For Quick Alerts
ALLOW NOTIFICATIONS  
For Daily Alerts

ಶ್ರಾವಣ ಮಾಸದ ಪೂಜೆಯ ಸಂಪೂರ್ಣ ಫಲಕ್ಕಾಗಿ ತಾಂಬೂಲದಲ್ಲಿ ಇರಲೇಬೇಕಾದ ವಸ್ತುಗಳಿವು

|

ಶ್ರಾವಣ ಮಾಸ ಬಂದರೆ ಸಾಲು ಆಷಾಢದ ಜಡ್ಡುತನ ಮಾಯವಾಗಿ ಮನಸ್ಸಿನಲ್ಲಿ ಏನೋ ನವ ಉತ್ಸಾಹ. ವ್ರತ, ಸಾಲು-ಸಾಲಾಗಿ ಬರುವ ಹಬ್ಬಗಳು ಇವುಗಳಿಂದಾಗಿ ಶ್ರಾವಣ ಮಾಸವೆಂದರೆ ಸಡಗರ-ಸಂಭ್ರಮದ ಮಾಸ.

ಶ್ರಾವಣ ಮಾಸದ ಪೂಜೆಯ ತಾಂಬೂಲದಲ್ಲಿ ಇರಲೇಬೇಕಾದ ವಸ್ತುಗಳಿವು | Boldsky Kannada
Sharava Masa Pooja, Need To Keep These Things In Tambula

ಶ್ರಾವಣದಲ್ಲಿ ಮಂಗಳ ಗೌರಿ ಪೂಜೆ, ನಾಗರ ಪಂಚಮಿ, ವರಮಹಾಲಕ್ಷ್ಮಿ ಪೂಜೆ ಹೀಗೆ ಅನೇಕ ಹಬ್ಬಗಳು ಬರುತ್ತವೆ. ಇನ್ನು ಕೆಲ ಮಹಿಳೆಯರು ಶ್ರಾವಣ ಶುಕ್ರವಾರದಂದು ವ್ರತ ಮಾಡಿ ಲಕ್ಷ್ಮಿ ಪೂಜೆ ಮಾಡಿ ಮುತ್ತೈದೆಯರನ್ನು ಅರಿಶಿಣ ಕುಂಕುಮಕ್ಕೆ ಕರೆಯುತ್ತಾರೆ. ಮುತ್ತೈದೆಯರಿಗೆ ಅರಿಶಿಣ-ಕುಂಕುಮ ಕೊಡುವುದರಿಂದ ಒಳ್ಳೆಯದಾಗುತ್ತದೆ, ಸಂತಾನ ಬಯಸುವ ದಂಪತಿಗೆ ಮಕ್ಕಳಾಗುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ.

ಶ್ರಾವಣ ಮಾಸದ ಪ್ರತಿದಿನವೂ ಪುಣ್ಯದಿನ

ಶ್ರಾವಣ ಮಾಸದ ಪ್ರತಿದಿನವೂ ಪುಣ್ಯದಿನ

ಶ್ರಾವಣ ಮಾಸದಲ್ಲಿ ಪ್ರತಿದಿನವೂ ಒಂದಲ್ಲಾ ಒಂದು ವಿಶೇಷಗಳಿರುತ್ತವೆ. ಈ ದಿನಗಳಲ್ಲಿ ಸುಮಂಗಲಿಯರು ವ್ರತ, ಪೂಜೆ ಅಂತ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಮನೆಯ ಮುಂಬಾಗಿಲಿಗೆ ಮಾವಿನ ಎಲೆಯ ತೋರಣಗಳಿಂದ ಅಲಂಕರಿಸಿ, ಹಬ್ಬದ ಊಟದ ಅಡುಗೆ ಮಾಡುತ್ತಾರೆ.

ದೀರ್ಘ ಸೌಭಾಗ್ಯಕ್ಕಾಗಿ ತಾಂಬೂಲ ಕೊಡುವುದು

ದೀರ್ಘ ಸೌಭಾಗ್ಯಕ್ಕಾಗಿ ತಾಂಬೂಲ ಕೊಡುವುದು

ಶುಕ್ರವಾರ, ಮಂಗಳವಾರ, ಶ್ರಾವಣ ಶನಿವಾರದ ಪೂಜೆ, ಮಂಗಳಗೌರಿ ವ್ರತ, ವರಮಹಾಕ್ಷ್ಮಿ ವ್ರತ ಹೀಗೆ ಅನೇಕ ಹಬ್ಬಗಳನ್ನು ಆಚರಿಸಲಾಗುತ್ತದೆ. ಈ ದಿನಗಳಲ್ಲಿ ವಿಶೇಷ ಪೂಜೆ ಮಾಡಿ ತಾಂಬೂಲ ಹಾಗೂ ಅರಿಶಿಣ, ಕುಂಕುಮವನ್ನು ಮುತ್ತೈದೆಯರಿಗೆ ನೀಡಲಾಗುವುದು.

ತಾಂಬೂಲದಲ್ಲಿ ಏನನ್ನು ನೀಡಲಾಗುವುದು

ತಾಂಬೂಲದಲ್ಲಿ ಏನನ್ನು ನೀಡಲಾಗುವುದು

ತಾಂಬೂಲ ನೀಡುವಾಗ ಅರಿಶಿಣ, ಕುಂಕುಮ, ಹಣ್ಣು, ಹೂ ಎಲೆ ಅಡಿಕೆ, ಕಡಲೆ ಕಾಳು ಇಟ್ಟು ನೀಡಲಾಗುವುದು.

 ಎಲೆ, ಅಡಿಕೆ, ಕಾಳು ಅವಶ್ಯಕವಾಗಿ ನೀಡಬೇಕು ಏಕೆ?

ಎಲೆ, ಅಡಿಕೆ, ಕಾಳು ಅವಶ್ಯಕವಾಗಿ ನೀಡಬೇಕು ಏಕೆ?

ತಾಂಬೂಲದಲ್ಲಿ ಅಡಿಕೆ ಮತ್ತು ಕಡಲೆ ಕಾಳು ಅವಶ್ಯಕವಾಗಿ ನೀಡಬೇಕು ಎಂದು ಹೇಳುತ್ತಾರೆ. ಇದರಿಂದ ಸಾಮಾನ್ಯರಿಗೆ ಮಹಿಳೆಯರಿಗೆ ಇರುವ ಕುಜದೋಷ, ಚಂದ್ರದೋಷ ನಿವಾರಣೆಯಗುತ್ತದೆ. ಇದರಿಂದಸೂರ್ಯದೇವನ ಅನುಗ್ರಹ ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗುತ್ತದೆ.

 ತಾಂಬೂಲ ಅರ್ಪಿಸುವುದು ಏಕೆ?

ತಾಂಬೂಲ ಅರ್ಪಿಸುವುದು ಏಕೆ?

ಯೋಗ ಶಾಸ್ತ್ರವು ತಾಂಬೂಲ ಏನನ್ನು ಸೂಚಿಸುತ್ತದೆ ಎಂದು ಹೇಳಿದೆ. ತಾಂಬೂಲ ಸಮರ್ಪಣೆ ಒಂದು ಗೌರವ ಸೂಚನೆಯಾಗಿದೆ. ತಾಂಬೂಲವು ಸೌಂದರ್ಯ ವರ್ಧನ, ಸುಗಂಧ ಪ್ರಸರಣ, ಶುದ್ಧೀಕರಣ ಪಂಡಿತ ಲಕ್ಷಣ ಪ್ರಾಪ್ತಿ ಮೊದಲಾದ ಗುಣಗಳು ಹೊಂದಿದೆ.

ಇದು ಮನುಷ್ಯ ಅನುಭವಿಸುವ ಭೋಗಗಳಾಗಿದ್ದು ಇದನ್ನು ದೇವರಿಗೆ ಸಮರ್ಪಿಸಿದಾಗ ಈ ಲೌಕಿಕ ಭೋಗವು ಬ್ರಹ್ಮತ್ವ ವನ್ನು ಹೊಂದುತ್ತದೆ. ಅಡಿಕೆ ಎಲೆ ಸುಣ್ಣ ಇವುಗಳಲ್ಲಿ ಯಾವುದರಲ್ಲೂ ಕೆಂಪು ಬಣ್ಣವಿಲ್ಲ, ಆದರೆ ಇದನ್ನು ಜಗಿದಾಗ ಕೆಂಪು ಬಣ್ಣವಾಗುತ್ತದೆ. ಹಾಗೆಯೇ ದೇವರು ಕಣ್ಣಿಗೆ ಕಾಣುವುದಿಲ್ಲ ಆದರೆ ಈ ಲೋಕದ ಸೃಷ್ಟಿಕರ್ತ ಅವನಾಗಿದ್ದಾನೆ ಎಂಬ ಅರ್ಥವನ್ನು ಸೂಚಿಸುತ್ತದೆ.

ಇನ್ನು ಎಲೆ ಅಡಿಕೆ ಜಗಿದಾಗ ಬರುವ ಸುಗಂಧದಂತೆ ಕೀರ್ತಿ ಕೂಡ ಹಬ್ಬಲಿ ಎಂಬ ಆಶಯದೊಂದಿಗೆ ತಾಂಬೂಲ ನೀಡುತ್ತಾರೆ.

 ತಾಂಬೂಲ ಹೇಗೆ ನೀಡಬೇಕು?

ತಾಂಬೂಲ ಹೇಗೆ ನೀಡಬೇಕು?

ತಾಂಬೂಲ ನೀಡುವಾಗ ವೀಳ್ಯದೆಲೆಯ ತುದಿ ಹಾಗೂ ಬಾಳೆಹಣ್ಣಿನ ತುದಿ ತಾಂಬೂಲ ನೀಡುವವರ ಕಡೆ ಇರಬೇಕು. ಇನ್ನೂ ದೇವರಿಗೆ ನೈವೇದ್ಯ ಸಮರ್ಪಣೆ ಮಾಡುವಾಗ ಪೂರ್ವ ಅಥವಾ ಉತ್ತರ ದಿಕ್ಕಿಗೆ ತುದಿ ಬರುವ ತರಹ ವೀಳ್ಯದೆಲೆಯನ್ನು ಇಟ್ಟು ದೇವರಿಗೆ ನೈವೇದ್ಯ ಅರ್ಪಿಸಬೇಕು. ತಾಂಬೂಲ ತೆಗೆದುಕೋಮಡವರು ಅದನ್ನು ದೇವರ ಮುಂದೆ ಇಟ್ಟು ನಮಸ್ಕಾರ ಮಾಡಿ ಬಳಸಬೇಕು. ಮಂಗಳವಾರ ಹಾಗೂ ಶುಕ್ರವಾರ ವೀಳ್ಯೆದೆಲೆ ಬಿಸಾಡಬಾರದು.

English summary

Things to In Keep in Tambula During Shravana Masa Pooja

Shravan masa pooja you must keep things in tambula, read on,
X
Desktop Bottom Promotion