For Quick Alerts
ALLOW NOTIFICATIONS  
For Daily Alerts

ಕುಂಭ ಕರ್ಣನ ಬಗ್ಗೆ ಈವರೆಗೂ ತಿಳಿದಿರದ 10 ಸಂಗತಿಗಳು

|

ಕುಂಭಕರ್ಣ ಎನ್ನುವ ಹೆಸರು ಕೇಳಿದ ತಕ್ಷಣ ನೆನಪಾಗುವುದು ಅತಿಯಾದ ನಿದ್ರಾವಸ್ಥೆಯ ವ್ಯಕ್ತಿ ಎನ್ನುವುದು. ಮಕ್ಕಳಿಗೆ ಹೇಳುವ ಕಥೆಗಳಲ್ಲಿ ಕುಂಭಕರ್ಣನ ಕಥೆಯೂ ಒಂದು. ಕುಂಭಕರ್ಣ ಪುರಾಣ ಇತಿಹಾಸದಲ್ಲಿ ಬರುವ ಒಂದು ಆಕ್ತಿದಾಯಕ ಪಾತ್ರವೂ ಹೌದು. ಕುಂಭಕರ್ಣನು ಹೆಚ್ಚು ಸಂಕೀರ್ಣ ವ್ಯಕ್ತಿಯೂ ಹೌದು. ರಾಕ್ಷಸ ಕುಲದವನಾದ ಇವನು ರಾವಣನ ಕಿರಿಯ ಸಹೋದರ. ದೈತ್ಯಾಕಾರದ ದೇಹ ಗಾತ್ರ ಹಾಗೂ ಅತಿಯಾದ ಹಸಿವನ್ನು ಹೊಂದಿದ್ದ ವ್ಯಕ್ತಿ. ಇವನಿಗೆ ಹಸಿವಾದರೆ ಅದೊಂದು ಭಯಾನಕ ಸನ್ನಿವೇಶವಾಗುತ್ತಿತ್ತು. ಕೆಲವೊಮ್ಮೆ ಅವನ ವರ್ತನೆಗಳು ಅತ್ಯುತ್ತಮವಾಗಿರುತ್ತಿತ್ತು.

ತನ್ನ ಶಕ್ತಿಯನ್ನು ತೋರಿಸಲು ಹಾಗೂ ಇತರರಲ್ಲಿ ತನ್ನ ಬಗ್ಗೆ ಭಯ ಹುಟ್ಟಿಸಬೇಕು ಎನ್ನುವ ಕಾರಣಕ್ಕೆ ಸನ್ಯಾಸಿಗಳನ್ನು ಕೊಂದು ತಿನ್ನುತ್ತಿದ್ದನು. ಆದರೆ ಅವನನ್ನು ಧರ್ಮನಿಷ್ಠ, ಬುದ್ಧಿವಂತ ಮತ್ತು ಧೈರ್ಯಶಾಲಿ ಎಂದು ಪರಿಗಣಿಸಲಾಗುವುದು. ಕೆಲವು ಪುರಾಣ ಕಥೆಗಳ ಪ್ರಕಾರ ಕುಂಭ ಕರ್ಣನನ್ನು ನೋಡಿ ಇಂದ್ರನು ಅಸೂಯೆಗೆ ಒಳಗಾಗಿದ್ದನು ಎನ್ನಲಾಗುತ್ತದೆ. ಇವನು ಅತಿರೇಕದ ಹಸಿವು ಮತ್ತು ಸತ್ತಂತೆ ಭಾಸವಾಗುವ ನಿದ್ರೆಯ ಪರಿಯನ್ನು ಹೊಂದಿರುತ್ತಿದ್ದ. ಈ ರಾಕ್ಷಸನ ಕುರಿತು ಇರುವ ಕಥೆಗಳು ಅತ್ಯಂತ ಭಯಾನಕ ಹಾಗೂ ಕುತೂಹಲವನ್ನು ಮೂಡಿಸುತ್ತವೆ.

ಪುರಾಣದ ಕಥೆಯೊಂದಿಗೆ ಕೆಲವು ಜೀವನದ ನೀತಿಯನ್ನು ತಿಳಿಸುವ ಧಾರ್ಮಿಕ ಹಿನ್ನೆಲೆಗಳು ಅತ್ಯಂತ ಮಹತ್ವವಾದದ್ದು. ಅಂತಹ ಕಥೆಗಳು ಹಾಗೂ ಕಥೆಯಲ್ಲಿ ಬರುವ ಪಾತ್ರಗಳು ಗಮನಾರ್ಹವಾಗಿರುತ್ತವೆ. ಜೀವನದ ಕೆಲವು ಮಹತ್ವದ ಸಂಗತಿಯನ್ನು ತಿಳಿಸಿಕೊಡುವ ಕಥೆಗಳಲ್ಲಿ ಕುಂಭಕರ್ಣನ ಕಥೆಗಳೂ ಸಹ ಒಂದು. ಅಂತಹ ಮಹತ್ವದ ಪಾತ್ರವಾದ ಕುಂಭಕರ್ಣನ ಬಗ್ಗೆ ಸಾಕಷ್ಟು ವಿಷಯಗಳು ನಮಗೆ ತಿಳಿದಿಲ್ಲ. ಅಂತಹ ನಂಬಲು ಅಸಾಧ್ಯವಾದಂತಹ ಸಂಗತಿಗಳನ್ನು ಲೇಖನದ ಮುಂದಿನ ಭಾಗ ನಿಮಗೆ ತಿಳಿಸಿಕೊಡುತ್ತದೆ.

1. ಇಂದ್ರನು ಕರ್ಣನ ಬಗ್ಗೆ ಅಸೂಯೆಗೆ ಒಳಗಾದನು

1. ಇಂದ್ರನು ಕರ್ಣನ ಬಗ್ಗೆ ಅಸೂಯೆಗೆ ಒಳಗಾದನು

ಪ್ರಾಚೀನ ಭಾರತೀಯ ಮಹಾಕಾವ್ಯವಾದ ರಾಮಾಯಣದ ಪ್ರಕಾರ ಸ್ವರ್ಗ ಲೋಕದ ಅಧಿಪತಿಯಾದ ಇಂದ್ರನು ಕುಂಭಕರ್ಣನ ಬಗ್ಗೆ ಅಸೂಯೆಗೆ ಒಳಗಾಗಿದ್ದನು. ಏಕೆಂದರೆ ಕುಂಭಕರ್ಣನು ಅಧಿಕಾರದಲ್ಲಿ ಸರ್ವೋಚ್ಚನು, ಅಸಾಧಾರಣ ಜ್ಞಾನ ಉಳ್ಳವನು ಮತ್ತು ನೀತಿವಂತನು ಆಗಿದ್ದನು. ಅವನು ಕೈಗೊಳ್ಳುವ ನಿರ್ಧಾರಗಳು ಹಾಗೂ ವಿಷಯಗಳು ವಸ್ತುನಿಷ್ಟತೆಯಿಂದ ಕೂಡಿರುತ್ತಿದ್ದವು.

2. ಬ್ರಹ್ಮ ಯಜ್ಞ ಮತ್ತು ಕುಂಭಕರ್ಣನ ವರ

2. ಬ್ರಹ್ಮ ಯಜ್ಞ ಮತ್ತು ಕುಂಭಕರ್ಣನ ವರ

ದಂತ ಕಥೆಯ ಪ್ರಕಾರ, ರಾವಣನಿಗೆ ಅವನ ತಂದೆ ವಿಶ್ರವನು ತನ್ನ ಅಣ್ಣ ಕುಬೇರನಂತೆ ದೇವರಿಂದ ಸಂಪತ್ತಿನಲ್ಲಿ ಉತ್ತಮ ಸ್ಥಾನವನ್ನು ಪಡೆಯಬೇಕು ಎಂದಿದ್ದನು. ಈ ನಿಟ್ಟಿನಲ್ಲಿಯೇ ರಾವಣನು ತನ್ನ ಸಹೋದರರಾದ ವಿಭೀಷಣ ಮತ್ತು ಕುಂಭಕರ್ಣನಲ್ಲಿ ಬ್ರಹ್ಮನನ್ನು ಮೆಚ್ಚಿಸುವಂತೆ ದೀರ್ಘಕಾಲದ ತೀವ್ರವಾದ ಧ್ಯಾನ(ತಪಸ್ಸನ್ನು)ಮಾಡಲು ಹೇಳಿದನು. ಅಣ್ಣನ ಆಜ್ಞೆಯಂತೆ ಕುಂಭಕರ್ಣನು ದೀರ್ಘ ಸಮಯಗಳ ಕಾಲ ತಪಸ್ಸನ್ನು ಮಾಡಿ ಬ್ರಹ್ಮನನ್ನು ಮೆಚ್ಚಿಸಿದನು.ಇಂದ್ರ ದೇವನು ಸರಸ್ವತಿಯಲ್ಲಿ ಕುಂಭಕರ್ಣನ ನಾಲಿಗೆಯನ್ನು ಕಟ್ಟಿಹಾಕಬೇಕು ಎಂದು ಕೇಳಿಕೊಂಡಿದ್ದನು. ಈ ಹಿನ್ನೆಲೆಯಲ್ಲಿಯೇ ದೇವಿ ಸರಸ್ವತಿಯು ಕುಂಭ ಕರ್ಣನ ನಾಲಿಗೆಯನ್ನು ಕಟ್ಟಿ ಹಾಕಿದ್ದಳು. ಹಾಗಾಗಿ ಕುಂಭ ಕರ್ಣ ಬ್ರಹ್ಮನಲ್ಲಿ ವರ ಕೇಳುವಾಗ ಇಂದ್ರಾಸನ (ಇಂದ್ರನ ಸಿಂಹಾಸನ)ಎಂದು ಕೇಳುವ ಬದಲು ನಿದ್ರಾಸನ (ಮಲಗುವ ಆಸನ) ಎಂದು ಹೇಳಿದನು. ಅವನು ನಿರ್ದೇವತ್ವಂ (ದೇವತೆಗಳ ಸರ್ವನಾಶ) ಕೇಳಲು ಉದ್ದೇಶಿಸಿದ್ದನು. ನಾಲಿಗೆಯನ್ನು ಕಟ್ಟಿ ಹಾಕಿದ್ದರಿಂದ ನಿದ್ರಾವತ್ವಾಮ್(ನಿದ್ರೆ) ಯನ್ನು ಕೇಳಿಕೊಂಡನು. ಅಂತೆಯೇ ಬ್ರಹ್ಮನು ಅವನ ಆಣತಿಯಂತೆ ಆಶೀರ್ವದಿಸಿದನು.

ಕುಂಭಕರ್ಣನು ದೇವತೆಗಳ ರಾಜನಾದರೆ ಸ್ವರ್ಗಲೋಕದಲ್ಲಿ ತೊಂದರೆಗಳು ಉಂಟಾಗುತ್ತವೆ. ಎನ್ನುವ ಉದ್ದೇಶದಿಂದ ಅವನ ನಾಲಿಗೆಯನ್ನು ಸರಸ್ವತಿ ದೇವಿಯು ಇಂದ್ರನ ಕೋರಿಕೆಯಂತೆ ಕುಂಭಕರ್ಣನ ನಾಲಿಗೆಯನ್ನು ಕಟ್ಟಿಹಾಕಿದ್ದಳು.

ಆದರೆ ಅವನ ಸಹೋದರ ರಾವಣನು ಬ್ರಹ್ಮನಲ್ಲಿ ಅವನಿಗೆ ಸಿಕ್ಕಿರುವುದು ವರವಲ್ಲ, ಶಾಪ. ಆ ಶಾಪದಿಂದ ಮುಕ್ತಿ ಗೊಳಿಸಬೇಕು ಎಂದು ಕೇಳಿಕೊಂಡನು. ಆಗ ಕುಂಭಕರ್ಣನು ಆರು ತಿಂಗಳು ನಿದ್ರೆ ಹಾಗೂ ಆರು ತಿಂಗಳು ಎಚ್ಚರದಿಂದ ಇರುವ ಶಕ್ತಿಯನ್ನು ಪಡೆದುಕೊಂಡನು. ಹಾಗಾಗಿ ಕುಂಭಕರ್ಣ ಆರು ತಿಂಗಳ ಕಾಲ ಮಲಗಿದ್ದನು ಮತ್ತು ಅವನು ಎದ್ದಾಗ ಅತಿಯಾದ ಹಸಿವಿನಿಂದ ಬಳಲುತ್ತಿದ್ದ. ಅಂತಹ ಸಂದರ್ಭದಲ್ಲಿ ತನ್ನ ಸುತ್ತಮುತ್ತಲಲ್ಲಿ ಇರುವ ಮನುಷ್ಯರನ್ನು ಸಹ ತಿನ್ನುತ್ತಿದ್ದನು ಎನ್ನಲಾಗುವುದು.

3. ಕುಂಭಕರ್ಣನ ಹಸಿವಿನ ದಾಹ ಆಘಾತಕಾರಿ ರೂಪದ್ದು

3. ಕುಂಭಕರ್ಣನ ಹಸಿವಿನ ದಾಹ ಆಘಾತಕಾರಿ ರೂಪದ್ದು

ಪುರಾಣ ಇತಿಹಾಸಗಳ ಪ್ರಕಾರ ಕುಂಭಕರ್ಣನು ಅತ್ಯಂತ ಶಕ್ತಿಶಾಲಿ. ಇಡೀ ಜಗತ್ತಿನಲ್ಲಿ ಅವನನ್ನು ಸೋಲಿಸಲು ಹಾಗೂ ಸವಾಲು ಒಡ್ಡಲು ಸಾಧ್ಯವಾಗುತ್ತಿರಲಿಲ್ಲ. ಅವನು ಒಂದು ದಿನ ಎಚ್ಚರವಾಗಿದ್ದರೆ ದಿನವಿಡೀ ತಿನ್ನುತ್ತಲೇ ಇರುತ್ತಿದ್ದ. ಊಟವನ್ನು ಮದ್ಯಸಾರದೊಂದಿಗೆ ಮುಗಿಸುತ್ತಿದ್ದನು. ನಂತರ ನಿದ್ರೆಗೆ ಜಾರಿದರೆ 6 ತಿಂಗಳುಗಳ ಕಾಲ ಮಲಗುತ್ತಿದ್ದನು. ವಾಲ್ಮೀಕಿ ರಾಮಾಯಣದ ಪ್ರಕಾರ ಒಂದು ಹಂತದಲ್ಲಿ ಕುಂಭಕರ್ಣನು ನಿದ್ರೆಯಿಂದ ಎಚ್ಚರಗೊಂಡ ಬಳಿಕ 2000 ಕೊಡ ಅಥವಾ ಹೂಜಿ ನೀರನ್ನು ಕುಡಿಯುತ್ತಿದ್ದ. ಅವನು ಎಚ್ಚರಗೊಂಡಾಗ ಅವನ ಸುತ್ತಲೂ ಅವ್ಯವಸ್ಥೆ ಹಾಗೂ ವಿನಾಶಗಳು ಸಂಭವಿಸುತ್ತಿದ್ದವು.

4. ಕುಂಭ ಕರ್ಣನು ಯುದ್ಧದಲ್ಲಿ ಹೋರಾಡಲು ಎಚ್ಚರಗೊಂಡನು

4. ಕುಂಭ ಕರ್ಣನು ಯುದ್ಧದಲ್ಲಿ ಹೋರಾಡಲು ಎಚ್ಚರಗೊಂಡನು

ರಾಮ ಮತ್ತು ರಾವಣನ ನಡುವಿನ ಯುದ್ಧ ಪ್ರಾರಂಭವಾದಾಗ ವಾನರ ಸೈನ್ಯವು ರಾವಣನ ಸೈನ್ಯದ ಅನೇಕ ಸೈನಿಕರನ್ನು ಕೊಂದಿದ್ದರು. ಆಗ ರಾವಣನಿಗೆ ತನ್ನ ಸಹೋದರನ ಸಹಾಯ ಅಗತ್ಯವಾಗಿತ್ತು. ಹಾಗಾಗಿ ಕುಂಭಕರ್ಣನನ್ನು ಎಬ್ಬಿಸುವ ಪ್ರಯತ್ನವನ್ನು ಮಾಡಿದನು. ಕುಂಭಕರ್ಣನನ್ನು ಎಬ್ಬಿಸುವುದು ಅಷ್ಟು ಸುಲಭದ ಸಂಗತಿಯಾಗಿರಲಿಲ್ಲ. ಆನೆಗಳ ಸೈನ್ಯದ ನಡಿಗೆಯ ಸಹಾಯದಿಂದ ಅವನನ್ನು ಎಚ್ಚರ ಗೊಳಿಸಿದರು.

5. ರಾವಣನು ಸೀತೆಯನ್ನು ಅಪಹರಿಸಿರುವುದು ಕುಂಭಕರ್ಣನಿಗೆ ಬೇಸರವನ್ನುಂಟುಮಾಡಿತ್ತು

5. ರಾವಣನು ಸೀತೆಯನ್ನು ಅಪಹರಿಸಿರುವುದು ಕುಂಭಕರ್ಣನಿಗೆ ಬೇಸರವನ್ನುಂಟುಮಾಡಿತ್ತು

ರಾವಣನು ಕುಂಭಕರ್ಣನಿಗೆ ಎಚ್ಚರಗೊಳಿಸಿದ ಬಳಿಕ ರಾವಣ ಮತ್ತು ರಾಮನ ನಡುವಿನ ಯುದ್ಧ ಸಂಗತಿಯನ್ನು ತಿಳಿಸಲಾಯಿತು. ಆಗ ಕುಂಭ ಕರ್ಣನು ರಾವಣನಿಗೆ ನೀನು ಮಾಡಿರುವುದು ತಪ್ಪು ಎಂದು ಮನವರಿಕೆ ಮಾಡಲು ಪ್ರಯತ್ನಿಸಿದನು. ಆದರೆ ರಾವಣನು ತಾನು ಮಾಡಿದ್ದು ಸರಿಯಾಗಿದೆ ಎಂದು ಸಮರ್ಥಿಸಿಕೊಂಡನು. ಆಗ ಕುಂಭಕರ್ಣನು "ಜಗತ್ ಜನನಿಯನ್ನು ಅಪಹರಿಸಿದ ನಂತರ, ನೀವು ನಿಮಗೆ ಸಂತೋಷವನ್ನು ನಿರೀಕ್ಷಿಸಿದರೆ, ನಿಮ್ಮಷ್ಟು ಮೂರ್ಖರು ಯಾರು ಇಲ್ಲ,'' ಎಂದು ಹೇಳಿದರು.

6. ಅಪಹರಿಸಿದ ತಪ್ಪಿಗೆ ರಾಮನಲ್ಲಿ ಕ್ಷಮೆ ಕೇಳು ಎಂದು ಕುಂಭಕರ್ಣನು ರಾವಣನಿಗೆ ಹೇಳಿದ್ದನು

6. ಅಪಹರಿಸಿದ ತಪ್ಪಿಗೆ ರಾಮನಲ್ಲಿ ಕ್ಷಮೆ ಕೇಳು ಎಂದು ಕುಂಭಕರ್ಣನು ರಾವಣನಿಗೆ ಹೇಳಿದ್ದನು

ರಾಮನೊಂದಿಗೆ ಯುದ್ಧ ಮಾಡಿದರೆ ಯುದ್ಧದ ಬಳಿಕ ಉಂಟಾಗುವ ಪರಿಣಾಮಗಳ ಬಗ್ಗೆ ರಾವಣನಿಗೆ ತಿಳಿಸಲು ಪ್ರಯತ್ನಿಸಿದನು. ರಾಮನಲ್ಲಿ ಕ್ಷಮೆ ಯಾಚಿಸಿ, ಸೀತೆಯನ್ನು ಒಪ್ಪಿಸುವಂತೆ ರಾವಣನಿಗೆ ಬುದ್ಧಿ ಹೇಳಿದನು. ಹೀಗೆ ಮಾಡುವುದರಿಂದ ನಾವು ನಮ್ಮ ರಾಕ್ಷಸ ಕುಲವನ್ನು ಉಳಿಸಿಕೊಳ್ಳಬಹುದು. ಅಲ್ಲದೆ ನಮಗೆ ಉಳಿದಿರುವ ಏಕೈಕ ಮಾರ್ಗ ಇದು ಎಂದು ಹೇಳಿದನು. ಆದರೆ ರಾವಣನು ಅವನ ಮಾತುಗಳನ್ನು ನಿರಾಕರಿಸಿದನು. ಆದರೆ ತನ್ನ ಸಹೋದರನ ಪರವಾಗಿ ನಿಂತು ಯುದ್ಧ ಮಾಡುವುದು ಅವನಿಗೆ ಅನಿವಾರ್ಯವಾಗಿ ಒದಗಿಬಂತು.

7. ಯುದ್ಧದಲ್ಲಿ ಕುಂಭಕರ್ಣ ಮತ್ತು ಅವನ ಸಾವು

7. ಯುದ್ಧದಲ್ಲಿ ಕುಂಭಕರ್ಣ ಮತ್ತು ಅವನ ಸಾವು

ಕುಂಭ ಕರ್ಣನಿಗೆ ರಾಮನ ವಿರುದ್ಧ ನಿಂತು ಯುದ್ಧ ಮಾಡುವುದು ಇಷ್ಟವಿರಲಿಲ್ಲ. ತಾವು ಮಾಡುವುದು ಅಧರ್ಮ ಎನ್ನುವುದು ತಿಳಿದಿತ್ತು. ಆದರೆ ಸಹೋಹದರನ ಜೊತೆ ನಿಂತು ಹೋರಾಡುವುದು ಅನಿವಾರ್ಯವಾಗಿತ್ತು. ರಾಮನು ವಿಷ್ಣುವಿನ ಅವತಾರ. ಯುದ್ಧದಲ್ಲಿ ಅವನನ್ನು ಸೋಲಿಸುವುದು ಅಸಾಧ್ಯವಾದ ಸಂಗತಿ ಎನ್ನುವುದು ತಿಳಿದಿತ್ತು. ಎಲ್ಲದರ ಹೊರತಾಗಿಯೂ ರಾವಣನ ಸೈನ್ಯ ಯುದ್ಧ ಭೂಮಿಗೆ ಹೋಗಿತ್ತು. ಕುಂಭಕರ್ಣನು ಅತ್ಯಂತ ಶಕ್ತಿ ಶಾಲಿಯಾಗಿದ್ದನು. ಅವನ ಶಕ್ತಿ ಹಾಗೂ ಯುಕ್ತಿಯಿಂದ ರಾಮನ ಸೈನ್ಯದ ಮೇಲೆ ಸಾಕಷ್ಟು ಹಾನಿಗೊಳಿಸಿದನು. ಹನುಮಂತನನ್ನು ಗಾಯಗೊಳಿಸಿದನು. ಸುಗ್ರೀವನನ್ನು ಪ್ರಜ್ಞಾಹೀನವಾಗಿ ಹೊಡೆದು, ಸೆರೆಯಲ್ಲಿ ಇಟ್ಟನು. ಆದರೆ ರಾಮನಿಂದ ಕೊಲ್ಲಲ್ಪಟ್ಟನು. ತನ್ನ ಸಹೋದರ ಮರಣ ಹೊಂದಿದನು ಎನ್ನುವುದನ್ನು ತಿಳಿಯುತ್ತಿದ್ದಂತೆ ರಾವಣನು ಮೂರ್ಚೆಹೋದನು. ನಂತರ ತನ್ನ ಸಹೋದರ ಮರಣ ಹೊಂದಿದ್ದಾನೆ ಎಂದು ಘೋಷಿಸಿದನು.

8. ಕುಂಭಕರ್ಣ ಮತ್ತು ಅವನ ಮಕ್ಕಳು

8. ಕುಂಭಕರ್ಣ ಮತ್ತು ಅವನ ಮಕ್ಕಳು

ಕುಂಭಕರ್ಣನಿಮಗೆ ಕುಂಬಾ ಮತ್ತು ನಿಕುಂಬಾ ಎನ್ನುವ ಎರಡು ಗಂಡು ಮಕ್ಕಳಿದ್ದರು. ಅವರು ರಾಮನ ವಿರುದ್ಧ ಯುದ್ಧ ಮಾಡುವಾಗ ಮರಣ ಹೊಂದಿದರು. ಶಿವ ಪುರಾಣದ ಪ್ರಕಾರ ಕುಂಭಕರ್ಣನಿಗೆ ಭೀಮಾ ಎಂಬ ಇನ್ನೊಬ್ಬ ಮಗನಿದ್ದನು. ಅವನು ಡಾಕಿನಿಗೆ ಓಡಿ ಹೋದನು. ಸಹ್ಯಾದ್ರಿ ಪರ್ವತಗಳ ವ್ಯಾಪ್ತಿಯಲ್ಲಿ ಇರುವ ಅವನ ತಾಯಿ ಕಾರ್ಕತಿಯೊಂದಿಗೆ ಇದ್ದನು. ಭೀಮನು ವಿಷ್ಣುವನ್ನು ನಾಶಪಡಿಸುವ ಪ್ರತಿಜ್ಞೆಯನ್ನು ಹೊತ್ತಿದ್ದನು. ಬ್ರಹ್ಮನಿಂದ ವರ ಪಡೆದು ಭಯೋತ್ಪಾದನಾ ಅಭಿಯಾನವನ್ನು ಪ್ರಾರಂಭಿಸಿದ್ದನು. ಭೀಮನು ಶಿವನ ಭಕ್ತನನ್ನು ಸೋಲಿಸಿ ತಪಸ್ಸಿಗೆ ಅಡ್ಡಿ ಪಡಿಸಿದಾಗ ಶಿವನು ಭೀಮನನ್ನು ನಾಶಮಾಡಿದನು ಎನ್ನಲಾಗುವುದು.

9. ತತ್ವಶಾಸ್ತ್ರದ ಜ್ಞಾನ ಹೊಂದಿದ್ದನು

9. ತತ್ವಶಾಸ್ತ್ರದ ಜ್ಞಾನ ಹೊಂದಿದ್ದನು

ಕುಂಭ ಕರ್ಣನಿಗೆ ಪಾಪ-ಪುಣ್ಯ, ಧರ್ಮ-ಕರ್ಮಗಳ ಬಗ್ಗೆ ಯಾವುದೇ ಸಂಬಂಧ ಇರಲಿಲ್ಲ. ಅವನು ಆರು ತಿಂಗಳು ಮಲಗುತ್ತಿದ್ದ. ಮತ್ತೆ ಆರು ತಿಂಗಳು ಎಚ್ಚರವಾಗಿ ಇರುತ್ತಿದ್ದ. ಎಚ್ಚರವಾಗಿರುವಾಗ ತನ್ನ ಹೃದಯ ಹೇಳಿದ ಮಾತುಗಳನ್ನು ಕೇಳುತ್ತಿದ್ದ. ತನ್ನ ಸಂಬಂಧಿಗಳನ್ನು ಭೇಟಿಯಾಗುವುದು ಹಾಗೂ ಅವರೊಂದಿಗೆ ಒಂದಿಷ್ಟು ಸಮಯವನ್ನು ಕಳೆಯಲು ಪ್ರಯತ್ನಿಸುತ್ತಿದ್ದ. ಆದರೆ ಅವನು ರಾಕ್ಷಸ ಕುಲದಲ್ಲಿ ಜನಿಸಿರುವುದರಿಂದ ರಾಕ್ಷಸ ಪಟ್ಟ ದೊರೆತಿತ್ತು. ಅವನು ಅನಗತ್ಯವಾದ ಯಾವುದೇ ಹಿಂಸೆಯನ್ನು ಮಾಡುತ್ತಿರಲಿಲ್ಲ. ಹಾಗಾಗಿ ನಾರದ ಮುನಿಗಳು ಅವನಿಗೆ ತತ್ವಶಾಸ್ತ್ರ ಎಲ್ಲಾ ಅಂಶಗಳನ್ನು ಕಲಿಸಿ ಕೊಡುತ್ತಿದ್ದರು. ಈ ಹಿನ್ನೆಲೆಯಲ್ಲಿಯೇ ಸಹೋದರನಾದ ರಾವಣನಿಗೆ ಅವನ ತಪ್ಪು ಹಾಗೂ ಅಧರ್ಮದ ಸಂಗತಿಯ ಬಗ್ಗೆ ತಿಳಿಸಿಕೊಡುವ ಪ್ರಯತ್ನ ಮಾಡುತ್ತಿದ್ದನು. ಆದರೆ ಅವನ ಮಾತನ್ನು ರಾವಣ ಕೇಳುತ್ತಿರಲಿಲ್ಲ. ಕೊನೆಯದಾಗಿ ರಾಮನ ವಿರುದ್ಧ ಯುದ್ಧದಲ್ಲಿ ನಿಲ್ಲುವ ಪರಿಸ್ಥಿತಿ ಎದುರಾಯಿತು. ಸಾಕಷ್ಟು ಹೋರಾಟ ನಡೆಸಿದ ನಂತರ ರಾಮನಿಂದಲೆ ಕೊಲ್ಲಲ್ಪಟ್ಟನು. ತನ್ನ ಸಾವಿನಿಂದ ಮೋಕ್ಷವನ್ನು ಪಡೆದುಕೊಂಡನು.

10. ಕುಂಭಕರ್ಣನನ್ನು ವಿಕರ್ಣನಿಗೆ ಹೋಲಿಸಲಾಗಿದೆ

10. ಕುಂಭಕರ್ಣನನ್ನು ವಿಕರ್ಣನಿಗೆ ಹೋಲಿಸಲಾಗಿದೆ

ಕುಂಭಕರ್ಣನ ಪಾತ್ರವನ್ನು ಮಹಾಭಾರತದ ದುರ್ಯೋದನ ಸಹೋದರನಾದ ವಿಕರ್ಣನಿಗೆ ಹೋಲಿಸಲಾಗುತ್ತದೆ. ಏಕೆಂದರೆ ವಿಕರ್ಣ ಹಾಗೂ ಕುಂಭಕರ್ಣ ಇಬ್ಬರಿಗೂ ತನ್ನ ಸಹೋದರ ಅಧರ್ಮದಿಂದ ಯುದ್ಧಮಾಡುತ್ತಿದ್ದಾರೆ ಎನ್ನುವುದು ತಿಳಿದಿರುತ್ತದೆ. ಆದರೆ ಕರ್ತವ್ಯದ ಸಂಕೇತವಾಗಿ ಅವರು ಸಹೋದರರ ಪರವಾಗಿ ನಿಂತು ಹೋರಾಡುತ್ತಾರೆ. ಯುದ್ಧದಲ್ಲಿ ಎದುರಾಳಿಗಳ ವಿರುದ್ಧ ಉತ್ತಮ ದಾಳಿಯನ್ನು ಸಹ ನಡೆಸುವರು. ನಂತರ ಯುದ್ಧದಲ್ಲಿಯೇ ಮರಣವನ್ನು ಹೊಂದುತ್ತಾರೆ. ಸಾವಿನ ಮೂಲಕ ತಮ್ಮ ಆತ್ಮಕ್ಕೆ ಮುಕ್ತಿಯನ್ನು ಪಡೆದುಕೊಳ್ಳುವರು.

English summary

Unknown Facts About Kumbhakarna

Kumbhakarna is certainly one of the most interesting characters in the Indian epic Ramayana. Whereas most characters perfectly embody either virtue or vice, Kumbhakarna is a more complex figure. He is a rakshasa and younger brother of Ravana. Despite his monstrous size and great hunger, he was described to be of good character, though he killed and ate many monks just to show his power. He was considered so pious, intelligent and brave that Indra was jealous of him. Let’s discover some lesser known facts about Kumbhakarana – the sleeping demon with ravenous appetite, which are pretty hard to believe.
Story first published: Thursday, October 10, 2019, 19:00 [IST]
X