For Quick Alerts
ALLOW NOTIFICATIONS  
For Daily Alerts

ಎಲ್ಲಾ ಸಂಕಷ್ಟಗಳಿಂದ ಪಾರುಮಾಡುವ 'ಗಣೇಶ ಕವಚ ಸ್ತೋತ್ರಂ'

By Jaya subramanya
|

ನಾವು ಜೀವನದಲ್ಲಿ ಎಷ್ಟೇ ಬೆಳವಣಿಗೆಯನ್ನು ಹೊಂದಿದ್ದರೂ ದೇವರ ಅನುಗ್ರಹ ನಮ್ಮ ಮೇಲಿರಬೇಕು. ನಾವು ಏನಾಗಿದ್ದರೂ ಅದಕ್ಕೆ ಅವರ ಶ್ರೀರಕ್ಷಯೇ ಕಾರಣ ಎಂಬುದನ್ನು ಮರೆಯಬಾರದು. ದೇವರ ಅನುಗ್ರಹ ನಿಮ್ಮ ಮೇಲೆ ಇದೆ ಎಂದಾದರೆ ಯಾರಿಗೂ ನಿಮ್ಮನ್ನು ಏನೂ ಮಾಡಲು ಸಾಧ್ಯವಿಲ್ಲ. ದುಷ್ಟ ಶಕ್ತಿಗಳಿಂದ ದುಷ್ಟ ಜನರಿಂದ ನಿಮ್ಮನ್ನು ರಕ್ಷಿಸುವ ಶಕ್ತಿ ಆ ಮಹಾನ್ ಮಹಿಮನಾಗಿದ್ದಾನೆ.

ganesha

ಹಿಂದೂ ದೇವರುಗಳಲ್ಲಿ ಅತಿ ಶಕ್ತಶಾಲಿ ಎಂದೆನಿಸಿರುವ ಗಣೇಶನು ವಿಘ್ನ ವಿನಾಶಕ ಎಂಬ ಬಿರುದಿನಿಂದಲೇ ಪ್ರಸಿದ್ಧತೆಯನ್ನು ಗಳಿಸಿದವರಾಗಿದ್ದಾರೆ. 2019ರಲ್ಲಿ ಗಣೇಶ ಚತುರ್ಥಿಯನ್ನು ಸೆಪ್ಟೆಂಬರ್ 2ರಂದು ಸೋಮವಾರದಂದು ಅಚರಿಸಲಾಗುತ್ತಿದ್ದು, ಮಗುವಿನ ಮನಸ್ಸನ್ನು ಹೊಂದಿರುವ ಗಣೇಶನಲ್ಲಿ ನಾವು ಯಾವುದೇ ಕಷ್ಟಗಳನ್ನು ತೋಡಿಕೊಂಡರೂ ಅದಕ್ಕೆ ಪರಿಹಾರ ಕೂಡಲೇ ದೊರೆಯುತ್ತದೆ ಅಂತೆಯೇ ನಮ್ಮ ದುಃಖಕ್ಕೆ ಮೂಲವಾಗಿರುವ ಕಾರಣವನ್ನು ಸಮಸ್ಯೆಯನ್ನು ಆತ ದೂರಮಾಡುತ್ತಾರೆ, ನಿವಾರಿಸುತ್ತಾರೆ.

ganesha

ಪಾರ್ವತಿ ದೇವಿಯ ಮುದ್ದಿನ ಕಂದನಾಗಿರುವ ಗಣಪನು ಭಕ್ತರ ನೆಚ್ಚಿನ ಗೆಳೆಯ ಎಂದೆನಿಸಿದ್ದಾರೆ. ಶಿವ ಗಣಗಳಿಗೆ ಅಧಿಪತಿಯಾಗಿರುವ ಗಣಪನು ತನ್ನನ್ನು ನಂಬಿದ ಭಕ್ತರನ್ನು ಕೈಬಿಡುವ ಮಾತೇ ಇಲ್ಲ. ಸಂಕಟಗಳಿಂದ ನಮ್ಮನ್ನು ಕಾಪಾಡಲು ಗಣೇಶ ಕವಚವನ್ನು ನೀವು ಪಠಿಸಿದಲ್ಲಿ ನಿಮಗೆ ಶಾಂತಿ ಸಮಾಧಾನವನ್ನು ನೀಡುತ್ತದೆ. ನಿತ್ಯವೂ ಈ ಮಂತ್ರವನ್ನು ಪಠಿಸುವುದರಿಂದ ನಿಮ್ಮೆಲ್ಲಾ ಕಷ್ಟಗಳು ನಿವಾರಣೆಯಾಗಲಿವೆ.

ಶಕ್ತಿಶಾಲಿ ಗಣನಾಯಕ ಹಾಗೂ ಪುಕ್ಕಲ ಇಲಿಯ ಕಥೆಯಿದು!

ನಿಮ್ಮನ್ನು ನಿಮ್ಮ ಪ್ರೀತಿಪಾತ್ರರನ್ನು ನಿಮಗೆ ಸಂಬಂಧಿಸಿದ ಸ್ವತ್ತುಗಳನ್ನು ಕಾಪಾಡುವಂತೆ ಈ ಮಂತ್ರದ ಮೂಲಕ ಗಣಪನನ್ನು ಬೇಡಿಕೊಳ್ಳಬಹುದು. ಮೂರು ಬಾರಿ, ಹನ್ನೆರಡು, ಇಪ್ಪತ್ತೊಂದು, ಮೂವತ್ತು, ಐವತ್ತೊಂದು, ಸಾವಿರದ ಎಂಟು, ಒಂದು ಲಕ್ಷದ ಎಂಟು ಬಾರಿ ಹೀಗೆ ತಮ್ಮ ಆಯ್ಕೆಗೆ ಅನುಗುಣವಾಗಿ ಭಕ್ತರು ಗಣೇಶ ಕವಚವನ್ನು ಪಠಿಸುತ್ತಾರೆ.

ganesha

ಮೌಲಿ ಮಹೇಶಪುತ್ರೋ ಅವ್ಯಾಧಬಲಂ ಪಾತು ವಿನಾಯಕಂ

ತ್ರಿನೇತ್ರಾ ಪಾತು ಮಿ ನೇತ್ರೇ ಶೂರ್ಪಕರ್ನೋ ಅವಾತು ಶ್ರುತಿ

ಹೇರಂಭೋ ರಕ್ಷಾತು ಗೃಹನಾಮ್ ಮುಖಂ ಪಾತು ಗಜಾನನಹ

ಜಿವಾಹಂ ಪಾತು ಗಣೇಶೊ ಮಿ ಕಾಂತಂ ಶ್ರೀಕಾಂತ ವಲ್ಲಭ

ಸ್ಕಂದೊ ಮಹಾಬಲಾ ಪಾತು ವಿಘ್ನನಃ ಪಾತು ಮಿ ಭುಜೊ

ಕರೊ ಪರಶುಭೃತ್ ಪಾತು ಹೃದಯಂ ಸ್ಕಂದಪೂರ್ವಜಃ

ಮಧ್ಯಂ ಲಂಬೋಧರ ಪಾತು ನಾಭಿಂ ಸಿಂಧೂರ ಭೂಷಿತ

ಜಗನಮ್ ಪಾರ್ವತಿ ಪುತ್ರ ಸಕ್ತಿನಿ ಪಾತು ಪಾಶಾಭೃತ

ಜಾನುನಿ ಜಗತಂ ನಾತೊ ಜಂಗೇ ಮೂಶಿಕ ವಾಹನ

ಪಾದೊ ಪದ್ಮಾಸನಃ ಪಾತು ಪಾದೊ ದೈತ್ಯ ದರ್ಪಃ

ಏಕದಂತೊ ಅಗ್ರತಃ ಪಾತು ಪ್ರುಶ್ತೆ ಪಾತು ಗಣಾಧಿಪಃ

ಪಾಶ್ವರ್ಯಯೋ ಮೋದಕಹಾರೋ ದಿಗ್ವದಿಕ್ಷು ಚ ಸಿದ್ಧಿದಃ

ವಜ್ರಾತ್ ತಿಶ್‌ತತೊ ವಾಪಿ ಜಾಗ್ರತಃ ಸ್ವಪ್ತೊ ಅಶ್ನತಃ

ಚತುರ್ಥಿ ವಲ್ಲಭೊ ದೇವಾ ಪಾತು ಮಿ ಭುಕ್ತಿ ಮುಕ್ತಿದಃ

ಇದಂ ಪವಿತ್ರಂ ಸ್ತ್ರೋತ್ರಂ ಚ ಚತುರ್ಥಿಯಂ ನಿಯತಃ ಪಠೇತ್

ganesha

ಸಿಂಧೂರಾಕ್ತಾ ಕುಸುಮಯಾ ದೂರ್ವಾಯಾ ಪೂಜಾಯ ವಿಘ್ನನಪಂ

ರಾಜಾ ರಾಜಾಸುತೋ ರಾಜಪತ್ನಿ ಮಂತ್ರಿ ಕುಲಂ ಚಾಲಂ

ತಸ್ಯವಶ್ಯಂ ಭವೇದ್ ವಶ್ಯಂ ವಿಘ್ನರಾಜ ಪ್ರಸಾದತಾ

ಸ ಮಂತ್ರ ಯಂತ್ರಂ ಯಹಾ ಸ್ತ್ರೋತ್ರಂ ಕರೇ ಸಂಲಿಕಾಯಾ ಧಾರಾಯೇತ್

ಧನ ಧಾನ್ಯ ಸಮೃದ್ಧಿ ಸಯಾತ್ ತಸ್ಯಾ ನಾಹ ತ್ಯಾತ್ರಾ ಸಮಸ್ಯಹಾ

ಅಸ್ಯ ಮಂತ್ರಹ ಏಮ್ ಕ್ಲೀಂ ಹ್ರೀಂ ವಕ್ರತುಂಡಾಯಹಂ

ರಸಲಕ್ಷಂ ಸದಾಯ್‌ಕಾಗೃಹಾಯ್ ಶದಂಗನ್ಯಾಸ ಪೂರ್ವಕಂ

ಹತ್ವಾ ತದಂತೆ ವಿಧಿವತ್ ಅಷ್ಟ ದ್ರವ್ಯಂ ಪಾಯೊ ಗೃಹತಂ

ಯಮ್ ಯಮ್ ಕಾಮಾಮಂ ಅಭಿಧ್ಯಾನ್ ವಕ್ರತುಂಡ ಪ್ರಸಾಧತಃ

ಭೃಗು ಪ್ರಣೀತಂ ಯಹಾ ಸ್ತೋತ್ರಂ ಪಠೇತ್ ಭುವಿ ಮಾನವಃ

ಭವೀತ್ ವ್ಯಹಾತ್ ಐಶ್ವರ್ಯಾ ಸ ಗಣೇಶ ಪ್ರಸಾದತಃ

ಇತಿ ವಕ್ರತುಂಡ ಗಣೇಶ ಕವಚಂ ಸಂಪೂರ್ಣಂ

ಸಂಕಷ್ಟಿ ಚತುರ್ಥಿ ಹಬ್ಬದ ಮಹತ್ವ ತಿಳಿದಿದೆಯೇ?

English summary

Vakratunda Ganesha Kavacham

Lord Ganesha is one of the most popular Gods in the pantheon of Hindu Gods. Lord Ganesha, the elephant God, is perhaps one of the most powerful Gods there is. He is easy to please and he can be displeased just as easily.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more