For Quick Alerts
ALLOW NOTIFICATIONS  
For Daily Alerts

ಜ. 13ಕ್ಕೆ ವೈಕುಂಠ ಏಕಾದಶಿ: ಏಕಾದಶಿ ತಿಥಿ ಹಾಗೂ ಪಾರಣೆ ಸಮಯ ಯಾವಾಗ?

|

ಜನವರಿ 13ಕ್ಕೆ ವೈಕುಂಠ ಏಕಾದಶಿ. ಇದನ್ನು ಮುಕ್ಕೋಟಿ ಏಕಾದಶಿಯೆಂದೂ ಕರೆಯಲಾಗುವುದು. ಧರ್ನುಮಾಸದ ಈ ಏಕಾದಶಿಯನ್ನು ಸ್ವಗದ ಬಾಗಿಲಿನ ಏಕಾದಶಿಯೆಂದೂ ಕರೆಯಲಾಗುವುದು. ಅಂದ್ರೆ ಈ ಏಕಾದಶಿಯಂದು ವ್ರತ ನಿಯಮಗಳನ್ನು ಪಾಲಿಸಿದವರಿಗೆ ಸ್ವರ್ಗ ಪ್ರಾಪ್ತಿಯಾಗುವುದು ಎಂಬ ನಂಬಿಕೆ ಇದೆ.

ಏಕಾದಶಿ ತಿಥಿ ಸಮಯ

ಏಕಾದಶಿ ತಿಥಿ ಸಮಯ

ವೈಕುಂಠ ಏಕಾದಶಿಯನ್ನು ಜನವರಿ, 13 ಗುರುವಾರ ಆಚರಿಸಲಾಗುತ್ತಿದೆ.

ತಿಥಿ ಪ್ರಾರಂಭ : ಜನವರಿ 12, 2022 ಸಂಜೆ 04:49ಕ್ಕೆ

ತಿಥಿ ಮುಕ್ತಾಯ: ಜನವರಿ 13, 2022 ಸಂಜೆ 07:32ಕ್ಕೆ

ಉಪವಾಸ ಹಾಗೂ ಪಾರಣೆ ಸಮಯ

ಉಪವಾಸ ಹಾಗೂ ಪಾರಣೆ ಸಮಯ

ಏಕಾದಶಿಯಂದು ಉಪವಾಸವಿದ್ದು ಶ್ರೀ ವಿಷ್ಣುವಿನ ಆರಾಧನೆ ಮಾಡಿದರೆ ಒಳ್ಳೆಯದು. ಏಕಾದಶಿ ವ್ರತ ಒಂದು ದಿನ ಮೊದಲು ಪ್ರಾರಂಭವಾಗುವುದು, ಅಂದರೆ ಜನವರಿ 12, ಸಂಜೆಯಿಂದಲೇ ಉಪವಾಸ ಪ್ರಾರಂಭಿಸುತ್ತಾರೆ. ಏಕಾದಶಿ ತಿಥಿಯಂದು ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಸ್ನಾನ ಮಾಡಿ, ವಿಷ್ಣುವಿಗೆ ಹೂಗಳಿಂದ ಅಲಂಕರಿಸಿ, ವಿಷ್ಣು ಮಂತ್ರಗಳನ್ನು ಹೇಳುತ್ತಾ ಪೂಜೆ ಮಾಡಬೇಕು.

ಈ ದಿನ ಉಪವಾಸ ಮಾಡುವವರು ಹಾಲು, ಬಾಳೆ ಹಣ್ಣು ಸೇವಿಸಬಹುದು. ಉಪವಾಸ ಮಾಡುವವರು ಪಾರಣೆ ಸಮಯದವರೆಗೆ ಉಪವಾಸವಿದ್ದು, ನಂತರ ಮುರಿಯಬಹುದು.

ಉಪವಾಸ ಮುರಿಯಲು ಪಾರಣೆ ಸಮಯ

ಜನವರಿ 14, ಬೆಳಗ್ಗೆ 07:15ರಿಂದ 9:28ರವರೆಗೆ

ವೈಕುಂಠ ಏಕಾದಶಿ 2022ರ ಮಹತ್ವ

ವೈಕುಂಠ ಏಕಾದಶಿ 2022ರ ಮಹತ್ವ

ವೈಕುಂಠ ಏಕಾದಶಿಯಂದು ವೈಕುಂಠದ ದ್ವಾರ ತೆರೆಯುವುದು, ಭಕ್ತರು ಉಪವಾಸವಿದ್ದು ಶ್ರೀ ವಿಷ್ಣುವಿನ ಆರಾಧನೆ ಮಾಡಿದರೆ ಅವರಿಗೆ ಮೋಕ್ಷ ಸಿಗುತ್ತದೆ, ಅವರ ಬದುಕಿನಲ್ಲಿರುವ ಕಷ್ಟಗಳು ದೂರಾಗುವುದು.

English summary

Vaikuntha Ekadashi 2022 date, history, rituals and significance in kannada

Vaikuntha Ekadashi 2022 date, history, rituals and significance in kannada, have a look,
Story first published: Wednesday, January 12, 2022, 11:34 [IST]
X
Desktop Bottom Promotion