For Quick Alerts
ALLOW NOTIFICATIONS  
For Daily Alerts

ಅಂಗುಲಿಮಾಲಾ ಮತ್ತು ಭಗವಾನ್ ಬುದ್ಧನ ಕಥೆ

|

ದಟ್ಟ ಅರಣ್ಯದಲ್ಲಿ ಸಣ್ಣ ಗುಡಿಸಲು ಕಟ್ಟಿಕೊಂಡು, ಅಲ್ಲಿಂದ ಹೋಗುತ್ತಿದ್ದ ಜನರನ್ನು ದೋಚಿ, ಅವರನ್ನು ಕೊಂದು, ಅವರ ಒಂದು ಬೆರಳನ್ನು ತನ್ನ ಕೊರಳಿನಲ್ಲಿದ್ದ ಹಾರಕ್ಕೆ ಸೇರಿಸಿಕೊಳ್ಳುತ್ತಿದ್ದ ಕುಖ್ಯಾತ ದರೋಡೆಕೋರ ಅಂಗುಲಿಮಾಲಾ. ಈತನ ಹೆಸರೇ ಆತನ ಕೃತ್ಯವನ್ನು ಸೂಚಿಸುತ್ತದೆ. ಅಂಗುಲಿ ಎಂದರೆ ಬೆರಳು ಮತ್ತು ಮಾಲಾ ಎಂದರೆ ಮಾಲೆ. ಹೀಗೆ ಸುಮಾರು 999 ಮಂದಿಯನ್ನು ಕೊಲೆ ಮಾಡಿ, ಅವರ ಬೆರಳುಗಳನ್ನು ತನ್ನ ಕೊರಳಿನಲ್ಲಿರುವ ಹಾರದಲ್ಲಿ ಹಾಕಿಕೊಂಡಿದ್ದ ಅಂಗುಲಿಮಾಲಾ ತನ್ನ 1000ನೇ ಕೊಲೆಗಾಗಿ ಕಾಯುತ್ತಲಿದ್ದ.

 

ನೀನು ಒಂದು ಸಾವಿರ ಬೆರಳಿನ ಹಾರವನ್ನು ಕೊರಳಿಗೆ ಹಾಕಿಕೊಂಡರೆ ಅದರಿಂದ ನೀನು ಬೇಕಾಗಿರುವನ್ನು ಸಾಧಿಸಬಹುದು ಎಂದು ಅಂಗುಲಿಮಾಲಾನಿಗೆ ಯಾರೋ ಹೇಳಿ ತಪ್ಪು ದಾರಿ ಹಿಡಿಸಿದ್ದರು. ಇದರಿಂದಾಗಿ ಆತ ಈ ದುಷ್ಕೃತ್ಯಕ್ಕೆ ಸಿಲುಕಿದ್ದ. ಬಾಲ್ಯದಲ್ಲಿ ತುಂಬಾ ಜ್ಞಾನ ವಿದ್ಯಾರ್ಥಿಯಾಗಿದ್ದ ಅಂಗುಲಿಮಾಲಾ ತಪ್ಪು ವ್ಯಕ್ತಿಗಳ ಸವಾಸಕ್ಕೆ ಬಿದ್ದ ಕ್ರೂರತೆ ಮೈಗೂಡಿಸಿಕೊಂಡಿದ್ದ. ಹೀಗೆ ತನ್ನ ಒಂದು ಸಾವಿರ ಬಲಿಗಾಗಿ ಕಾಯುತ್ತಿದ್ದ ಅಂಗುಲಿಮಾಲಾನ ಕಂಡರೆ ಸುತ್ತಮುತ್ತಲಿನ ಹಳ್ಳಿಯವರು ಭಯ ಪಡುತ್ತಿದ್ದರು. ಆತ ಇರುವಂತಹ ಅರಣ್ಯದಲ್ಲಿ ಸಾಗಲು ಯಾರೂ ಮುಂದಾಗುತ್ತಿರಲಿಲ್ಲ.

ಕೊಲ್ಲಲ್ಪಡುವ 1000ನೇ ವ್ಯಕ್ತಿ ಯಾರು?

ಕೊಲ್ಲಲ್ಪಡುವ 1000ನೇ ವ್ಯಕ್ತಿ ಯಾರು?

ಈಗಾಗಲೇ 999 ಮಂದಿಯನ್ನು ಕೊಂದಿರುವ ಅಂಗುಲಿಮಾಲಾ 1000ನೇ ವ್ಯಕ್ತಿಗಾಗಿ ಕಾಯುತ್ತಲಿದ್ದ. ಬೆಟ್ಟದ ಕೆಳಗಿದ್ದ ತನ್ನ ಗುಡಿಸಲಿನಲ್ಲಿ ಕುಳಿತ್ತಿದ್ದ ವೇಳೆ ಆತನಿಗೆ ದಾರಿಯಲ್ಲಿ ಸನ್ಯಾಸಿಯೊಬ್ಬ ಹೋಗುವುದು ಕಾಣಿಸಿಕೊಂಡಿದೆ. ಅದು ಬೇರೆ ಯಾರೂ ಅಲ್ಲ, ಭಗವಾನ್ ಬುದ್ಧ ಆ ದಾರಿಯಲ್ಲಿ ಹೋಗುತ್ತಿದ್ದರು. ಆತ್ಮವು ಒಳ್ಳೆಯದು ಇದ್ದಷ್ಟು, ಕೊಲ್ಲುವುದರಿಂದ ತನಗೆ ಹೆಚ್ಚಿನ ಶಾಂತಿ ಸಿಗುವುದು. ಈ ಸನ್ಯಾಸಿಯ ಬೆರಳನ್ನು ತನ್ನ ಕೊರಳಿನ ಮಾಲೆಗೆ ಸೇರಿಸಿಕೊಳ್ಳುವ ಎಂದು ಅಂಗುಲಿಮಾಲಾ ತನ್ನಲ್ಲೇ ಆಲೋಚನೆ ಮಾಡಿಕೊಳ್ಳುತ್ತಾನೆ.

Most Read: ಭಗವಾನ್ ಬುದ್ಧ ಮತ್ತು ಚಿಕ್ಕ ಹುಡುಗಿಯ ನಡುವಿನ ಇಂಟರೆಸ್ಟಿಂಗ್ ಸ್ಟೋರಿ

ಭಗವಾನ್ ಬುದ್ಧನ ಭೇಟಿಯಾದ ಅಂಗುಲಿಮಾಲಾ

ಭಗವಾನ್ ಬುದ್ಧನ ಭೇಟಿಯಾದ ಅಂಗುಲಿಮಾಲಾ

ಅಂಗುಲಿಮಾಲಾ ಭಗವಾನ್ ಬುದ್ಧನ ಬಳಿಗೆ ಹೋಗಲು ಪ್ರಯತ್ನಿಸಿದ. ಅದಾಗ್ಯೂ, ಭಗವಾನ್ ಬುದ್ಧ ಆತನನ್ನು ದಾಟಿ ಮುಂದೆ ಸಾಗಿದರೂ ಆತ ಅವರನ್ನು ನಿಲ್ಲಿಸಲು ಅಥವಾ ದಾಳಿ ಮಾಡಲು ಪ್ರಯತ್ನಿಸಲಿಲ್ಲ. ಅಂಗುಲಿಮಾಲಾ ತುಂಬಾ ಶಾಂತವಾಗಿದ್ದ ಸನ್ಯಾಸಿಯನ್ನೇ ನೋಡುತ್ತಲಿದ್ದ. ಆ ಸನ್ಯಾಸಿಯಲ್ಲಿದ್ದ ಶಾಂತತೆ ನೋಡಿ ಅಂಗುಲಿಮಾಲಾನಿಗೆ ತುಂಬಾ ಅಚ್ಚರಿಯಾಯಿತು. ಅವರನ್ನು ಕೊಲ್ಲಬೇಕು ಎಂದು ಕೆಲವು ಕ್ಷಣದವರೆಗೆ ಆತ ಮರೆತೇಬಿಟ್ಟಿದ್ದ. ನಾನು ಅವರ ಮೇಲೆ ಹಿಂದಿನಿಂದ ದಾಳಿ ಮಾಡುತ್ತೇನೆ ಎಂದು ಆತ ಆಲೋಚನೆ ಮಾಡಿದ ಮತ್ತು ಭಗವಾನ್ ಬುದ್ಧನ ಹಿಂದೆ ಓಡಲು ಪ್ರಯತ್ನಿಸಿದ. ಆದರೆ ಆತ ಎಷ್ಟು ವೇಗವಾಗಿ ಓಡಿದರೂ ನಡೆದುಕೊಂಡು ಹೋಗುತ್ತಲಿದ್ದ ಭಗವಾನ್ ಬುದ್ಧನನ್ನು ಹಿಡಿಯಲು ಮಾತ್ರ ಸಾಧ್ಯವಾಗುತ್ತಿರಲಿಲ್ಲ. ಅಂಗುಲಿಮಾಲಾ ಓಡುತ್ತಿದ್ದರೆ ಭಗವಾನ್ ಬುದ್ಧ ನಡೆಯುತ್ತಲಿದ್ದರು. ಅಂಗುಲಿಮಾಲಾ ಹಾಗೆ ಓಡುತ್ತಲೇ ಇದ್ದ.

ಭಗವಾನ್ ಬುದ್ಧ ಅಂಗುಲಿಮಾಲಾನ ಜೀವನ ಬದಲಾಯಿಸಿದರು
 

ಭಗವಾನ್ ಬುದ್ಧ ಅಂಗುಲಿಮಾಲಾನ ಜೀವನ ಬದಲಾಯಿಸಿದರು

ಭಗವಾನ್ ಬುದ್ಧನ ಹಿಂದೆ ಓಡಿ ಓಡಿ ಸುಸ್ತಾದ ಅಂಗುಲಿಮಾಲಾ ಕೊನೆಗೆ ಅಲ್ಲೇ ನಿಂತುಕೊಂಡು ಬೊಬ್ಬೆ ಹಾಕಿದ. ``ಓ ಸನ್ಯಾಸಿಯೇ, ದಯವಿಟ್ಟು ನಿಲ್ಲು.'' ಇದಕ್ಕೆ ಉತ್ತರಿಸಿದ ಭಗವಾನ್ ಬುದ್ಧ, ``ನಾನು ಕೆಲವು ವರ್ಷಗಳ ಮೊದಲೇ ಎಲ್ಲಾ ದುಷ್ಟತೆಯನ್ನು ಬಿಟ್ಟು ಬಿಟ್ಟಿದ್ದೇನೆ. ಈಗ ನೀನು ಇದನ್ನೆಲ್ಲಾ ನಿಲ್ಲಿಸುವ ಸಮಯ ಬಂದಿದೆ.''ಭಗವಾನ್ ಬುದ್ಧರಿಂದ ಬಂದ ಈ ಶಬ್ದಗಳು ಅಂಗುಲಿಮಾಲಾನ ಹೃದಯಕ್ಕೆ ನಾಟಿತು. ಈ ಪದಗಳು ಸ್ವತಂತ್ರದ ಕಿಡಿಯಾಗಿ ಆತನ ಮೇಲೆ ಪ್ರಭಾವ ಬೀರಿತು.

ಭಗವಾನ್ ಬುದ್ಧರ ಕಣ್ಣುಗಳನ್ನೇ ತದೇಕ ಚಿತ್ತದಿಂದ ನೋಡಿದ ಅಂಗುಲಿಮಾಲಾನಿಗೆ, ಅವರ ಒಳಗೆ ಒಂದು ಸತ್ಯವು ಸುಡುತ್ತಲಿದೆ ಎಂದು ಮನವರಿಕೆ ಆಯಿತು. ಈ ಆಧ್ಯಾತ್ಮಿಕ ಗುರು ಅದಾಗಲೇ ಆತನ ಹೃದಯವನ್ನು ಕರಗಿಸಿ ಆಗಿತ್ತು. ಆತನ ಕಣ್ಣುಗಳಿಂದ ಕಣ್ಣೀರು ಹರಿದು ಬಂತು. ಭಗವಾನ್ ಬುದ್ಧನ ಕಾಲುಗಳಿಗೆ ಬಿದ್ದ ಅವರು, ತನಗೆ ಕೂಡ ಜೀವನದಲ್ಲಿ ಇದೇ ರೀತಿಯ ಶಾಂತಿ ಹಾಗೂ ಸಂತೋಷ ಸಿಗುವಂತೆ ಮಾಡಬೇಕು ಎಂದು ಅಂಗಲಾಚಿಕೊಂಡ. ಆ ಬಳಿಕ ಬುದ್ಧ ವಾಸಿಸುತ್ತಿದ್ದ ಆಶ್ರಮದಲ್ಲಿ ಅಂಗುಲಿಮಾಲಾ ಕೂಡ ವಾಸಿಸಲು ಆರಂಭಿಸಿದ.

Most Read: ನಾರದ ಮುನಿಗಳ ವೀಣೆಯ ನಾದಕ್ಕೆ ಮನಸೋತ ಹನುಮಂತ!

ಅಂಗುಲಿಮಾಲಾ ಕೂಡ ಧಾರ್ಮಿಕ ಪ್ರಚಾರಕನಾದ

ಕೆಲವು ವರ್ಷಗಳ ಕಾಲ ಭಗವಾನ್ ಬುದ್ಧ ಅವರಿಂದ ಕಲಿತುಕೊಂಡ ಅಂಗುಲಿಮಾಲಾನಿಗೆ ಒಂದು ದಿನ ಧಾರ್ಮಿಕ ಪ್ರಚಾರಕನಾಗಲು ಬುದ್ಧ ಆದೇಶಿಸುವರು. ಭಗವಾನ್ ಬುದ್ಧನ ಆದೇಶ ಪಡೆದ ಅಂಗುಲಿಮಾಲಾ ತಾನು ಪಡೆದಿರುವ ಜ್ಞಾನವನ್ನು ಬೇರೆಯವರಿಗೆ ಹಂಚಲು ಮುಂದೆ ಸಾಗುತ್ತಾನೆ. ಭಗವಾನ್ ಬುದ್ಧ ಅವರನ್ನು ಭೇಟಿಯಾಗುವ ಕೆಲವು ವರ್ಷಗಳ ಮೊದಲು ಇದ್ದ ಅಂಗುಲಿಮಾಲಾ ಈಗ ಸಂಪೂರ್ಣವಾಗಿ ಬದಲಾಗಿ ಹೋಗಿದ್ದ. ಎಲ್ಲಾ ರೀತಿಯ ನಕಾರಾತ್ಮಕತೆಯನ್ನು ನಿಭಾಯಿಸುವುದು ಹೇಗೆ ಮತ್ತು ಹೃದಯದಲ್ಲಿ ಶಾಂತಿ ಪಡೆಯುವುದು ಹೇಗೆ ಎಂದು ಆತನಿಗೆ ಈಗ ಸರಿಯಾಗಿ ತಿಳಿದಿತ್ತು.

ತಾನು ಹಿಂಸೆ ನೀಡಿದ್ದ ಜನರನ್ನು ಅಂಗುಲಿಮಾಲಾ ಭೇಟಿಯಾಗಲು ಹೋದ

ತಾನು ಹಿಂಸೆ ನೀಡಿದ್ದ ಜನರನ್ನು ಅಂಗುಲಿಮಾಲಾ ಭೇಟಿಯಾಗಲು ಹೋದ

ಹಲವಾರು ಜನರನ್ನು ಕೊಂದ ಅದೇ ಹಳ್ಳಿಗೆ ಅಂಗುಲಿಮಾಲಾ ಮತ್ತೆ ಹೋದ. ಅಂಗುಲಿಮಾಲಾ ಬದಲಾಗಿದ್ದರೂ ಜನರು ಮಾತ್ರ ಆತನನ್ನು ನಂಬುವಂತಹ ಸ್ಥಿತಿಯಲ್ಲಿ ಇರಲಿಲ್ಲ. ಜನರು ಆತನ ಮೇಲೆ ಕಲ್ಲು ಮತ್ತು ದೊಣ್ಣೆಗಳಿಂದ ದಾಳಿ ಮಾಡಿದರು. ಇದರಿಂದ ಮೈಮೇಲೆ ಎಲ್ಲಾ ಗಾಯವಾದರೂ ಅಂಗುಲಿಮಾಲಾ ಮಾತ್ರ ನಗುತ್ತಲೇ ಇದನ್ನು ಸಹಿಸಿಕೊಳ್ಳುತ್ತಿದ್ದ. ದೈಹಿಕವಾಗಿ ತೀವ್ರವಾಗಿ ನೋವಾಗಿದ್ದರೂ ಇದನ್ನು ಕಡೆಗಣಿಸಿ, ಆತ ನಗುತ್ತಲೇ ಮುಂದುವರಿಯುತ್ತಿದ್ದ.

ಕರ್ಮದ ರಹಸ್ಯವನ್ನು ಅಂಗುಲಿಮಾಲಾ ತಿಳಿದುಕೊಂಡಿದ್ದ!

ಕರ್ಮದ ರಹಸ್ಯವನ್ನು ಅಂಗುಲಿಮಾಲಾ ತಿಳಿದುಕೊಂಡಿದ್ದ!

ಅಲ್ಲೇ ನಿಂತಿದ್ದ ವ್ಯಕ್ತಿಯೊಬ್ಬರು, ಇಷ್ಟು ಗಾಯವಾಗಿ ರಕ್ತ ಸುರಿಯುತ್ತಿದ್ದರೂ ನಿನ್ನ ಮುಖದಲ್ಲಿ ನಗು ಮಾತ್ರ ಹಾಗೆ ಇದೆ. ಅದು ಹೇಗೆ ಎಂದು ಪ್ರಶ್ನೆ ಮಾಡುವರು. ಇದಕ್ಕೆ ಉತ್ತರಿಸಿದ ಅಂಗುಲಿಮಾಲಾ, ಕೆಲವು ವರ್ಷಗಳ ಮೊದಲು ತಾನೇ ಬಿತ್ತಿದ ಬೀಜವೇ ಇಂದಿನ ಜನರ ಪ್ರತಿಕ್ರಿಯೆಯಾಗಿದೆ. ನನ್ನ ಕರ್ಮವು ಮರಳಿ ಸಿಗುತ್ತಿದೆ. ಅದಾಗ್ಯೂ, ದೈಹಿಕವಾಗಿ ಹೊರಗಿನ ತೊಡಕುಗಳು ಅಂತರಂಗದ ಶಾಂತಿ ಮೇಲೆ ಪರಿಣಾಮ ಬೀರದೆ ಇರಲು ಆತ ಕಲಿತುಕೊಂಡಿದ್ದ. ಜನರ ಪ್ರತಿಕ್ರಿಯೆಗೆ ಆತ ಪ್ರತಿಕ್ರಿಯಿಸುತ್ತಾ ಇದ್ದರೆ, ಆಗ ಕರ್ಮವು ಅಲ್ಲೇ ಬಾಕಿಯಾಗುತ್ತಿತ್ತು ಮತ್ತು ಅದು ಹಾಗೆ ಮುಂದುವರಿಯುತ್ತಿತ್ತು. ಅಂತಿಮವಾಗಿ ಅಂಗುಲಿಮಾಲಾನನ್ನು ಜನರು ಒಪ್ಪಿಕೊಂಡರು.

English summary

The Story Of Angulimala And Lord Buddha

Angulimala had already killed 999 people. He used to kill people and wear a garland of their fingers. He wanted to kill 1000 people like this. He saw Lord Buddha once and thought to make him the 1000th one. However, a meeting with the divine soul Lord Buddha transformed his life. Angulimala's identity before the world changed completely forever.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more