For Quick Alerts
ALLOW NOTIFICATIONS  
For Daily Alerts

ಯುಗಾದಿ 2019: ದಿನಾಂಕ, ಮಹತ್ವ, ಇತಿಹಾಸ, ಸಂಪ್ರದಾಯ

|

ಭಾರತೀಯರಿಗೆ ಯುಗಾದಿಯಿಂದ ಹೊಸ ವರ್ಷ ಆರಂಭವಾಗುವುದು ಎನ್ನುವ ನಂಬಿಕೆಯಿದೆ. ಯುಗಾದಿಯನ್ನು ದೇಶದ ವಿವಿಧ ರಾಜ್ಯಗಳಲ್ಲಿ ಬೇರೆ ಬೇರೆ ರೀತಿಯಿಂದ ಆಚರಿಸುವರು. ಅದೇ ನಮ್ಮ ರಾಜ್ಯದಲ್ಲಿ ಕೂಡ ಯುಗಾದಿಯು ಆಚರಣೆಯಾಗುವುದು. ಒಂದು ಚಾಂದ್ರಮಾನ ಯುಗಾದಿ ಮತ್ತೊಂದು ಸೂರ್ಯಮಾನ ಯುಗಾದಿ ಎನ್ನುವುದು. ಈ ವರ್ಷ ಚಾಂದ್ರಮಾನ ಯುಗಾದಿಯು ಚೈತ್ರ ಮಾಸದ ಮೊದಲ ದಿನ, ಇಂಗ್ಲಿಷ್ ಕ್ಯಾಲೆಂಡರ್ ಪ್ರಕಾರ ಎಪ್ರಿಲ್ 6ಕ್ಕೆ ಬಂದಿದೆ. ಯುಗಾದಿ ಆಚರಣೆ, ಘಳಿಗೆ ಮತ್ತು ಇತರ ಅಂಶಗಳನ್ನು ನಾವು ಈ ಲೇಖನದಲ್ಲಿ ತಿಳಿದುಕೊಳ್ಳುವ.

ಯುಗಾದಿಯ ಘಳಿಗೆ

ಯುಗಾದಿಯ ಘಳಿಗೆ

ಪ್ರತಿಪಾದ ಆರಂಭ: ಎಪ್ರಿಲ್ 5, ಅಪರಾಹ್ನ 2.20ಕ್ಕೆ

ಪ್ರತಿಪಾದ ಅಂತ್ಯ: ಎಪ್ರಿಲ್ 6, ಅಪರಾಹ್ನ 3.23ಕ್ಕೆ

ಯುಗಾದಿಯ ದಕ್ಷಿಣ ಭಾರತೀಯ ಶೈಲಿ ಆಚರಣೆ

ಯುಗಾದಿಯ ದಕ್ಷಿಣ ಭಾರತೀಯ ಶೈಲಿ ಆಚರಣೆ

ಯುಗಾದಿ ಅಥವಾ ಉಗಾದಿಯು ಹಿಂದೂ ಪಂಚಾಂಗದ ಹೊಸ ವರ್ಷ ಎಂದು ಆಚರಿಸಲಾಗುತ್ತದೆ ಮತ್ತು ಇದು ದಕ್ಷಿಣ ಭಾರತದ ರಾಜ್ಯಗಳಾಗಿರುವಂತಹ ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತಮಿಳುನಾಡಿನಲ್ಲಿ ತುಂಬಾ ಜನಪ್ರಿಯ ಹಬ್ಬ. ಮಹಾರಾಷ್ಟ್ರದಲ್ಲಿ ಇದು ಗುಡಿ ಪಡ್ವ ಎಂದು ಮತ್ತು ಪಶ್ಚಿಮ ಬಂಗಾಳದಲ್ಲಿ ನೊಬೊ ಬೊರ್ಸೊ ಎಂದು ಕರೆಯುವರು. ಇದನ್ನು ತುಂಬಾ ಸಂಭ್ರಮ ಮತ್ತು ಉಲ್ಲಾಸದಿಂದ ಆಚರಿಸಲಾಗುವುದು. ಯುಗಾದಿ ಎನ್ನುವುದು ಸಂಸ್ಕೃತ ಪದದಿಂದ ಬಂದಿದೆ. ಇದರ ಅರ್ಥ ``ಯುಗ''ಎಂದರೆ ಕಾಲ ಅಥವಾ ವರ್ಷ ಮತ್ತು ``ಆದಿ'' ಎಂದರೆ ಆರಂಭ ಎನ್ನುವುದು. ಇದರಿಂದ ಯುಗಾದಿ ಹೊಸ ಆರಂಭ ಎನ್ನುವುದನ್ನು ನಮಗೆ ಸಾರಿ ಹೇಳುತ್ತದೆ. ಯುಗಾದಿಯು ಹೆಚ್ಚಾಗಿ ಚೈತ್ರಾ ಶುಕ್ಲ ಪ್ರತಿಪಾದದಲ್ಲಿ ಆಚರಿಸಲಾಗುತ್ತದೆ. ಯುಗಾದಿಯ ಬಗ್ಗೆ ಒಂದು ಆದ್ಯಾತ್ಮಿಕವಾದ ಕಥೆಯು ಇದೆ. ಬ್ರಹ್ಮ ದೇವರು ಈ ದಿನವೇ ಭೂಮಿ ಮೇಲೆ ಜೀವಿಗಳನ್ನು ಸೃಷ್ಟಿಸಲು ಆರಂಭಿಸಿದರು. ಈ ದಿನವನ್ನು ಯುಗಾದಿ ಎಂದು ಆಚರಿಸಲಾಗುತ್ತದೆ. ಈ ದಿನದಂದು ಬ್ರಹ್ಮ ದೇವರಿಗೆ ಗೌರವ ಸಲ್ಲಿಸುವ ಕಾರಣಕ್ಕಾಗಿ ಬ್ರಹ್ಮ ಪೂಜೆ ಕೂಡ ಮಾಡಲಾಗುತ್ತದೆ.

ವಿಧಾನ

ವಿಧಾನ

ಈ ದಿನದಂದು ಸೂರ್ಯೋದಯದ ಮೊದಲು ಎದ್ದು ಸ್ನಾನ ಮಾಡಿದ ಬಳಿಕ ದೇವರ ಸ್ತೋತ್ರ ಜಪಿಸಬೇಕು. ಈ ಕ್ರಮವು ಅತೀ ಮುಖ್ಯವಾಗಿದೆ ಮತ್ತು ಇದು ಮನೆಯನ್ನು ಶುದ್ಧೀಕರಿಸುವುದು ಮತ್ತು ಸುತ್ತಲು ಧನಾತ್ಮಕ ಶಕ್ತಿಯನ್ನು ತುಂಬುವುದು. ಇದರ ಬಳಿಕ ಮನೆಯ ಪ್ರತಿಯೊಬ್ಬರು ಸ್ನಾನ ಮಾಡಿಕೊಳ್ಳಬೇಕು ಮತ್ತು ಇದನ್ನು ಪವಿತ್ರ ಸ್ನಾನ ಅಥವಾ ``ತೈಲಅಭ್ಯಂಗನ ಸ್ನಾನಂ'' ಎಂದು ಹೇಳಲಾಗುತ್ತದೆ. ಎಣ್ಣೆ ಹಚ್ಚಿಕೊಂಡು ಈ ದಿನ ಸ್ನಾನ ಮಾಡಿದರೆ, ತುಂಬಾ ಪವಿತ್ರ ಎಂದು ಪರಿಗಣಿಸಲಾಗಿದೆ. ಈ ದಿನ ದೇವರ ಮೂರ್ತಿಗಳಿಗೂ ನೀರಿನಿಂದ ಅಭಿಷೇಕ ಮಾಡಿ ಶುದ್ಧೀಕರಿಸಬೇಕು. ಮೂರ್ತಿಗಳನ್ನು ತೊಳೆದು, ದೇವರ ಕೋಣೆ ಸ್ವಚ್ಛ ಮಾಡಿದ ಬಳಿಕ ಹೊಸ ಬಟ್ಟೆಗಳನ್ನು ಧರಿಸಿ, ಪ್ರಸಾದವನ್ನು ಇಟ್ಟು ಪೂಜೆ ಮಾಡಬೇಕು. ಪೂಜೆಗಾಗಿ ವಿಶೇಷವಾಗಿ ಬೇವು ಬೆಲ್ಲ ಅಥವಾ ಯುಗಾದಿ ಪಚಡಿಯನ್ನು ಇಡಬೇಕು. ಇದು ಒಂದು ರೀತಿಯ ಆಚರಣೆ ಆಗಿದೆ.

Most Read: ಯುಗಾದಿ ಆಚರಣೆ ಹೀಗಿರಲಿ- ಸುಖ, ಶಾಂತಿ, ಸಮೃದ್ಧಿ ನಿಮ್ಮದಾಗುತ್ತದೆ

ಬೇವು ಬೆಲ್ಲ ಅಥವಾ ಯುಗಾದಿ ಪಚಡಿ

ಬೇವು ಬೆಲ್ಲ ಅಥವಾ ಯುಗಾದಿ ಪಚಡಿ

ಈ ವಿಶೇಷ ಪ್ರಸಾದವನ್ನು ಯುಗಾದಿ ಸಂದರ್ಭದಲ್ಲಿ ತಯಾರಿಸಲಾಗುತ್ತದೆ. ಇದು ಸಿಹಿಯಾಗಿ ಇರುವುದಿಲ್ಲ. ಬದಲಿಗೆ ಇದು ಸಿಹಿ ಮತ್ತು ಸ್ವಲ್ಪ ಕಹಿಯಾಗಿ ಇರುವುದು. ಯಾಕೆಂದರೆ ಇದನ್ನು ಆರು ವಿಭಿನ್ನ ಸಾಮಗ್ರಿಗಳನ್ನು ಬಳಸಿಕೊಂಡು ತಯಾರಿಸಲಾಗುತ್ತದೆ. ಇದರಲ್ಲಿ ಮುಖ್ಯವಾಗಿ ಬೇವಿನ ಎಲೆಗಳು, ಬೆಲ್ಲ, ಮೆಣಸು, ಬಲಿಯದ ಮಾವಿನ ಹಣ್ಣು, ಉಪ್ಪು ಮತ್ತು ಹುಳಿ ಹಾಕಿಕೊಂಡು ತಯಾರಿಸಲಾಗುತ್ತದೆ. ಯುಗಾದಿ ಪ್ರಸಾದವು ಒಬ್ಬರ ಜೀವನದಲ್ಲಿ ತುಂಬಾ ಮಹತ್ವ ಪಡೆದುಕೊಂಡಿರುವುದು. ಇದು ಪ್ರತಿಯೊಬ್ಬರ ಜೀವನದಲ್ಲಿ ಬರುವ ಏಳು ಬೀಳುಗಳನ್ನು ಬಿಂಬಿಸುವುದು. ಯಾಕೆಂದರೆ ಈ ಪ್ರಸಾದದಲ್ಲಿ ಕಹಿ ಹಾಗೂ ಸಿಹಿ ಎರಡೂ ಇದೆ. ಇದರಿಂದ ಜೀವನದಲ್ಲಿ ಕೂಡ ಸಿಹಿ ಹಾಗೂ ಕಹಿ ಎರಡು ನಮಗೆ ಸಿಗುವುದು ಎಂದು ಹೇಳಲಾಗುತ್ತದೆ. ಮುಖ್ಯವಾಗಿ ಬೇವು ಎಂದರೆ ಕಹಿ ಮತ್ತು ಬೆಲ್ಲ ಎಂದರೆ ಸಿಹಿ ಎನ್ನುವುದು. ಈ ಪ್ರಸಾದದಲ್ಲಿ ಸಿಹಿ ಹಾಗೂ ಕಹಿ ಎರಡೂ ಇದೆ. ಈ ಪ್ರಸಾದವನ್ನು ತಿಂದ ಬಳಿಕ ಯುಗಾದಿ ದಿನವು ಆರಂಭ ಆಗುವುದು.

ಬೇವು ಬೆಲ್ಲ ಅಥವಾ ಯುಗಾದಿ ಪಚಡಿ

ಬೇವು ಬೆಲ್ಲ ಅಥವಾ ಯುಗಾದಿ ಪಚಡಿ

ಬೇವು-ಬೇವಿನ ಎಲೆಗಳು ಮತ್ತು ಹೂವುಗಳು ಕಹಿಯನ್ನು ಉಂಟು ಮಾಡುವುದು. ಇದು ಜೀವನದಲ್ಲಿನ ದುಃಖದ ಸಮಯವನ್ನು ಪ್ರತಿನಿಧಿಸುವುದು.

ಬೆಲ್ಲ-ಇದು ಸಿಹಿ ನೀಡುವುದು ಮತ್ತು ಇದು ಜೀವನದಲ್ಲಿ ಬರುವಂತಹ ಪ್ರತಿಯೊಂದು ಸಂತೋಷ ಹಾಗೂ ಪ್ರೀತಿಯ ಕ್ಷಣವನ್ನು ಉಲ್ಲೇಖಿಸುವುದು.

ಬಲಿಯದ ಮಾವಿನ ಹಣ್ಣುಗಳು-ಇದು ಪ್ರಸಾದಕ್ಕೆ ಒಂದು ರೀತಿಯ ಹುಳಿ ನೀಡುವುದು ಮತ್ತು ಜೀವನದಲ್ಲಿ ಬರುವಂತಹ ಪ್ರತಿಯೊಂದು ಅಚ್ಚರಿಯನ್ನು ಸ್ವೀಕರಿಸಬೇಕು ಎಂದು ಇದರ ಅರ್ಥವಾಗಿದೆ. ಮೆಣಸು-ಇದು ಪ್ರಸಾದಕ್ಕೆ ಖಾರ ನೀಡುವುದು ಮತ್ತು ಜೀವನದಲ್ಲಿ ಕ್ರೋಧ ಮತ್ತು ಸಿಡುಕಿನ ಕ್ಷಣವನ್ನು ಬಿಂಬಿಸುವುದು. ಉಪ್ಪು-ಇದು ರುಚಿಯನ್ನು ಬಿಂಬಿಸುವುದು ಮತ್ತು ರುಚಿ ಇಲ್ಲದೆ ಜೀವನವು ಇಲ್ಲ ಎಂದು ಇದು ಹೇಳುತ್ತದೆ.

ಹುಣಸೆ ಹುಳಿ-ಜೀವನದಲ್ಲಿ ನಾವು ಕೆಲವೊಂದು ಸಂದರ್ಭದಲ್ಲಿ ತುಂಬಾ ತುಂಟತನ ಹೊಂದಿರುತ್ತೇವೆ ಮತ್ತು ವಿರಹ ಕೂಡ ಎದುರಿಸಬೇಕಾಗುತ್ತದೆ. ಇದೆರಡು ಇಲ್ಲದೆ ಇದ್ದರೆ ಆಗ ಜೀವನವು ತುಂಬಾ ಬೇಸರ ಮೂಡಿಸುವುದು ಎಂದು ಇದು ಬಿಂಬಿಸುವುದು.

ಆಚರಣೆ

ಆಚರಣೆ

ರಂಗೋಲಿ-ಯುಗಾದಿ ದಿನದಂದು ಪ್ರತಿಯೊಂದು ಮನೆಯಲ್ಲೂ ರಂಗೋಲಿ ಬಿಡಿಸುವುದು ಒಂದು ಆಚರಣೆ ಆಗಿದೆ. ಯುಗಾದಿಯಂದು ಬೆಳಗ್ಗೆ ಬೇಗನೆ ಎದ್ದು ಮನೆಯ ಅಂಗಳದ ಭಾಗವನ್ನು ಗುಡಿಸಿ, ನೀರು ಹಾಯಿಸಿ ಸ್ವಚ್ಛಗೊಳಿಸಿದ ಬಳಿಕ ಅಲ್ಲಿ ರಂಗೋಲಿ ಬಿಡಿಸುವರು. ರಂಗೋಲಿ ಬಿಡಿಸುವ ಮುಖ್ಯ ಉದ್ದೇಶವೆಂದರೆ ಮನೆಯೊಳಗೆ ಲಕ್ಷ್ಮೀ ದೇವಿಯನ್ನು, ಅದೇ ರೀತಿಯಾಗಿ ಮನೆಗೆ ಬರುವಂತಹ ಅತಿಥಿಗಳು ಹಾಗೂ ಪ್ರೀತಿ ಪಾತ್ರರನ್ನು ಆಹ್ವಾನಿಸುವುದು. ಇದು ಜನರ ನಡುವಿನ ಉತ್ತಮ ಬಾಂಧವ್ಯವನ್ನು ಸಾರುತ್ತದೆ.

ಪಂಚಾಂಗ ಶ್ರವಣಂ ಅಥವಾ ಯುಗಾದಿ ಪಂಚಾಂಗ ಪೂಜೆ

ಪಂಚಾಂಗ ಶ್ರವಣಂ ಅಥವಾ ಯುಗಾದಿ ಪಂಚಾಂಗ ಪೂಜೆ

ಈ ಆಚರಣೆಯು ತುಂಬಾ ಸಣ್ಣ ಆಚರಣೆ ಆಗಿದ್ದು, ಹೆಚ್ಚಾಗಿ ಮನೆಗಳಲ್ಲಿ ಸೂರ್ಯಾಸ್ತದ ಬಳಿಕ ನಡೆಸುವರು. ಇದು ಪಂಚಾಂಗಕ್ಕೆ ಪೂಜೆ ಮಾಡುವುದು. ಇಲ್ಲಿ ಹೊಸದಾಗಿ ತಂದ ಪಂಚಾಂಗವನ್ನು ಇಟ್ಟು ಅದನ್ನು ಹೂಗಳಿಂದ ಶೃಂಗಾರ ಮಾಡಿ, ಕುಂಕುಮ, ಹಳದಿ ಮತ್ತು ಅಕ್ಷತೆ ಹಾಕಿ ಸಣ್ಣ ಪೂಜೆ ಮಾಡಲಾಗುತ್ತದೆ. ಕುಟುಂಬದ ಹಿರಿಯ ವ್ಯಕ್ತಿಯು ಈ ಪಂಚಾಂಗವನ್ನು ಓದುವ ಮೂಲಕ ಮುಂದಿನ ದಿನಗಳಲ್ಲಿನ ಭವಿಷ್ಯದ ಸ್ಥಿತಿಗತಿಗಳ ಬಗ್ಗೆ ಹೇಳುವರು. ಮನೆಯ ಇತರ ಸದಸ್ಯರು ಇದನ್ನು ಕೇಳುವರು ಮತ್ತು ಅದಕ್ಕೆ ಅನುಗುಣವಾಗಿ ತಮ್ಮ ಯೋಜನೆಗಳನ್ನು ಹಾಕಿಕೊಳ್ಳುವರು.

ಯುಗಾದಿ ಅಥವಾ ಉಗಾದಿಯ ಪ್ರಾಮುಖ್ಯತೆ

ಯುಗಾದಿ ಅಥವಾ ಉಗಾದಿಯ ಪ್ರಾಮುಖ್ಯತೆ

ವರ್ಷವು ಅಂತ್ಯವಾಗಲು ಬಂದಾಗ ನಾವು ಹೊಸ ವರ್ಷದ ಆಗಮನವನ್ನು ತುಂಬಾ ಸಂಭ್ರಮದಿಂದ ಆಚರಿಸುತ್ತೇವೆ. ಹಳೆ ವರ್ಷವನ್ನು ಧನಾತ್ಮಕವಾಗಿ ಬೀಳ್ಕೊಟ್ಟು, ದುಃಖಗಳನ್ನು ನಾವು ಮರೆತುಬಿಡುತ್ತೇವೆ. ಇಡೀ ವಿಶ್ವವು ಈ ದಿನವನ್ನು ಡಿಸೆಂಬರ್ 31ರಂದು ಆಚರಿಸುವುದು. ಆದರೆ ಹಿಂದೂ ಧರ್ಮದಲ್ಲಿ, ಅದರಲ್ಲೂ ಭಾರತೀಯರು ಯುಗಾದಿ ಮೂಲಕವಾಗಿ ಹೊಸ ವರ್ಷಾಚರಣೆ ಮಾಡುವರು. ಇಂದಿನ ಯುವ ಸಮುದಾಯ ಮಾತ್ರ ಡಿಸೆಂಬರ್ 31ರಂದೇ ಹೊಸ ವರ್ಷಾಚರಣೆ ಮಾಡುವರು. ನಮಗೆ ಹೊಸ ವರ್ಷಾಚರಣೆ ಎಂದರೆ ಅದು ಯುಗಾದಿ ಹಬ್ಬ. ಡಿಸೆಂಬರ್ 31ರಂದು ಹೊಸ ವರ್ಷಾಚರಣೆ ಆಚರಿಸುವ ಬದಲು ಯುಗಾದಿ ದಿನದಂದು ನಾವು ತುಂಬಾ ಸಂಭ್ರಮ ಹಾಗೂ ಉಲ್ಲಾಸದಿಂದ ಇದನ್ನು ಆಚರಿಸುವೆವು.

ದೇಶದಲ್ಲಿ ಯುಗಾದಿ

ದೇಶದಲ್ಲಿ ಯುಗಾದಿ

ದೇಶದಲ್ಲಿ ಯುಗಾದಿಯನ್ನು ವಿವಿಧ ರಾಜ್ಯಗಳಲ್ಲಿ ವಿವಿಧ ರೀತಿಯಿಂದ ಆಚರಿಸುವರು. ಆಚರಣೆಯ ವಿಧಿವಿಧಾನಗಳು ಬೇರೆ ಆದರೂ ಹೊಸ ವರ್ಷವನ್ನು ಸ್ವಾಗತಿಸುವುದು ಇದರ ಉದ್ದೇಶವಾಗಿದೆ. ಅದರಲ್ಲೂ ಮುಖ್ಯವಾಗಿ ದಕ್ಷಿಣ ಭಾರತದಲ್ಲಿ ಇದನ್ನು ಮುಖ್ಯವಾಗಿ ಆಚರಿಸಲಾಗುವುದು. ಕರ್ನಾಟಕ, ತಮಿಳುನಾಡು ಮತ್ತು ಆಂಧ್ರ ಪ್ರದೇಶದಲ್ಲಿ ಇದು ತುಂಬಾ ಜನಪ್ರಿಯ ಹಬ್ಬವಾಗಿದೆ. ಮಹಾರಾಷ್ಟ್ರದಲ್ಲಿ ಇದನ್ನು ಗುಡಿಪಡ್ವಾ ಎಂದು ಆಚರಿಸಿದರೆ, ಇನ್ನು ಕೆಲವೊಂದು ರಾಜ್ಯಗಳಲ್ಲಿ ಬೇರೆ ಬೇರೆ ಹೆಸರುಗಳಿಂದ ಆಚರಿಸುವರು. ಸಂಪೂರ್ಣ ಕುಟುಂಬದವರ ಜತೆಗೆ ಆಧ್ಯಾತ್ಮಿಕತೆ ಮತ್ತು ಸಂಭ್ರಮದಿಂದ ಹಬ್ಬಗಳನ್ನು ಆಚರಿಸುವುದು ಮಹತ್ವದ್ದಾಗಿದೆ. ಆದರೆ ಈ ಹಬ್ಬಗಳಿಗೆ ಅದರದ್ದೇ ಆಗಿರುವಂತಹ ಕೆಲವೊಂದು ಪ್ರಾಮುಖ್ಯತೆಗಳು ಕೂಡ ಇದೆ. ಬೇರೆಲ್ಲಾ ಹಬ್ಬಗಳಂತೆ ಯುಗಾದಿಗೆ ಕೂಡ ಒಂದು ಇತಿಹಾಸ ಮತ್ತು ಆಚರಣೆಗಳು ಇದೆ ಎಂದು ಜ್ಯೋತಿಷ್ಯ ಶಾಸ್ತ್ರವು ಹೇಳುತ್ತದೆ. ಭೂಮಿಯು ತನ್ನ ಪಥ ಬದಲಾಯಿಸುವುದು ಯುಗಾದಿ ದಿನದಂದು ಎಂದು ಹೇಳಲಾಗುತ್ತದೆ.

ವಸಂತ ಕಾಲದ ಆಗಮನ

ವಸಂತ ಕಾಲದ ಆಗಮನ

ಭೂಮಿಯು ಯುಗಾದಿ ಸಮಯದಲ್ಲಿ ಯಾವ ರೀತಿಯಲ್ಲಿ ಪಥ ಬದಲಾಯಿಸುತ್ತದೆ ಎಂದರೆ ಉತ್ತರಾರ್ಧ ಗೋಲದಲ್ಲಿ ಅತಿಯಾದ ಬಿಸಿಲು ಸುಮಾರು 21 ದಿನಗಳ ಕಾಲ ಕಾಣಿಸಿಕೊಳ್ಳುವುದು ಮತ್ತು ಇದು ವಸಂತ ಕಾಲದ ಆಗಮನ ಕೂಡ ಆಗಿದೆ. ಈ ಋತುವನ್ನು ನಾವು ಹಸಿರಿನ ಋತು ಎಂದು ನಾವು ಕರೆಯಬಹುದು ಮತ್ತು ಇಲ್ಲಿ ಚಿಗುರೆಲೆಗಳು ಮತ್ತು ತಾಜಾ ಗಾಳಿಯು ಬರುವುದು. ಇಷ್ಟು ಮಾತ್ರವಲ್ಲದೆ ಹಣ್ಣುಗಳು ಕೂಡ ಹೆಚ್ಚಾಗಿ ಇದೇ ಸಮಯದಲ್ಲಿ ಹಣ್ಣಾಗುವುದು. ಈ 21 ದಿನಗಳು ಭೂಮಿಗೆ ಶಕ್ತಿ ನೀಡುವುದು ಮತ್ತು ಮುಂಬರುವ ವರ್ಷಕ್ಕೆ ಅದನ್ನು ತಯಾರುಗೊಳಿಸುವುದು. ಚೈತ್ರಾ ನವರಾತ್ರಿಯು ಯುಗಾದಿ ದಿನದಂದು ಆರಂಭವಾಗುವುದು. ಇದನ್ನು ಯುಗಾದಿಯ 9ನೇ ದಿನದಂದು ಆಚರಿಸಲಾಗುತ್ತದೆ ಮತ್ತು 10ನೇ ದಿನವನ್ನು ರಾಮನವಮಿಯಾಗಿ ಆಚರಿಸಲಾಗುವುದು. ಚೈತ್ರಾ ನವರಾತ್ರಿಯು ಉತ್ತರ ಭಾರತೀಯರು ಹೆಚ್ಚಾಗಿ ಆಚರಿಸುವರು.

Most Read: ಪ್ರತಿ ದಿನ ಸೂರ್ಯ ದೇವರಿಗೆ ಜಲ ಅರ್ಪಣೆ ಮಾಡಿದರೆ, ನಿಮ್ಮ ಅದೃಷ್ಟವೇ ಬದಲಾಗುತ್ತದೆ

ಇತಿಹಾಸ

ಇತಿಹಾಸ

ಉಗಾದಿಯನ್ನು ಯುಗಾದಿ ಎಂದು ಕರೆಯುವರು. ಯುಗ ಎಂದರೆ ವರ್ಷ ಮತ್ತು ಆದಿ ಎಂದರೆ ಆರಂಭ. ಭೂ ಮೇಲಿನ ಜೀವಿಗಳನ್ನು ಬ್ರಹ್ಮ ದೇವರು ಈ ದಿನದಂದು ಸೃಷ್ಟಿಸಿದರು ಎಂದು ಹೇಳಲಾಗುತ್ತದೆ. ಇದರ ಮೂಲಕ ಅವರು ವರ್ಷ, ತಿಂಗಳು ಮತ್ತು ದಿನಗಳನ್ನು ಸೃಷ್ಟಿಸಿದರು ಎಂದು ಪುರಾಣಗಳು ಹೇಳುತ್ತವೆ.

ಯುಗಾದಿ ಹಬ್ಬವನ್ನು ಆಚರಿಸಿಕೊಳ್ಳುವುದು ಹೇಗೆ?

ಯುಗಾದಿ ಹಬ್ಬವನ್ನು ಆಚರಿಸಿಕೊಳ್ಳುವುದು ಹೇಗೆ?

ಯುಗಾದಿ ಹಬ್ಬದಂದು ಜನರು ದೇವರಿಗೆ ಪ್ರಾರ್ಥನೆ ಸಲ್ಲಿಸುವರು. ಅದರಲ್ಲೂ ತೆಲುಗಿನವರು ಬ್ರಹ್ಮ ಮತ್ತು ವಿಷ್ಣು ದೇವರನ್ನು ದಿನದಂದು ಪೂಜಿಸುವರು. ಯುಗಾದಿ ದಿನವು ತುಂಬಾ ವಿಶೇಷವಾಗಿರುವ ಕಾರಣದಿಂದಾಗಿ ಮಹಿಳೆಯರು ಬೇಗನೆ ಎದ್ದು, ಸ್ನಾನ ಮಾಡಿ ಮನೆಯ ಮುಂಭಾಗದಲ್ಲಿ ರಂಗೋಲಿ ರಚಿಸುವರು. ಈ ರಂಗೋಲಿಯ ಬಣ್ಣಗಳು ಮನೆಯೊಳಗಡೆ ಧನಾತ್ಮಕ ಶಕ್ತಿಯನ್ನು ತರುತ್ತದೆ ಎಂದು ನಂಬಲಾಗಿದೆ. ಈ ದಿನದಂದು ಹೆಚ್ಚಾಗಿ ಎಣ್ಣೆಸ್ನಾನ ಮಾಡಲಾಗುತ್ತದೆ. ಪ್ರತಿಯೊಬ್ಬರು ಎಣ್ಣೆ ಸ್ನಾನ ಮಾಡಿದ ಬಳಿಕ ಮನೆಯಲ್ಲಿ ಪೂಜೆ ಮಾಡುವರು. ಪೂಜೆ ಬಳಿಕ ಬೇವು ಬೆಲ್ಲ ಹಾಕಿರುವಂತಹ ಪ್ರಸಾದವನ್ನು ಹಂಚಲಾಗುತ್ತದೆ. ಯುಗಾದಿಯಂದು ಮನೆಯ ಹಿರಿಯರು ಅಥವಾ ಅರ್ಚಕರು ಪಂಚಾಂಗವನ್ನು ಓದುವರು. ಇದರ ಪ್ರಕಾರವಾಗಿ ಮನೆಯ ಇತರ ಸದಸ್ಯರು ಇದನ್ನು ಮುಂದಿನ ವರ್ಷಕ್ಕೆ ತಮಗೆ ಅನುಕೂಲಕರವೇ ಎಂದು ನೋಡುವರು. ಇದನ್ನು ಪಂಚಾಂಗ ಶ್ರವಣಂ ಎಂದು ಕರೆಯಲಾಗುತ್ತದೆ.

English summary

Ugadi 2019: Date, Significance, History, Tradition

Ugadi or Yugadi is the new year as per the Hindu calendar and it is very famous in south Indian states like Karnataka, Andhra pradesh and Tamilnadu. It is also known as “Gudi Padwa” in Maharashtra and “Nobo Borso” in West Bengal and is celebrated with much fervour and enthusiasms. “Yugadi” is derived from the Sanskrit words “yuga” which means age or era and “adi” means “to start” and so Yugadi specifies its meaning as “New Beginning”. It is mostly celebrated on “chaitra shukla pratipada”. It is also having spirituality associated with this day as it is believed that lord Brahma himself started creating mankind on this earth and made it habitable to survive and that day is celebrated as Yugadi.To pay him respect people offer prayers to him and perform “Brahma Puja”.
X
Desktop Bottom Promotion