For Quick Alerts
ALLOW NOTIFICATIONS  
For Daily Alerts

ಭೀಮನ ಅಮಾವಾಸ್ಯೆ ವ್ರತ- ಇಲ್ಲಿದೆ ನೋಡಿ ಇಂಟರೆಸ್ಟಿಂಗ್ ಸ್ಟೋರಿ

By
|

ಆಷಾಢ ಮಾಸದ ಅಮವಾಸ್ಯೆಯಂದು ಭೀಮನ ಅಮವಾಸ್ಯೆ ಅಥವಾ ಭೀಮ ಅಮವಾಸ್ಯೆ ವ್ರತವನ್ನು ಮಾಡುತ್ತಾರೆ. ಶಿವ ಮತ್ತು ಪಾರ್ವತಿಯ ಮೇಲೆ ಯುವ ಹುಡುಗಿಯೊಬ್ಬಳು ಇಟ್ಟಂತಹ ಭಕ್ತಿಯ ಕಥೆಯನ್ನು ಇದು ತಿಳಿಸುತ್ತದೆ. ಮಹಿಳೆಯರು ಮತ್ತು ಹುಡುಗಿಯರು ಭೀಮನ ಅಮವಾಸ್ಯೆಯನ್ನು ತನ್ನ ಸಹೋದರ ಮತ್ತು ಪತಿಯ ಆರೋಗ್ಯ ಮತ್ತು ಆಯುಷ್ಯ ಹಾಗೂ ಅವರಿಗೆ ಅಭಿವೃದ್ಧಿಗಾಗಿ ಈ ವ್ರತವನ್ನು ಮಾಡುತ್ತಾರೆ. ಈ ವರ್ಷ ಆಗಸ್ಟ್‌ 8ಕ್ಕೆ ಆಚರಿಸಲಾಗುವುದು.

ಈ ವ್ರತವು ಜನಪ್ರಿಯ ಕಥೆಯೊಂದನ್ನು ಹೊಂದಿದ್ದು ಜ್ಯೋತಿ ಭೀಮೇಶ್ವರ ಪೂಜೆ ಅಥವಾ ಭಾಗೀರಥಿ ನದಿ ಹೋಗಿ ಎಂದು ಕರೆಯಲಾಗಿದೆ. ದಂತಕಥೆಯ ಪ್ರಕಾರ ಬ್ರಾಹ್ಮಣ ದಂಪತಿಗಳು ಕಾಶಿಗೆ ಹೋಗಿ ಶಿವನನ್ನು ಪೂಜಿಸಲು ನಿರ್ಧರಿಸುತ್ತಾರೆ. ಆದರೆ ಆ ದಂಪತಿಗಳಿಗೆ ಒಬ್ಬ ಮಗಳಿದ್ದು ಆಕೆಯನ್ನು ತಮ್ಮೊಂದಿಗೆ ಕರೆದೊಯ್ಯಲು ಅವರಿಗೆ ಇಷ್ಟವಾಗುವುದಿಲ್ಲ. ಏಕೆಂದರೆ ಆಕೆ ಬೆಳೆದ ಹುಡುಗಿಯಾದ್ದರಿಂದ ಆಕೆಯ ಜವಬ್ದಾರಿ ಮಾಡುವುದು ಕಷ್ಟ ಎಂದು ತಿಳಿದು ಮನೆಯಲ್ಲೇ ಆಕೆಯನ್ನು ಬಿಟ್ಟು ಹೋಗಲು ನಿರ್ಧರಿಸುತ್ತಾರೆ.

Lord Shiva

ಅವರ ಹಿರಿಯ ಮಗ ವಿವಾಹಿತನಾಗಿದ್ದರಿಂದ ಪುತ್ರನ ಮನೆಯಲ್ಲಿ ಮಗಳನ್ನು ಬಿಟ್ಟು ಹೋಗಲು ದಂಪತಿಗಳು ನಿರ್ಧರಿಸುತ್ತಾರೆ. ಇನ್ನು ಅವರು ಮರಳಿ ಬರದೇ ಇದ್ದಲ್ಲಿ ಮಗಳಿಗೆ ಮದುವೆ ಮಾಡಿಸು ಎಂದು ತಿಳಿಸಿ ಹೋಗುತ್ತಾರೆ. ವರ್ಷಗಳು ಕಳೆದರೂ ದಂಪತಿಗಳು ಹಿಂತಿರುಗಿ ಬರುವುದಿಲ್ಲ. ಆದರೆ ಪುತ್ರನು ತಂಗಿಯ ಮದುವೆ ಮಾಡಲು ಮನಸ್ಸು ಮಾಡುವುದಿಲ್ಲ ಏಕೆಂದರೆ ಇದರಿಂದ ಸುಮ್ಮನೆ ಹಣ ಖರ್ಚು ಎಂದು ಭಾವಿಸುತ್ತಾನೆ.

ಆದರೆ ಪುತ್ರನ ಕಣ್ಣು ತಂಗಿಯ ಹೆಸರಿನಲ್ಲಿದ್ದ ಆಸ್ತಿಯ ಮೇಲಿತ್ತು ಅದನ್ನು ಆತ ಕಳೆದುಕೊಳ್ಳುವ ಮನಸ್ಸು ಮಾಡುವುದಿಲ್ಲ. ಆ ಪ್ರದೇಶದ ರಾಜನು ಒಮ್ಮೆ ವಿಚಿತ್ರ ಘೋಷಣೆಯನ್ನು ಮಾಡುತ್ತಾನೆ. ತನ್ನ ಮಗನು ಸತ್ತಿದ್ದು ಆತನ ಸಂಸ್ಕಾರವನ್ನು ಮಾಡುವ ಮೊದಲು ಆತನಿಗೆ ವಿವಾಹ ಮಾಡಬೇಕು ಹೀಗಾಗಿ ಪ್ರಜೆಗಳು ಮನಸ್ಸು ಮಾಡಬೇಕು ಎಂದು ತಿಳಿಸುತ್ತಾನೆ.

ಈ ವಿಚಿತ್ರ ಘೋಷಣೆಯನ್ನು ಯಾರೂ ಸಮ್ಮತಿಸುವುದಿಲ್ಲ ಆದರೆ ದುರಾಸೆಯ ಅಣ್ಣನು ರಾಜನ ಮರಣ ಹೊಂದಿದ ಮಗನಿಗೆ ತಂಗಿಯನ್ನು ವಿವಾಹ ಮಾಡಲು ನಿರ್ಧರಿಸುತ್ತಾನೆ. ಅಂತೆಯೇ ಆಕೆಯನ್ನು ಅಣಿಗೊಳಿಸಿ ರಾಜನ ಬಳಿ ಕರೆದುಕೊಂಡು ಬರುತ್ತಾರೆ ಮತ್ತು ಬದಲಿಗೆ ರಾಜನಿಂದ ಹಣವನ್ನು ಪಡೆದುಕೊಳ್ಳುತ್ತಾನೆ. ವಿವಾಹದ ನಂತರ ರಾಜ, ವಧು ಮತ್ತು ಸೈನಿಕರು ರಾಜಕುಮಾರನ ಹೆಣವನ್ನು ಸುಡಲು ಭಾಗೀರಥಿ ನದಿ ತಟಕ್ಕೆ ಕರೆದುಕೊಂಡು ಬರುತ್ತಾರೆ.

ಈ ಸಂದರ್ಭದಲ್ಲಿ ಅತೀವ ಮಳೆ ಉಂಟಾಗುತ್ತದೆ. ಆ ಹುಡುಗಿಯನ್ನು ಬಿಟ್ಟು ಹೆಣದ ಸಮೀಪದಿಂದ ಉಳಿದವರೆಲ್ಲರೂ ಮಳೆಯಿಂದ ತಪ್ಪಿಸಿಕೊಳ್ಳಲು ಓಡುತ್ತಾರೆ. ಹುಡುಗಿಯು ಈಗ ರಾಜಕುಮಾರಿಯಾಗಿದ್ದರಿಂದ ರಾಜಕುಮಾರನ ತಂದೆಯು ಆಕೆಯನ್ನು ಹೆಣವನ್ನು ಬಿಟ್ಟು ಬರುವಂತೆ ತಿಳಿಸುತ್ತಾನೆ. ಆದರೆ ಪತಿಯ ಹೆಣವನ್ನು ಬಿಟ್ಟು ತಾನು ಬರುವುದಿಲ್ಲವೆಂದು ಹುಡುಗಿ ಹೇಳುತ್ತಾಳೆ. ರಾಜಕುಮಾರನ ಶವವನ್ನು ನೋಡುತ್ತಾ ಆಕೆ ಮನಸ್ಸಿನಲ್ಲಿಯೇ ಅಂದುಕೊಳ್ಳುತ್ತಾಳೆ ತನ್ನ ತಂದೆ ತಾಯಿ ತನ್ನ ಜೊತೆಗಿರುತ್ತಿದ್ದರೆ ಈ ರೀತಿ ಸಂಭವಿಸುತ್ತಿರಲಿಲ್ಲವೆಂದು.

ರಾತ್ರಿ ಕಳೆಯಿತು ಮತ್ತು ಮರುದಿನ ಆಷಾಢ ಅಮವಾಸ್ಯೆಯಾಗಿತ್ತು ಮತ್ತು ಪೂಜಾ ದಿನವಾಗಿತ್ತು. ತನ್ನ ಪೋಷಕರನ್ನು ನೆನೆದು ಆಕೆ ವ್ರತವನ್ನು ಮಾಡುತ್ತಾಳೆ. ಸ್ನಾನವನ್ನು ಮಾಡಿ ನದಿ ತಟದಿಂದ ಮಣ್ಣನ್ನು ತೆಗೆದುಕೊಂಡು ಎರಡು ಕಾಳಿಕಾಂಬ ದೀಪಗಳನ್ನು ಮಾಡುತ್ತಾಳೆ. ಬಿದ್ದ ಮರದಿಂದ ನಾರನ್ನು ಸಿದ್ಧ ಮಾಡುತ್ತಾಳೆ ಮತ್ತು ಪೋಷಕರು ಅನುಸರಿಸುವ ವಿಧಾನವನ್ನು ಆಕೆ ಕೂಡ ಅನುಸರಿಸುತ್ತಾಳೆ. ಕಡುಬಿನ ಬದಲಿಗೆ ಆಕೆ ಮಣ್ಣಿನ ಮುದ್ದೆಗಳನ್ನು ತಯಾರಿಸುತ್ತಾಳೆ.

ಆಕೆ ಪೂಜೆಯನ್ನು ಮಾಡುತ್ತಿರುವಾಗ ಯುವ ದಂಪತಿಗಳು ಅಲ್ಲಿಗೆ ಬರುತ್ತಾರೆ ಮತ್ತು ಆಕೆ ಏನು ಮಾಡುತ್ತಿದ್ದಾಳೆ ಎಂದು ಕೇಳುತ್ತಾರೆ. ಶವದ ಮುಂದೆ ಆಕೆ ಪೂಜೆಯನ್ನು ಏಕೆ ಮಾಡುತ್ತಿದ್ದಾಳೆ ಎಂದು ಆ ಯುವ ದಂಪತಿ ಹುಡುಗಿಯನ್ನು ಕೇಳುತ್ತಾರೆ. ತನ್ನ ವಿಧಿಯನ್ನು ಆ ದಂಪತಿಗಳಿಗೆ ಆಕೆ ವಿವರಿಸುತ್ತಾಳೆ ಮತ್ತು ತಾನೀಗ ಒಂಟಿಯಾಗಿದ್ದು ಮಣ್ಣಿನ ಮುದ್ದೆಗಳನ್ನು ಒಡೆಯುವವರು ಯಾರೂ ಇಲ್ಲ ಎಂದು ಹೇಳುತ್ತಾಳೆ. ಯುವಕನು ಅದನ್ನು ತಾನು ಒಡೆಯುವುದಾಗಿ ಹೇಳುತ್ತಾನೆ. ಆ ಮುದ್ದೆಯನ್ನು ಒಡೆದು ಆತ ದೀರ್ಘ ಸುಮಂಗಲಿ ಭವ ಎಂದು ಹರಸುತ್ತಾನೆ (ದೀರ್ಘ ಮತ್ತು ಆನಂದಕರ ವೈವಾಹಿಕ ಜೀವನ ನಿನ್ನದಾಗಲಿ)

ಆಗ ಹುಡುಗಿಯು ನಗುತ್ತಾ ತನ್ನ ಪತಿ ಮರಣ ಹೊಂದಿದ್ದು ಇದು ಹೇಗೆ ನಡೆಯಲು ಸಾಧ್ಯ ಎಂದು ಕೇಳುತ್ತಾಳೆ. ಮರಣ ಹೊಂದಿದ ರಾಜಕುಮಾರನತ್ತ ಅವರು ನೋಡಿ ಆತ ನಿದ್ದೆ ಮಾಡಿದ್ದು ನೀನು ಏಕೆ ಅವನನ್ನು ಎಚ್ಚರಗೊಳಿಸಬಾರದು ಎಂದು ಕೇಳುತ್ತಾರೆ. ಹೋಗಿ ಅವನನ್ನು ಎಬ್ಬಿಸು ಎಂದು ಹೇಳುತ್ತಾರೆ. ಆಶ್ಚರ್ಯದಿಂದ ಆಕೆ ರಾಜಕುಮಾರನನ್ನು ನೋಡುತ್ತಾಳೆ ಮತ್ತು ಆತ ಕಣ್ಣುಗಳನ್ನು ತೆರೆಯುತ್ತಿರುತ್ತಾನೆ. ಆಕೆಗೆ ತನ್ನ ಕಣ್ಣುಗಳನ್ನೇ ನಂಬಲು ಆಗುವುದಿಲ್ಲ. ಕೂಡಲೇ ಅಲ್ಲಿಗೆ ಬಂದಿದ್ದ ಯುವ ದಂಪತಿಗಳು ಯಾರು ಎಂದು ಅವರಿಗೆ ಗೊತ್ತಾಗುತ್ತದೆ ಆದರೆ ಅಷ್ಟೊತ್ತಿಗೆ ಅವರು ಹೋಗಿರುತ್ತಾರೆ.

ದಿವ್ಯ ದಂಪತಿಗಳಾದ ಶಿವ ಪಾರ್ವತಿಯರಿಗೆ ಆಕೆ ಮನಸ್ಸಿನಲ್ಲಿಯೇ ವಂದಿಸುತ್ತಾಳೆ ಮತ್ತು ನಡೆದ ಸಂಗತಿಯನ್ನು ರಾಜಕುಮಾರನಿಗೆ ತಿಳಿಸುತ್ತಾಳೆ. ಹೆಣವನ್ನು ಸುಡಲು ರಾಜ ಮತ್ತು ಪರಿವಾರದವರು ಬಂದಾಗ ರಾಜಕುಮಾರ ಮತ್ತು ಆತನ ಪತ್ನಿ ಶಿವ ಪಾರ್ವತಿಯನ್ನು ನೆನೆಯುತ್ತಿರುವುದನ್ನು ಅವರು ನೋಡುತ್ತಾರೆ. ಈ ಸುದ್ದಿ ಕೂಡಲೇ ಊರಿನಲ್ಲಿ ಹರಡುತ್ತದೆ ಮತ್ತು ಆಷಾಢ ಮಾಸದಲ್ಲಿ ಭೀಮನ ಅಮವಾಸ್ಯೆಯನ್ನು ಮಾಡಲು ಜನರು ಆರಂಭಿಸುತ್ತಾರೆ. ಕಾಳಿಕಾಂಬ ದೀಪಗಳೊಂದಿಗೆ ಈ ವ್ರತವನ್ನು ಮಾಡಬೇಕು. ಮಣ್ಣಿನಿಂದಲೇ ತಯಾರಿಸಿದ ದೀಪಗಳನ್ನು ಕಾಳಿಕಾಂಬ ದೀಪ ಎಂದು ಕರೆಯುತ್ತಾರೆ.

ಈ ದಿನದಂದು ಮದುವೆಯಾಗಿರುವ ಮತ್ತು ಮದುವೆಯಾಗದ ಮಹಿಳೆಯರು ಶಿವ ಹಾಗೂ ಪಾರ್ವತಿಯಲ್ಲಿ ತಮ್ಮ ಕುಟುಂಬದ ಪುರುಷರಿಗೆ ಸುಖ, ಸಮೃದ್ಧಿ ಮತ್ತು ಆರೋಗ್ಯ ನೀಡಲೆಂದು ಪ್ರಾರ್ಥಿಸುತ್ತಾರೆ. ಮದುವೆಯಾಗಿರುವ ಮಹಿಳೆಯರು ತಮ್ಮ ಸಂಬಂಧವು ಶಿವ-ಪಾರ್ವತಿಯಷ್ಟೇ ಗಟ್ಟಿಯಾಗಿರಲಿ ಎಂದು ಪ್ರಾರ್ಥಿಸುತ್ತಾರೆ. ಅಲ್ಲದೆ ಈ ದಿನದಂದು ಮಹಿಳೆಯರು ಕಡುಬು ಮಾಡಿಕೊಂಡು ಅದರಲ್ಲಿ ನಾಣ್ಯವನ್ನು ಅಡಗಿಸಿಡುತ್ತಾರೆ. ಪೂಜೆ ಕೊನೆಗೊಂಡ ಬಳಿಕ ಬಾಲಕರು ಮತ್ತು ಪುರುಷರು ಕಡುಬನ್ನು ಒಡೆದು ಅದರಲ್ಲಿನ ನಾಣ್ಯವನ್ನು ತೆಗೆಯುತ್ತಾರೆ. ಇದರ ಹಿಂದೆ ತುಂಬಾ ಆಸಕ್ತಿದಾಯಕ ಕಥೆಯಿದೆ. ಹಿಂದಿನ ಕಾಲದಲ್ಲಿ ಹುಡುಗಿಯನ್ನು ರಾಜನ ಪ್ರೇತ್ಮತ್ಮಕ್ಕೆ ಮದುವೆ ಮಾಡಿಕೊಡಲಾಗಿತ್ತು. ಆದರೆ ಆ ಹುಡುಗಿ ಶಿವ ಮತ್ತು ಪಾರ್ವತಿಯನ್ನು ತುಂಬಾ ಪೂಜಿಸುತ್ತಿದ್ದಳು. ಇದರಿಂದ ಶಿವ ಮತ್ತು ಪಾರ್ವತಿ ಆಕೆಯ ಭಕ್ತಿಗೆ ಒಲಿದು ಪ್ರತ್ಯಕ್ಷರಾಗಿ ರಾಜನಿಗೆ ಪುನರ್ಜೀವ ನೀಡುತ್ತಾರೆ. ಶಿವನು ಈ ಸಂದರ್ಭದಲ್ಲಿ ಮಣ್ಣಿನ ಕಡುಬನ್ನು ತುಂಡು ಮಾಡುತ್ತಾನೆ. ಇದನ್ನು ದೀರ್ಘಾಯುಷ್ಯ ಮತ್ತು ಸಮೃದ್ಧಿಯ ಸಂಕೇತವೆನ್ನಲಾಗುತ್ತದೆ.

English summary

The Story behind the Bheemana Amavasya Vrata

Karnataka on the Amavasi (new moon day) in Ashada month is based on an unparalleled devotion of a young girl for Lord Shiva and Parvati. Women and girls conduct special puja on the day for a happy and prosperous life and for the wellbeing of brothers and husbands. The popular story, or Katha, associated Jyoti Bhimeshwara puja is known as Bhagirati Nadi Hogi.
X
Desktop Bottom Promotion