For Quick Alerts
ALLOW NOTIFICATIONS  
For Daily Alerts

ಕೃಷ್ಣ ಜನ್ಮಾಷ್ಠಮಿ 2020: ಅವತಾರ ಪುರುಷ 'ಶ್ರೀ ಕೃಷ್ಣ' ಎಲ್ಲವನ್ನೂ ಬಲ್ಲ ಜಗದ ಸೂತ್ರಧಾರ

By Lekhaka
|

ಶ್ರೀಕೃಷ್ಣ ಪರಮಾತ್ಮನ ಬಾಲ್ಯದ ತುಂಟಾಟಗಳನ್ನು ಯಾರಿಂದ ಮರೆಯಲು ಸಾಧ್ಯ ಹೇಳಿ? ಮನೆಯಲ್ಲಿ ತುಂಟ ಮಕ್ಕಳಿದ್ದರೆ ಅವರನ್ನು ಕೃಷ್ಣನಿಗೆ ಹೋಲಿಸಿ ಮಾತನಾಡುವುದುಂಟು. ಹೀಗೆ ಬಾಲ್ಯದಲ್ಲಿ ಎಲ್ಲರನ್ನೂ ಗೋಳಾಡಿಸುತ್ತಲೇ ಎಲ್ಲರಿಗೂ ಆನಂದವನ್ನುಂಟು ಮಾಡುತ್ತಿದ್ದ ಭಗವಾನ್ ಕೃಷ್ಣನು ತುಂಟಾಟದಿಂದಲೇ ಎಲ್ಲರ ಮನವನ್ನೂ ಮುದಗೊಳಿಸುತ್ತಿದ್ದನು.

ಬಾಲ್ಯದಲ್ಲಿಯೇ ತನ್ನ ಲೀಲಾವಿನೋದಗಳ ಮೂಲಕ ತನ್ನ ಶ್ರೇಷ್ಠತೆಯನ್ನು ಪರಮಾತ್ಮನು ಎಲ್ಲರಿಗೂ ಮನದಟ್ಟು ಮಾಡಿಸುತ್ತಿದ್ದನು. ಕೃಷ್ಣನ ತಾಯಿಗೆ ತನ್ನ ಮಗ ಸಾಮಾನ್ಯದವನಲ್ಲ ಎಂಬ ಮನವರಿಕೆಯನ್ನು ಕೃಷ್ಣನು ಮಾಡಿಸಿದ್ದನು. ಈ ಕುರಿತು ಹಲವಾರು ಕಥೆಗಳನ್ನು ನೀವು ಕಂಡುಕೊಳ್ಳಬಹುದಾಗಿದೆ.

ಈ ಸಾಲಿನ (2020) ಆಗಸ್ಟ 11ರಂದು ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಗುತ್ತಿದೆ. ಇದರ ವಿಶೇಷ ಕೃಷ್ಣನ ಬಗ್ಗೆ ಇನ್ನಷ್ಟು ಮಾಹಿತಿಯನ್ನು ತಿಳಿಯೋಣ.

Lord Krishna

ಒಮ್ಮೆ ಪುಟ್ಟ ಬಾಲಕ ಕೃಷ್ಣನು ಸ್ವಲ್ಪ ಮಣ್ಣನ್ನು ಬಾಯಿಗೆ ತುರುಕಿಕೊಳ್ಳುತ್ತಾನೆ, ಈ ಸಮಯದಲ್ಲಿ ಓಡಿ ಬಂದ ತಾಯಿ ಯಶೋಧೆಯು ಮಗನು ಮಣ್ಣು ತಿನ್ನುತ್ತಿದ್ದುದನ್ನು ನೋಡಿ ಬಾಯೊ ತೆರೆದು ತೋರಿಸುವಂತೆ ಹೇಳುತ್ತಾಳೆ. ಪುಟ್ಟ ಬಾಲಕನು ತನ್ನ ಬಾಯಿಯನ್ನು ತೆರೆದಾಗ ನಿಬ್ಬೆರಗಾಗುತ್ತಾಳೆ ತಾಯಿ ಯಶೋಧೆ. ಏಕೆಂದರೆ ಕೃಷ್ಣನ ಪುಟ್ಟ ಬಾಯಿಯಲ್ಲಿ ಯಶೋಧೆಯು ಸಂಪೂರ್ಣ ವಿಶ್ವವನ್ನೇ ನೋಡುತ್ತಾಳೆ.

ಈ ಬಗೆಯಲ್ಲಿ ತಾಯಿ ಯಶೋಧೆಯು ಮಗನ ಲೀಲಾವಿನೋದವನ್ನು ಕಂಡುಕೊಳ್ಳುತ್ತಾಳೆ. ಭಗವಂತನೇ ಮಾನವ ರೂಪದಲ್ಲಿ ಜನ್ಮತಾಳಿ ಭಕ್ತರ ಉದ್ಧಾರವನ್ನು ಮಾಡುತ್ತಿದ್ದಾನೆ ಎಂಬುದನ್ನು ಆಕೆ ಅರಿತುಕೊಳ್ಳುತ್ತಾಳೆ.

ಮಣ್ಣಾಗಿದ್ದ ಮಗುವಿನ ಬಾಯಿಯನ್ನು ಯಶೋಧೆ ನೀರಿನಿಂದ ತೊಳೆದು ಶುದ್ಧ ಮಾಡುತ್ತಾಳೆ. ಈ ಸಮಯದಲ್ಲಿ ಸಾಮಾನ್ಯ ಮಗುವಿನಂತೆಯೇ ಇನ್ನು ಮುಂದೆ ಹೀಗೆ ಮಾಡಬಾರದೆಂದು ಪುಟ್ಟ ಕಂದಮ್ಮನಿಗೆ ಯಶೋಧೆ ಎಚ್ಚರಿಕೆಯನ್ನು ನೀಡುತ್ತಾಳೆ. ಹೊರಗಿನ ವಿಶ್ವವನ್ನೇ ಭಗವಂತ ತನ್ನಲ್ಲಿ ಆವಾಹಿಸಿಕೊಂಡಿದ್ದಾನೆ ಎಂಬ ಸತ್ಯವನ್ನು ಈ ಅಂಶವು ನಮಗೆ ಮನದಟ್ಟು ಮಾಡಿಕೊಡುತ್ತಿದೆ. ಇಡಿಯ ವಿಶ್ವದಲ್ಲಿ ಹುಲುಮಾನವರು ಅರಿತುಕೊಳ್ಳಲೇಬೇಕಾದ ಸತ್ಯವು ಇದಾಗಿದೆ.

English summary

Krishna Janmashtami 2020: The Lord Reveals Himself-Story From The Bhagavatam

Lord Krishna's childhood may be well known to us, but a deeper understanding of the truth reveals the underlying essence of it. A beautiful incident from Srimad Bhagavatam, about Lord Krishna's childhood may be well known to us, but a deeper understanding of the truth reveals the underlying essence of it. Lord Krishna, when He was a baby crawled to a mud puddle and grabbed some mud and put into His little mouth. The boys from the neighborhood rushed with the news to Yashoda, Krishna's mother.
X
Desktop Bottom Promotion