For Quick Alerts
ALLOW NOTIFICATIONS  
For Daily Alerts

ವರಮಹಾಲಕ್ಷ್ಮಿ ಪೂಜೆ ಹೀಗೆ ಮಾಡಿದರೆ - ಲಕ್ಷ್ಮಿ ದೇವಿಯ ಕೃಪೆ ಸದಾ ಇರಲಿದೆ

|
ವರಮಹಾಲಕ್ಷ್ಮಿ ಪೂಜಾ ವಿಧಾನ | ಲಕ್ಷ್ಮಿ ದೇವಿಯನ್ನ ಒಲಿಸಿಕೊಳ್ಳುವುದು ಹೇಗೆ? | Oneindia Kannada

ಲಕ್ಷ್ಮಿ ದೇವಿ ಪ್ರತಿಯೊಬ್ಬರ ಜೀವನವನ್ನು ಬೆಳಗುವ ದೇವತೆ. ಲಕ್ಷ್ಮಿ ದೇವಿಯ ಕೃಪೆ ಇದ್ದಾರೆ ಮಾತ್ರ ವ್ಯಕ್ತಿ ಜೀವನದಲ್ಲಿ ಮುಟ್ಟಿದ್ದೆಲ್ಲಾ ಚಿನ್ನವಾಗುವುದು. ಶ್ರೀಮಂತಿಕೆಯನ್ನು ಅನುಭವಿಸುವುದು. ಹಾಗಾಗಿಯೇ ಪ್ರತಿಯೊಬ್ಬರು ಲಕ್ಷ್ಮಿ ದೇವಿ ನಮ್ಮ ಮನೆಯಲ್ಲಿ ನೆಲೆಸಬೇಕು ಎಂದು ಬಯಸುತ್ತಾರೆ. ಈ ನಿಟ್ಟಿನಲ್ಲಿಯೇ ಪ್ರತಿ ಶ್ರಾವಣ ಮಾಸದಲ್ಲಿ ವರಮಹಾಲಕ್ಷ್ಮಿಯ ವ್ರತಾಚರಣೆ ಮಾಡಲಾಗುತ್ತದೆ. ಶ್ರಾವಣ ಮಾಸದಲ್ಲಿ ಕೈಗೊಳ್ಳುವ ವ್ರತಾಚರಣೆಯಿಂದ ದಾರಿದ್ರ್ಯವು ದೂರವಾಗಿ ಸುಖವು ಒಲಿದು ಬರುವುದು. ಮನೆಯು ಸಮೃದ್ಧಿಯಿಂದ ಕೂಡಿರುವುದು ಎನ್ನುವ ನಂಬಿಕೆಯಿದೆ.

ಈ ಪವಿತ್ರ ಮಾಸದಲ್ಲಿ ವರಮಹಾಲಕ್ಷ್ಮಿಯ ವ್ರತವನ್ನು ಸಾಮಾನ್ಯವಾಗಿ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದ ಬಹುತೇಕ ಪ್ರದೇಶಗಳಲ್ಲಿ ಆಚರಿಸಲಾಗುವುದು. ಶ್ರಾವಣ ಮಾಸದ ಹುಣ್ಣಿಮೆಯ ಮೊದಲ ಶುಕ್ರವಾರ ನಡೆಯುತ್ತದೆ. ಇಂಗ್ಲಿಷ್ ಪಂಚಾಂಗದ/ಕ್ಯಾಲೆಂಡರ್ ಪ್ರಕಾರ ಆಗಸ್ಟ್ ತಿಂಗಳಲ್ಲಿ ಬರುತ್ತದೆ. ಸಂಪತ್ತಿನ ದೇವತೆಯಾದ ಲಕ್ಷ್ಮಿ ದೇವಿಯನ್ನು ಎಲ್ಲರೂ ಆರಾಧಿಸಬಹುದು. ಈ ವ್ರತವನ್ನು ನಿರ್ವಹಿಸುವುದರಿಂದ ಲಕ್ಷ್ಮಿ ದೇವಿಯ ಆಶೀರ್ವಾದ ಮತ್ತು ವರವನ್ನು ಪಡೆಯಬಹುದು. ಜೀವನದಲ್ಲಿ ಶ್ರೀಮಂತಿಕೆಯನ್ನು ಅನುಭವಿಸಬಹುದು. ಪವಿತ್ರವಾದ ಈ ವ್ರತವನ್ನು ಎಲ್ಲಾ ವರ್ಗದ ಮಹಿಳೆಯರು ಕೈಗೊಳ್ಳಬಹುದು.

ಮಹಿಳೆಯರು ವ್ರತ ಆಚರಣೆ ಮಾಡುವಾಗ ಅತ್ಯಂತ ಭಕ್ತಿ ಭಾವದ ಮನಸ್ಥಿತಿಯನ್ನು ಹೊಂದಿರಬೇಕು ಎನ್ನಲಾಗುವುದು. ಅಲ್ಲದೆ ಕೆಲವು ಅಗತ್ಯ ವಿಚಾರಗಳನ್ನು ನೆನಪಿಟ್ಟುಕೊಳ್ಳಬೇಕು. ವರಮಹಾಲಕ್ಷ್ಮಿ ದೇವಿಯ ವ್ರತಕ್ಕೆ ಯಾವೆಲ್ಲಾ ಬಗೆಯ ಮುನ್ನೆಚ್ಚರಿಕೆ ಹಾಗೂ ಸಿದ್ಧತೆಯನ್ನು ಕೈಗೊಳ್ಳಬೇಕು ಎನ್ನುವ ಸೂಕ್ತ ವಿವರಣೆಯನ್ನು ಈ ಮುಂದೆ ಬೋಲ್ಡ್ ಸ್ಕೈ ವಿವರಿಸಿದೆ ನೋಡಿ...

ಪ್ರಮುಖ ಸಾಮಾಗ್ರಿಗಳ ಪಟ್ಟಿ

ಪ್ರಮುಖ ಸಾಮಾಗ್ರಿಗಳ ಪಟ್ಟಿ

1. ಅರಿಶಿನ

2. ಕುಂಕುಮ

3. ಅಕ್ಷತೆ ( ಅಕ್ಕಿ+ಅರಿಶಿನ+1ಅಥವಾ2 ಹನಿ ತುಪ್ಪ.)

4. ಚಂದನ/ಶ್ರೀಗಂಧದ ಪುಡಿ.

5. ಅಗರಬತ್ತಿ

6. ಕರ್ಪೂರ

7. ವೀಳ್ಯದ ಎಲೆ 15

(ಗಣೇಶನಿಗೆ -3, ಮಹಾಲಕ್ಷ್ಮಿ ಅಮ್ಮನವರಿಗೆ -3, ಕಲಶ ಇಡಲು 5, ಉಳಿದವು ತಾಂಬುಲ ನೀಡಲು )(ಪ್ರತಿಯೊಬ್ಬರಿಗೆ-3 ಎಲೆಯನ್ನು ನೀಡಬೇಕು).

8. ಅಡಿಕೆ

9. ಹೂವು

10. ತೆಂಗಿನಕಾಯಿ-2

11. ಹಣ್ಣುಗಳು

12. ಕಲಶ

13. ಕಲಶಕ್ಕೆ ಬ್ಲೌಸ್ ಪೀಸ್/ಕುಪ್ಪಸದ ಬಟ್ಟೆ.(ಬ್ಲೌಸ್ ಪೀಸ್ ಅನ್ನು ಅಮ್ಮನವರ ಕಲಶಕ್ಕೆ ಇಟ್ಟ ತೆಂಗಿನ ಕಾಯಿಗೆ ಸುತ್ತಲು)

14. ಪಂಚಾಮೃತ. (ಆಕಳ ಹಾಲು+ಆಕಳ ತುಪ್ಪ+ಮೊಸರು+ಜೇನುತುಪ್ಪ+ಸಕ್ಕರೆ ಅಥವಾ ಬೆಲ್ಲ)

15. ಮಾವಿನ ಎಲೆ.

ಲಕ್ಷ್ಮಿ ದೇವಿಯ ಮುಖ

ಲಕ್ಷ್ಮಿ ದೇವಿಯ ಮುಖ

ಮಂಗಳಕರವಾದ ವರಮಹಾಲಕ್ಷ್ಮಿ ಪೂಜೆ/ವ್ರತಕ್ಕೆ ಲಕ್ಷ್ಮಿ ದೇವಿಯ ಮುಖ ಇರಿಸಲಾಗುವುದು. ಕೆಲವರು ಬೆಳಗಳಿಯ ಮುಖ ಇಡುತ್ತಾರೆ. ಇನ್ನೂ ಕೆಲವರು ಮಾರುಕಟ್ಟೆಯಲ್ಲಿ ದೊರೆಯುವ ಮುಖವನ್ನು ಇರಿಸುತ್ತಾರೆ.

ಕುಂಕುಮ

ಕುಂಕುಮ

ಮಹಾಲಕ್ಷ್ಮಿ ಪೂಜೆಗೆ ಬೇಕಾಗು ಇನ್ನೊಂದು ಪ್ರಮುಖ ವಸ್ತು ಕುಂಕುಮ. ವಿವಾಹಿತ ಮಹಿಳೆಯರು ಈ ವ್ರತವನ್ನು ಕೈಗೊಳ್ಳುತ್ತಾರೆ. ವಿವಾಹಿತ ಮಹಿಳೆಯಾದ ಲಕ್ಷ್ಮಿಯನ್ನು ಸಿಂಗರಿಸಲು ಕುಂಕುಮ ಅಗತ್ಯವಾದದ್ದು. ಇದು ಸೌಭಾಗ್ಯದ ಸಂಕೇತವೂ ಹೌದು.

ಚಂದನ

ಚಂದನ

ಚಂದನ ಅಥವಾ ಶ್ರೀಗಂಧದ ಪುಡಿಯು ಪೂಜೆಗೆ ಬಹಳ ಮಂಗಳಕರವಾದದ್ದು. ಎಣ್ಣೆ ಸ್ನಾನದ ನಂತರ ಮಹಿಳೆಯರು ಚಂದನವನ್ನು ತೈದು ಇಡುತ್ತಾರೆ ಪೂಜೆಗೆ ಬೇಕಾದ ಎಲ್ಲಾ ವಸ್ತುಗಳನ್ನು ಶುದ್ಧಕರಿಸಲು ಹಾಗೂ ಬೆಳ್ಳಿಯ ಕಲಶ ಅಥವಾ ಮಡಿಕೆಗೆ ಶ್ರೀಗಂಧ/ಚಂದನವನ್ನು ಬಳಿಯುವುದರ ಮೂಲಕ ಅಲಂಕರಿಸುತ್ತಾರೆ.

ಹೊಸ ಬ್ಲೌಸ್ ಪೀಸ್/ಕುಪ್ಪಸದ ಬಟ್ಟೆ

ಹೊಸ ಬ್ಲೌಸ್ ಪೀಸ್/ಕುಪ್ಪಸದ ಬಟ್ಟೆ

ಹೊಸ ಬ್ಲೌಸ್ ಪೀಸ್ ನಿಂದ ಕಲಶವನ್ನು ಅಲಂಕರಿಸುತ್ತಾರೆ. ಇದು ಕೆಂಪು ಅಥವಾ ಹಸಿರು ಬಣ್ಣದಲ್ಲಿ ಇರಬೇಕು. ಇದು ವಿವಾಹಿತ ಮಹಿಳೆಯರನ್ನು ಸಂಕೇತಿಸುವ ಬಣ್ಣವಾಗಿದೆ. ಕಲಶದ ಒಳಗೆ ಅಕ್ಕಿ, ನೀರು, ಅರಿಶಿನ, ನಾಣ್ಯಗಳು ಮತ್ತು ಅಡಿಕೆಯಿಂದ ತುಂಬಿಸಬೇಕು.

ತೆಂಗಿನಕಾಯಿ

ತೆಂಗಿನಕಾಯಿ

ದೇವರ ಪೂಜೆಗೆ ತೆಂಗಿನಕಾಯಿ ಬಹಳ ಮಂಗಳಕರ ಹಾಗೂ ಪವಿತ್ರವಾದ ವಸ್ತುವಾಗಿದೆ. ತೆಂಗಿನಕಾಯಿ ಬಳಕೆ ಇಲ್ಲದೆ ವರಮಹಾಲಕ್ಷ್ಮಿ ಪೂಜೆಯು ಅಪೂರ್ಣವಾಗುವುದು. ಕಲಶದ ತಂಬಿಗೆ ಅಥವಾ ಮಡಿಕೆಯ ಮೇಲೆ ಹೊಸ ಕುಪ್ಪಸದ ಬಟ್ಟೆ ಮತ್ತು ತೆಂಗಿನಕಾಯಿಯನ್ನು ಇಡಲಾಗುತ್ತದೆ. ಅದರ ಮೇಲೆ ವರಮಹಾಲಕ್ಷ್ಮಿ ದೇವಿಯ ಮುಖವನ್ನು ಇರಿಸಿ ಬಿಗಿಯಾಗಿ ಕಟ್ಟಿರುತ್ತಾರೆ.

ನೈವೇದ್ಯ

ನೈವೇದ್ಯ

ಮಂಗಳಕರವಾದ ಈ ವ್ರತಾಚರಣೆಯಲ್ಲಿ ಲಕ್ಷ್ಮಿ ದೇವಿಗೆ ನೈವೇದ್ಯವನ್ನು ಅರ್ಪಿಸಲಾಗುವುದು. ಒಣಹಣ್ಣುಗಳನ್ನು ಬಳಸಿ ಮನೆಯಲ್ಲಿ ತಯಾರಿಸಿದ ಸಿಹಿ ಖಾದ್ಯವನ್ನು ಸಾಂಪ್ರದಾಯಿಕ ವಿಧಾನದಲ್ಲಿ ತಯಾರಿಸಲಾಗುವುದು. ನೈವೇದ್ಯಕ್ಕೆ ಪ್ರಮುಖವಾಗಿ ಪಾಯಸ, ಪೂರ್ನ್‍ಮ್ ಬೊರೆಲು ಹಾಗೂ ಹಲವು ಬಗೆಯ ಹಣ್ಣುಗಳನ್ನು ಇಡಲಾಗುವುದು.

ಮಾವಿನ ಎಲೆ

ಮಾವಿನ ಎಲೆ

ಮಾವಿನ ಎಲೆಯನ್ನು ಮನೆಯ ಅಲಂಕಾರ, ದೇವಿಯ ಪೀಠ ಅಲಂಕಾರ ಹಾಗೂ ಲಕ್ಷ್ಮಿ ದೇವಿಯ ಆಹ್ವಾನಕ್ಕೆ ಬಳಸಲಾಗುತ್ತದೆ. ಪೂಜೆ, ವ್ರತ ಹಾಗೂ ಮಂಗಳ ಕರ ಕಾರ್ಯಗಳಿಗೆ ಮಾವಿನ ಎಲೆ ಬಹಳ ಪ್ರಮುಖ ಹಾಘೂ ಪವಿತ್ರವಾದದ್ದಾಗಿದೆ.

ಹಳದಿ ದಾರ

ಹಳದಿ ದಾರ

ಹಳದಿ ದಾರವು ಲಕ್ಷ್ಮಿ ದೇವಿಯ ಪೂಜೆಗೆ ಅಗತ್ಯವಾದ ಇನ್ನೊಂದು ಪವಿತ್ರವಾದ ವಸ್ತು. ಇದನ್ನು ದೇವಿಯ ಕಾಲುಗಳ ಬಳಿ ಇಡಲಾಗುವುದು. ಜೊತೆಗೆ ಒಂದಿಷ್ಟು ಹೂವನ್ನು ಸಹ ಇಡಲಾಗುವುದು. ಇದು ಅತ್ಯಂತ ಪವಿತ್ರವಾದದ್ದು.

ಕಮಲದ ಹೂವು

ಕಮಲದ ಹೂವು

ಕಮಲದ ಹೂವು ಲಕ್ಷ್ಮಿದೇವಿಯ ಪ್ರಿಯವಾದ ಹೂವು. ಈ ಹೂವಿನ ಮೇಲೆಯೇ ಲಕ್ಷ್ಮಿದೇವಿ ಇರುತ್ತಾಳೆ ಎನ್ನಲಾಗುವುದು. ಇದು ಜವಗುಪ್ರದೇಶದಲ್ಲಿ ಬೆಳೆಯುವ ಹೂವಾದರೂ ಶುದ್ಧತೆ ಹಾಗೂ ಪವಿತ್ರತೆಯನ್ನು ಹೊಂದಿರುವ ಹೂವಾಗಿದೆ. ಆಧ್ಯಾತ್ಮಿಕತೆ ಹಾಗೂ ಸಾಂಪ್ರದಾಯಿಕ ಬದ್ಧವಾಗಿ ಪೂಜೆ ಮಾಡಲು ಈ ಹೂವನ್ನು ಇರಿಸಲಾಗುತ್ತದೆ. ಪೂಜೆಗೆ ತಾಜಾ ಹೂವು ಅತ್ಯಗತ್ಯವಾದದ್ದು.

 ಶಂಖ ನಾದ

ಶಂಖ ನಾದ

ಶಂಖನಾದವು ಧನಾತ್ಮಕ ಶಕ್ತಿಯನ್ನು ಪ್ರಚೋದಿಸುತ್ತದೆ ಹಾಗೂ ಆಕರ್ಷಿಸುತ್ತದೆ ಎಂದು ಹೇಳಲಾಗುವುದು. ವಿಷ್ಣು ದೇವರಿಗೆ ಹಾಗೂ ಲಕ್ಷ್ಮಿ ದೇವಿಗೆ ಶಂಖನಾದಿಂದ ಆಹ್ವಾನಿಸಲಾಗುತ್ತದೆ. ಎಲ್ಲಿ ಶಮಖನಾದವು ಮೊಳಗಿರುತ್ತದೆಯೋ ಅಲ್ಲಿ ವಿಷ್ಣು ಮತ್ತು ಮಹಾಲಕ್ಷ್ಮಿ ನೆಲೆಸಿರುತ್ತಾರೆ ಎನ್ನಲಾಗುವುದು. ಮಹಾಲಕ್ಷ್ಮಿ ಪೂಜೆಯ ಸಂದರ್ಭದಲ್ಲಿ ಇದನ್ನು ಊದುವುದರಿಂದ ಪವಿತ್ರತೆ ಹಾಗೂ ಧನಾತ್ಮಕ ಶಕ್ತಿ ನೆಲೆಸುವುದು.

 ಲಕ್ಷ್ಮಿ ಗಾಯತ್ರಿಯನ್ನು ಓದಿ

ಲಕ್ಷ್ಮಿ ಗಾಯತ್ರಿಯನ್ನು ಓದಿ

"ಓಂ ಶ್ರೀ ಮಹಾಲಕ್ಷ್ಮಿ ಚ ವಿಷ್ಮಾಹೇ ವಿಷ್ಣು ಪತ್ನೈ ಚ ಧೀಮಹಿ ತನ್ನೋ ಲಕ್ಷ್ಮಿ ಪ್ರಚೋದಯಾತ್" ಇದು ಲಕ್ಷ್ಮಿ ಗಾಯತ್ರಿ ಮಂತ್ರ. ಈ ಪವಿತ್ರ ಮಂತ್ರವನ್ನು ಪಠಿಸುವುದರಿಂದ ಮನಸ್ಸು ಶಾಂತಿ, ಪ್ರೀತಿ ಹಾಗೂ ಭಕ್ತಿಯಿಂದ ಹೃದಯವು ತುಂಬುತ್ತದೆ. ಲಕ್ಷ್ಮಿ ಗಾಯತ್ರಿ ಮಂತ್ರವನ್ನು 108 ಬಾರಿ ಪಠಿಸಬೇಕು. ಇದು ಎಲ್ಲಾ ಮಂತ್ರಗಳಿಗಿಂತ ಹೆಚ್ಚು ಶಕ್ತಿಶಾಲಿಯಾದದ್ದು ಎಂದು ನಂಬಲಾಗಿದೆ. ಬಡತನದಿಂದ ಮುಕ್ತಿ ಹೊಂದಲು, ಆರೋಗ್ಯಕರ ಮನಸ್ಸು ಮತ್ತು ದೇಹ ಹಾಗೂ ಆತ್ಮವನ್ನು ಕಾಪಾಡಿಕೊಳ್ಳಲು ಸಹಾಯಮಾಡುತ್ತದೆ ಎಂದು ಹೇಳಲಾಗುವುದು. ಇದನ್ನು ಜಪಿಸುವುದರಿಂದ ತಾಯಿ ಬಹುಬೇಗ ಆಹ್ವಾನಿತಳಾಗುತ್ತಾಳೆ ಮತ್ತು ಆಶೀರ್ವಾದ ನೀಡುತ್ತಾಳೆ ಎನ್ನುವ ನಂಬಿಕೆಯಿದೆ.

English summary

Varamahalakshmi pooja-How to please and Attract Goddess Lakshmi

In the Shravana masam, Varamahalakshmi Puja is celebrated. This is one of the most important festivals in the southern part of India, especially in the states of Andhra Pradesh, Karnataka and Tamil Nadu. Before the full moon day of the Shravana masam, Varamahalakshmi Puja is performed on Friday. According to the English Calendar, this vrat falls in the month of August.
X
Desktop Bottom Promotion