For Quick Alerts
ALLOW NOTIFICATIONS  
For Daily Alerts

ನವರಾತ್ರಿ 2020: ನವರಾತ್ರಿಯ ನವದಿನಗಳ ಅರ್ಥ ಹಾಗೂ ಮಹತ್ವ

By Hemanth
|

ಭೂಲೋಕದಲ್ಲಿ ರಾಕ್ಷಸರ ಅಟ್ಟಹಾಸವು ಎಲ್ಲೆಮೀರಿ, ಅನ್ಯಾಯವು ಅತಿಯಾಗಿ, ಅಧರ್ಮವು ನೆಲೆನಿಂತ ಸಂದರ್ಭದಲ್ಲಿ ದುಷ್ಟ ಸಂಹಾರ ಹಾಗೂ ಶಿಷ್ಟರ ರಕ್ಷಣೆಗೆ ಬಂದಿರುವಾಕೆಯೇ ದುರ್ಗೆ ಮಾತೆ. ದುರ್ಗೆಯು ವಿವಿಧ ರೂಪಗಳಲ್ಲಿ ಬಂದು ಒಬ್ಬೊಬ್ಬ ರಾಕ್ಷಸರನ್ನು ಸಂಹಾರ ಮಾಡಿದಳು ಎನ್ನುವುದು ಪುರಾಣಗಳಲ್ಲಿ ಇದೆ. ನವರೂಪ ಧರಿಸಿದ ದುರ್ಗೆಯನ್ನು ನವರಾತ್ರಿಯ ವೇಳೆ ಪೂಜಿಸಲಾಗುವುದು. ನವರಾತ್ರಿಯು ದುಷ್ಟರನ್ನು ಸಂಹಾರಗೈದು ನ್ಯಾಯನೀತಿ ನೆಲೆ ಮಾಡಿದ ದಿನಗಳು. ಈ ವರ್ಷದ ನವರಾತ್ರಿ ಹಬ್ಬವನ್ನು ಅಕ್ಟೋಬರ್ 17ರಿಂದ ಅಕ್ಟೋಬರ್ 25ರವರೆಗೆ ಆಚರಿಸಲಾಗುವುದು.

ದೇವಿಯು ನವರಾತ್ರಿಯ ಸಂದರ್ಭದಲ್ಲಿ ಮಹಿಷಾಸುರ, ರಕ್ತಬೀಜಾಸುರ ಹೀಗೆ ಹಲವಾರು ರಾಕ್ಷಸರನ್ನು ಕೊಂದು ತನ್ನ ಭಕ್ತರನ್ನು ರಕ್ಷಿಸಿದಳು ಎನ್ನಲಾಗುವುದು. ನವರಾತ್ರಿ ವೇಳೆ ಕೇವಲ ದುರ್ಗೆಯನ್ನು ಮಾತ್ರ ಅಲಂಕಾರ ಮಾಡಿ ಪೂಜಿಸುವುದಲ್ಲದೆ, ಸಂಪೂರ್ಣ ನಗರವನ್ನು ಅಲಂಕರಿಸಿ ಸಂಭ್ರಮ ಹಾಗೂ ಸಡಗರದಿಂದ ನವರಾತ್ರಿ ಆಚರಿಸಲಾಗುವುದು. ಪ್ರತಿಯೊಂದು ದಿನದ ದುರ್ಗೆಯ ಆರಾಧನೆಗೆ ಅದರದ್ದೇ ಆಗಿರುವ ಅರ್ಥವಿದೆ.

ನವರಾತ್ರಿಯ ಮೊದಲ ದಿನದ ದೇವತೆ 'ಶೈಲಪುತ್ರಿ ದೇವಿ' ಆರಾಧನೆ

ನವರಾತ್ರಿಯ ನವದಿನಗಳ ಅರ್ಥ ಹಾಗೂ ಮಹತ್ವದ ಬಗ್ಗೆ ಈ ಲೇಖನದ ಮೂಲಕ ತಿಳಿದುಕೊಳ್ಳುವ. ಒಂದನೇ ದಿನದಿಂದ ಮೂರನೇ ದಿನದ ತನಕ ದುರ್ಗೆಯ ವಿವಿಧ ರೂಪ ಹಾಗೂ ಆಕೆಯ ಪೂಜೆ ಮಾಡಲಾಗುವುದು. ದುರ್ಗೆಯ ಶಕ್ತಿಹಾಗೂ ಅಸ್ತಿತ್ವದ ವಿವಿಧ ರೂಪಗಳನ್ನು ಈ ವೇಳೆ ಪೂಜಿಸಲಾಗುವುದು.

ಒಂದನೇ ದಿನ

ಒಂದನೇ ದಿನ

ಮೊದಲನೇ ದಿನವು ಕುಮಾರಿ ದೇವಿ ಅಥವಾ ಸಣ್ಣ ಹುಡುಗಿ ಆರಾಧನೆಯ ಕೇಂದ್ರವಾಗಿರುವಳು. ಆಕೆ ತುಂಬಾ ತಮಾಷೆ ಹಾಗೂ ಮುಗ್ದವಾಗಿರುವಳು. ಭೂಮಿಯ ಆರಂಭವದ ಸಂಕೇತವೇ ಕುಮಾರಿ ದೇವಿ.

ಎರಡನೇ ದಿನ

ಹದಿಹರೆಯಕ್ಕೆ ಬಂದಿರುವ ಹುಡುಗಿ, ಆದರೆ ಮಹಿಳೆಯಲ್ಲದ ರೂಪವನ್ನು ದೇವಿ ಪಾರ್ವತಿಯು ಧರಿಸಿದ್ದಾಳೆ. ಈ ರೂಪವು ತುಂಬಾ ಹರ್ಷಚಿತ್ತ ಹಾಗೂ ನಾಚಿಕೆಯದ್ದಾಗಿದೆ. ಶಿವ ದೇವರನ್ನು ಮದುವೆಯಾಗಬೇಕೆಂಬ ಮಹಾತ್ವಾಕಾಂಕ್ಷೆಯಲ್ಲಿ ಆಕೆಯೊಳಗೆ ಅದ್ಭುತ ಶಕ್ತಿಯಿರುತ್ತದೆ.

ಮೂರನೇ ದಿನ

ದುರ್ಗೆಯು ಕಾಳಿಯ ರೂಪದಲ್ಲಿ ಅವತಾರವೆತ್ತುವುದು ಮೂರನೇ ದಿನ. ಈ ದಿನ ಆಕೆ ಸಂಪೂರ್ಣ ಮಹಿಳೆಯಾಗಿ ಜಗತ್ತಿನ ಸತ್ಯ ತಿಳಿದುಕೊಂಡಿರುವಳು. ಆಕೆ ತುಂಬಾ ಬಲಶಾಲಿ ಹಾಗೂ ಭಯಂಕರವಾಗಿ ಕಾಣಿಸುವಳು. ಆದರೆ ತನ್ನ ಭಕ್ತರಿಗೆ ಮಾತ್ರ ಪ್ರೀತಿ ತೋರಿಸುವಳು.

ಮೊದಲ ದಿನದಂದು ಜವೆಗೋಧಿಯ ಬೀಜಗಳನ್ನು ಮಣ್ಣು ತುಂಬಿರುವ ಒಂದು ಮಡಕೆಗೆ ಹಾಕಿ ಇಡಲಾಗುತ್ತದೆ. ಇದನ್ನು ಪೂಜೆ ನಡೆಯುವ ಸ್ಥಳದಲ್ಲಿ ಇಟ್ಟು ಇದರ ಬಗ್ಗೆ ಗಮನಹರಿಸಲಾಗುತ್ತದೆ. ನವರಾತ್ರಿ ಕೊನೆಗೊಳ್ಳುವಾಗ ಈ ಬೀಜಗಳು ಮೊಳಕೆ ಬಂದು ಸುಮಾರು ಐದು ಇಂಚಿನಷ್ಟು ದೊಡ್ಡ ಮೊಳಕೆ ಹೊಂದಿರುತ್ತವೆ. ಅಂತಿಮ ದಿನದ ಪೂಜೆಯ ಬಳಿಕ ಭಕ್ತರಿಗೆ ಈ ಮೊಳಕೆ ಕಾಳುಗಳನ್ನು ನೀಡಲಾಗುತ್ತದೆ. ಇದು ದುರ್ಗೆಯ ಆಶೀರ್ವಾದವೆಂದು ಪರಿಗಣಿಸಲಾಗುತ್ತದೆ.

4ನೇ ದಿನದಿಂದ 6ನೇ ದಿನ

4ನೇ ದಿನದಿಂದ 6ನೇ ದಿನ

ಮುಂದಿನ ಮೂರು ದಿನಗಳಲ್ಲಿ ಲಕ್ಷ್ಮೀ ದೇವಿಯ ಪೂಜಿಸಲಾಗುವುದು. ಲಕ್ಷ್ಮೀ ದೇವಿಯು ಸಂಪತ್ತು, ಶಾಂತಿ ಮತ್ತು ಸಮೃದ್ಧಿಯ ದೇವತೆ. ಐದನೇ ದಿನವನ್ನು ಲಲಿತ ಪಂಚಮಿಯೆಂದು ಕರೆಯಲಾಗುವುದು. ಈ ದಿನ ಶಾರದಾ ಪೂಜೆಯ ಆರಂಭವಾಗುವುದು. ಪುಸ್ತಕಗಳನ್ನು ಪೂಜಾ ಸ್ಥಳದಲ್ಲಿಟ್ಟು ನಮಿಸಿ ಪೂಜೆ ಮಾಡಲಾಗುತ್ತದೆ.

ನವ ದಿನಗಳ ಕಾಲ ಆರಾಧಿಸುವ ದೇವಿಗೆ ಪ್ರಿಯವಾದ ಸರಳ ಪ್ರಸಾದಗಳು

ಏಳನೇ ದಿನ

ಏಳನೇ ದಿನ

ಏಳನೇ ದಿನದಂದು ಸರಸ್ವತಿ ದೇವಿಯ ಆರಾಧನೆ ಮಾಡಲಾಗುತ್ತದೆ. ಆಕೆಯನ್ನು ಜ್ಞಾನ, ಕಲೆ ಹಾಗೂ ಕ್ರಿಯಾತ್ಮಕತೆಯ ದೇವತೆಯೆಂದು ಪೂಜಿಸಲಾಗುತ್ತದೆ. ಸರಸ್ವತಿ ದೇವಿಯ ಭಕ್ತರು ತಮಗೆ ಜ್ಞಾನ ಹಾಗೂ ವಿವೇಕ ನೀಡಬೇಕೆಂದು ಪ್ರಾರ್ಥಿಸುವರು. ಲೌಕಿಕ ಬಂಧನ ಮತ್ತು ಮೋಹದಿಂದ ಮುಕ್ತಗೊಳಿಸುವ ತಾಯಿ ಎಂದು ಭಕ್ತರು ಸ್ವರಸ್ವತಿ ದೇವಿಯಲ್ಲಿ ಪ್ರಾರ್ಥಿಸುವರು.

ಎಂಟನೇ ದಿನ

ಎಂಟನೇ ದಿನ

ಎಂಟನೇ ದಿನವು ನವರಾತ್ರಿಯ ಉಪಾಂತ್ಯವಾಗಿದೆ. ಈ ದಿನ ಅಗ್ನಿಯ ಪ್ರಾರ್ಥನೆಗೈದು ಹವನ ಮಾಡಲಾಗುತ್ತದೆ. ದುರ್ಗೆಯ ಆಶೀರ್ವಾದ ಪಡೆಯಲು ಹೀಗೆ ಮಾಡಲಾಗುತ್ತದೆ. ದುರ್ಗೆಯ ಬೀಳ್ಕೋಡುಗೆಗೆ ಸಮಯ ಬಂದಿದೆ ಎನ್ನುವುದು ಇದರ ಅರ್ಥವಾಗಿದೆ. ಹವನಕ್ಕೆ ಪಾಯಸ, ಎಳ್ಳು ಮತ್ತು ಬೆಣ್ಣೆ ಅರ್ಪಿಸಲಾಗುತ್ತದೆ.

9ನೇ ದಿನ

9ನೇ ದಿನ

ನವರಾತ್ರಿಯ 9ನೇ ದಿನವು ತುಂಬಾ ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಗುತ್ತದೆ. ಈ ದಿನವನ್ನು ಮಹಾನವಮಿಯೆಂದು ಕರೆಯಲಾಗುವುದು ಮತ್ತು ಕನ್ಯಾ ಪೂಜೆಯು ಈ ದಿನದಲ್ಲಿ ನಡೆಯುವುದು. ಮದುವೆ ಆಗದೆ ಇರುವ ಒಂಭತ್ತು ಮಂದಿ ಹುಡುಗಿಯರನ್ನು ಈ ದಿನ ಪೂಜಿಸಲಾಗುವುದು. 9 ಹುಡುಗಿಯರಲ್ಲಿ ದುರ್ಗೆಯ 9 ಅವತಾರಗಳನ್ನು ಕಾಣಲಾಗುವುದು. ಮನೆಯಲ್ಲಿರುವ ಮಹಿಳೆಯರು ಹುಡುಗಿಯರ ಪಾದ ತೊಳೆದು ಪೂಜೆ ಮಾಡುವರು. ಹುಡುಗಿಯರಿಗೆ ಒಳ್ಳೆಯ ಆಹಾರ ಮತ್ತು ಹೊಸ ಬಟ್ಟೆ ನೀಡಲಾಗುತ್ತದೆ. ಇದು ತಾಯಿ ದುರ್ಗೆಗೆ ಗೌರವ ನೀಡುವ ಪ್ರತೀಕ ನಡೆಸಲಾಗುತ್ತದೆ.

English summary

Navarathri 2020: Meaning and Importance of Nine Days of Navratri

Navratri is the celebration of the various forms of the Mother Goddess. The story of Navratri tells us how the Demon Mahishasura was defeated by Goddess Durga. The Goddess appeared amongst her devotees in answer to their prayers. She did so to rid the world of evil and to protect her children. The celebrations of Navratri go on for nine whole days. It is not a celebration that holds itself back by any means.
X
Desktop Bottom Promotion