For Quick Alerts
ALLOW NOTIFICATIONS  
For Daily Alerts

ಯೋಗದ ಹಿಂದಿರುವ ಪೌರಾಣಿಕ ಕತೆ-ಎಪಿಸೋಡ್ 3: ವೀರಾಸನ ಹಾಗೂ ಆಂಜನೇಯ ಆಸನದ ಹಿಂದಿರುವ ಸ್ವಾರಸ್ಯಕರ ಕತೆ

|

ಯೋಗದ ಹಿಂದಿರುವ ಪೌರಾಣಿಕ ಕತೆ-ಎಪಿಸೋಡ್ 3

ಈ ಹಿಂದಿನ ಲೇಖನದಲ್ಲಿ ಶಿವ ಮತ್ತು ಓಂಕಾರ, ವೀರಭದ್ರಾಸನ ಕುರಿತು ಹೇಳಿದ್ದೆವು. ಈ ಲೇಖನದಲ್ಲಿ ವೀರಾಸನ ಹಾಗೂ ಆಂಜನೇಯ ಆಸನದ ಬಗ್ಗೆ ಹೇಳಲಿದ್ದೇವೆ. ಯೋಗದಲ್ಲಿ ವೀರಾಸನ ಎನ್ನುವುದು ಸಾಹಸದ ಪ್ರತೀಕವಾಗಿದೆ.

ಯೋಗ ಪುರಾಣದಲ್ಲಿ ವೀರಾಸನ ಹಾಗೂ ಆಂಜನೇಯ ಆಸನಕ್ಕೆ ಕುರಿತಂತೆ ಒಂದು ಸ್ವಾರಸ್ಯಕರವಾದ ಕತೆಯಿದೆ. ಕತೆಯನ್ನು ಇಲ್ಲಿ ಹೇಳಿದ್ದೇವೆ.

ಹನುಮಾನ್

ಹನುಮಾನ್

ಹನುಮಂತ ಧೈರ್ಯ, ಸ್ಥೈರ್ಯ ಹಾಗೂ ಅಸೀಮ ಸಾಹಸಗಳ ಪ್ರತೀಕನಾಗಿದ್ದಾನೆ. ಹನು ಸಂಸ್ಕೃತದಲ್ಲಿ ದವಡೆ ಮಾನ್ ಎಂದರೆ ಮುರಿದ ಎಂಬ ಅರ್ಥವಿದೆ. ವಾಯುಪುತ್ರನಿಗೆ ಈ ಹೆಸರು ಹೇಗೆ ಬಂತು ಎಂಬುವುದರ ಹಿಂದೆ ಸ್ವಾರಸ್ಯಕರ ಕತೆಯಿದೆ.

ರಾಮಾಯಣದ ಪ್ರಕಾರ ಹನುಮಾನ್‌ನ ಬಾಲ್ಯದ ದಿನಗಳಲ್ಲಿ ಒಂದು ಒಂದು ದಿನ ಹನುಮಾನ್‌ಗೆ ತುಂಬಾ ಹಸಿವು ಆಗಿತ್ತು, ಆಗ ಮೇಲೆ ನೋಡಿದರೆ ಕೆಂಪು ಬಣ್ಣದ ಸೂರ್ಯನನ್ನು ಕಾಣುತ್ತಾನೆ. ಸೂರ್ಯನನ್ನೇ ಹಣ್ಣೆಂದು ತಿಳಿದು ಅದನ್ನು ತಿನ್ನಲು ಮೇಲಕ್ಕೆ ಹಾರುತ್ತಾನೆ, ಇನ್ನೇನು ಹನುಮಾನ್ ಸೂರ್ಯನನ್ನು ತಿನ್ನಬೇಕು ಆಗ ಇಂಧ್ರ ತನ್ನ ವಜ್ರಾಯುಧದಿಂದ ಹನುಮಾನ್‌ಗೆ ಹೊಡೆಯುತ್ತಾನೆ, ಹನುಮಾನ್ ದವಡೆ ಮುರಿದು ಪ್ರಜ್ಞೆ ತಪ್ಪಿ ಭೂಮಿಗೆ ಬೀಳುತ್ತಾನೆ. ಇದನ್ನು ನೋಡಿದ ವಾಯು ದೇವನಿಗೆ ಇಂಧ್ರನ ಮೇಲೆ ಕೋಪ ಬರುತ್ತದೆ, ಆತ ವಾಯು ನೀಡುವುದಿಲ್ಲ, ಇದರಿಂದ ಗಾಳಿಯಿಲ್ಲದೆ ತೊಂದರೆ ಉಂಟಾಗುತ್ತದೆ. ಇಂದ್ರನ ಸಹಿತ ಎಲ್ಲಾ ದೇವತೆಗಳು ಬಂದು ವಾಯುವಿನ ಬಳಿ ಕ್ಷಮಿಸುವಂತೆ ಕೇಳುತ್ತಾರೆ ಹಾಗೂ ತಮ್ಮಲ್ಲಿನ ಒಂದೊಂದು ಶಕ್ತಿಯನ್ನು ಹನುಮಾನ್‌ನೀಡುತ್ತಾರೆ. ಹೀಗಾಗಿ ವಾಯುಪುತ್ರನಿಗೆ ಹನುಮಾನ್ ಎಂಬ ಹೆಸರು ಬಂತು.

ರಾಮನ ಭಕ್ತ ಹನುಮಂತ

ರಾಮನ ಭಕ್ತ ಹನುಮಂತ

ರಾಮಾಯಣದ ಪ್ರಕಾರ ಶ್ರೀರಾಮ ವೈಕುಂಠಕ್ಕೆ ಹಿಂತಿರುವಾಗ ಎಲ್ಲಿಯವರೆಗೆ ಜನರು ಶ್ರೀರಾಮ್‌ನ ಹೆಸರು ಹೇಳುತ್ತಾರೋ ಅಲ್ಲಿಯವರೆಗೆ ಜನರ ಬಾಯಲ್ಲಿ ಹನುಮಾನ್‌ ಹೆಸರು ಇರುತ್ತದೆ ಎಂಬ ವರ ನೀಡಿ ಹಿಂತಿರುಗಿದ ಎಂಬ ಕತೆಯಿದೆ.

ಹನುಮಾನ್‌ಗೆ ಸಂಬಂಧಿಸಿದಂತೆ ಯೋಗದಲ್ಲಿ 2 ಆಸನವಿದೆ. ವೀರಾಸನ ಹಾಗೂ ಆಂಜನೇಯ ಆಸನ

ವೀರಾಸನ

ವೀರಾಸನ

ರಾವಣ ಸೀತೆಯನ್ನು ಅಪಹರಿಸಿಕೊಂಡು ಲಂಕೆಗೆ ಹೋದಾಗ ಸೀತೆಯನ್ನು ಪತ್ತೆ ಹಚ್ಚಲು ಹನುಮಾನ್ ಹೋಗುತ್ತಾನೆ. ಸೀತೆಯನ್ನು ಕಂಡು ಹಿಡಿದು ಆಕೆಗೆ ರಾಮನ ಬರುವಿಕೆ ಬಗ್ಗೆ ಹೇಳಿ ರಾಮನಲ್ಲಿ ಬಂದು ಭಕ್ತಿಯಿಂದ ನಮಸ್ಕರಿಸುತ್ತಾನೆ. ಈ ಭಂಗಿಯೇ ವೀರಾಸನವಾಗಿದೆ. ವೀರಾಸನ ಶಕ್ತಿ ಹಾಗೂ ಧೈರ್ಯ, ಸ್ಥೈರ್ಯದ ಸಂಕೇತವಾಗಿದೆ.

 ಆಂಜನೇಯ ಆಸನ

ಆಂಜನೇಯ ಆಸನ

ಒಂದೇ ಜಿಗಿತಕ್ಕೆ ಸಮುದ್ರವನ್ನು ದಾಟಿ ಲಂಕಾ ತಲುಪಿ ಸೀತೆ ಮಾತೆಯನ್ನು ಪತ್ತೆ ಹಚ್ಚಿ, ಶ್ರೀರಾಮನಿಗೆ ತಿಳಿಸುತ್ತಾನೆ. ಶ್ರೀರಾಮ ರಾವಣನೊಂದಿಗೆ ಹೋರಾಡಿ ಸೀತೆಯನ್ನು ಮರಳಿ ತರುತ್ತಾನೆ. ಹನುಮಾನ್‌ನ ಈ ಸಹಾಯಕ್ಕೆ ಸೀತೆ ಅಪೂರ್ವವಾದ ಹಾರವನ್ನು ಹನುಮಾನ್‌ಗೆ ಉಡುಗೊರೆಯಾಗಿ ನೀಡುತ್ತಾಳೆ, ಆಗ ಅದನ್ನು ನಯವಾಗಿ ತಿರಸ್ಕರಿಸಿದ ಹನುಮಾನ್ ತುಂಬಾ ಭಕ್ತಿಯಿಂದ ಶ್ರೀರಾಮ-ಸೀತೆಗೆ ಶಿರಭಾಗುತ್ತಾನೆ. ಈ ಭಂಗಿಯೇ ಆಂಜನೇಯ ಆಸನವಾಗಿದೆ.

English summary

The Mythological Stories of Virasana and Anjaneyasana Yoga Pose

Here are The Mythological Stories of Yoga Pose VIRASANA AND ANJANEYASANA, have a look,
X
Desktop Bottom Promotion