For Quick Alerts
ALLOW NOTIFICATIONS  
For Daily Alerts

ಪವಿತ್ರ ಶ್ರಾವಣ ಮಾಸದ ಈ ಎಂಟು ವಿಷಯಗಳು ಪ್ರತಿಯೊಬ್ಬರಿಗೂ ತಿಳಿದಿರಲೇಬೇಕು

|

ಶ್ರಾವಣ ಮಾಸವು ಹೆಚ್ಚು ಪವಿತ್ರ ಮಾಸವಾಗಿದ್ದು ಈ ಮಾಸದಲ್ಲಿ ವಿಶೇಷವಾಗಿ ಶಿವನ ಆರಾಧನೆಯನ್ನು ಮಾಡಲಾಗುತ್ತದೆ. 16 ಸೋಮವಾರಗಳ ಉಪವಾಸವನ್ನು ಈ ಮಾಸದಲ್ಲಿ ಮಹಿಳೆಯರು ಕನ್ಯೆಯರು ಮಾಡುತ್ತಾರೆ. ಹೆಚ್ಚು ಮಳೆ ಮತ್ತು ಹಬ್ಬಗಳ ಆಗಮನವು ಈ ಮಾಸದಿಂದಲೇ ಆರಂಭವಾಗುತ್ತದೆ. ಒಟ್ಟಾಗಿ ಹೇಳುವುದಾದರೆ ಈ ಮಾಸವೆಂದರೆ ಶಿವನಿಗೆ ಹೆಚ್ಚು ಪ್ರೀತಿಯದಾಗಿದೆ.

ಶಿವನ ಭಕ್ತರು ಈ ಮಾಸದಲ್ಲಿ ಶಿವನಿಗೆ ವಿಶೇಷವಾದ ಪೂಜೆಯನ್ನು ನೆರವೇರಿಸುತ್ತಾರೆ. ಶಂಕರ, ಭೋಲೇನಾಥ, ಭಕ್ತವತ್ಸಲ, ಮಹಾದೇವ, ಶಿವ ಮೊದಲಾದ ಹೆಸರುಗಳಿಂದ ಕರೆಯಲ್ಪಡುವ ಮಹಾದೇವ ಭಕ್ತರ ಮೊರೆಯನ್ನು ಕೇಳುವ ಕರುಣಾಜನಕ ಎಂದೆನಿಸಿಕೊಂಡಿದ್ದಾರೆ. ಸರಳ ಭಕ್ತಿಗೆ ಒಲಿಯುವ ಶಂಕರನಿಗೆ ಅಬ್ಬರದ ಪೂಜೆಯೇ ಬೇಕಾಗಿಲ್ಲ. ತನು ಮನವನ್ನು ಒಗ್ಗೂಡಿಸಿಕೊಂಡು ಶಿವಲಿಂಗದ ಮೇಲೆ ಒಂದೆರಡು ಬಿಲ್ವಪತ್ರೆಯನ್ನು ಹಾಕಿದರೂ ಸಾಕು ಆ ಶಂಕರ ಒಲಿದು ನಮ್ಮ ಕಷ್ಟವನ್ನು ಆಲಿಸಿ ಪರಿಹರಿಸಿಬಿಡುತ್ತಾರೆ. ಅದಾಗ್ಯು ಶ್ರಾವಣ ಮಾಸದಲ್ಲಿ ವಿಶೇಷವಾಗಿ ಸೋಮವಾರಗಳಂದು ಶಿವನಿಗೆ ವಿಶೇಷ ಪೂಜೆಯನ್ನು ಉಪವಾಸವನ್ನು ಕೈಗೊಳ್ಳಲಾಗುತ್ತದೆ.

ಮಹಿಳೆಯರು ತಮ್ಮ ಪತಿಯ ದೀರ್ಘ ಆಯುಷ್ಯಕ್ಕಾಗಿ ಮತ್ತು ಕನ್ಯೆಯರು ಶಿವನಂತಹ ಪತಿ ತಮಗೆ ದೊರೆಯಬೇಕೆಂದು, ಇಚ್ಛಿಸುವ ಪತಿ ತಮಗೆ ಪತಿಯಾಗಿ ದೊರೆಯಬೇಕೆಂದು ಶಿವನಿಗೆ ಉಪವಾಸವನ್ನು ಕೈಗೊಳ್ಳುತ್ತಾರೆ. ಪ್ರಾತಃ ಕಾಲದಲ್ಲಿ ಎದ್ದು ಸ್ನಾನ ಮಾಡಿ ಶಿವನ ಪೂಜೆಯನ್ನು ನಡೆಸಿ ಆಹಾರವನ್ನು ತೆಗೆದುಕೊಳ್ಳದೆಯೇ ತಮ್ಮ ದೈನಂದಿನ ಕೆಲಸವನ್ನು ಮಾಡುತ್ತಾರೆ. ನಂತರ ಸಂಜೆ ಪುನಃ ಶಿವನ ಪೂಜೆಯನ್ನು ಮಾಡಿ ಆಹಾರವನ್ನು ಸೇವಿಸುತ್ತಾರೆ. ಉಪವಾಸ ಮಾಡುವ ಸಮಯದಲ್ಲಿ ಈರುಳ್ಳಿ ಬೆಳ್ಳುಳ್ಳಿ ಸೇವಿಸುವಂತಿಲ್ಲ. ಇಂದಿನ ಲೇಖನದಲ್ಲಿ ಶ್ರಾವಣ ಮಾಸದ ಮಹತ್ವ ಮತ್ತು ಶಿವ ಭಕ್ತರು ಪಾಲಿಸಬೇಕಾದ ಅಂಶಗಳೇನು ಎಂಬುದನ್ನು ನೋಡೋಣ

ಸಮುದ್ರ ಮಂಥನ

1. ಸಮುದ್ರ ಮಂಥನ (ಸಾಗರದ ಮಂಥನ) ಶ್ರಾವಣ ಮಾಸದಲ್ಲಿಯೇ ಸಮುದ್ರ ಮಂಥನ ಮಾಡಲಾಗಿದೆ.

1. ಸಮುದ್ರ ಮಂಥನ (ಸಾಗರದ ಮಂಥನ) ಶ್ರಾವಣ ಮಾಸದಲ್ಲಿಯೇ ಸಮುದ್ರ ಮಂಥನ ಮಾಡಲಾಗಿದೆ.

ಲಕ್ಷ್ಮೀ (ಧನ ದೇವತೆ), ಚಂದ್ರ, ಮಕರಂದ, ಕಲ್ಪಾವೃಕ್ಷ (ಮರದ ಈಡೇರಿಸುವ ಮರ), ರಂಭೆ (ಅಪ್ಸರೆ) ಮತ್ತು ಕಾಮಧೇನು (ಬಯಕೆಯ ಎಲ್ಲಾ ವಸ್ತುಗಳನ್ನು ಒದಗಿಸುವ ಹಸು) ಈ ಮಥನದ ಪರಿಣಾಮವಾಗಿ ಪಡೆದ 14 ಪ್ರಮುಖ ಉತ್ಪನ್ನಗಳಾಗಿವೆ.

2. ಅಂದು ವಿಷವನ್ನೇ ಕುಡಿದ ಶಿವ

2. ಅಂದು ವಿಷವನ್ನೇ ಕುಡಿದ ಶಿವ

ಮಂಥನದ ಸಮಯದಲ್ಲಿ ವಿಷ ಕೂಡ ಸಮುದ್ರದಿಂದ ಉದ್ಭವಿಸುತ್ತದೆ. ಈ ವಿಷವು ಇಡಿಯ ವಿಶ್ವವನ್ನೇ ನಾಶಪಡಿಸುವಷ್ಟು ಶಕ್ತಿಯನ್ನು ಪಡೆದಿದ್ದು. ಶಿವನು ಈ ವಿಷವನ್ನು ಸೇವಿಸುವ ನಿರ್ಧಾರವನ್ನು ಕೈಗೊಳ್ಳುತ್ತಾರೆ. ಶಿವನು ವಿಷವನ್ನು ಕುಡಿದು ಅದನ್ನು ತನ್ನ ಗಂಟಲಿನಲ್ಲಿ ಇಟ್ಟುಕೊಳ್ಳುತ್ತಾರೆ ಇದರಿಂದ ಅವರು ಗಂಟಲು ನೀಲಿಮಯವಾಗುತ್ತದೆ ಆದ್ದರಿಂದಲೇ ನೀಲಕಂಠ ಎಂಬ ಹೆಸರು ಬಂದಿದೆ. ಇದರಿಂದ ತಿಳಿದು ಬರುವುದೇನೆಂದರೆ ಯೋಗಿಗಳು ಋಣಾತ್ಮಕ ಅಂಶಗಳನ್ನು ಇತರರ ಮೇಲೆ ಬೀರುವುದರ ಬದಲಿಗೆ ತನ್ನಲ್ಲಿಯೇ ಇಟ್ಟುಕೊಳ್ಳಬೇಕು ಅದನ್ನು ಜೀರ್ಣಿಸಿಕೊಳ್ಳಬಾರದು. ಇನ್ನು ಪುರಾಣ ಕಥೆಗಳ ಪ್ರಕಾರ ಕ್ಷೀರಸಾಗರ ಮಂಥನದ ಸಮಯದಲ್ಲಿ ಉದ್ಭವಿಸಿದ ಭಯಾನಕ ಹಾಲಾಹಲದಿಂದ ಎಲ್ಲಾ ಜೀವಿಗಳಿಗು ಅಪಾಯವೊದಗುವ ಸಂದರ್ಭ ಬಂದಾಗ ಶಿವನು ಮಧ್ಯ ಪ್ರವೇಶಿಸಿ ಅದನ್ನು ಸೇವಿಸಿದನು. ಇದನ್ನು ಸೇವಿಸಿದ ನಂತರ ಶಿವನು ಮೂರ್ಛೆ ತಪ್ಪಿದನು. ಆಗ ದೇವತೆಗಳ ಸಲಹೆಯಂತೆ ಬ್ರಹ್ಮದೇವನು ಶಿವನಿಗೆ ಜಲಾಭಿಷೇಕವನ್ನು ಮಾಡಿ, ಹಲವಾರು ಗಿಡಮೂಲಿಕೆಗಳಿಂದ ಶಿವನಿಗೆ ಚಿಕಿತ್ಸೆ ನೀಡಿದನು. ಆಗ ಶಿವನು ಪ್ರಜ್ಞೆಗೆಮರಳಿದನು. ಇದರಿಂದಾಗಿಯೇ ಲಿಂಗದ ಮೇಲೆ ಜಲಾಭಿಷೇಕವನ್ನು ಮಾಡುವ ಪದ್ಧತಿ ಅನುಷ್ಟಾನಕ್ಕೆ ಬಂದಿತು.

3. ಶಿರದಲ್ಲಿ ಚಂದ್ರ

3. ಶಿರದಲ್ಲಿ ಚಂದ್ರ

ಶಿವನು ತನ್ನ ಶಿರದಲ್ಲಿ ಚಂದ್ರನನ್ನು ಧರಿಸಿದ್ದು ಈ ಮಾಸದಲ್ಲಾಗಿದೆ. ವಿಷದ ಪರಿಣಾಮವನ್ನು ಶಮನಗೊಳಿಸಲು ಚಂದ್ರನನ್ನು ಬಳಸಲಾಗಿದೆ. ಇದೇ ಕಾರಣಕ್ಕಾಗಿ ಭಕ್ತರು ಶಿವನಿಗೆ ಹಾಲು, ಮೊಸರು, ಹೂವುಗಳು ಮತ್ತು ಬಿಲ್ವ ಪತ್ರೆಯನ್ನು ಈ ಮಾಸದಲ್ಲಿ ಅರ್ಪಿಸುತ್ತಾರೆ.

4. ಸೋಮವಾರದ ಉಪವಾಸ

4. ಸೋಮವಾರದ ಉಪವಾಸ

ಭಕ್ತರು ಈ ತಿಂಗಳಿನಲ್ಲಿ ಸೋಮವಾರ ಭಗವಾನ್ ಶಿವನ ಅನುಗ್ರಹಕ್ಕಾಗಿ ಉಪವಾಸ ಮಾಡುತ್ತಾರೆ. ಜನರು ತಮ್ಮ ನಂಬಿಕೆಗಳು ಮತ್ತು ಅನುಕೂಲಕ್ಕಾಗಿ ಕಟ್ಟುನಿಟ್ಟಾದ ಅಥವಾ ಭಾಗಶಃ ಉಪವಾಸವನ್ನು ಪಾಲಿಸುತ್ತಾರೆ.

ಪರಿಪೂರ್ಣ ಜೀವನ ಪಾಲುದಾರರನ್ನು ತಮ್ಮವರನ್ನಾಗಿಸಲು ಕೆಲವರು ಉಪವಾಸ ಕೈಗೊಂಡರೆ ಈ ಅವಧಿಯ ಎಲ್ಲ ಸೋಮವಾರಗಳಂದು ಉಪವಾಸ ಮಾಡುವುದರಿಂದ ಆರೋಗ್ಯ, ಸಂಪತ್ತು, ಶಕ್ತಿ, ಅಥವಾ ಆಧ್ಯಾತ್ಮಿಕ ಆನಂದವನ್ನು ಭಕ್ತರಿಗೆ ದೊರೆಯುತ್ತದೆ.

5. ಮಂಗಳ ಗೌರಿ ಪೂಜೆ

5. ಮಂಗಳ ಗೌರಿ ಪೂಜೆ

ಮಂಗಳ ಗೌರಿ ಪೂಜೆಯನ್ನು ಶ್ರಾವಣದಲ್ಲಿ ಮಾಡಲಾಗುತ್ತದೆ. ಈ ಮಾಸದಲ್ಲಿ ಹೆಚ್ಚು ಪ್ರಮುಖವಾದ ಹಬ್ಬಗಳನ್ನು ನಡೆಸಲಾಗುತ್ತದೆ.

6. ಶ್ರಾವಣ' ಎಂಬ ಪದದ ಅರ್ಥ

6. ಶ್ರಾವಣ' ಎಂಬ ಪದದ ಅರ್ಥ

'ಶ್ರಾವಣ' ಎಂಬ ಪದದ ಅಕ್ಷರಶಃ ಅರ್ಥ 'ಕೇಳಲು' ಆಗಿದೆ. ಈ ತಿಂಗಳಲ್ಲಿ, ಭಕ್ತರು ತಮ್ಮ ಎಲ್ಲ ಆಧ್ಯಾತ್ಮಿಕ ಅಂಶವನ್ನು ಒಳಗೊಂಡ ಸಂಗತಿಗಳನ್ನು ಭಕ್ತರು ಆಲಿಸಬೇಕು. ಹಿಂದೂ ಕ್ಯಾಲೆಂಡರ್‌ನಲ್ಲಿ ಐದನೇ ತಿಂಗಳು, ಶ್ರಾವಣ ಮಾಸದಂದಯ ಆಧ್ಯಾತ್ಮಿಕ ಪ್ರವಚನಗಳು, ಧರ್ಮೋಪದೇಶಗಳು ಮತ್ತು ಉದಾತ್ತ ಪದಗಳನ್ನು ಆಲಿಸಬೇಕೆಂಬ ಉದಾತ್ತ ಉದ್ದೇಶವನ್ನು ಹೊಂದಿದೆ. ಅಲ್ಲದೆ ಹಿಂದೂ ಧರ್ಮದಲ್ಲಿ ಶ್ರಾವಣ ಎಂದರೆ ಆಲಿಸು ಎಂದಾಗಿದೆ. ಈ ಸಮಯದಲ್ಲಿ ಹೆಚ್ಚಾಗಿ ಪುರಾಣ ಪ್ರವಚನಗಳನ್ನು ಜನರು ಆಲಿಸಬೇಕು ಎಂದೇ ಇದರರ್ಥವಾಗಿದೆ. ಶಿವನ ಕುರಿತಾದ ಸ್ತ್ರೋತ್ರಗಳ ಪಠನೆ, ಶಿವನ ಧ್ಯಾನ ಮೊದಲಾದ ಸತ್ಕಾರ್ಯಗಳನ್ನು ಈ ತಿಂಗಳಿನಲ್ಲಿ ಭಕ್ತರು ನಡೆಸಬೇಕು.

7. ಹುಣ್ಣಿಮೆ ರಾತ್ರಿಯಂದು

7. ಹುಣ್ಣಿಮೆ ರಾತ್ರಿಯಂದು

ಹುಣ್ಣಿಮೆ ರಾತ್ರಿಯಂದು ಶ್ರಾವಣ ಸಮೂಹವನ್ನು ಕಾಣಬಹುದು. ವಾಮನನ ಮೂರು ಹೆಜ್ಜೆಗುರುತುಗಳನ್ನು ಚಿತ್ರಿಸಿದ ಸಮೂಹವಾಗಿದೆ. ನಕ್ಷತ್ರಗಳು ಕೂಡ ಶ್ರವಣ ಕುಮಾರ ತನ್ನ ಕುರುಡ ಪೋಷಕರನ್ನು ಹೊತ್ತೊಯ್ಯುವ ರೀತಿಯಲ್ಲಿ ಕಾಣುತ್ತದೆ.

8. ಋಷಿ ಮಾರ್ಕಂಡೇಯ

8. ಋಷಿ ಮಾರ್ಕಂಡೇಯ

ಋಷಿ ಮಾರ್ಕಂಡೇಯನು ಈ ಮಾಸದಲ್ಲಿ ಮಹಾ ಮೃತ್ಯುಂಜಯ ಮಂತ್ರವನ್ನು ಪಠಿಸಿದರು ಎಂದು ಹೇಳಲಾಗಿದೆ. ಮೂರು ಕಣ್ಣಿನ ದೇವರಾದ ಶಿವನು ಎಲ್ಲಾ ಭಕ್ತರನ್ನು ಅನುಗ್ರಹಿಸುತ್ತಾರೆ. ಈ ಮಾಸದಲ್ಲಿ ಶಿವನ ಆರಾಧನೆಯನ್ನು ಮಾಡಿ ಕೈಲಾಗದವರಿಗೆ ಸಹಾಯ ಮಾಡುತ್ತಾ ಶಿವನ ಅನುಗ್ರಹವನ್ನು ಪಡೆದುಕೊಳ್ಳಬಹುದು. ಪ್ರತಿ ನಿಮಿಷ, ಸೆಕೆಂಡು ಆ ಭಗವಂತನಿಗೆ ಮೀಸಲಾಗಿದೆ. ಅವರ ಚರಣ ಕಮಲಗಳಿಗೆ ನಿಮ್ಮನ್ನು ಅರ್ಪಿಸಿಕೊಂಡು ಶಿವನಿಗೆ ಸಮೀಪವಾಗಿರಿ.

English summary

Things Shiva Devotees Should Know About The Shravan Maas

The Shravan Maas commenced on 1st August for the year 2015 and will continue till 29th August. Characterized by heavy rain deluge and numerous religious festivals, Shravan is considered to be the holiest of all months in a year. It is the favorite month of Lord Shiva.Here, we are listing out a selection of rare facts about Shravan Maas that Shiva devotees would find interesting:
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X