For Quick Alerts
ALLOW NOTIFICATIONS  
For Daily Alerts

ಮೊದಲ ಬಾರಿ ವರಲಕ್ಷ್ಮಿ ವ್ರತ ಮಾಡುತ್ತಿದ್ದೀರಾ? ಈ ನಿಯಮಗಳು ತಿಳಿದಿರಲಿ

|

ಸಮಸ್ತ ನಾಡಿನ ಜನತೆಗೆ ವರಲಕ್ಷ್ಮಿ ಹಬ್ಬದ ಶುಭಾಶಯಗಳು, ಆಗಸ್ಟ್‌ 5ರಂದು ವರಮಹಾಲಕ್ಷ್ಮಿ ಹಬ್ಬ ಆಚರಿಸಲಾಗುತ್ತಿದೆ. ಈ ದಿನ ಆಚರಿಸಲು ಸಾಧ್ಯವಾಗದಿದ್ದರೆ ಆಗಸ್ಟ್‌ 12ರಂದು ವರಲಕ್ಷ್ಮಿ ಹಬ್ಬವನ್ನು ಆಚರಿಸಬಹುದು.

varalakshmi vrata

ಹೊಸದಾಗಿ ಮದುವೆಯಾದ ಮಹಿಳೆಯರು ಹಾಗೂ ಅವಿವಾಹಿತರು ಮಹಿಳೆಯರು ವರಲಕ್ಷ್ಮಿ ಹಬ್ಬವನ್ನು ಆಚರಿಸುತ್ತಾರೆ. ವರಲಕ್ಷ್ಮಿ ವ್ರತವನ್ನು ಮಾಡುವುದರಿಂದ ಅಷ್ಟಲಕ್ಷ್ಮಿಯರನ್ನು ಪೂಜಿಸಿದ ಫಲ ಸಿಗುತ್ತದೆ, ಇದರಿಂದ ಮನೆಗೆ, ಮನೆಯವರಿಗೆ ಒಳಿತಾಗುತ್ತದೆ.ಮುತ್ತೈದೆಯರು ಈ ವ್ರತವನ್ನು ಆಚರಿಸುವುದರಿಂದ ಸಂಸಾರದಲ್ಲಿ ಅನ್ಯೈನ್ಯತೆ ಹೆಚ್ಚವುದು, ಮನೆಯಲ್ಲಿ ಸಮೃದ್ಧಿ, ನೆಮ್ಮದಿ ಇರುತ್ತದೆ, ಅವಿವಾಹಿತ ಹೆಣು ಮಕ್ಕಳು ಈ ವ್ರತ ಮಾಡುವುದರಿಂದ ಒಳ್ಳೆಯ ಕಂಕಣ ಬಲ ಕೂಡಿ ಬರುವುದು.

ನೀವು ಇದೇ ಮೊದಲ ಬಾರಿಗೆ ವರಲಕ್ಷ್ಮಿ ವ್ರತ ಮಾಡುತ್ತಿದ್ದರೆ ವ್ರತದ ಈ ನಿಯಮಗಳು ತಿಳಿದಿರಲಿ:

1. ಮನೆ ಶುದ್ಧವಾಗಿರಬೇಕು

1. ಮನೆ ಶುದ್ಧವಾಗಿರಬೇಕು

ಮನೆಯ ಮೂಲೆ ಮೂಲೆ ಸ್ವಚ್ಛ ಮಾಡಿರಬೇಕು, ಗುರುವಾರನೇ ಮನೆಯನ್ನು ಸ್ವಚ್ಛಗೊಳಿಸಿರಬೇಕು. ಮನೆ ಸ್ವಚ್ಚವಾಗಿದ್ದರೆ ಮಾತ್ರ ಲಕ್ಷ್ಮಿ ಮನೆಗೆ ಬರುತ್ತಾಳೆ.

ಕಳಸ ಕೂರಿಸಿ ಲಕ್ಷ್ಮಿಯನ್ನು ಆಹ್ವಾನಿಸಬೇಕು

ಕಳಸ ಕೂರಿಸಿ ಲಕ್ಷ್ಮಿಯನ್ನು ಆಹ್ವಾನಿಸಬೇಕು

ಬೆಳಗ್ಗೆ ಸ್ನಾನಾನಂತರ ದೇವರ ಕೋಣೆ ಅಥವಾ ಮನೆಯಲ್ಲಿ ದೊಡ್ಡ ಜಾಗದಲ್ಲಿ ಗೋಮೂತ್ರದಿಂದ ಸ್ಥಳ ಶುದ್ಧಿ ಮಾಡಬೇಕು. ರಂಗೋಲಿ ಬಿಡಿಸಿ ಅಗ್ರ ಇರುವ ಎರಡು ಅಥವಾ ಐದು ಬಾಳೆ ಎಲೆ ಇಟ್ಟು, ಅದರಲ್ಲಿ ಅಕ್ಕಿ ಹಾಕಿ, ಕಲಶ ಇಟ್ಟು, ಕಲಶದಲ್ಲಿ ಒಣ ದ್ರಾಕ್ಷಿ, ಖರ್ಜೂರ, ಬಾದಾಮಿ, ಗೋಡಂಬಿ ಸ್ವಲ್ಪ ಹಾಕಿ.

ಅನುಕೂಲ ಇದ್ದಲ್ಲಿ ಬೆಳ್ಳಿ ಅಥವಾ ಬಂಗಾರದ ನಾಣ್ಯ ಹಾಕಿ. ಶುದ್ಧವಾದ ಅರಿಶಿನ ಚಿಟಿಕೆ ಹಾಕಿ. ಶುದ್ಧವಾದ ನೀರು ತುಂಬಬೇಕು. ಮಾವಿನ ಸೊಪ್ಪು ಹಾಕಿ, ತೆಂಗಿನ ಕಾಯಿ ಇಡಬೇಕು. ಇನ್ನು ಕಲಶಕ್ಕೆ ಸೀರೆ, ಆಭರಣ ಬೇರೆ ಅಲಂಕಾರ ಮಾಡಬಹುದು. ಕಲಶದ ಕೆಳಗೆ ಒಂದು ಲಕ್ಷ್ಮಿಯ ಚಿಕ್ಕ ವಿಗ್ರಹ ಇಟ್ಟರೆ ಉತ್ತಮ. ನಂತರ ಲಕ್ಷ್ಮಿಯನ್ನು ಆಹ್ವಾನಿಸಬೇಕು.

ನೀವು ಅವಿವಾಹಿತ ಮಹಿಳೆಯಾಗಿದ್ದು ಈ ವ್ರತ ಮಾಡುವುದಾದರೆ

ನೀವು ಅವಿವಾಹಿತ ಮಹಿಳೆಯಾಗಿದ್ದು ಈ ವ್ರತ ಮಾಡುವುದಾದರೆ

ವರಲಕ್ಷ್ಮಿ ವ್ರತವನ್ನು ವಿವಾಹಿತ ಮಹಿಳೆಯರು ಮಾಡಬೇಕು, ನೀವು ಅವಿವಾಹಿತರಾಗಿದ್ದರೆ ಈ ಪೂಜೆಯನ್ನು ತಾಯಿಯೊಂದಿಗೆ ಮಾಡಬೇಕು.

ಇಂದು ಪೂಜೆ ಮಾಡಲು ಸಾಧ್ಯವಾಗದಿದ್ದರೆ

ಇಂದು ಪೂಜೆ ಮಾಡಲು ಸಾಧ್ಯವಾಗದಿದ್ದರೆ

ಆಗಸ್ಟ್‌ 5ರಂದು ಪೂಜೆ ಮಾಡಲು ಸಾಧ್ಯವಾಗದಿದ್ದರೆ ಆಗಸ್ಟ್‌ 12ರಂದು ಪೂಜೆಯನ್ನು ಮಾಡಬಹುದು.

ಯಾರು ಪೂಜೆ ಮಾಡಬಾರದು

ಯಾರು ಪೂಜೆ ಮಾಡಬಾರದು

ಹೆರಿಗೆಯಾಗಿ 22 ದಿನ ಕಳೆದಿಲ್ಲ ಎಂದಾದರೆ ವರಲಕ್ಷ್ಮಿ ವ್ರತವನ್ನು ಮಾಡುವಂತಿಲ್ಲ, ಬಾಣಂತಿಯರು ವರಲಕ್ಷ್ಮಿ ವ್ರತ ಮಾಡುವುದು ಅಶುದ್ಧವಾಗಿದೆ. ಈ ಪೂಜೆಯನ್ನು ಮಡಿಯಿಂದ ಮಾಡಬೇಕು.

English summary

Things To Remember While doing Fasting For The Varamahalakshmi Puja

If you are doing varalakshmi vrata first time, these fasting rules must know read on...
Story first published: Friday, August 5, 2022, 9:07 [IST]
X
Desktop Bottom Promotion