For Quick Alerts
ALLOW NOTIFICATIONS  
For Daily Alerts

ಮಹಾಕಾಲೇಶ್ವರ ಜ್ಯೋತಿರ್ಲಿಂಗದ ಮಹಿಮೆ ಹಾಗೂ ದಂತಕಥೆ

ಆತ್ಮವು ಮೋಕ್ಷವನ್ನು ಪಡೆದುಕೊಳ್ಳವು ಏಳು ಮಹಾನಗರಗಳಲ್ಲಿ ಇದೂ ಕೂಡ ಒಂದು. ಇದು ಹೆಚ್ಚು ಪವಿತ್ರ ಸ್ಥಳವಾಗಿದ್ದು 28 ತೀರ್ಥಗಳನ್ನು, 7 ಸಾಗರ ತೀರ್ಥಗಳನ್ನು ಇದು ಹೊಂದಿದೆ.

By Jaya Subramanya
|

ಮಹಾರಾಷ್ಟ್ರದ ಉಜ್ಜಯಿನಿಯ ತನ್ನ ಸಾಂಸ್ಕೃತಿಕ ಕಲಾಚಾರ ಮತ್ತು ಐತಿಹಾಸಿಕ ಅಂಶಗಳಿಂದ ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಅಂತೆಯೇ ತನ್ನ ಆಧ್ಯಾತ್ಮಿಕ ವಿಚಾರಗಳಿಂದ ಕೂಡ ವಿಶ್ವದಲ್ಲಿರುವ ಹಿಂದೂಗಳ ಮನದಲ್ಲಿ ಪವಿತ್ರ ಸ್ಥಾನವನ್ನು ಪಡೆದುಕೊಂಡಿದೆ.

ಹಿಂದೆ ರಾಜರುಗಳು ಆಳ್ವಿಕೆ ನಡೆಸುತ್ತಿದ್ದ ಉಜ್ಜಿಯಿನಿಯು ರಾಜಧಾನಿಯಾಗಿ ಮೆರೆದಿತ್ತು. ಅಂತೆಯೇ ಆವಂತಿಕಾ, ಅಮರಾವತಿ ಮತ್ತು ಇಂದ್ರಪುರಿಯೆಂಬ ಹೆಸರುಗಳಿಂದ ಕೂಡ ಕರೆಯಲ್ಪಟ್ಟಿತ್ತು. ಇದನ್ನು 'ಸ್ವರ್ಣ ಶೃಂಗ' ಎಂದೂ ಕರೆದಿದ್ದು ಹೆಚ್ಚಿನ ದೇವಸ್ಥಾನಗಳು ಇಲ್ಲಿದ್ದುದ್ದರಿಂದ ಮತ್ತು ಅವುಗಳ ಗೋಪುರವನ್ನು ಚಿನ್ನದಲ್ಲಿ ನಿರ್ಮಿಸುತ್ತಿದ್ದುದರಿಂದ ನಗರಕ್ಕೆ ಈ ಹೆಸರು ಬಂದಿದೆ.

shiva

ಆತ್ಮವು ಮೋಕ್ಷವನ್ನು ಪಡೆದುಕೊಳ್ಳವು ಏಳು ಮಹಾನಗರಗಳಲ್ಲಿ ಇದೂ ಕೂಡ ಒಂದು. ಇದು ಹೆಚ್ಚು ಪವಿತ್ರ ಸ್ಥಳವಾಗಿದ್ದು 28 ತೀರ್ಥಗಳನ್ನು, 7 ಸಾಗರ ತೀರ್ಥಗಳನ್ನು ಇದು ಹೊಂದಿದೆ. ನಗರವು 30 ಶಿವಲಿಂಗವನ್ನು ಒಳಗೊಂಡಿದ್ದು ಇದರಲ್ಲಿ ಅತಿ ಮುಖ್ಯವಾಗಿರುವುದು ಮಹಾಕಾಲ್ ಜ್ಯೋತಿರ್ಲಿಂಗವಾಗಿದೆ. ಪುಣ್ಯ ಕ್ಷೇತ್ರ 'ಮಲ್ಲಿಕಾರ್ಜುನ ಜ್ಯೋತಿರ್ಲಿಂಗದ' ದಂತಕಥೆ

3 ಮತ್ತು 4 ನೇ ಶತಮಾನದಲ್ಲಿ ಈ ಜ್ಯೋತಿರ್ಲಿಂಗವನ್ನು ನಿರ್ಮಿಸಲಾಗಿದೆ ಎಂಬುದಾಗಿ ಐತಿಹಾಸಿಕ ದಾಖಲೆಗಳಿದ್ದು, ಪುರಾಣಗಳಲ್ಲಿ ಸ್ಥಾನವನ್ನು ಪಡೆದುಕೊಂಡಿದೆ. ಇತ್ತೀಚಿನ ದೇವಸ್ಥಾನವನ್ನು 18 ನೇ ಶತಮಾನದಲ್ಲಿ ನಿರ್ಮಿಸಲಾಗಿದೆ.

ಶ್ರೀ ಮಹಾಕಾಲೇಶ್ವರ ದೇವಸ್ಥಾನ
ಮೂರು ಮಹಡಿಗಳಿಂದ ಈ ದೇವಸ್ಥಾನವನ್ನು ನಿರ್ಮಿಸಲಾಗಿದ್ದು, ಮಹಾಕಾಲೇಶ್ವರ, ಓಂಕಾರೇಶ್ವರ ಮತ್ತು ನಾಗಚಂದ್ರೇಶ್ವರ ಲಿಂಗವನ್ನು ಇದು ಹೊಂದಿದೆ. ನಾಗರಪಂಚಮಿ ಹಬ್ಬದಂದು ಮಾತ್ರವೇ ನಾಗಚಂದ್ರೇಶ್ವರ ಲಿಂಗವನ್ನು ಕಾಣಬಹುದಾಗಿದೆ. ದೇವಸ್ಥಾನದ ಸಮೀಪ ದೊಡ್ಡ ನದಿ ಇದ್ದು ಇದನ್ನು ಕೋಟಿ ತೀರ್ಥ ಎಂದಾಗಿ ಕರೆಯಲಾಗಿದೆ.

ಮಹಾಕಾಲೇಶ್ವರದ ಜ್ಯೋತಿರ್ಲಿಂಗವು ದೊಡ್ಡದಾಗಿದ್ದು ಬೆಳ್ಳಿಯಿಂದ ನಿರ್ಮಿತವಾಗಿದೆ. ಗರ್ಭಗೃಹವನ್ನು ಕೂಡ ಬೆಳ್ಳಿಯಿಂದ ನಿರ್ಮಿಸಲಾಗಿದೆ. ಪಾವರ್ತಿ ದೇವಿ, ಗಣಪತಿ ಮತ್ತು ಕಾರ್ತಿಕೇಯನ ಸಣ್ಣ ವಿಗ್ರಹಗಳನ್ನು ಗುಡಿಯಲ್ಲಿ ನಿರ್ಮಿಸಲಾಗಿದೆ. 'ನಂದಾದೀಪ' ವೆಂಬ ದೀಪ ಕೂಡ ದೇವಳದಲ್ಲಿದ್ದು, ಇದನ್ನು ನಂದದಂತೆ ನೋಡಿಕೊಳ್ಳಲಾಗುತ್ತಿದೆ. ಅಂತೆಯೇ ಲಿಂಗದ ಎದುರು ಭಾಗದಲ್ಲಿ ಸುಂದರವಾದ ನಂದಿಯ ವಿಗ್ರಹ ಕೂಡ ಇದೆ. ಮಹಾ ಶಿವರಾತ್ರಿ ಆಚರಣೆಯ ಪ್ರಾಮುಖ್ಯತೆಗಳು

ಮಹಾಕಾಲ ಜ್ಯೋತಿರ್ಲಿಂಗದ ದಂತಕಥೆ
ಈ ಲಿಂಗಕ್ಕೂ ಹಲವಾರು ಕಥೆಗಳಿದ್ದು ಐತಿಹಾಸಿಕ ಮಹತ್ವಗಳನ್ನು ಪಡೆದುಕೊಂಡಿದೆ. ಈ ಕುರಿತಾಗಿ ಇನ್ನಷ್ಟು ಅಂಶಗಳನ್ನು ತಿಳಿದುಕೊಳ್ಳಿ.

ಅಸುರ ದುಶಾನ ಕಥೆ
ಉಜ್ಜೈನಿ ನಗರದಲ್ಲಿ ಒಬ್ಬ ಬ್ರಾಹ್ಮಣನು ತನ್ನ ನಾಲ್ಕು ಪುತ್ರರೊಂದಿಗೆ ವಾಸವಾಗಿರುತ್ತಾನೆ. ಆತ ಮಹಾಶಿಭ ಭಕ್ತನಾಗಿರುತ್ತಾನೆ. ಇದೇ ಸಮಯದಲ್ಲಿ ಅಸುರ ರಾಜನಾದ ದುಶಾನು ಬ್ರಹ್ಮನಿಂದ ವರವನ್ನು ಪಡೆದುಕೊಂಡಿರುತ್ತಾನೆ ಮತ್ತು ವಿಶ್ವದಲ್ಲಿರುವ ಒಳ್ಳೆಯ ಜನರನ್ನು ಹಿಂಸಿಸುವುದಕ್ಕಾಗಿ ಆತ ಈ ವರವನ್ನು ದುರುಪಯೋಗಪಡಿಸಿಕೊಂಡಿರುತ್ತಾನೆ.

ದುಶಾನು ಉಜ್ಜಯಿನಿ ನಗರವನ್ನು ತಲುಪುತ್ತಾನೆ ಮತ್ತು ಅಲ್ಲಿ ವಾಸವಾಗಿದ್ದ ಬ್ರಾಹ್ಮರನ್ನು ಶೋಷಿಸಲು ಆರಂಭಿಸುತ್ತಾನೆ. ಶಿವನನ್ನು ಹೆಚ್ಚು ಭಕ್ತಿಭಾವದಿಂದ ಪೂಜಿಸುತ್ತಿದ್ದ ಅವರಿಗೆ ಆತನ ಹಿಂಸೆಯ ಸ್ಪರ್ಶವೆ ಆಗುವುದಿಲ್ಲ. ಆದರೆ ಆತ ತನ್ನ ದಾಳಿಯನ್ನು ಮುಂದುವರಿಸುತ್ತಲೇ ಇರುತ್ತಾನೆ.

ದುಶಾನ ಅಟ್ಟಹಾಸವನ್ನು ಕಂಡು ಶಿವನು ಕೋಪೋದ್ರಿಕ್ತಗೊಳ್ಳುತ್ತಾರೆ. ಇನ್ನೊಮ್ಮೆ ದುಶಾನು ಬ್ರಾಹ್ಮರನ್ನು ಹಿಂಸಿಸಲು ತೊಡಗಿದಾಗ ಭೂಮಿ ಬಾಯ್ದೆರೆದು ಶಿವನು ಮಹಾಕಾಲ ರೂಪದಲ್ಲಿ ಪ್ರತ್ಯಕ್ಷಗೊಳ್ಳುತ್ತಾರೆ. ಮಹಾಕಾಲ ದೇವನು ದುಶಾನಿಗೆ ತನ್ನ ಕೃತ್ಯವನ್ನು ಬಿಟ್ಟುಬಿಡುವಂತೆ ಎಚ್ಚರಿಸುತ್ತಾರೆ. ಆದರೆ ಅಸುರನು ಈ ಮಾತುಗಳನ್ನು ಕಿವಿಗೆ ಹಾಕಿಕೊಳ್ಳುವುದಿಲ್ಲ. ಇದರಿಂದ ಕೋಪೋದ್ರಿಕ್ತಗೊಂಡ ಶಿವನು ದುಶಾನನ್ನು ತುಂಡುಗಳನ್ನಾಗಿ ಮಾಡಿ ಸುಟ್ಟುಬಿಡುತ್ತಾರೆ. ಆದರೆ ಇದರಿಂದ ಮಹಾಕಾಲನು ಕೋಪ ತಣ್ಣಗಾಗುವುದಿಲ್ಲ. ಶಿವ, ಬ್ರಹ್ಮ ವಿಷ್ಣು ಮತ್ತು ಇತರ ದೇವತೆಗಳು ಪ್ರತ್ಯಕ್ಷರಾಗಿ ಅವರನ್ನು ಶಾಂತಗೊಳಿಸುತ್ತಾರೆ.

ಶ್ರೀಕರನ ಕಥೆ
ಉಜ್ಜಯಿನಿ ನಗರದಲ್ಲಿ ಶ್ರೀಕರನು ವಾಸವಾಗಿದ್ದನು. ಶಿವ ಭಕ್ತನಾಗಿದ್ದ ಶ್ರೀಕರನು ಶಿವನ ಅದಮ್ಯ ಭಕ್ತನಾಗಿದ್ದ. ಉಜ್ಜಯಿನಿಯ ರಾಜ ಚಂದ್ರಶೇಖರ ಶಿವನಿಗಾಗಿ ಪೂಜೆಯನ್ನು ಮಾಡಿಸುತ್ತಿದ್ದನು. ಶ್ರೀಕರನಿಗೆ ಆ ಪೂಜೆಯಲ್ಲಿ ಭಾಗವಹಿಸಬೇಕಾಗಿತ್ತು ಆದರೆ ಆತನಿಗೆ ಅಲ್ಲಿ ಸ್ಥಾನವಿರಲಿಲ್ಲ. ಇದರಿಂದ ಬೇಸರಗೊಂಡ ಶ್ರೀಕರನು ಅರಣ್ಯಕ್ಕೆ ಧಾವಿಸುತ್ತಾನೆ ಮತ್ತು ಅಲ್ಲಿ ಶಿವನನ್ನು ಆರಾಧಿಸುತ್ತಾನೆ. ಕೆಲವು ಜನರು ಉಜ್ಜಯಿನಿಯ ಮೇಲೆ ದಾಳಿ ನಡೆಸುವ ಯೋಜನೆಯಲ್ಲಿರುವುದು ಶ್ರೀಕರನಿಗೆ ಅರಿವಾಗುತ್ತದೆ.

ಹೆಚ್ಚಿನ ಸೈನ್ಯದೊಂದಿಗೆ ಉಜ್ಜಯಿನಿಯ ಮೇಲೆ ದಾಳಿ ನಡೆಸುವುದು ಅವರ ಯೋಜನೆಯಾಗಿರುತ್ತದೆ. ಬಾಲಕನು ಶಿವನನ್ನು ಪೂಜಿಸಲು ತೊಡಗುತ್ತಾನೆ ಮತ್ತು ತನ್ನ ನಗರವನ್ನು ಶತ್ರುಗಳಿಂದ ಕಾಪಾಡುವಂತೆ ಬೇಡಿಕೊಳ್ಳುತ್ತಾನೆ. ಶಿವನು ಬಾಲಕನ ಭಕ್ತಿಗೆ ಮೆಚ್ಚಿ ಶತ್ರುಗಳನ್ನು ಸಂಹಿಸುತ್ತಾರೆ. ಅಂತೆಯೇ ನಗರವನ್ನು ಕಾಪಾಡಲು ಅಲ್ಲಿಯೇ ನೆಲೆಗೊಳ್ಳುವುದಾಗಿ ಕೂಡ ಬಾಲಕನಿಗೆ ವಚನವನ್ನು ನೀಡುತ್ತಾರೆ. ಶಿವನ ಹೆಸರುಗಳಲ್ಲಿ ಅಡಗಿದೆ ಸಕಲ ಸಂಕಷ್ಟ ನಿವಾರಣೆ!

ಮಹಾಕಾಲೇಶ್ವರ ದೇವಸ್ಥಾನದ ಮಹತ್ವ
ಭಸ್ಮ ಆರತಿಯು ಈ ದೇವಸ್ಥಾನದ ಹೆಚ್ಚು ವೈಶಿಷ್ಟ್ಯಪೂರ್ಣ ಅಂಶವಾಗಿದೆ. ಲಿಂಗಕ್ಕೆ ಈ ಆರತಿಯು ಒಂದು ಬಾರಿ ನಡೆಯುತ್ತದೆ ಅದೂ ಬೆಳಗ್ಗಿನ ಜಾವದಲ್ಲಿ ಇದನ್ನು ಮಾಡುತ್ತಾರೆ. ನಂತರ ಲಿಂಗಕ್ಕೆ ಅಭಿಷೇಕವನ್ನು ನಡೆಸುತ್ತಾರೆ. ಲಿಂಗವನ್ನು 'ಚಿತಾಭಸ್ಮದಲ್ಲಿ' ಮುಚ್ಚುತ್ತಾರೆ. ಈ ಭಸ್ಮವು ಚಿತೆಯನ್ನು ಅಗೆದು ತರುವ ಭಸ್ಮವಾಗಿದೆ. ಸ್ನಾನವನ್ನು ಮಾಡಿ ಈ ಅಪಚಿತ್ರವಾದ ಭಸ್ಮವನ್ನು ತೆಗೆದುಕೊಂಡು ಬರುತ್ತಾರೆ. ಆದರೆ ಈ ಭಸ್ಮವನ್ನು ಲಿಂಗಕ್ಕೆ ಸಮರ್ಪಿಸಿದ ನಂತರ ಅದು ಪವಿತ್ರವಾಗುತ್ತದೆ.

ಜ್ಯೋತಿರ್ಲಿಂಗದ ಜಾತ್ರೆ
ಮಹಾಶಿವರಾತ್ರಿ ಹಬ್ಬದಂದು ದೇವಳಕ್ಕೆ ಭೇಟಿ ನೀಡುವುದು ಉತ್ತಮ ಸಮಯವಾಗಿದೆ. ಈ ಹಬ್ಬವನ್ನು ಹೆಚ್ಚು ಸಂಭ್ರಮಗಳಿಂದ ಆಚರಿಸುತ್ತಾರೆ ಮತ್ತು ಭಕ್ತರು ಈ ದಿನದಂದು ಶ್ರದ್ಧಾಭಕ್ತಯಿಂದ ಶಿವನನ್ನು ಆರಾಧಿಸುತ್ತಾರೆ.

English summary

The Third Jyotirlinga – Mahakaleshwar Jyotirlinga

The city of Ujjain, Maharashtra, is rich in culture and historical value. It also holds a special place in the hearts of the Hindus around the world as a city of immense spiritual significance. Throughout the history, Ujjain has been the capital city for many rulers and has been called Avantika, Amaravati and Indrapuri in the past. It is also called 'Swarna Shringa' due to the many temples and their towers of gold in the city.
X
Desktop Bottom Promotion