For Quick Alerts
ALLOW NOTIFICATIONS  
For Daily Alerts

ವರಮಹಾಲಕ್ಷ್ಮಿ ಹಬ್ಬ ಯಾವಾಗ? ಲಕ್ಷ್ಮಿಯನ್ನು ಒಲಿಸಲು ಪೂಜಾ ನಿಯಮಗಳೇನು?

|

ನಾಡಿನಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ ಕಳೆಗಟ್ಟಿದೆ, ಶ್ರಾವಣ ಮಾಸದಲ್ಲಿ ಆಚರಿಸುವ ಪ್ರಮುಖ ಹಬ್ಬಗಳಲ್ಲಿ ವರಮಹಾಲಕ್ಷ್ಮಿ ಹಬ್ಬವೂ ಕೂಡ ಒಂದಾಗಿದೆ. ದಕ್ಷಿಣ ಭಾರತದಲ್ಲಿ ವರಮಹಾಲಕ್ಷ್ಮಿ ವ್ರತವನ್ನು ಆಚರಿಸುತ್ತಾರೆ.

Varamahalakshmi Festival

ವರಮಹಾಲಕ್ಷ್ಮಿ ವ್ರತ ಮಾಡುವುದರಿಂದ ಅಷ್ಟಲಕ್ಷ್ಮಿಯರನ್ನು ಪೂಜಿಸಿದ ಫಲ ಸಿಗುವುದು, ಮುತ್ತೈದೆಯರು ಈ ದಿನ ಪೂಜಿಸುವುದರಿಂದ ಮನೆಯಲ್ಲಿ ಸಂಪತ್ತು ಹೆಚ್ಚುವುದು, ಮನೆಯಲ್ಲಿ ಸಂತೋಷ ಹೆಚ್ಚುವುದು, ಗಂಡನ ಆಯುಸ್ಸು, ಆರೋಗ್ಯ ಬಲವಾಗುವುದು. ಈ ವ್ರತವನ್ನು ಯುವತಿಯರೂ ಮಾಡುತ್ತಾರೆ. ಈ ವ್ರತವನ್ನು ಅವಿವಾಹಿತ ಮಹಿಳೆ ಮಾಡುವುದರಿಂದ ಒಳ್ಳೆಯ ಸಂಬಂಧ ಕೂಡಿ ಬರುವುದು.

ವರಮಹಾಲಕ್ಷ್ಮಿ ವ್ರತವನ್ನು ಶ್ರಾವಣ ಮಾಸದ ಶುಕ್ರವಾರ ಆಚರಿಸಲಾಗುವುದು, ಇನ್ನು ಈ ವ್ರತವನ್ನು ಮದುವೆಯಾದ ಮೊದಲ 5 ವರ್ಷಗಳಲ್ಲಿ ಆಚರಿಸಲಾಗುವುದು.

2022ರಲ್ಲಿ ವರಮಹಾಲಕ್ಷ್ಮಿ ಹಬ್ಬ ಯಾವಾಗ, ಪೂಜಾ ನಿಯಮಗಳೇನು ಎಂದು ನೋಡೋಣ ಬನ್ನಿ:

 ವರಮಹಾಲಕ್ಷ್ಮಿ ವ್ರತ ಯಾವಾಗ?

ವರಮಹಾಲಕ್ಷ್ಮಿ ವ್ರತ ಯಾವಾಗ?

ವರಮಹಾಲಕ್ಷ್ಮಿಯನ್ನು ಆಗಸ್ಟ್‌ 5ರಂದು ಆಚರಿಸಲಾಗುವುದು. ಆದರೆ ಹಿಂದೂ ಕ್ಯಾಲೆಂಡರ್ ಹಾಗೂ ಪಂಚಾಂಗದ ಪ್ರಕಾರ ಆಗಸ್ಟ್‌ 12ಕ್ಕೆ ವರಮಹಾಲಕ್ಷ್ಮಿ ವ್ರತವನ್ನು ಆಚರಿಸಲಾಗುವುದು.

 ವರಮಹಾಲಕ್ಷ್ಮಿ ವ್ರತದ ಪೂಜೆಗೆ ಮುಹೂರ್ತ

ವರಮಹಾಲಕ್ಷ್ಮಿ ವ್ರತದ ಪೂಜೆಗೆ ಮುಹೂರ್ತ

ಬೆಳಗ್ಗೆ ವರಲಕ್ಷ್ಮಿ ವ್ರತದ ಶುಭ ಮುಹೂರ್ತ - ಮುಂಜಾನೆ 6:00 ರಿಂದ ಬೆಳಗ್ಗೆ 8.20 ರವರೆಗೆ

ಬೆಳಗ್ಗೆ 9.20 ರಿಂದ ಬೆಳಗ್ಗೆ 11.05 ರವರೆಗೆ

ಸಂಜೆ ವರಲಕ್ಷ್ಮಿ ವ್ರತ ಪೂಜೆಯ ಮುಹೂರ್ತ - ಸಂಜೆ 6.40 ರಿಂದ ಸಂಜೆ 7.40 ರವರೆಗೆ

ಶುಭ ಮುಹೂರ್ತ:

ಅಭಿಜಿತ್ ಮುಹೂರ್ತ : ಬೆಳಗ್ಗೆ11:50 ರಿಂದ ಮಧ್ಯಾಹ್ನ 12:42 ರವರೆಗೆ

ಅಮೃತ ಕಾಲ: ಬೆಳಗ್ಗೆ 09:53 ರಿಂದ ಬೆಳಗ್ಗೆ 11:29 ರವರೆಗೆ

ರಾಹುಕಾಲ ಬೆಳಗ್ಗೆ 10:46 ರಿಂದ 12:27 ರವರೆಗೆ (ಈ ಸಮಯ ಪೂಜೆಗೆ ಯೋಗ್ಯವಲ್ಲ)

 ವರಮಹಾಲಕ್ಷ್ಮಿ ಪೂಜೆಯ ನಿಯಮಗಳು

ವರಮಹಾಲಕ್ಷ್ಮಿ ಪೂಜೆಯ ನಿಯಮಗಳು

* ಬೆಳಗ್ಗೆ ಎದ್ದು ಸ್ನಾನ ಮಾಡಿ, ಮಡಿ ಬಟ್ಟೆ ಧರಿಸಿ, ಪೂಜಾ ಸ್ಥಳವನ್ನು ಸ್ವಚ್ಛಗೊಳಿಸಬೇಕು.

* ನಂತರ ಪೂಜಾ ಸ್ಥಳದಲ್ಲಿ ರಂಗೋಲಿ ಹಾಕಬೇಕು, ಮನೆಯ ಮಧ್ಯಭಾಗದಲ್ಲಿ ರಂಗೋಲಿ ಬಿಡಬೇಕು, ಧನಲಕ್ಷ್ಮಿ ರಂಗೋಲಿ ನೋಡಿ ಆಕರ್ಷಿತಳಾಗುತ್ತಾಳೆ, ಆದ್ದರಿಂದ ಸುಂದರವಾದ ರಂಗೋಲಿ ಬಿಡಿಸಿ.

* ಕಳಸ ಸಿದ್ಧ ಪಡಿಸಿ: ಕಳಸಕ್ಕೆ ಹಿತ್ತಾಳೆ ಅಥವಾ ಬೆಳ್ಳಿಯ ಚೊಂಬು ಬಳಸಿ,ಅದರ ಮೇಲೆ ಶ್ರೀಗಂಧ ಅಥವಾ ಕುಂಕುಮದಿಂದ ಸ್ವಸ್ತಿಕ ಚಿಹ್ನೆ ಬರೆಯಿರಿ, ಅದರೊಳಗಡೆ ಅಕ್ಕಿ, ನೀರು, ನಾಣ್ಯ, ಪೂರ್ಣ ಲಿಂಬೆ, ಐದು ಪ್ರಕಾರದ ಎಲೆಗಳು, ಅಡಿಕೆಯನ್ನು ಕಲಶದಲ್ಲಿ ಇರಿಸಬೇಕು. ಅರಶಿನದ ಮಿಶ್ರಣವನ್ನು ತೆಂಗಿನ ಕಾಯಿಗೆ ಹಚ್ಚಿ ಕಲಶದ ಬಾಯಿಗೆ ಇರಿಸಲಾಗುತ್ತದೆ. ಎಲೆಯಿಂದ ಆವೃತವಾದ ಕುಂಭದ ಬಾಯಿಗೆ ತೆಂಗಿನಕಾಯಿಯನ್ನು ಇರಿಸುವುದು ವಾಡಿಕೆ. ನಂತರ ಇದರ ಮೇಲೆ ಲಕ್ಷ್ಮೀ ದೇವರ ಫೋಟೋವನ್ನಿಟ್ಟು ಸೀರೆಯುಡಿಸಿ ಲಕ್ಷ್ಮಿಯನ್ನು ಹೂಗಳಿಂದ ಅಲಂಕೃತ ಮಾಡಿ ಪೂಜಿಸಲಾಗುವುದು.

ಪೂಜೆಯ ವಿಧಾನ

ಪೂಜೆಯ ವಿಧಾನ

* ಮೊದಲಿಗೆ ಗಣೇಶನಿಗೆ ಪೂಜೆಯನ್ನು ಸಲ್ಲಿಸಬೇಕು. ನಂತರ ಲಕ್ಷ್ಮಿ ಸ್ತೋತ್ರ ಪಠಿಸಬೇಕು, ನಂತರ ದೇವಿಗೆ ದೀಪ ಬೆಳಗಿ ಆರತಿಯನ್ನು ಮಾಡಿ ನೈವೇದ್ಯ ಅರ್ಪಿಸಬೇಕು.ಕೈಗಳಿಗೆ ಹಳದಿ ದಾರವನ್ನು ಕಟ್ಟಿಕೊಳ್ಳಬೇಕು, ಪೂಜೆಗೆ ಮುತ್ತೈದೆಯರನ್ನು ಆಹ್ವಾನಿಸಿ ಅವರಿಗೆ ಅಡಿಕೆ, ವೀಳ್ಯೆದೆಲೆಯನ್ನು ತಾಂಬೂಲವಾಗಿ ನೀಡುತ್ತಾರೆ. ಕೆಲವರು ಇದರ ಜತೆಗೆ ಹಣ್ಣುಗಳನ್ನೂ ನೀಡುತ್ತಾರೆ.

ಪೂಜೆ ಮುಕ್ತಾಯವಾಗುವುದು ಯಾವಾಗ?

ಪೂಜೆ ಮುಕ್ತಾಯವಾಗುವುದು ಯಾವಾಗ?

ಮರುದಿನ ಅಂದ್ರೆ ಶನಿವಾರ ಸ್ನಾವನ್ನು ಮುಗಿಸಿ, ನಂತರ ಕಳಸವನ್ನು ಅಲುಗಾಡಿಸಬೇಕು, ನಂತರ ಆ ಕಳಸದ ನೀರನ್ನು ಮನೆಯೊಳಗಡೆ ಪ್ರೋಕ್ಷಿಸಬೇಕು, ನಂತರ ಪೂಜೆ ಬಳಸುವ ಅಕ್ಕಿಯನ್ನು ಪಾಯಸಕ್ಕೆ ಬಳಸಿ.

ಪೂರ್ಣ ಮನಸ್ಸಿನಿಂದ ಪೂಜೆ ಮಾಡಬೇಕು

ಪೂರ್ಣ ಮನಸ್ಸಿನಿಂದ ಪೂಜೆ ಮಾಡಬೇಕು

ವರಮಹಾಲಕ್ಷ್ಮಿ ಪೂಜೆಯನ್ನು ಪೂರ್ಣ ಮನಸ್ಸಿನಿಂದ ಮಾಡಬೇಕು, ಅಂದರೆ ಮಾತ್ರ ಫಲ ಸಿಗುವುದು. ಯಾರ ಬಲವಂತಕ್ಕೂ ಪೂಜೆ ಮಾಡಬಾರದು. ಪೂರ್ಣ ಮನಸ್ಸಿನಿಂದ ಪೂಜೆ ಮಾಡಿದರೆ ಪೂಜೆಯಲ್ಲಿ ಏನೇ ಲೋಪದೋಷವಾದರೆ ದೇವಿ ಕ್ಷಮಿಸುತ್ತಾಳೆ, ಅವಳಿಗೆ ಪೂಜಾ ವಿಧಾನಕ್ಕಿಂತ ಪೂರ್ಣ ಮನಸ್ಸಿನಿಂದ ಮಾಡುವ ಪ್ರಾರ್ಥನೆ ಮುಖ್ಯವಾಗುತ್ತೆ.

ಅಷ್ಟಲಕ್ಷ್ಮಿ ಸ್ತೋತ್ರಗಳು

ಅಷ್ಟಲಕ್ಷ್ಮಿ ಸ್ತೋತ್ರಗಳು

1. ಆದಿಲಕ್ಷ್ಮೀ -

ಸುಮನಸ ವ೦ದಿತ ಸು೦ದರಿ ಮಾಧವಿ ಚ೦ದ್ರ ಸಹೋದರಿ ಹೇಮಮಯೇ|

ಮುನಿಗಣ ಮ೦ಡಿತ ಮೋಕ್ಷಪ್ರದಾಯಿನಿ ಮ೦ಜುಳ ಭಾಷಿಣಿ ವೇದನುತೇ|

ಪ೦ಕಜವಾಸಿನಿ ದೇವಸುಪೂಜಿತೆ ಸದ್ಗುಣವರ್ಷಿಣಿ ಶಾ೦ತಿಯುತೇ|

ಜಯ ಜಯ ಹೇ ಮಧುಸೂದನ ಕಾಮಿನಿ ಆದಿಲಕ್ಷ್ಮೀ ಸದಾ ಪಾಲಯಮಾ೦||೧||

2. ಧಾನ್ಯಲಕ್ಷ್ಮೀ -

ಅಯಿಕಲಿ ಕಲ್ಮಷನಾಶಿನಿ ಕಾಮಿನಿ ವೈದಿಕರೂಪಿಣಿ ವೇದಮಯೇ|

ಕ್ಷೀರ ಸಮುದ್ಭವ ಮ೦ಗಳರೂಪಿಣಿ ಮ೦ತ್ರನಿವಾಸಿನಿ ಮ೦ತ್ರನುತೇ|

ಮಗಳದಾಯಿನಿ ಅ೦ಬುಜವಾಸಿನಿ ದೇವಗಣಾಶ್ರಿತ ಪಾದಯುತೇ|

ಜಯ ಜಯ ಹೇ ಮಧುಸೂದನ ಕಾಮಿನಿ ಧಾನ್ಯಲಕ್ಷ್ಮೀ ಸದಾ ಪಾಲಯಮಾ೦||೨|

3. ಐಶ್ವರ್ಯಲಕ್ಷ್ಮೀ -

ಧಿಮಿ ಧಿಮಿ ಧಿ೦ಧಿಮಿ ಧಿ೦ಧಿಮಿ ಧಿ೦ಧಿಮಿ ದು೦ದುಭಿನಾದ ಸ೦ಪೂರ್ಣಮಯೇ|

ಘಮಘಮ ಘ೦ಘಮ ಘ೦ಘಮ ಘ೦ಘಮ ಶ೦ಖನಿನಾದ ಸುವಾದ್ಯನುತೇ|

ವೇದಪುರಾಣೇತಿಹಾಸ ಸುಪೂಜಿತೆ ವೈದಿಕಮಾರ್ಗ ಪ್ರದರ್ಶಯುತೇ|

ಜಯ ಜಯ ಹೇ ಮಧುಸೂದನ ಕಾಮಿನಿ ಧನಲಕ್ಷ್ಮೀ ಸದಾ ಪಾಲಯಮಾ೦||೩||

4. ವಿದ್ಯಾಲಕ್ಷ್ಮೀ -

ಪ್ರಣತ ಸುರೇಶ್ವರಿ ಭಾರತಿ ಭಾರ್ಗವಿ ಶೋಕವಿನಾಶಿನಿ ರತ್ನಮಯೇ|

ಮಣಿಮಯಭೂಷಿತ ಕರ್ಣವಿಭೂಷಿಣಿ ಶಾ೦ತಿ ಸಮಾವೃತೆ ಹಾಸ್ಯಮುಖೇ|

ನವನಿಧಿ ದಾಯಿನಿ ಕಲಿಮಲಹಾರಿಣಿ ಕಾಮಿತಫಲಪ್ರದ ಹಸ್ತಯುತೇ|

ಜಯ ಜಯ ಹೇ ಮಧುಸೂದನ ಕಾಮಿನಿ ವಿದ್ಯಾಲಕ್ಷ್ಮೀ ಸದಾ ಪಾಲಯಮಾ೦||೪||

5. ವೀರಲಕ್ಷ್ಮೀ(ಧೈರ್ಯಲಕ್ಷ್ಮೀ) -

ಜಯವರವರ್ಷಿಣಿ ವೈಷ್ಣವಿ ಭಾರ್ಗವಿ ಮ೦ತ್ರಸ್ವರೂಪಿಣಿ ಮ೦ತ್ರಮಯೇ|

ಸುರಗಣಪೂಜಿತೆ ಶೀಘ್ರಫಲಪ್ರದೆ ಜ್ಜಾನವಿಕಾಸಿನಿ ಶಾಸ್ತ್ರನುತೇ|

ಭವಭಯಹಾರಿಣಿ ಪಾಪವಿಮೋಚಿನಿ ಸಾಧುಜನಾಶ್ರಿತ ಪಾದಯುತೇ|

ಜಯ ಜಯ ಹೇ ಮಧುಸೂದನ ಕಾಮಿನಿ ಧೈರ್ಯಲಕ್ಷ್ಮೀ ಸದಾ ಪಾಲಯಮಾ೦||೫||

6. ವಿಜಯ ಲಕ್ಷ್ಮೀ -

ಜಯ ಕಮಲಾಸಿನಿ ಸದ್ಗತಿದಾಯಿನಿ ಜ್ಜಾನವಿಕಾಸಿನಿ ಗಾನಮಯೇ|

ಅನುದಿನಮರ್ಚಿತ ಕು೦ಕುಮನೂಪುರ ಭೂಷಿತವಾಸಿತ ವಾದ್ಯನುತೇ|

ಕನಕಧಾರಾಸ್ತುತಿ ವೈಭವ ವ೦ದಿತೆ ಶ೦ಕರ ದೇಶಿಕ ಮಾನ್ಯಪದೇ|

ಜಯ ಜಯ ಹೇ ಮಧುಸೂದನ ಕಾಮಿನಿ ವಿಜಯಲಕ್ಷ್ಮೀ ಸದಾ ಪಾಲಯಮಾ೦||೬||

7. ಗಜಲಕ್ಷ್ಮೀ -

ಜಯ ಜಯ ದುರ್ಗತಿನಾಶಿನಿ ಕಾಮಿನಿ ಸರ್ವಫಲಪ್ರದ ಶಾಸ್ತ್ರಮಯೇ|

ರಥಗಜತುರಗಪಾದಾತಿ ಸಮಾವೃತ ಪರಿಜನ ಮ೦ಡಿತ ಲೋಕನುತೇ|

ಹರಿಹರಬ್ರಹ್ಮ ಸುಪೂಜಿತೆ ಸೇವಿತೆ ತಾಪನಿವಾರಿಣಿ ಪಾದಯುತೇ|

ಜಯ ಜಯ ಹೇ ಮಧುಸೂದನ ಕಾಮಿನಿ ಗಜಲಕ್ಷ್ಮೀ ಸದಾ ಪಾಲಯಮಾ೦||೭||

8. ಸ೦ತಾನಲಕ್ಷ್ಮೀ -

ಅಯಿಖಗವಾಹಿನಿ ಮೋಹಿನಿ ಚಕ್ರಿಣಿ ರಾಗವಿವರ್ಧಿನಿ ಜ್ಜಾನಮಯೇ|

ಗುಣಗಣವಾರಿಧಿ ಲೋಕಹಿತೈಷಿಣಿ ಶಬ್ದವಿಭೂಷಿಣಿ ಗಾನನುತೇ|

ಸಕಲ ಸುರಾಸುರ ದೇವಮುನೀಶ್ವರ ಮಾನಸ ವ೦ದಿತ ಪಾದಯುತೇ|

ಜಯ ಜಯ ಹೇ ಮಧುಸೂದನ ಕಾಮಿನಿ ಸ೦ತಾನಲಕ್ಷ್ಮೀ ಸದಾ ಪಾಲಯಮಾ೦||೮||

English summary

Varamahalakshmi Festival 2022 Date, timings, history, rituals and Significance

Varamahalakshmi Festival 2022: Here are dates, puja timing and rituals and significance, read on...
X
Desktop Bottom Promotion