For Quick Alerts
ALLOW NOTIFICATIONS  
For Daily Alerts

ಭಗವಾನ್ ಹನುಮಂತನ ಬಗೆ ನೀವು ತಿಳಿದಿರದ ಕುತೂಹಲಕಾರಿ ಸಂಗತಿಗಳು

|

ರಾಮ ಭಕ್ತ ಹನುಮಂತನನ್ನು ಬಜರಂಗಿ ಆಂಜನೇಯ ಮುಂತಾದ ಹೆಸರುಗಳಿಂದ ಪ್ರಪಂಚದಾದ್ಯಂತ ಭಕ್ತರು ಪೂಜಿಸುತ್ತಾರೆ. ಧೈರ್ಯ, ಸ್ಥೈರ್ಯಗಳಿಗೆ ಪ್ರಸಿದ್ಧಿಯನ್ನು ಪಡೆದುಕೊಂಡಿರುವ ಆಂಜನೇಯ ಸ್ವಾಮಿ ನಿಷ್ಠೆಗೆ ಹೆಸರುವಾಸಿಯಾದವರು. ರಾಮ ಸೀತೆಯರನ್ನು ತಮ್ಮ ಹೃದಯದಲ್ಲಿಟ್ಟು ಪೂಜಿಸುವಷ್ಟು ಕಟ್ಟಾ ಭಕ್ತರಾಗಿದ್ದಾರೆ. ಹನುಮಂತನಿಗೆ ತನ್ನ ಸಾಹಸಗಳಿಂದ ಹೋದಲ್ಲೆಲ್ಲಾ ಹಲವಾರು ಹೆಸರುಗಳಿವೆ. ಮಾರುತಿ, ಪವನ ಪುತ್ರ, ಆಂಜನೀಪುತ್ರ ಹೀಗೆ ಭಕ್ತರ ಭಕ್ತಿಗೆ ಅನುಗುಣವಾಗಿ ಕರೆಯಲ್ಪಟ್ಟ ಹೆಸರುಗಳಿಂದ ಹನುಮಾನ್ ಪ್ರಸಿದ್ಧರು.

ಹನುಮಾನ್ ಚಾಲೀಸಾ ಪಠಿಸಿ ಕಷ್ಟಗಳಿಂದ ಮುಕ್ತಿ ಪಡೆದುಕೊಳ್ಳಿ

ರಾಮಾಯಣದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದ ಹನುಮಂತನು ತಮ್ಮ ವಾನರ ಸೇನೆಯಿಂದ ಪರಾಕ್ರಮಗಳಿಂದ ಯುದ್ಧದ ಸಮಯದಲ್ಲಿ ಹೆಚ್ಚು ಸ್ಮರಣೀಯರಾಗಿದ್ದಾರೆ. ಹಿಂದೂ ಮಹಾನ್ ಗ್ರಂಥಗಳಾದ ಮಹಾಭಾರತ ಮತ್ತು ಅಗ್ನಿ ಪುರಾಣದಲ್ಲೂ ಹನುಮಂತನ ಹೊಗಳಿಕೆಯನ್ನು ಮಾಡಲಾಗಿದೆ. ನಾವು ಇಂದಿನ ಲೇಖನದಲ್ಲಿ ನೀವು ತಿಳಿಯದೇ ಇರುವ ಕೆಲವೊಂದು ಸಂಗತಿಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದು ಈ ಅಂಶಗಳು ನಿಮ್ಮನ್ನು ಕುತೂಹಲದ ಕೂಪಕ್ಕೆ ತಳ್ಳಲಿದೆ....

ಹನುಮನ ಮೂರ್ತಿ ಏಕೆ ಕೆಂಪಗಿದೆ

ಹನುಮನ ಮೂರ್ತಿ ಏಕೆ ಕೆಂಪಗಿದೆ

ಹನುಮನು ಸಿಂಧೂರವನ್ನು ಮೈತುಂಬಾ ಹಚ್ಚಿಕೊಂಡಿರುವುದರಿಂದ ಅವರ ಮೂರ್ತಿಯು ಕೆಂಪಗಿದೆ. ಇದರ ಹಿಂದೆ ಒಂದು ಕಾರಣ ಕೂಡ ಇದೆ. ಸೀತಾಮಾತೆಯು ತನ್ನ ಹಣೆಗೆ ಸಿಂಧೂರವನ್ನು ಹಚ್ಚಿಕೊಳ್ಳುತ್ತಿರುವುದನ್ನು ಒಮ್ಮೆ ನೋಡಿದ ಹನುಮನು ದೇವಿಯನ್ನು ಇದೇಕೆ ಎಂದು ಕೇಳುತ್ತಾರೆ. ರಾಮನ ಮೇಲಿನ ಪ್ರೀತಿ ಮತ್ತು ಗೌರವ ಹಾಗೂ ಮಾಂಗಲ್ಯದ ಸಂಕೇತವಾಗಿ ಸಿಂಧೂರ ಇರುವುದರಿಂದ ಹಣೆಗೆ ಹಚ್ಚಿಕೊಳ್ಳುತ್ತಿರುವುದಾಗಿ ಆಕೆ ಹೇಳುತ್ತಾರೆ. ರಾಮ ಭಕ್ತ ಹನುಮಂತನು ತನ್ನ ಮೈ ತುಂಬಾ ಸಿಂಧೂರವನ್ನು ಬಳಿದುಕೊಂಡು ರಾಮನ ಮೇಲಿನ ಪ್ರೀತಿ, ಆದರವನ್ನು ಈ ಮೂಲಕ ತೋರಿಸುತ್ತಾರೆ. ಇದನ್ನರಿತ ರಾಮನು ಹನುಮನ ಭಕ್ತಿಗೆ ಮೆಚ್ಚಿ ಅವರಿಗೆ ವರವನ್ನು ನೀಡುತ್ತಾರೆ. ಯಾರು ಹನುಮನನ್ನು ಸಿಂಧೂರವನ್ನು ಹಚ್ಚಿ ಪೂಜಿಸುತ್ತಾರೋ ಅವರಿಗೆ ಯಾವುದೇ ಕಷ್ಟಗಳು ಇರುವುದಿಲ್ಲ ಮತ್ತು ಆ ಕಷ್ಟಗಳು ಮಂಜಿನಂತೆ ಕರಗಿ ಹೋಗುತ್ತದೆ ಎಂದಾಗಿದೆ.

 ಹನುಮನಿಗೆ ಒಬ್ಬ ಪುತ್ರರಿದ್ದಾರೆ

ಹನುಮನಿಗೆ ಒಬ್ಬ ಪುತ್ರರಿದ್ದಾರೆ

ಲಂಕೆಯನ್ನು ದಹಿಸಿದ ನಂತರ ತನ್ನ ದೇಹವನ್ನು ತಂಪಾಗಿಸಲು ಹನುಮನು ಕೆರೆಗಿಳಿದು ದೇಹವನ್ನು ತಂಪು ಮಾಡಿ ಕೊಳ್ಳುತ್ತಾರೆ. ಅವರ ಬೆವರನ್ನು ನೀರಿನಲ್ಲಿರುವ ಮೀನುಗಳು ಸೇವಿಸುತ್ತವೆ ಇದರಿಂದ ಅವುಗಳು ಮಕಧ್ವಜನಿಗೆ ಜನ್ಮ ನೀಡಲು ಕಾರಣವಾಗುತ್ತದೆ. ಹೀಗೆ ಬ್ರಹ್ಮಚಾರಿಯಾಗಿದ್ದು ಕೂಡ ಹನುಮನು ಪುತ್ರನನ್ನು ಹೊಂದಿದ್ದಾರೆ.

ಹನುಮನಿಗೆ ಮರಣವನ್ನು ಆದೇಶಿಸಿದ ಶ್ರೀರಾಮ

ಹನುಮನಿಗೆ ಮರಣವನ್ನು ಆದೇಶಿಸಿದ ಶ್ರೀರಾಮ

ನಾರದರು ಒಮ್ಮೆ ಹನುಮನ್ನು ಸಮೀಪಿಸಿ ವಿಶ್ವಾಮಿತ್ರನನ್ನು ಬಿಟ್ಟು ಮತ್ತೆಲ್ಲಾ ಋಷಿಗಳನ್ನು ವಂದಿಸಲು ಹೇಳುತ್ತಾರೆ. ಏಕೆಂದರೆ ವಿಶ್ವಾಮಿತ್ರನು ಹಿಂದೆ ರಾಜನಾಗಿದ್ದು ನಂತರ ಋಷಿಯಾದವರು. ಹನುಮನು ನಾರದ ಮಾತನ್ನು ತಳ್ಳಿಹಾಕದೇ ಹಾಗೆಯೇ ನಡೆಯುತ್ತಾರೆ. ನಾರದರು ಈ ವಿಷಯವನ್ನು ವಿಶ್ವಾಮಿತ್ರರ ಗಮನಕ್ಕೆ ತರುತ್ತಾರೆ. ಇದನ್ನರಿತ ವಿಶ್ವಾಮಿತ್ರರು ರಾಮನಿಗೆ ಹನುಮಂತನಿಗೆ ಮರಣ ಶಿಕ್ಷೆಯನ್ನು ನೀಡಲು ಹೇಳುತ್ತಾರೆ. ಗುರುವಿನ ಮಾತನ್ನು ತಳ್ಳಿಹಾಕದ ರಾಮನು ಅಂತೆಯೇ ಬಾಣಗಳಿಂದ ಹನುಮಂತನು ಸಾಯಬೇಕೆಂದು ಆದೇಶಿಸುತ್ತಾರೆ. ತದನಂತರ ವಿಷಯವನ್ನರಿತ ನಾರದರು ವಿಶ್ವಾಮಿತ್ರರ ಬಳಿ ಸಾರಿ ನಡೆದ ವಿಚಾರವನ್ನು ತಿಳಿಸುತ್ತಾರೆ.

ಸೀತಾ ಮಾತೆಯ ಬಹುಮಾನವನ್ನು ತಿರಸ್ಕರಿಸಿದ ಹನುಮಂತ

ಸೀತಾ ಮಾತೆಯ ಬಹುಮಾನವನ್ನು ತಿರಸ್ಕರಿಸಿದ ಹನುಮಂತ

ಒಂದು ದಿನ ಸೀತಾ ಮಾತೆಯು ಹನಮಂತನಿಗೆ ಬಿಳಿ ಮುತ್ತಿನ ಹಾರವನ್ನು ನೀಡುತ್ತಾರೆ. ಆದರೆ ಹಾರವು ರಾಮನ ಚಿತ್ರ ಅಥವಾ ಹೆಸರನ್ನು ಹೊಂದದೇ ಇರುವುದರಿಂದಾಗಿ ಹನುಮಂತನು ಅದನ್ನು ತಿರಸ್ಕರಿಸುತ್ತಾರೆ. ರಾಮನ ಮೇಲೆ ಹನುಮನ ಭಕ್ತಿ ಅದಮ್ಯವಾಗಿತ್ತು ಮತ್ತು ಅದಕ್ಕೆ ಬೆಲೆ ಕಟ್ಟಲು ಆಗುವುದಿಲ್ಲ. ಇದನ್ನರಿತ ರಾಮನು ಹನುಮಂತನಿಗೆ ಉತ್ತಮ ಆರೋಗ್ಯವನ್ನು ಆಶೀರ್ವದಿಸುತ್ತಾರೆ.

ಹನುಮನಿಗೆ 108 ಹೆಸರುಗಳಿವೆ

ಹನುಮನಿಗೆ 108 ಹೆಸರುಗಳಿವೆ

ನಾವಿಲ್ಲಿ 108 ವಿಭಿನ್ನ ಭಾಷೆಗಳ ಬಗ್ಗೆ ಮಾತನಾಡುತ್ತಿಲ್ಲ. ಸಂಸ್ಕೃತ ಭಾಷೆಯಲ್ಲಿದೆಯೇ ಹನುಮಂತನು 108 ಹೆಸರುಗಳನ್ನು ಹೊಂದಿದ್ದಾರೆ. ಹನುಮಂತನು ತನ್ನ ಭಕ್ತರಿಗೆ ಎಷ್ಟು ಪ್ರಿಯರಾಗಿದ್ದಾರೆ ಎಂಬುದನ್ನು ನಾವಿಲ್ಲಿ ತಿಳಿದುಕೊಳ್ಳಬಹುದಾಗಿದೆ.

ಹನುಮಂತ ತಾವೇ ಸ್ವತಃ ರಾಮಾಯಣವನ್ನು ಬರೆದಿದ್ದಾರೆ

ಹನುಮಂತ ತಾವೇ ಸ್ವತಃ ರಾಮಾಯಣವನ್ನು ಬರೆದಿದ್ದಾರೆ

ರಾವಣನೊಂದಿಗೆ ಯುದ್ಧ ನಡೆಸಿ ಗೆಲುವನ್ನು ಪಡೆದುಕೊಂಡ ನಂತರ ಇದನ್ನು ಕುರಿತು ಬರೆಯಲು ಹನುಮಂತನು ಹಿಮಾಲಯಕ್ಕೆ ಹೋಗಿ ಬರವಣಿಗೆಯನ್ನು ಆರಂಭಿಸುತ್ತಾರೆ. ಹಿಮಾಲಯದ ಗೋಡೆಗಳಲ್ಲಿ ಅವರು ಸ್ವತಃ ರಾಮನ ಬಗ್ಗೆ ಮಾಹಿತಿ ಬರೆಯುತ್ತಾರೆ. ಇದೇ ಸಮಯದಲ್ಲಿ ಮಹರ್ಷಿ ವಾಲ್ಮೀಕಿ ಕೂಡ ರಾಮಾಯಣವನ್ನು ಬರೆಯುತ್ತಿದ್ದರು. ಇಬ್ಬರೂ ಮುಗಿಸಿದ ನಂತರ ವಾಲ್ಮೀಕಿಗೆ ತಮಗಿಂತ ಹನುಮ ಬರೆದ ರಾಮಾಯಣ ಚೆನ್ನಾಗಿದೆ ಎಂದು ತಿಳಿದು ಬೇಸರಗೊಳ್ಳುತ್ತಾರೆ. ಕರುಣಾಮಯಿಯಾದ ಹನುಮಂತನು ವಾಲ್ಮೀಕಿಯನ್ನು ಖುಷಿಪಡಿಸಲು ತಾವು ಬರೆದ ರಾಮಾಯಣವನ್ನು ತ್ಯಜಿಸುತ್ತಾರೆ. ತನ್ನ ಜೀವಮಾನದಲ್ಲಿಯೇ ಹನುಮನು ಮಾಡಿದ ಅತ್ಯಮೂಲ್ಯ ತ್ಯಾಗ ಇದಾಗಿದೆ. ಇದರಿಂದ ಅವರ ಗೌರವ ಇನ್ನಷ್ಟು ಇಮ್ಮಡಿಯಾಯಿತು.

English summary

unknown-stories-of-lord-hanuman

India is a land of epics and each of the epics have hundreds of unknown stories associated with them. One of the most popular characters in the Hindu mythology is that of Lord Hanuman. Known for his supreme devotion to Lord Rama, Hanuman was somebody who was known for his exemplary courage and valor. So, read on to improve your knowledge about Lord Hanuman with some of the lesser known facts on him.
X
Desktop Bottom Promotion