For Quick Alerts
ALLOW NOTIFICATIONS  
For Daily Alerts

ಮನೆಯಲ್ಲಿ ಸಂಪತ್ತು, ಸೌಭಾಗ್ಯ ಬರಲು ವರಮಹಾಲಕ್ಷ್ಮೀ ಪೂಜೆಯ ಆಚರಣೆ ಹೀಗಿರಲಿ..

|
ವರಮಹಾಲಕ್ಷ್ಮಿ ಪೂಜಾ ವಿಧಾನ | ಲಕ್ಷ್ಮಿ ದೇವಿಯನ್ನ ಒಲಿಸಿಕೊಳ್ಳುವುದು ಹೇಗೆ? | Oneindia Kannada

ಲಕ್ಷ್ಮಿ ಮನೆಯ ದೀಪ. ಜೀವನದ ಜ್ಯೋತಿ. ಲಕ್ಷ್ಮಿ ದೇವಿ ಇಲ್ಲದ ಮನೆಯು ದಾರಿದ್ರ್ಯ ಹಾಗೂ ಬಡತನದಿಂದ ಕೂಡಿರುತ್ತದೆ. ಮನೆಯಲ್ಲಿ ಸದಾ ಕಿರಿಕಿರಿ, ಅಸಮಧಾನಗಳು ತಾಂಡವಾಡುತ್ತಿರುತ್ತವೆ. ಎಲ್ಲಿ ಲಕ್ಷ್ಮಿ ದೇವಿ ನೆಲೆಸಿರುತ್ತಾಳೋ ಆ ಮನೆಯಲ್ಲಿ ಉತ್ತಮ ಭಾಂದವ್ಯ, ಧನಧಾನ್ಯಗಳ ಸಿರಿ, ಮನೆಯಲ್ಲಿ ಸಮೃದ್ಧಿ ನೆಲೆಸಿರುತ್ತವೆ. ಜೊತೆಗೆ ವ್ಯಕ್ತಿ ಯಾವುದೇ ಕೊರತೆಗಳಿಲ್ಲದೆ ಸಂತೋಷದ ಜೀವನ ನಡೆಸಬಲ್ಲನು. ಉತ್ತಮ ಜೀವನಕ್ಕೆ ಲಕ್ಷ್ಮಿ ದೇವಿಯ ಆಶೀರ್ವಾದ ಬಹಳ ಪ್ರಮುಖವಾದದ್ದು.

ದಕ್ಷಿಣ ಭಾರತದಲ್ಲಿ ವಿಶೇಷವಾಗಿ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡುಗಳಲ್ಲಿ ಬಹಳ ವಿಶೇಷವಾಗಿ ಆಚರಿಸಲಾಗುತ್ತದೆ. ವರ ಮಹಾಲಕ್ಷ್ಮಿ ವ್ರತವು ಲಕ್ಷ್ಮಿ ದೇವಿಗೆ ಸಮರ್ಪಿತವಾದದ್ದು. ವಿವಾಹಿತ ಮಹಿಳತೆಯರು ಮನೆಯಲ್ಲಿ ಸಂಪತ್ತು ಹಾಗೂ ಸೌಭಾಗ್ಯ ದೊರೆಯಲಿ ಎಂದು ಧಾರ್ಮಿಕವಾಗಿ ಆಚರಿಸುತ್ತಾರೆ. ವರಮಹಾಲಕ್ಷ್ಮಿ ವ್ರತವನ್ನು ಏಕೆ ಆಚರಿಸಬೇಕು? ಮನೆಯಲ್ಲಿ ಹೇಗೆ ಕೈಗೊಳ್ಳುವುದು ಎನ್ನುವ ಇನ್ನಷ್ಟು ಮಾಹಿತಿಯನ್ನು ಈ ಮುಂದೆ ವಿವರಿಸಲಾಗಿದೆ...

ವರಮಹಾಲಕ್ಷ್ಮಿ ವ್ರತ ವನ್ನು ಎಂದು ಮಾಡಬೇಕು?

ವರಮಹಾಲಕ್ಷ್ಮಿ ವ್ರತ ವನ್ನು ಎಂದು ಮಾಡಬೇಕು?

ಶ್ರಾವಣ ಮಾಸದ ಹುಣ್ಣಿಮೆಯ ಶುಕ್ರವಾರ ಅಥವಾ ಹುಣ್ಣಿಮೆಯ ನಂತರದ ಶುಕ್ರವಾರದ ದಿನದಲ್ಲಿ ವರಮಹಾಲಕ್ಷ್ಮಿ ದೇವಿಯ ವ್ರತವನ್ನು ಕೈಗೊಳ್ಳಲಾಗುವುದು. ಅದು ಸಾಮಾನ್ಯವಾಗಿ ಆಗಸ್ಟ್ ಥವಾ ಸಪ್ಟೆಂಬರ್ ತಿಂಗಳಲ್ಲಿ ಬರುತ್ತದೆ.

ವರಮಹಾಲಕ್ಷ್ಮಿ ವ್ರತದ ಹಿಂದಿನ ಕಥೆ

ವರಮಹಾಲಕ್ಷ್ಮಿ ವ್ರತದ ಹಿಂದಿನ ಕಥೆ

ಒಂದಾನೊಂದು ಕಾಲದಲ್ಲಿ ಮಗಧ ಸಾಮ್ರಾಜ್ಯ ಎನ್ನುವ ಸಾಮ್ರಾಜ್ಯವಿತ್ತು. ಅಲ್ಲಿ ಚಾರುಮತಿ ಎನ್ನುವ ಬ್ರಾಹ್ಮಣ ಮಹಿಳೆ ವಾಸವಾಗಿದ್ದಳು. ಅವಳ ಪತಿ ಹಾಗೂ ಕುಟುಂಬದವರು ದೇವರ ಆರಾಧನಮೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಚಾರುಮತಿಯ ಭಕ್ತಿ ಭಾವಕ್ಕೆ ಮೆಚ್ಚಿದ ವರಮಹಾಲಕ್ಷ್ಮಿಯು ಕನಸಿನಲ್ಲಿ ಬಂದು ವರಮಹಾಲಕ್ಷ್ಮಿ ವ್ರತದ ಪೂಜಾ ವಿಧಾನವನ್ನು ಅನುಸರಿಸಲು ಹೇಳಿದಳು. ಈ ಪೂಜೆಯನ್ನು ಕೈಗೊಂಡರೆ ಜೀವನದ ಇಷ್ಟಗಳು ನೆರವೇರುವುದು ಎಂದು ಹೇಳಿದಳು ಎನ್ನಲಾಗುತ್ತದೆ. ಅಂತೆಯೇ ಚಾರುಮತಿಯು ತನ್ನ ಊರಿನಲ್ಲಿ ಇದ್ದ ಮಹಿಳೆಯರಿಗೆ ವಿಷಯವನ್ನು ತಿಳಿಸಿದಳು. ಬಳಿಕ ಎಲ್ಲಾ ಮಹಿಳೆಯರು ದೇವಿಯ ಆಣತಿಯಂತೆ ಪೂಜೆಯನ್ನು ಗೈದರು. ಜೊತೆಗೆ ಜೀವನದಲ್ಲಿ ಬಯಸಿದ ಸುಖ-ಸಂಪತ್ತನ್ನು ಪಡೆದುಕೊಂಡರು ಎನ್ನಲಾಗುತ್ತದೆ.

ವರಮಹಾಲಕ್ಷ್ಮಿ ಪೂಜೆಗೆ ಅಗತ್ಯ ವಸ್ತುಗಳು

ವರಮಹಾಲಕ್ಷ್ಮಿ ಪೂಜೆಗೆ ಅಗತ್ಯ ವಸ್ತುಗಳು

*ಲಕ್ಷ್ಮಿ ದೇವಿಯ ಮುಖ(ಮಾರುಕಟ್ಟೆಯಲ್ಲಿ ದೊರೆಯುವುದು)

*ಕಲಶಕ್ಕೆ ಇಡಲು ಹೊಸ ಕುಪ್ಪಸದ ಬಟ್ಟೆ.

*ಮಾವಿನ ಎಲೆಯ ತೋರಣ

*ಅಕ್ಷತೆ

*ಅರಿಶಿನ

*ಕುಂಕುಮ

*ಚಂದನ/ಶ್ರೀಗಂಧದ ಪುಡಿ

*ವೀಳ್ಯದೆಲೆ

*ಬಾಳೆ ಹಣ್ಣು-10

*ತೆಂಗಿನಕಾಯಿ-3

*ಪಂಚಾಮೃತ

*ಒಣಗಿದ ಹಣ್ಣುಗಳು

*ಹಣ್ಣುಗಳು ಮತ್ತು ಹೂವು

*ಹಾಲು

*ನೈವೇದ್ಯ(ಪಾಯಸ, ಪೂರ್ನಮ್ ಬೋರೆಲು, ಅಪ್ಪಂ, ಪರುಪ್ಪು ಪಾಯಸ)

ವರಮಹಾಲಕ್ಷ್ಮಿ ಪೂಜಾ ವಿಧಾನ

ವರಮಹಾಲಕ್ಷ್ಮಿ ಪೂಜಾ ವಿಧಾನ

ವರಮಹಾಲಕ್ಷ್ಮಿ ಪೂಜಾ ವಿಧಾನದಲ್ಲಿ ವಿವಿಧ ವಿಧಾನಗಳನ್ನು ಒಳಗೊಂಡಿದೆ. ಅಂಗ ಪೂಜೆ, ತೋರಗಂಧಿ ಪೂಜೆ, ಶೋಡಶೋಪಚಾರ ಪೂಜೆ, ವರಮಹಾಲಕ್ಷ್ಮಿ ವ್ರತ ಕಥೆ, ಮಂತ್ರ ಪುಷ್ಪ, ವಯನ ವಿಧಿ, ಥೋರಬಂಧನಂ ಮೊದಲಾದ ರೀತಿ-ನೀತಿಗಳನ್ನು ಒಳಗೊಂಡಿರುತ್ತದೆ.

ವರಮಹಾಲಕ್ಷ್ಮಿಯನ್ನು ಅಲಂಕರಿಸುವುದು ಹೇಗೆ?

ವರಮಹಾಲಕ್ಷ್ಮಿಯನ್ನು ಅಲಂಕರಿಸುವುದು ಹೇಗೆ?

ವರಮಹಾಲಕ್ಷ್ಮಿ ಕಲಶ

ಮಡಿಕೆ ಒಣಗಿದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು. ಮಡಿಕೆ ಕೆಳಭಾಗದಲ್ಲಿ ಜಿಪ್ಸಮ್ ಅನ್ವಯಿಸಿ. ಬಳಿಕ ಮಡಿಕೆ/ಬಿಂದಿಗೆಯನ್ನು ಅರಿಶಿನ ಮತ್ತು ಕುಂಕುಮದ ಬಟ್ಟು/ಹುಂಡುಗಳಿಂದ ಅಲಂಕರಿಸಿ. ಮಡಿಕೆ ಒಳಗೆ ಅಕ್ಕಿ, ಒಣ ಹಣ್ಣು ಹಾಗೂ ನಾಣ್ಯವನ್ನು ಇಟ್ಟು ತುಂಬಿರಿ.

ಮೃದುವಾದ ಮಾವಿನೆಲೆಯಿಂದ ಮಡಿಕೆಯ ಕುತ್ತಿಗೆಯ ಭಾಗವನ್ನು ಅಲಂಕರಿಸಿ. ಮಾವಿನ ಎಲೆಯ ತುದಿಯು ಮೇಲ್ಮುಖವಾಗಿಯೇ ಇರಬೇಕು. ತೆಂಗಿನ ಕಾಯಿಗೆ ಅರಿಶಿನ, ಕುಂಕುಮ ಮತ್ತು ಚಂದನವನ್ನು ಲೇಪಿಸಿ ಅಲಂಕರಿಸಿ. ಬಳಿಕ ಬಿಂದಿಗೆಯ ಕಂಟದಲ್ಲಿ, ಮಾವಿನೆಲೆಗಳ ಮಧ್ಯೆ ಇರಿಸಿ. ತೆಂಗಿನ ಕಾಯಿಯ ಕಣ್ಣುಗಳು ಮೇಲ್ಭಾಗದಲ್ಲಿ ಇರಬೇಕು. ಹೊಸ ಕುಪ್ಪುಸದ ಬಟ್ಟೆಯನ್ನು ಕಲಶಕ್ಕೆ ಇಡಬೇಕು.ಬಳಿಕ ಹೂವಿನ ಹಾರವನ್ನು ಹಾಕಿ ಅಲಂಕರಿಸಿ.

ಮಹಾಲಕ್ಷ್ಮಿ ಕಲಶಕ್ಕೆ ಸೀರೆಯನ್ನು ತೊಡಿಸುವುದು

ಮಹಾಲಕ್ಷ್ಮಿ ಕಲಶಕ್ಕೆ ಸೀರೆಯನ್ನು ತೊಡಿಸುವುದು

ಲಕ್ಷ್ಮಿ ದೇವಿ ವಿವಾಹಿತ ಮಹಿಳೆಯಾಗಿದ್ದರಿಂದ ಯಾವುದೇ ಹೊಸ ಸೀರೆಯನ್ನು ತೊಡಿಸಬಹುದು. ದೇವಿ ಸುಮಂಗಲಿಯ ಸಂಕೇತವಾದ್ದರಿಂದ ಮಂಗಲ ಸೂತ್ರ, ಬಳೆ, ಕುಂಕುಮ ಇಟ್ಟು ಸಿಂಗಾರ ಮಾಡಬಹುದು. ಹಸಿರು ಸೀರೆಯನ್ನು ಮಾತ್ರ ತೊಡಿಸಬೇಕು.

ಕೆಲವು ಸೀರೆಗಳ ಆಯ್ಕೆ ನಿಮಗಾಗಿ

ಕೆಲವು ಸೀರೆಗಳ ಆಯ್ಕೆ ನಿಮಗಾಗಿ

*ರೇಷ್ಮೆ ಸೀರೆ

*ಮೈಸೂರ್ ಸಿಲ್ಕ್ ಸೀರೆ

*9 ಮೊಳದ ಸೀರೆ

*ಕಾಂಚಿವರಮ್ ಸಿಲ್ಕ್ ಸೀರೆ

*ಕೊನ್ರಾಡ್ ಸಿಲ್ಕ್ ಸೀರೆ

*ಪಟೋಲಾ ಸಿಲ್ಕ್ ಸೀರೆ

English summary

Varalakshmi Vratham-Pooja Procedure/Puja Vidhanam

Varalaksmi Vratham is one of the most popular pooja in South India, especially in Karnataka (Kannada), Andhra Pradesh (Telugu), Telangana (Telugu) and Tamil Nadu (Tamil). This pooja is well known as Vara Maha Lakshmi Vrata and is very religiously observed by women in these parts of the country. Let us know more about Varalaksmi pooja along with a few common questions about this famous puja.
Story first published: Wednesday, August 22, 2018, 18:19 [IST]
X
Desktop Bottom Promotion