ್ಪಿಸಿ. ನಿಮ್ಮ ಮನೆಯಲ್ಲಿನ ಯಾವುದೇ ವಿವಾದಗಳನ್ನು ಪರಿಹರಿಸಲು, "ಬಾಲ ಗೋಪಾಲ" ನ ಮೂರ್ತಿಗೆ ಸ್ವಲ್ಪ ಮೊಸರನ್ನು ಅರ್ಪಿಸಿ.

ಪ್ರೇಮ ಜೀವನ

ಪ್ರೇಮ ಜೀವನ

ನಿಮ್ಮ ಜೀವನದಲ್ಲಿ ಪ್ರೀತಿಯನ್ನು ಸುಧಾರಿಸಲು ನೀವು ಬಯಸಿದರೆ, ರಾಧಾ ಮತ್ತು ಕೃಷ್ಣನ ಮೂರ್ತಿಗೆ ರೋಲಿ / ಕುಂಕುಮವನ್ನು ಅರ್ಪಿಸಿ. ಅಷ್ಟೇ ಅಲ್ಲ, ನಿಮ್ಮನ್ನು ದುರ್ಬಲಗೊಳಿಸುವ ಕಾಯಿಲೆಗಳಿಂದ ದೂರವುಳಿಯಲು ಬಯಸಿದರೆ, ವಿಷ್ಣುವಿನ ಚಿತ್ರಕ್ಕೆ/ ಮೂರ್ತಿಗೆ ಕೆಲವು ಹಸಿರು ದ್ವಿದಳ ಧಾನ್ಯಗಳನ್ನು (ಕಚ್ಚಾ) ಅರ್ಪಿಸಿ.

ಲಕ್ಷ್ಮಿ ನಾರಾಯಣ

ಲಕ್ಷ್ಮಿ ನಾರಾಯಣ

ಸಂತೋಷದ ದಾಂಪತ್ಯ ಜೀವನಕ್ಕಾಗಿ, ಲಕ್ಷ್ಮಿ ನಾರಾಯಣ ವಿಗ್ರಹಕ್ಕೆ ಸ್ವಲ್ಪ ಒಣ ಬಣ್ಣವನ್ನು ಅರ್ಪಿಸಿ (ಅರಿಶಿನ - ಕುಂಕುಮವಾದರೂ ಸರಿ). ಇವುಗಳ ಜೊತೆಗೆ, ನಿಮ್ಮ ಜೀವನದಲ್ಲಿ ನೀವು ಅಪಘಾತಗಳಿಗೆ ಗುರಿಯಾಗಿದ್ದರೆ, ರಾಧಾ ಕೃಷ್ಣನ ವಿಗ್ರಹಕ್ಕೆ ಸ್ವಲ್ಪ ಕೆಂಪು ಬಣ್ಣವನ್ನು (ಒಣ) ಅರ್ಪಿಸಿ.

ಅರಿಶಿನ

ಅರಿಶಿನ

ನಿಮಗೆ ನಿಮ್ಮ ಅದೃಷ್ಟ ಕೈಕೊಡುತ್ತಿದೆ ಎನ್ನಿಸುತ್ತಿದೆಯೇ? ಹಾಗಾದರೆ ಮುಂದಿನ ಜೀವನದ ಒಳಿತಿಗಾಗಿ ವಿಷ್ಣುವಿನ ವಿಗ್ರಹಕ್ಕೆ ಸ್ವಲ್ಪ ಅರಿಶಿನವನ್ನು ಎರೆಯಿರಿ. ನಿಮ್ಮ ವ್ಯವಹಾರವು ನಷ್ಟದಲ್ಲಿದ್ದರೆ, ಶ್ರೀಕೃಷ್ಣನ ವಿಗ್ರಹಕ್ಕೆ ಕೆಲವು ನೀಲಿ ಹೂವುಗಳನ್ನು ಅರ್ಪಿಸಿ.

ಧೂಪದ್ರವ್ಯಗಳು

ಧೂಪದ್ರವ್ಯಗಳು

ನೀವು ಆರ್ಥಿಕ ಒತ್ತಡವನ್ನು ಎದುರಿಸುತ್ತಿದ್ದರೆ, ವಿಷ್ಣುವಿನ ವಿಗ್ರಹಕ್ಕೆ ಕೆಲವು ಧೂಪದ್ರವ್ಯಗಳನ್ನು ಅರ್ಪಿಸಿ. ಇದಲ್ಲದೆ, ವಿಷ್ಣುವಿಗೆ ಕೆಲವು ನೀಲಿ ಹೂವುಗಳನ್ನು ಅರ್ಪಿಸುವುದರಿಂದ ಅನಪೇಕ್ಷಿತ ಅಪಘಾತಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಬಹುದು.

ಈ ಕೆಲಸಗಳನ್ನು ಮಾಡಬೇಡಿ

ಈ ಕೆಲಸಗಳನ್ನು ಮಾಡಬೇಡಿ

ಇವುಗಳ ಹೊರತಾಗಿ, ಈ ಏಕಾದಶಿಯಂದು ಯಾವುದೇ ರೂಪದಲ್ಲಿ ತಂಬಾಕನ್ನು ಸೇವಿಸಬೇಡಿ ಮತ್ತು ತಂಬಾಕು ಇಲ್ಲದಿದ್ದರೂ ಸಹ ಪಾನ್ (ಬೀಡಾ) ತಿನ್ನುವುದನ್ನೂ ತಪ್ಪಿಸಿ. ಅಲ್ಲದೆ, ಇಂದು ದೇವರ ದಿನವಾದ್ದರಿಂದ, ಇತರರ ಬಗ್ಗೆ ಕೆಟ್ಟದಾಗಿ ಮಾತನಾಡಬೇಡಿ.

ಕೋಪ

ಕೋಪ

ಕೋಪವು ಸಾಮಾನ್ಯವಾಗಿ ಎಲ್ಲರಲ್ಲೂ ಮೂಡುವ ಭಾವನೆಯಾಗಿದ್ದರೂ, ವರುಥಿತಿ ಏಕಾದಶಿಯಂದು ಇತರರ ಮೇಲೆ ಕೋಪಗೊಳ್ಳಬೇಡಿ. ಇದಲ್ಲದೆ, ಇಂದು ಯಾರ ಬಗ್ಗೆಯೂ ಸುಳ್ಳು ಹೇಳಬೇಡಿ. ಇತರರೊಂದಿಗೆ ಪ್ರಾಮಾಣಿಕವಾಗಿರುವ ಭಕ್ತರನ್ನು ದೇವರು ಮೆಚ್ಚುತ್ತಾನೆ ಎಂಬ ನಂಬಿಕೆ ಇದೆ.

ನಿದ್ರೆ

ನಿದ್ರೆ

ನೀವು ಎಷ್ಟೇ ದಣಿದಿದ್ದರೂ, ಏಕಾದಶಿಯ ದಿನ ಮಧ್ಯಾಹ್ನ ಮಲಗುವುದು ದೇವರ ಕೋಪಕ್ಕೆ ಸಮಾನ ಎಂಬ ನಂಬಿಕೆ. ಹಾಗಾಗಿ ಅದನ್ನು ತಪ್ಪಿಸಿ. ಈ ದಿನದಂದು ತೈಲ ಸೇವಿಸುವುದನ್ನು ತಪ್ಪಿಸಿ. ಬದಲಿಗೆ ನಿಮ್ಮ ಅಡುಗೆಯನ್ನು ಬೆಣ್ಣೆಯಲ್ಲಿ ( ಅಥವಾ ತುಪ್ಪ) ದಲ್ಲಿ ಬೇಯಿಸಿ.

ಹಿತ್ತಾಳೆ ಪಾತ್ರೆಗಳು

ಹಿತ್ತಾಳೆ ಪಾತ್ರೆಗಳು

ಇಂದು, ನಿಮ್ಮ ಎಲ್ಲಾ ಅಡುಗೆಯನ್ನು ಹಿತ್ತಾಳೆ ಪಾತ್ರೆಗಳಲ್ಲಿ ಬೇಯಿಸಿ. ಇದು ನಿಮ್ಮ ಆಹಾರವನ್ನು ಶುದ್ಧೀಕರಿಸುತ್ತದೆ ಮತ್ತು ನಿಮ್ಮ ದೇಹದಲ್ಲಿನ ವಿಷವನ್ನು ಹೊರತೆಗೆಯುತ್ತದೆ. ಅಲ್ಲದೆ, ನೀವು ಇಂದು ಉಪವಾಸ ಮಾಡದಿದ್ದರೂ, ಬೆಳ್ಳುಳ್ಳಿ ಮತ್ತು ಈರುಳ್ಳಿ ಸೇವಿಸುವುದನ್ನು ತಪ್ಪಿಸಿ. ಇಂದು ಆದಷ್ಟು ಸಾತ್ವಿಕ ಆಹಾರವನ್ನೇ ಸೇವಿಸಿ.

English summary

Varuthini Ekadashi : Here Is What To Do What To Avoid

Varuthini Ekadashi, also known Baruthani Ekadashi, is a Hindu holy day, which falls on the 11th lunar day of the fortnight of the waning moon in the Hindu month of Chaitra or Vaishakha.
X
Desktop Bottom Promotion