For Quick Alerts
ALLOW NOTIFICATIONS  
For Daily Alerts

ವಿಜಯದಶಮಿ 2019: ಈ ಮಹತ್ವದ ದಿನದ ಹಿಂದೆ ಅಡಗಿರುವ ಪುರಾಣ ಕಥೆಗಳಿವು

By Divya Pandith
|

ಬಿಜೋಯಾ ದಶಮಿ ಅಥವಾ ವಿಜಯ ದಶಮಿಯು ನವರಾತ್ರಿಯ ಕೊನೆಯ ದಿನ. ದುರ್ಗಾ ದೇವಿಯ ಹಬ್ಬವನ್ನು ಭಾರತದಾದ್ಯಂತ ವಿವಿಧ ಹೆಸರುಗಳಲ್ಲಿ ಆಚರಿಸುತ್ತಾರೆ. ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಒಂದಾದ ದುರ್ಗಾ ಪೂಜೆಯನ್ನು ಭಾರತದ ಪೂರ್ವ ಭಾಗದಲ್ಲಿ ಪ್ರಮುಖ ಉತ್ಸವವನ್ನಾಗಿ ಆಚರಿಸುತ್ತಾರೆ. ಪಶ್ಚಿಮ ಬಂಗಾಳದಲ್ಲಿ ಈ ಹಬ್ಬದ ರೂಪದಲ್ಲಿ ಬಹಳ ಅದ್ದೂರಿಯಾಗಿ ಆಚರಿಸುತ್ತಾರೆ. ಮುಂಬೈ ಗಣೇಶ ಪೂಜೆಗೆ ಹೆಸರಾದಂತೆಯೇ ಕೋಲ್ಕತ್ತಾ ದುರ್ಗಾ ಪೂಜೆಗೆ ಪ್ರಸಿದ್ಧಿ ಪಡೆದಿದೆ.

ನವರಾತ್ರಿಯ ಕೊನೆಯ ದಿನವಾದ ವಿಜಯ ದಶಮಿಯನ್ನು ದಶಮಿ ತಿಥಿ ಅಥವಾ ಅಶ್ವಿನ್ ತಿಂಗಳ ಹತ್ತನೇ ದಿನದಲ್ಲಿ ಆಚರಿಸಲಾಗುತ್ತದೆ. ವಿಜಯ ಮುಹೂರ್ತವು 14.14 ರಿಂದ 15.02ರ ವರೆಗೆ ಇರುತ್ತದೆ. ಈ 47 ನಿಮಿಷದವರೆಗೆ ಇರುವ ಶುಭ ಮುಹೂರ್ತದಲ್ಲಿ ದೇವಿ ಆರಾಧನೆಯನ್ನು ಮಾಡಬೇಕು. ಅಪರಾಹ್ನ ಪೂಜೆಯ ಸಮಯವು 13.27 ರಿಂದ 15.50ರ ವರೆಗೆ ಇರುವುದು. ಇದು 2 ಗಂಟೆ 23 ನಿಮಿಷಗಳ ಕಾಲ ಇರುತ್ತದೆ.

Vijaya Dashami

ನವರಾತ್ರಿ ಎನ್ನುವ ಪವಿತ್ರ ಹಬ್ಬದ ಆಚರಣೆಯನ್ನು ಒಂಬತ್ತು ದಿನಗಳ ಕಾಲ ದೇವಿಯ ವಿವಿಧ ಅವತಾರಗಳಿಗೆ ಪೂಜೆ ಮಾಡುತ್ತಾರೆ. ವಿಜಯ ದಶಮಿಯ ದಿನ ಭಕ್ತಿ ಭಾವದಿಂದ ದೇವಿಗೆ ಪೂಜೆ ಸಲ್ಲಿಸಿ ಬೀಳ್ಕೊಡಲಾಗುತ್ತದೆ. ಈ ಶ್ರೇಷ್ಠ ಹಬ್ಬ ಅಥವಾ ಉತ್ಸವದ ಆಚರಣೆಯ ಹಿಂದೆ ಅನೇಕ ಪುರಾಣ ಕಥೆಗಳ ನಂಟಿದೆ. ಈ ವಿಶೇಷ ಕಥೆಗಳನ್ನು ತಿಳಿದುಕೊಂಡು ನವರಾತ್ರಿಯ ಆಚರಣೆ ಮಾಡೋಣ ಬನ್ನಿ...

ಪ್ರತೀ ವರ್ಷ ಜನ ಮನ ಸೆಳೆಯುವ, 'ನವರಾತ್ರಿ ಹಬ್ಬ'ದ ಮಹತ್ವ

ಮಹಿಷಾಸುರನ ಸಂಹಾರ...
ವಿಜಯ ದಶಮಿ ಆಚರಣೆಯ ಹಿಂದಿರುವ ಪ್ರಮುಖ ಕಥೆಯೆಂದರೆ ದುರ್ಗಾ ದೇವಿಯು ದುಷ್ಟನಾದ ಮಹಿಷಾಸುರ ಎನ್ನುವ ರಾಕ್ಷಸನನ್ನು ಸಂಹರಿಸಿರುವುದು. ಮಹಿಷಾಸುರನು ಕಾಡೆಮ್ಮೆಯ ರೂಪದಲ್ಲಿ ಕಾಣಿಸಿಕೊಂಡ ಎನ್ನಲಾಗುತ್ತದೆ. ಈ ರಾಕ್ಷಸನು ಯಾವುದೇ ಮನುಷ್ಯನಿಂದ, ದೇವರಿಂದ ಅಥವಾ ವಿಶಿಷ್ಟ ಶಕ್ತಿಯಿಂದ ತನ್ನನ್ನು ಸಂಹರಿಸಲು ಸಾಧ್ಯವಾಗಬಾರದು ಎನ್ನುವ ವರವನ್ನು ಪಡೆದಿದ್ದನು. ತನ್ನ ಅಮರತ್ವದ ವರವನ್ನು ಹೊಂದಿರುವ ರಾಕ್ಷಸ ಅಹಂಕಾರದಿಂದ ಮೂರು ಲೋಕದ ಜನರಿ ಹಾಗೂ ದೇವತೆಗಳಿಗೆ ತೊಂದರೆ ಕೊಡಲು ಪ್ರಾರಂಭಿಸಿದನು. ಆಗ ಎಲ್ಲರೂ ರಾಕ್ಷಸನ ಕಾಟ ತಪ್ಪಿಸಬೇಕೆಂದು ಬೇಡಿಕೊಳ್ಳುತ್ತಿದ್ದರು.

ಮೂರುಲೋಕದ ಜನರ ಪ್ರಾರ್ಥನೆ ಕೇಳಿದ ದೇವಿ ದುರ್ಗೆಯಾಗಿ ಅವತರಿಸಿದಳು. ಭವ್ಯವಾದ ಮತ್ತು ಭಯವನ್ನುಂಟುಮಾಡುವಂತಹ ಶಕ್ತಿ ರೂಪಳಾಗಿ, ಸಿಂಹದ ಮೇಲೆ ಕುಳಿತು, ಹತ್ತು ಕೈಗಳಲ್ಲಿ ಹತ್ತು ಬಗೆಯ ಆಯುಧಗಳನ್ನು ಹಿಡಿದು ಬಂದಳು. ರಾಕ್ಷಸನಾದ ಮಹಿಷಾಸುರನನ್ನು ವಿಜಯ ದಶಮಿಯ ದಿನ ಸಂಹಾರ ಮಾಡಿದಳು. ಅಂದಿನಿಂದ ವಿಜಯ ದಶಮಿಯನ್ನು ಭಕ್ತರು ಬಹಳ ಅದ್ದೂರಿಯಿಂದ ಹಬ್ಬವನ್ನಾಗಿ ಆಚರಿಸಿದರು ಎನ್ನುವ ಪ್ರತೀತಿ ಇದೆ.

ರಾವಣನ ಸೋಲು
ವಿಜಯ ದಶಮಿಯಂದೇ ರಾಕ್ಷಸ ರಾಜನಾದ ರಾವಣನ ಸೋಲಾಯಿತು. ರಾಮನು ದೇವಿಯ ಆಶೀರ್ವಾದ ಪಡೆದು ರಾವಣನನ್ನು ಸೋಲಿಸಿ, ತನ್ನ ಪತ್ನಿ ಸೀತೆಯನ್ನು ಸೆರೆಯಿಂದ ಬಿಡಿಸಿದನು ಎನ್ನಲಾಗುತ್ತದೆ. ಹಾಗಾಗಿಯೇ ಭಾರತದ ವಿವಿಧ ಭಾಗಗಳಲ್ಲಿ ದಸರಾವನ್ನು ಆಚರಿಸಲಾಗುತ್ತದೆ.

ಪಾಂಡವರ ಶಿಕ್ಷೆ ಅಂತ್ಯವಾದ ದಿನ
ಪಾಂಡವರು ದಾಯಾದಿಗಳಾದ ಕೌರವರೊಡನೆ ಪಗಡೆ ಆಟದಲ್ಲಿ ಸೋತು, 12 ವರ್ಷ ವನವಾಸ ಹಾಗೂ 1 ವರ್ಷ ಅಜ್ಞಾತವಾಸ ಅನುಭವಿಸಬೇಕಾಯಿತು. ಪಾಂಡವರು ಈ 13 ವರ್ಷದ ಶಿಕ್ಷೆಯನ್ನು ಮುಗಿಸಿಕೊಂಡು, ಜನರ ಕಣ್ಣಿಗೆ ಮುಕ್ತರಾಗಿ ಕಾಣಿಸಿಕೊಳ್ಳಲು ಆರಂಭವಾದ ದಿನ ವಿಜಯ ದಶಮಿ ದಿನ ಎನ್ನಲಾಗುತ್ತದೆ.

ನವ ದಿನಗಳ ಕಾಲ ಆರಾಧಿಸುವ ದೇವಿಗೆ ಪ್ರಿಯವಾದ ಸರಳ ಪ್ರಸಾದಗಳು

ಶಿವನೊಂದಿಗೆ ದೇವಿಯ ಪುನರ್ಮಿಲನ
ದುರ್ಗಾ ದೇವಿಯು ತನ್ನ 9 ಅವತಾರದಲ್ಲಿ ಮಹಿಷಾಸುರನ ವಿರುದ್ಧ ಹೋರಾಡಿ ಜಯಿಸಿದಳು. ಕೊನೆಯಲ್ಲಿ ಪುನಃ ತನ್ನ ಪತಿಯಾದ ಶಿವ ದೇವನಲ್ಲಿಗೆ ಹಿಂತಿರುಗಿದ ದಿನವೆಂದು ಹೇಳಲಾಗುತ್ತದೆ. ಮಹಿಷಾಸುರನ ಸಂಹಾರದ ನಂತರ ದುರ್ಗಾದೇವಿ ಪುನಃ ದೇವತೆಯಾಗಿ ಕೈಲಾಸದಲ್ಲಿ ಶಿವನೊಂದಿಗೆ ನೆಲೆಸಿದಳು.


ಈ ಕಥೆಯ ಹಿನ್ನೆಲೆಯಲ್ಲಿಯೇ ಭಕ್ತರು 9 ದಿನಗಳ ಕಾಲ ನವರಾತ್ರಿಯನ್ನು ವಿಜೃಂಭಣೆಯಿಂದ ಆಚರಿಸಿ, ಕೊನೆಯ ದಿನ ಅಥವಾ ವಿಜಯ ದಶಮಿಯ ದಿನವನ್ನು ವಧುವರನ ಮನೆಗೆ ಮರಳಿದಂತಹ ಸನ್ನಿವೇಶದಂತೆ ಉತ್ಸವವನ್ನು ಆಚರಿಸುತ್ತಾರೆ.
English summary

The Stories Of Vijaya Dashami

Bijoya Dashami, or Vijaya Dashami, is the final day of celebration during the festival of Durga pooja. While the festival of Durga Pooja is celebrated all over India under various forms and names, Kolkata goes a notch higher in its celebrations. Durga pooja is arguably the most important religious festival of the eastern part of India. The state of West Bengal is home to some of the lavish and exuberant celebrations during this time.
X
Desktop Bottom Promotion