For Quick Alerts
ALLOW NOTIFICATIONS  
For Daily Alerts

ಯೋಗ: ವಜ್ರಾಸನ ಹುಟ್ಟಿಕೊಂಡ ಸ್ವಾರಸ್ಯಕರ ಕತೆ

|

ಯೋಗದಲ್ಲಿ ವಜ್ರಾಸನ ಎಂಬ ಭಂಗಿಯಿದೆ. ಈ ಆಸನವು ಅಭ್ಯಾಸ ಮಾಡುವುದರಿಂದ ದೇಹವನ್ನು ವಜ್ರಾಯುಧದಂತೆ ಬಲಶಾಲಿಯನ್ನಾಗಿಸುತ್ತದೆ. ಇದು ತುಂಬಾ ಸರಳವಾದ ಆಸನವಾಗಿದ್ದು, ಈ ಆಸನ ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು. ಊಟದ ಬಳಿಕ ಒಂದು ಐದು ನಿಮಿಷ ವಜ್ರಾಸನದಲ್ಲಿ ಕೂತರೆ ಜೀರ್ಣಕ್ರಿಯೆಗೆ ತುಂಬಾನೇ ಸಹಕಾರಿ.

ಇಸ್ಲಾಂ, ಬೌದ್ಧ ಧರ್ಮದಲ್ಲಿ ಪ್ರಾರ್ಥನೆ ಮಾಡುವಾಗ ಈ ವಜ್ರಾಸನ ಭಂಗಿಯಲ್ಲಿ ಕುಳಿತುಕೊಳ್ಳುತ್ತಾರೆ. ಜಪಾನ್‌ನಲ್ಲಿ ವಜ್ರಾಸನದಲ್ಲಿ ಕುಳಿತುಕೊಳ್ಳುವ ಪದ್ಧತಿ ಇದೆ, ಇದಕ್ಕೆ ಸಿಝಾ ಎಂದು ಕರೆಯುತ್ತಾರೆ. ಟೀ ಸೆರ್ಮನಿ ಮಾಡುವಾಗ ಈ ಭಂಗಿಯಲ್ಲಿ ಕುಳಿತುಕೊಳ್ಳುತ್ತಾರೆ.

ಈ ವಜ್ರಾಸನ ಎಷ್ಟೊಂದು ಉಪಯುಕ್ತ ಎನ್ನುವುದನ್ನು ಯೋಗದಲ್ಲಿ ಹೇಳಲಾಗುತ್ತದೆ. ಅದೇ ಈ ವಜ್ರಾಸನ ಹೇಗೆ ಹುಟ್ಟಿಕೊಂಡಿತು ಎಂಬುವುದಕ್ಕೂ ಒಂದು ಪೌರಾಣಿಕ ಕತೆಯಿದೆ, ಅದರ ಬಗ್ಗೆ ಈ ಲೇಖನದಲ್ಲಿ ಹೇಳಲಾಗಿದೆ.

ಇಂಧ್ರ ದೇವತೆಗಳ ಅಧಿಪತಿ, ವಜ್ರಾಯುಧ ಈತನ ಆಯುಧ, ಆದ್ದರಿಂದಲೇ ಇವನನ್ನು ವಜ್ರಪಾಣಿ ಎಂದು ಕೂಡ ಕರೆಯಲಾಗುತ್ತದೆ. ಈಜಿಪ್ಟ್, ಇರಾನ್‌, ಗ್ರೀಸ್ ಇಲ್ಲಿ ಕೂಡ ಇಂಧ್ರನನ್ನು ದೇವರೆಂದು ಪೂಜಿಸಲಾಗುತ್ತದೆ. ಆ ದೇಶಗಳಲ್ಲಿ ಇಂದ್ರನನ್ನು ಆ್ಯಂಡ್ರಿವ್,ಆ್ಯಂಡ್ರಿಯಾ, ಆ್ಯಂಡ್ರಿಸ್ ಮುಂತಾದ ಹೆಸರಿನಲ್ಲಿ ಪೂಜಿಸಲಾಗುವುದು.

ಇಂಧ್ರನಿಗೆ ವಜ್ರಾಯುಧ ಹೇಗೆ ಸಿಕ್ಕಿತು ಎಂಬುವುದಕ್ಕೆ ಒಂದು ಕತೆಯಿದೆ. ವ್ರಿತ್ರ ಎಂಬ ಅಸುರನ ಕಾಟಕ್ಕೆ ದೇವ ಲೋಕ ಬೇಸತ್ತು ಹೋಗಿರುತ್ತದೆ, ಈತನ ಕಾಟದಿಂದ ಪಾರಾಗಲು ದೇವತೆಗಳು ಇಂಧ್ರನ ಮೊರೆ ಹೋಗುತ್ತಾರೆ. ಆದರೆ ಇರುವ ಯಾವ ಆಯುಧದಿಂದಲೂ ನನ್ನ ಸಾವು ಉಂಟಾಗಬಾರದೆಂದು ವರ ಪಡಿದ ಕಾರಣ ಆತನನ್ನು ಕೊಲ್ಲಲು ಸಾಧ್ಯ ವಾಗುವುದಿಲ್ಲ. ಆತ ಮೂರು ಲೋಕ ವಶಪಡಿಸಿಕೊಂಡು, ಭೂಮಿಯ ನೀರನ್ನು ಕೂಡ ತನ್ನ ವಶದಲ್ಲಿ ಇಟ್ಟುಕೊಳ್ಳುತ್ತಾನೆ.

ಎಲ್ಲಾ ದೇವತೆಗಳು ಒಟ್ಟಾಗಿ ದಧಿಚಿ ಮುನಿಯನ್ನು ಭೇಟಿಯಾಗಿ ತಮ್ಮ ಸಂಕಷ್ಟ ಹೇಳಿಕೊಳ್ಳುತ್ತಾರೆ. ಆಗ ಮುನಿಯು ಲೋಕ ಕಲ್ಯಾಣಕ್ಕಾಗಿ ತನ್ನ ದೇಹವನ್ನು ತ್ಯಾಗ ಮಾಡುತ್ತಾನೆ. ಆ ಮುನಿಯ ಮೂಳೆಯಿಂದ ವಿಶ್ವಕರ್ಮ ತಯಾರಿಸಿದ ಆಯುಧವೇ ವಜ್ರಾಯುಧ. ಇದನ್ನು ಬಳಸಿ ಇಂಧ್ರ ಆ ಅಸುರನನ್ನು ಕೊಲ್ಲುತ್ತಾನೆ. ಭೂಮಿಗೆ ನೀರನ್ನು ಮರಳಿಸುತ್ತಾನೆ. ಇದು ವಜ್ರಾಸನದ ಕತೆ.

ಈ ವಜ್ರಾಸನ ಅಭ್ಯಾಸ ಮಾಡುವುದರಿಂದ ಬೆನ್ನು ಮೂಳೆ ಬಲಶಾಲಿಯಾಗುವುದು.

English summary

The Story of Vajrasana: The Mythology and History of the Vajrasana Yoga Pose

Here are Mythology story of Vajrasana yoga pose, read on....
X