For Quick Alerts
ALLOW NOTIFICATIONS  
For Daily Alerts

ವೈಕುಂಠ ಏಕಾದಶಿ 2020: ದಿನಾಂಕ, ಮಹತ್ವ ಹಾಗೂ ಆಚರಣೆ

|

ಏಕಾದಶಿ ತಿಂಗಳಿನಲ್ಲಿ ಎರಡು ಬಾರಿ ಅಂದರೆ ವರ್ಷದಲ್ಲಿ 24 ಬಾರಿ ಇರುತ್ತದೆ. ಆದರೆ ಮಾರ್ಗಶಿರ ಮಾಸದಲ್ಲಿ (ಡಿಸೆಂಬರ್-ಜನವರಿ), ಶುಕ್ಲ ಪಕ್ಷದಲ್ಲಿ ಬರುವ ಏಕಾದಶಿಯು ತುಂಬಾ ವಿಶೇಷವಾಗಿದ್ದು ಅದನ್ನು ವೈಕುಂಠ ಏಕಾದಶಿ ಎಂದು ಆಚರಿಸಲಾಗುತ್ತದೆ.

ಸನಾತನ ಧರ್ಮಾನುಯಾಯಿಗಳು ವೈಕುಂಠ ಏಕಾದಶಿಯಂದು ವಿಷ್ಣುವನ್ನು ಶ್ರದ್ಧಾ ಭಕ್ತಿಯಿಂದ ಪೂಜಿಸುವ ಮಹತ್ವದ ದಿನವಾಗಿದೆ. ಪ್ರತಿ ಏಕಾದಶಿಗಳಿಗಿಂತಲೂ ವೈಕುಂಠ ಏಕಾದಶಿ ವಿಶೇಷವಾದದ್ದು. ವೈಕುಂಠ ಏಕಾದಶಿಯಂದು ಸ್ವರ್ಗದ ಬಾಗಿಲು ತೆರೆದಿರುತ್ತದೆ, ಈ ದಿನ ವಿಷ್ಣುವನ್ನು ಭಕ್ತಿಯಿಂದ ಪೂಜಿಸಿದರೆ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂಬ ಅಚಲ ನಂಬಿಕೆ ಭಕ್ತರಲ್ಲಿದೆ.

ವೈಕುಂಠ ಏಕಾದಶಿಯಂದು ವೈಕುಂಠ ದ್ವಾರವನ್ನು ಈ ದಿನ ತೆರೆಯುತ್ತಾರೆ. ವೈಕುಂಠ ಏಕಾದಶಿಯಂದು ವೈಕುಂಠ ದ್ವಾರವನ್ನು ಪ್ರವೇಶಿಸುವವರು ಆಧ್ಯಾತ್ಮಿಕ ಧಾಮವನ್ನು ಪಡೆಯುವರು ಎಂದು ಹೇಳಲಾಗುವುದು.

ವೈಕಂಠ ಏಕಾದಶಿ ಆಚರಣೆಯ ತಿಥಿ ಮತ್ತು ಪಾರಣೆ ಸಮಯ

ವೈಕಂಠ ಏಕಾದಶಿ ಆಚರಣೆಯ ತಿಥಿ ಮತ್ತು ಪಾರಣೆ ಸಮಯ

ಏಕಾದಶಿ ತಿಥಿ ಪ್ರಾರಂಭ: ಬೆಳಗ್ಗೆ 11:17 ಡಿಸೆಂಬರ್ 24

ಏಕಾದಶಿ ತಿಥಿ ಮುಕ್ತಾಯ: ರಾತ್ರಿ 1:54ಕ್ಕೆ ಡಿಸೆಂಬರ್ 25

ವೈಕುಂಠ-ಪಾರಣೆ: ಡಿಸೆಂಬರ್ 26ಕ್ಕೆ 8:30-8.45

ವೈಕುಂಠ ಏಕಾದಶಿ ಆಚರಣೆಯ ಬಗ್ಗೆ ಪೌರಾಣಿಕ ಕತೆ

ವೈಕುಂಠ ಏಕಾದಶಿ ಆಚರಣೆಯ ಬಗ್ಗೆ ಪೌರಾಣಿಕ ಕತೆ

ನಂದಗೋಪನು ಶ್ರೀಕೃಷ್ಣನ ಸಾನಿಧ್ಯದಲ್ಲಿ ಏಕಾದಶಿಯ ಹಾಗೂ ದ್ವಾದಶಿಯಂದು ಉಪವಾಸ, ಪಾರಣೆಗಳನ್ನು ತಪ್ಪದೆ ಆಚರಿಸುತ್ತಿದ್ದ, ಒಂದು ದಿನ ಏಕಾದಶಿ ಆಚರಿಸಿ ಮರುದಿನ ದ್ವಾದಶಿ ಬಹು ಸ್ವಲ್ಪಕಾಲ ಮಾತ್ರ ಇದ್ದುದ್ದರಿಂದ ಬೆಳಗು ಮೂಡುವ ಮುನ್ನ ಯಮುನಾ ನದಿಯಲ್ಲಿ ಸ್ನಾನಕ್ಕೆ ಇಳಿದನು. ಅದು ರಾಕ್ಷಸರ ಸಂಚಾರದ ಕಾಲವಾದ್ದರಿಂದ ವರುಣದೇವನ ಸೇವಕನಾದ ರಾಕ್ಷಸ, ನಂದಗೋಪನನ್ನು ವರುಣನ ಬಳಿಗೆ ಎಳೆದೊಯ್ದನು.

ಇತ್ತ ನಂದಗೋಪನು ಕಾಣದಿದ್ದಾಗ ಗೋಪಾಲಕುಲದಲ್ಲಿ ಆತಂಕ ಉಂಟಾಯಿತು. ಶ್ರೀಕೃಷ್ಣ ತಂದೆಯನ್ನು ಕರೆತರುವುದಾಗಿ ಅವರಿಗೆಲ್ಲಾ ಹೇಳಿ ವರುಣ ಇರುವ ಕಡೆಗೆ ಬಂದನು. ಆ ಲೋಕದಲ್ಲಿ ವರುಣನು ಶ್ರೀಕೃಷ್ಣನಿಗೆ ಭವ್ಯ ಸ್ವಾಗತ ನೀಡಿ, ತನ್ನ ಸೇವಕ ಮಾಡಿದ ತಪ್ಪನ್ನು ಕ್ಷಮಿಸುವಂತೆ ಹೇಳಿ, ನಂದಗೋಲನನ್ನು ಕಳುಹಿಸಿಕೊಟ್ಟನು.

ತನ್ನ ಮಗನಿಗೆ ವರುಣ ಭವ್ಯ ಸ್ವಾಗತ ಕೋರಿದ ಕತೆಯನ್ನು ಗೋಪಾಲಕುಲದಲ್ಲಿ ಬಣ್ಣಿಸಲಾರಂಭಿಸಿದನು.

ಶ್ರೀಕೃಷ್ಣ ಸ್ವರೂಪ ಅಲ್ಲಿದ್ದವರಿಗೆ ತಿಳಿಯಿತು. ಇದನ್ನರಿತ ಕೃಷ್ಣ, ಎಲ್ಲರಿಗೂ ಯಮುನಾ ನದಿಯಲ್ಲಿದ್ದ ಬ್ರಹ್ಮಕುಂಡವೆಂಬ ಮಡುವಿನಲ್ಲಿ ಮುಳುಗಿಬರುವಂತೆ ತಿಳಿಸಿದ, ಕೃಷ್ಣ ಹೇಳಿದಂತೆ ಮಾಡಿದ ಅವರಿಗೆ ವೈಕುಂಠದ ದರ್ಶನವಾಯಿತು. ಶ್ರೀಕೃಷ್ಣನ ಮಹಾತ್ಮೆ ಅವರಿಗೆಲ್ಲಾ ತಿಳಿಯಿತು. ಹೀಗೆ ವೈಕುಂಠ ಏಕಾದಶಿ ಆಚರಣೆ ಬಂತು.

ಇಸ್ಕಾನ್‌ನಲ್ಲಿ ವೈಕುಂಠ ಆಚರಣೆ

ಇಸ್ಕಾನ್‌ನಲ್ಲಿ ವೈಕುಂಠ ಆಚರಣೆ

ಬೆಳಗ್ಗೆ 3.00 ಗಂಟೆಗೆ ಭಕ್ತರು ಶ್ರೀ ವೆಂಕಟೇಶ್ವರ ಸುಪ್ರಭಾತ ಸ್ತೋತ್ರ ಹೇಳುತ್ತಾ ಶ್ರೀ ಶ್ರೀನಿವಾಸ ಗೋವಿಂದನಿಗೆ ಧೂಪ, ದೀಪ, ಅರ್ಘ್ಯ, ವಸ್ತ್ರ, ಪುಷ್ಪ ಮತ್ತು ಚಾಮರಗಳಿಂದ ಭವ್ಯವಾದ ಆರತಿಯನ್ನು ಅರ್ಪಿಸಲಾಗುವುದು.

ಮುಂಜಾನೆ 3.45 ಕ್ಕೆ: ಶ್ರೀ ಶ್ರೀನಿವಾಸ ಗೋವಿಂದ ಮೂಲ ವಿಗ್ರಹಕ್ಕೆ ಅಭಿಷೇಕ ಮಾಡಲಾಗುವುದು. ಭಗವಂತನಿಗೆ ಪಂಚಾಮೃತ, ಪಂಚಗವ್ಯ, ಹಣ್ಣುಗಳ ರಸ, ಗಿಡ ಮೂಲಿಕೆ ಜಲ ಮತ್ತು ಇತರ ಅನೇಕ ಶುಭ ವಸ್ತುಗಳಿಂದ ಅಭಿಷೇಕ ಮಾಡಲಾಗುವುದು.

ವೈಕುಂಠ ದ್ವಾರ ವಿಧಿಗಳು.

ಮುಂಜಾನೆ 5ಕ್ಕೆ ಪ್ರಧಾನ ದೇವಸ್ಥಾನದ ಅಂಗಳದ ಉತ್ತರದ ದ್ವಾರವನ್ನು ವೈಕುಂಠ ದ್ವಾರ ಎಂದು ಅಲಂಕರಿಸಲಾಗುತ್ತದೆ. ಲಕ್ಷ್ಮಿ ನಾರಾಯಣ ಅಲಂಕಾರದಲ್ಲಿ ಶ್ರೀ ರಾಧಾ ಕೃಷ್ಣಚಂದ್ರ ವಿಗ್ರಹಗಳನ್ನು ಮೆರವಣಿಗೆಯಲ್ಲಿ ವೈಕುಂಠ ದ್ವಾರಕ್ಕೆ ಕರೆದುಕೊಂಡು ಹೋಗಿ ಉಯ್ಯಾಲೆಯಲ್ಲಿ ಆಸೀನಗೊಳಿಸಲಾಗುವುದು. ಬೆಳಗ್ಗೆ 8 ಗಂಟೆಯ ಬಳಿಕ ದೇವರ ದರ್ಶನವಿರುತ್ತದೆ.

ಏಕಾದಶಿಯಂದು ಉಪವಾಸ

ಏಕಾದಶಿಯಂದು ಉಪವಾಸ

ಈ ದಿನದಂದು ಉಪವಾಸವಿದ್ದು, ವ್ರತಾಚರಣೆ ಮಾಡುವ ಸಂಪ್ರದಾಯವಿದೆ. ಇನ್ನೂ ಕೆಲವರು ಏಕಾದಶಿಯ ದಿನದಂದು ಮೌನ ವ್ರತಾಚರಣೆ ಮಾಡುತ್ತಾರೆ. ಮರುದಿನ ದ್ವಾದಶಿಯಂದು ತುಳಸಿ ನೀರು ಸೇವಿಸಿ ಉಪವಾಸ ಮುರಿಯುತ್ತಾರೆ.

ಕೆಲವವರು ಏಕಾದಶ ಹಣ್ಣು-ಹಂಪಲುಗಳನ್ನು ಸೇವಿಸುತ್ತಾರೆ. ಉಪವಾಸವಿದ್ದು ಸಂಕಲ್ಪ ಮಾಡಿದರೆ ಅದು ನೆರವೇರುವುದು.

English summary

Vaikunta Ekadashi 2020 - Date, Vrat Katha, Significance and Rituals

Here is Vaikunta ekadashi 2020 date, vrat katha, significance, ritulas read on.
Story first published: Thursday, December 24, 2020, 18:00 [IST]
X