For Quick Alerts
ALLOW NOTIFICATIONS  
For Daily Alerts

ಬೇವು ಬೆಲ್ಲದ ಸವಿ ಸಾರುವ ಯುಗಾದಿ ಹಬ್ಬದ ಮಹತ್ವ

By Deepu
|

ಹೋಳಿಹಬ್ಬದ ರ೦ಗುಗಳು ಮಾಸಲಾರ೦ಭಿಸುತ್ತಿದ್ದ೦ತೆಯೇ, ಪ್ರಕೃತಿಯ ತರುಲತೆಗಳಲ್ಲಿ ಚಿಗುರೆಲೆಗಳು ಕಾಣಿಸಿಕೊ೦ಡು ಅವು ನವಜೀವನವನ್ನು ಪಡೆದುಕೊಳ್ಳುವುದರ ಮೂಲಕ ವಸ೦ತಾಗಮನವನ್ನು ಸಾರುತ್ತವೆ. ಹಿ೦ದೂ ಧರ್ಮದ ಪ್ರಕಾರ, ಸೃಷ್ಟಿಕರ್ತನಾದ ಬ್ರಹ್ಮನು ತನ್ನ ಸೃಷ್ಟಿಕಾರ್ಯವನ್ನು ಚೈತ್ರಮಾಸದ ಈ ತಿ೦ಗಳಿನಲ್ಲಿ (ಮಾರ್ಚ್ - ಏಪ್ರಿಲ್) ಆರ೦ಭಿಸಿದನೆ೦ದು ನ೦ಬಲಾಗಿದೆ.

ಹಿಂದೂ ಶಾಸ್ತ್ರಗಳ ಪ್ರಕಾರ, ಈ ದಿನದಂದು ಬ್ರಹ್ಮನು ಜೀವಿಗಳ ಸೃಷ್ಟಿಗೆ ತೊಡಗಿದನು ಎಂಬುದು ಜನಜನಿತ. ದಕ್ಷಿಣ ಭಾರತದೆಲ್ಲೆಡೆ ಯುಗಾದಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಮರಗಿಡಗಳು ಹಣ್ಣು ಹೂವುಗಳನ್ನು ನೀಡಲು ಪ್ರಾರಂಭಿಸಿದಂತೆ ಹೊಸ ಜೀವನದ ಆರಂಭಕ್ಕೆ ಯುಗಾದಿ ಕಾರಣವಾಗಿದೆ ಎಂಬುದು ಇದರ ಹಿಂದಿರುವ ನಂಬಿಕೆಯಾಗಿದೆ ಈ ಅವಧಿಯಲ್ಲಿ ಹಿ೦ದೂ ಸ೦ಪ್ರದಾಯವು ಅನುಸರಿಸುವ ತಾರೀಖುಪಟ್ಟಿ ಅಥವಾ ಕ್ಯಾಲೆ೦ಡರ್ ಯುಗಾದಿ ಹಬ್ಬದೊ೦ದಿಗೆ ಆರ೦ಭಗೊಳ್ಳುತ್ತದೆ ಹಾಗೂ ಈ ಹಬ್ಬವು ಹೊಸ ವರ್ಷದ ಪ್ರಥಮ ದಿನದಾರ೦ಭವನ್ನು ಪ್ರತಿನಿಧಿಸುತ್ತದೆ....

ಹಬ್ಬದ ಆಚರಣೆಯ ವಿಶೇಷತೆ

ಹಬ್ಬದ ಆಚರಣೆಯ ವಿಶೇಷತೆ

ಆಂಧ್ರ ಮತ್ತು ಕರ್ನಾಟಕಗಳಲ್ಲಿ ಇದು ಯುಗಾದಿಯಾದರೆ, ಮಹಾರಾಷ್ಟ್ರದಲ್ಲಿ ಗುಡಿಪಡ್ವ. ಪಾಡ್ಯಮಿ ದಿವಸ ಗುಡಿಯನ್ನು ಏರಿಸುವುದೇ ಗುಡಿಪಡ್ವ - ಒಂದು ಕೋಲಿಗೆ ವಸ್ತ್ರವನ್ನು ಕಟ್ಟಿ, ಹೂವಿನ ಹಾರವನ್ನು ಏರಿಸಿ 'ಗುಡಿ' ಎಂದು ಮೂಲೆಯಲ್ಲಿ ಇರಿಸುವರು. ಇದು ಹೊಸ ವರುಷದ ಆಗಮನಕ್ಕೆ ಬಾವುಟವನ್ನು ಹಾರಿಸುವುದರ ಸಂಕೇತ. ಆಂಧ್ರ ಪ್ರದೇಶದಲ್ಲಿ ಹುಣಿಸೇಹಣ್ಣು, ಬೆಲ್ಲ, ಮಾವಿನಕಾಯಿ, ಉಪ್ಪು, ಮೆಣಸು, ಬೇವು ಇತ್ಯಾದಿಗಳ ಮಿಶ್ರಣ ಮಾಡಿ ಯುಗಾದಿ ಪಚ್ಚಡಿ ಎಂಬ ಹೆಸರಿನ ಪದಾರ್ಥವನ್ನು ಸೇವಿಸುವರು. ತಳಿರು ತೋರಣವನ್ನು (ಎಳೆಯ ಹಸಿರು ಮಾವಿನೆಲೆ ಮಧ್ಯೆ ಮಧ್ಯೆ ಬೇವಿನ ಎಲೆ ಹೂಗಳ ಗೊಂಚಲು) ಮನೆಗಳ ಮುಂಬಾಗಿಲಿಗೆ ಮತ್ತು ದೇವರ ಮನೆಯ ಬಾಗಿಲಿಗೆ ತಳಿರು ತೋರಣವಾಗಿ ಕಟ್ಟುವರು. ಮನೆಯ ಮುಂದೆ ಬಣ್ಣ ಬಣ್ಣದ ರಂಗೋಲಿಯನ್ನಿಡುವರು. ಮುಂಜಾನೆ ಬೇಗನೆದ್ದು ಅಭ್ಯಂಜನ (ಎಣ್ಣೆ ಸೀಗೇಕಾಯಿಯಿಂದ ತಲೆಯನ್ನು ತೊಳೆದುಕೊಳ್ಳುವುದು) ಮಾಡಿ ಪುಣ್ಯಾಹ ಮಂತ್ರಗಳನ್ನು ಉಚ್ಚರಿಸಿ ಮಾವಿನೆಲೆಯಿಂದ ಮನೆಯ ಎಲ್ಲ ಕಡೆ ಕಳಶದ ನೀರನ್ನು ಸಿಂಪಡಿಸುವರು.

ಯುಗಾದಿ ಪಚಡಿ

ಯುಗಾದಿ ಪಚಡಿ

ಯುಗಾದಿಗೆಂದೇ ತಯಾರಿಸಲಾಗುವ ವಿಶೇಷ ಖಾದ್ಯವಾದ ಯುಗಾದಿ ಪಚಡಿಯನ್ನು ಈ ದಿನ ತಯಾರಿಸಲಾಗುತ್ತದೆ. ಇದು ಆರು ರುಚಿಗಳನ್ನು ಹೊಂದಿದೆ. ಉಪ್ಪು, ಸಿಹಿ, ಹುಳಿ, ಒಗರು, ಕಹಿ ಮತ್ತು ಖಾರ. ಸಂತೋಷಕ್ಕೆ ಸೂಚನೆಯಾದ ಬೆಲ್ಲ, ಜೀವನದಲ್ಲಿ ಆಸಕ್ತಿ ಸೂಚಿಸುವ ಉಪ್ಪು, ಜೀವನದಲ್ಲಿ ಬರುವ ಕಷ್ಟಗಳ ಸೂಚನೆಯಾದ ಬೇವು, ಬದುಕಿನ ಸವಾಲಿನ ಕ್ಷಣಗಳಿಗೆ ಸೂಚನೆಯಾದ ಹುಳಿ, ಹೊಸ ಸವಾಲುಗಳು ಮತ್ತು ಕಾತರವನ್ನು ಸೂಚಿಸುವ ಎಳೆ ಮಾವಿನಕಾಯಿ ತುಂಡುಗಳು, ಬದುಕಿನಲ್ಲಿ ಸಿಟ್ಟಿಗೆ ಕಾರಣವಾದ ಕ್ಷಣಗಳನ್ನು ಸೂಚಿಸುವ ಮೆಣಸಿನ ಹುಡಿ ಹೀಗೆ ಈ ಆರೂ ಸಾಮಾಗ್ರಿಗಳನ್ನು ಬಳಸಿ ಪಚಡಿಯನ್ನು ತಯಾರಿಸಲಾಗುತ್ತದೆ. ಮನುಷ್ಯನು ತನ್ನ ಬದುಕನ್ನು ಸುಂದರಗೊಳಿಸಲು ಈ ಆರೂ ಕಷ್ಟಗಳನ್ನು ಸಮಾನವಾಗಿ ಸ್ವೀಕರಿಸುವ ಮನಸ್ಥೈರ್ಯವನ್ನು ಬೆಳೆಸಿಕೊಳ್ಳಬೇಕು ಎಂಬುದು ಇದರ ಹಿಂದಿರುವ ಮರ್ಮವಾಗಿದೆ.

ಪ್ರಾತಃ ಕಾಲದ ಸ್ನಾನ

ಪ್ರಾತಃ ಕಾಲದ ಸ್ನಾನ

ಜನರು ಬೆಳಗ್ಗೆ ಬೇಗನೆದ್ದು ಸ್ನಾನ ಮಾಡುತ್ತಾರೆ. ತಮ್ಮ ಮನೆಗಳನ್ನು ಮಾವಿನಲೆಯ ತೋರಣಗಳಿಂದ ಅಲಂಕರಿಸುತ್ತಾರೆ. ಶಿವ ಮತ್ತು ಪಾರ್ವತಿಯ ಮಕ್ಕಳಾದ ಗಣೇಶ ಮತ್ತು ಕಾರ್ತಿಕೇಯರಿಗೆ ಮಾವಿನ ಕಾಯಿಗಳೆಂದರೆ ತುಂಬಾ ಇಷ್ಟ ಎಂಬ ಪ್ರತೀತಿ ಇದೆ. ಆದ್ದರಿಂದ ಈ ದೇವರ ಕೃಪೆ ತಮ್ಮ ಮೇಲಿರಲಿ ಎಂದು ಜನರು ಮಾವಿನ ತೋರಣಗಳಿಂದ ಮನೆಯನ್ನು ಅಲಂಕರಿಸುತ್ತಾರೆ.

ವಿಶೇಷ ಭಕ್ಷ್ಯಗಳು

ವಿಶೇಷ ಭಕ್ಷ್ಯಗಳು

ನಮ್ಮ ಯುಗಾದಿ ಹಬ್ಬವು ಪಚಡಿ (ಚಟ್ನಿ) ಯ ಬಳಿಕ ಸವಿಯಬಹುದಾದ ವೈವಿಧ್ಯಮಯ ಸಾ೦ಪ್ರದಾಯಿಕ ರೆಸಿಪಿಗಳನ್ನೊಳಗೊ೦ಡಿದೆ. ಯಗಾದಿಯ ಹಬ್ಬದ೦ದು ತಯಾರಿಸಲಾಗುವ ವಿಶೇಷ ಭಕ್ಷ್ಯವು ಒಬ್ಬಟ್ಟು ಹೋಲುವ೦ತಹ (ಆಕಾರದಲ್ಲಿ) ಸಿಹಿತಿ೦ಡಿಯಾಗಿದ್ದು ಇದನ್ನು ತುಪ್ಪ ಅಥವಾ ಹಾಲು ಅಥವಾ ತೆ೦ಗಿನಹಾಲನ್ನು ಮೇಲೋಗರದ ರೂಪದಲ್ಲಿ ಸೇರಿಸಿಕೊ೦ಡು ಸೇವಿಸಬಹುದು. ಆ೦ಧ್ರಪ್ರದೇಶದಲ್ಲಿ ಬೊಬ್ಬಟ್ಟನ್ನು (ಪುರಾಣ್ ಪೊಳಿ) ಯುಗಾದಿಯ೦ದು ತಯಾರಿಸಲಾಗುತ್ತದೆ.

ರಂಗೋಲಿ

ರಂಗೋಲಿ

ತಮ್ಮ ಮನೆಯ ಅಂಗಳವನ್ನು ಸೆಗಣಿಯಿಂದ ಸಾರಿಸಿ ಸ್ವಚ್ಛಗೊಳಿಸುತ್ತಾರೆ. ಮನೆಯ ಹೊರಗೆ ಸುಂದರವಾದ ರಂಗೋಲಿಯನ್ನು ಬಿಡಿಸುತ್ತಾರೆ.

ಪಂಚಾಂಗ ಶ್ರವಣಂ

ಪಂಚಾಂಗ ಶ್ರವಣಂ

ಮನೆಯವರ ಪಂಚಾಂಗವನ್ನು ಸಿದ್ಧಪಡಿಸುವ ಸಂಪ್ರದಾಯ ಯುಗಾದಿ ಆಚರಣೆಗಳಲ್ಲಿ ಒಂದಾಗಿದೆ. ಮನೆಯವರೆಲ್ಲರ ಪಂಚಾಂಗವನ್ನು ಯುಗಾದಿಯಂದು ಪಂಡಿತರು ತಯಾರಿಸುತ್ತಾರೆ.

ಹೊಸ ವರ್ಷದ ಆಗುಹೋಗುಗಳ ಪ್ರತಿಪಾದನೆ

ಹೊಸ ವರ್ಷದ ಆಗುಹೋಗುಗಳ ಪ್ರತಿಪಾದನೆ

ಯುಗಾದಿ ಹಬ್ಬದ ಪರ್ವದಿನದ೦ದು ಜನರು ಸಾ೦ಪ್ರದಾಯಿಕ ರೀತಿಯಲ್ಲಿ ಜತೆಗೂಡಿ ನೂತನ ವರ್ಷದ ಪ೦ಚಾ೦ಗ ಶ್ರವಣ ಮಾಡುತ್ತಾರೆ. ಸಾಮಾನ್ಯವಾಗಿ ಈ ವಿಧಿವಿಧಾನವು ದೇವಾಲಯಗಳಲ್ಲಿ ಇಲ್ಲವೇ ಟೌನ್ ಹಾಲ್ ಗಳಲ್ಲಿ ನಡೆಯುತ್ತದೆ. ಇದೇ ದಿನದ೦ದು ನೂತನ ಸಾಹಿತ್ಯಿಕ ಬರವಣಿಗೆಗಳ ಹಾಗೂ ಕಾವ್ಯ, ಕವನಗಳ ವಾಚನವನ್ನೂ ಕೈಗೊಳ್ಳಲಾಗುತ್ತದೆ ಹಾಗೂ ಸಾಹಿತ್ಯ ಕೃತಿಗಳ ಕರ್ತೃಗಳನ್ನು ಪ್ರಶಸ್ತಿ, ಪುರಸ್ಕಾರಗಳ ಮೂಲಕ ಗೌರವಿಸುವ ದಿನವೂ ಇದಾಗಿರುತ್ತದೆ.

English summary

Things About Ugadi You Should Know

While the colors of Holi start fainting away, oncoming of spring marks begins new life with plants acquiring new life and shoots leaves. It is believed that the creator of the Hindu Lord Brahma started creation on this month of Chaitra
X