For Quick Alerts
ALLOW NOTIFICATIONS  
For Daily Alerts

ಶಿವನು ಪಾರ್ವತಿಗೆ ಹೇಳಿದ ಮಹಾನ್ ರಹಸ್ಯವೇನು?

|

ಭಗವಂತ ಶಿವನ ಹೆಸರು ಕೇಳುತ್ತಿದ್ದಂತೆಯೇ ಮನದಲ್ಲಿ ಮೂಡುವ ಚಿತ್ರವೆಂದರೆ ಹಿಮಪರ್ವತದ ಮೇಲೆ ಕುಳಿತು ಶಿಖದಲ್ಲಿ ಚಂದ್ರನನ್ನೂ, ಕೊರಳಲ್ಲಿ ನಾಗನನ್ನೂ, ರುದ್ರಾಕ್ಷಿಮಾಲೆಗಳನ್ನೂ, ಕೈಯಲ್ಲೊಂದು ತ್ರಿಶೂಲ, ಡಮರುಗ ಮತ್ತು ತಲೆಯಿಂದ ಚಿಮ್ಮುತ್ತಿರುವ ಗಂಗೆ, ಹೀಗೆ ಅನೇಕ ರೀತಿಯ ಕಲ್ಪನೆಗಳು ಮನದಲ್ಲಿ ಮೂಡುತ್ತದೆ. ಹಿಂದೂ ಧರ್ಮದಲ್ಲಿ ಶಿವನು "ದೇವಾದಿದೇವ" (ದೇವರುಗಳಿಗೆ ದೇವನಾದ ಅಗ್ರಗಣ್ಯನು) ಎ೦ದೇ ಲೋಕಪ್ರಸಿದ್ಧನಾಗಿರುವವರು. ಬ್ರಹ್ಮ ವಿಷ್ಣು ಮಹೇಶ್ವರ ಎಂಬ ತ್ರಿದೇವರಲ್ಲಿ ಮಹೇಶ್ವರನೇ ಹೆಚ್ಚು ಶಕ್ತಿಶಾಲಿ ಎಂದು ನಂಬುವ ಕಾರಣ ಇತರ ದೇವರುಗಳೂ ಸಂಕಟಬಂದಾಗ ಶಿವನ ಬಳಿ ಸಹಾಯ ಬೇಡಿ ಧಾವಿಸುವ ಹಲವಾರು ದೃಷ್ಟಾಂತಗಳನ್ನು ಪುರಾಣಗಳಲ್ಲಿ ಕಾಣಬಹುದು. ಶಿವನನ್ನು ಭಕ್ತರು ಇನ್ನೂ ಹಲವಾರು ಹೆಸರುಗಳಿಂದ ಕರೆಯುತ್ತಾರೆ.

ಮಹಾದೇವ, ಮಹಾಯೋಗಿ, ಪಶುಪತಿ, ನಟರಾಜ, ಭೈರವ, ವಿಶ್ವನಾಥ, ಭಾವ, ಭೋಲೆನಾಥ ಇತ್ಯಾದಿ. ಅತಿ ಪರಾಕ್ರಮಿಯಾಗಿದ್ದರೂ ಅಗತ್ಯಬೀಳದೇ ಉಪಯೋಗಿಸದ, ಭವ್ಯತೆಯಲ್ಲಿರುವ ಅವಕಾಶವಿದ್ದರೂ ಸರಳವಾದ, ಹಿಮಾಚ್ಛಾದಿತ ಪ್ರದೇಶದಲ್ಲಿ ನೆಲೆಸುವ, ವೈಜ್ರವೈಢೂರ್ಯಗಳಿಂದ ಭೂಷಿತನಾಗಬಹುದಾದರೂ ಸರಳವಾದ ಉಡುಗೆಗಳಿಂದ, ಭಕ್ತನ ನೆರವಿಗೆ ಸದಾ ಧಾವಿಸುವ, ಕೋಪಗೊಂಡರೆ ಭೂಮಿಯನ್ನೇ ಸುಟ್ಟುಬಿಡುವ ಸಾಮರ್ಥ್ಯವಿರುವ ಶಿವ ಇತರ ದೇವರುಗಳಿಗಿಂತ ಭಿನ್ನನೂ, ಜಟಿಲ ಆಗಿದ್ದಾರೆ.

ಹಿಂದೂ ಪುರಾಣದ ಪ್ರಕಾರ ಶಿವ ತ್ರಿಮೂರ್ತಿಗಳಲ್ಲಿ ಪ್ರಮುಖನಾಗಿದ್ದು ಲೋಕವಿನಾಶಕನೂ ಆಗಿದ್ದಾರೆ. ತ್ರಿಮೂರ್ತಿಗಳ ಶಕ್ತಿಯನ್ನು ಅಳೆಯುವುದಾದರೆ ಮೊದಲಿಗೆ ಶಿವ, ಬಳಿಕ ಬ್ರಹ್ಮ ಮತ್ತು ನಂತರದ ಸ್ಥಾನಗಳಲ್ಲಿ ವಿಷ್ಣು ನಿಲ್ಲುತ್ತಾರೆ. ಶಿವನಲ್ಲಿ ಲೋಕವನ್ನೇ ವಿನಾಶಗೊಳಿಸುವ ಶಕ್ತಿಯಿದ್ದರೂ ಈ ಶಕ್ತಿಯನ್ನು ಎಂದಿಗೂ ಅವರು ತಪ್ಪು ಕೆಲಸಗಳಿಗೆ ಬಳಸಲಾರರು. ದುಷ್ಟರ ವಿನಾಶ ಮತ್ತು ದುಷ್ಟಶಕ್ತಿಗಳನ್ನು ನಿವಾರಿಸಲು ಈ ಶಕ್ತಿಯನ್ನು ಬಳಸುವ ಶಿವ ಹಲವು ಬಾರಿ ಮಾತ್ರ ತನ್ನ ಈ ಶಕ್ತಿಯನ್ನು ಬಳಸಿದ್ದಾರೆ. ಶಿವನ ರೂಪವನ್ನು ಪುರಾಣಗಳಲ್ಲಿ ವಿವಿಧ ರೂಪಗಳಲ್ಲಿ ವಿವರಿಸಲಾಗಿದ್ದರೂ ಮೂಲರೂಪದಲ್ಲಿ ಶಿವನಿಗೆ ನಾಲ್ಕು ಕೈ, ನಾಲ್ಕು ಮುಖ ಮತ್ತು ಮೂರು ಕಣ್ಣುಗಳಿರುವಂತೆ ವರ್ಣಿಸಲಾಗಿದೆ.

ಈ ಮೂರನೆಯ ಕಣ್ಣು ಹಣೆಯಲ್ಲಿದ್ದು ಸದಾ ಮುಚ್ಚಿರುತ್ತದೆ. ಈ ಮೂರನೆಯ ಕಣ್ಣೇ ಲೋಕವಿನಾಶಗೊಳಿಸಲು ಶಕ್ಯವಿರುವ ಪ್ರಬಲ ಬೆಳಕಿನ ಕಿರಣಗಳನ್ನು ಸೂಸುತ್ತದೆ. ಪುರಾಣದಲ್ಲಿ ಶಿವ ಪಾರ್ವತಿಯ ಅನುಪಮ ಬಾಂಧವ್ಯವನ್ನು ಅತಿ ಪವಿತ್ರ ಮತ್ತು ಶಕ್ತಿಯುತವೆಂದು ನಂಬಲಾಗಿದೆ. ಭೂಮಿಯಲ್ಲೂ ಅದಕ್ಕಾಗಿಯೇ ಸತಿ ಪತಿಯರನ್ನು ಶಿವ ಪಾರ್ವತಿಗೆ ಹೋಲಿಸಲಾಗುತ್ತದೆ. ಅರ್ಧನಾರೀಶ್ವರ ಎಂಬುದಾಗಿ ಇವರೀರ್ವರನ್ನೂ ಕರೆಯಲಾಗುತ್ತದೆ. ಪತ್ನಿಯಾದವಳು ಪತಿಯ ನೆರಳಾಗಿ ಇರಬೇಕು ಸುಖ ದುಃಖದಲ್ಲಿ ಸಮಪಾಲನ್ನು ಹೊಂದಿರಬೇಕು ಎಂದಾಗಿದೆ. ಅಂತಹ ಅನುಪಮ ಬಾಂಧವ್ಯ ಮೈತ್ರಿಯನ್ನು ನಾವು ಶಿವ ಪಾರ್ವತಿಯರಲ್ಲಿ ಕಾಣಬಹುದಾಗಿದೆ. ಸತಿಯ ಎರಡನೇ ಜನ್ಮವಾಗಿ ಪಾರ್ವತಿಯು ಪರ್ವತರಾಜನ ಮಗಳಾಗಿ ಜನಿಸುತ್ತಾರೆ. ಬಾಲ್ಯದಿಂದಲೇ ಶಿವನನ್ನು ಪತಿಯಾಗಿ ಹೊಂದಬೇಕೆಂಬ ಮಹದಾಸೆ ಆಕೆಯದಾಗಿರುತ್ತದೆ. ಅದಕ್ಕಾಗಿಯೇ ಶಿವನನ್ನು ಕುರಿತು ಕಠಿಣ ತಪಸ್ಸನ್ನು ಕೈಗೊಳ್ಳುತ್ತಾಳೆ.

ಮಹರ್ಷಿ ನಾರದರು ಈ ವಿಚಾರ ಮೊದಲೇ ಗೊತ್ತಿತ್ತು. ಪಾರ್ವತಿಯೇ ಶಿವನ ಮಡದಿ ಎಂದು. ಅದಾಗ್ಯೂ ಪಾರ್ವತಿಯು ಹಲವಾರು ಅಡೆತಡೆಗಳನ್ನು ಎದುರಿಸಿ ಶಿವನ ಕೈಹಿಡಿದು ಬಾಳ ಸಂಗಾತಿಯಾಗುತ್ತಾರೆ. ಪುರಾಣದಲ್ಲಿ ಕೂಡ ಶಿವ ಪಾರ್ವತಿಯನ್ನು ಮಹಾನ್ ಆದರ್ಶ ಸತಿಪತಿಯಾಗಿ ಚಿತ್ರಿಸಲಾಗಿದೆ. ಅವರ ಅನ್ಯೋನ್ಯತೆಯನ್ನು ಜಗದಲ್ಲಿ ವಿವರಿಸಲಾಗಿದೆ. ಆ ಅನ್ಯೋನ್ಯತೆಯೇ ಪ್ರಪಂಚದಲ್ಲಿ ಎಲ್ಲಾ ಸತಿ ಪತಿಯರಲ್ಲಿ ಇರಬೇಕು ಎಂಬುದನ್ನು ವ್ಯಾಖ್ಯಾನಿಸಲಾಗಿದೆ.

ಶಿವನು ಮಹಾನ್ ಬುದ್ಧಿವಂತ ಮತ್ತು ಸಕಲ ಚರಾಚರ ವಸ್ತುಗಳ ಅಧಿಪತಿಯಾಗಿದ್ದಾರೆ. ಜ್ಞಾನಕ್ಕೆ ಇರುವ ಇನ್ನೊಂದು ಹೆಸರೇ ಪರಮಶಿವ. ತನ್ನ ವಿಚಾರಗಳನ್ನು ಪತ್ನಿಯಾದ ಪಾರ್ವತಿಯಲ್ಲಿ ಶಿವನು ಕೂಡ ಚರ್ಚಿಸುತ್ತಾರೆ. ವಿಶ್ವದಲ್ಲಿರುವ ಅದ್ಭುತಗಳು ರಹಸ್ಯಗಳನ್ನು ತನ್ನ ಪತ್ನಿಯಲ್ಲಿ ಅವರು ಹೇಳುತ್ತಾರೆ. ಅದಕ್ಕಾಗಿಯೇ ಇಂದಿನ ಲೇಖನದಲ್ಲಿ ಶಿವ ಮತ್ತು ಪಾರ್ವತಿಯ ನಡುವಿನ ಕೆಲವೊಂದು ವಿಚಾರಗಳು ಚರ್ಚೆಗಳನ್ನು ನಾವು ಇಂದಲ್ಲಿ ತಿಳಿಸುತ್ತಿದ್ದೇವೆ. ಮಹಾನ್ ಶಕ್ತಿವಂತನಾಗಿರುವ ಶಿವ ಭಗವಂತ ಪ್ರತಿಯೊಂದು ಅಂಶದಲ್ಲೂ ರೂಪುರೇಷೆಯನ್ನು ಹೊಂದಿದ್ದಾರೆ. ಈ ಮಾತುಗಳನ್ನು ಅವರು ಪಾರ್ವತಿಗೂ ತಿಳಿಸುತ್ತಾರೆ. ಬನ್ನಿ ಅದೇನು ಎಂಬುದನ್ನು ತಿಳಿದುಕೊಳ್ಳೋಣ.....

ಅತ್ಯಂತ ಕೆಟ್ಟದ್ದು ಮತ್ತು ಅತ್ಯಂತ ಒಳ್ಳೆಯದ್ದು

ಅತ್ಯಂತ ಕೆಟ್ಟದ್ದು ಮತ್ತು ಅತ್ಯಂತ ಒಳ್ಳೆಯದ್ದು

ಸತ್ಯದ ಇನ್ನೊಂದೇ ಹೆಸರೇ ಶಿವ ಮತ್ತು ಪಾರ್ವತಿ. ಪ್ರತಿಯೊಬ್ಬರೂ ಸತ್ಯವನ್ನೇ ನುಡಿಯಬೇಕು ಎಂಬುದಾಗಿ ಶಿವನು ಪಾರ್ವತಿಗೆ ತಿಳಿಸುತ್ತಾರೆ. ಸತ್ಯವೂ ಮಾನವನ ಸಂಗಾತಿಯಾಗಿದೆ. ಸತ್ಯ ಕಟುವಾಗಿದ್ದರೂ ಅಮರ ಅದೇ ಸುಳ್ಳು ಸಿಹಿಯಾಗಿದ್ದರೂ ಕತ್ತಿಯಷ್ಟೇ ಪ್ರಖರ. ಮನುಷ್ಯನು ಸುಳ್ಳು ನುಡಿದರೆ ಆತನಷ್ಟು ಕೆಟ್ಟವನು ಯಾರೂ ಇರಲಿಕ್ಕಿಲ್ಲ. ಆತ ಪಾಪದ ಚಕ್ರದಲ್ಲಿ ಸಿಲುಕಿಕೊಳ್ಳುವು ಖಾತ್ರಿಯಾದುದು. ಸುಳ್ಳು ಹೇಳುವುದು ಮಾನವನಿಗೆ ಚಟವಾದಲ್ಲಿ ಆತ ಅದನ್ನೇ ಅನುಸರಿಸಿಕೊಂಡು ಹೋಗುತ್ತಾನೆ. ಸುಳ್ಳೇ ಆತನಿಗೆ ಪ್ರಿಯವಾಗುತ್ತದೆ.

ನಿಮ್ಮ ಪಾಪ ಕೃತ್ಯಗಳಿಗೆ ನೀವೇ ಹೊಣೆಗಾರರು

ನಿಮ್ಮ ಪಾಪ ಕೃತ್ಯಗಳಿಗೆ ನೀವೇ ಹೊಣೆಗಾರರು

ತನ್ನನ್ನು ಯಾರೂ ನೋಡುವುದಿಲ್ಲವೆಂದು ಮನುಷ್ಯ ಪಾಪವನ್ನು ಮಾಡುತ್ತಾನೆ. ಆದರೆ ಇದು ಅತ್ಯಂತ ಕೆಟ್ಟದ್ದು ಎಂಬ ಅಂಶವನ್ನು ಆತ ಮರೆಯುತ್ತಾನೆ. ಆದರೆ ಮಾನವ ಮಾಡಿದ ಪಾಪ ಕೃತ್ಯಕ್ಕೆ ಆತನೇ ಹೊಣೆಗಾರನು ಎಂಬುದಾಗಿ ಶಿವ ಹೇಳುತ್ತಾರೆ. ಆದರೆ ಆತನ ಆತ್ಮವು ಈ ಪಾಪಕೃತ್ಯವನ್ನು ದೂಷಿಸುತ್ತದೆ. ತನ್ನ ಆತ್ಮಕ್ಕೆ ಆತ ಹೆದರಲೇಬೇಕು.

ಈ ಮೂರು ಕಾರ್ಯಗಳನ್ನು ಮಾಡಲೇಬೇಡಿ

ಈ ಮೂರು ಕಾರ್ಯಗಳನ್ನು ಮಾಡಲೇಬೇಡಿ

ನಿಮ್ಮ ಜೀವನದಲ್ಲಿ ಈ ಮೂರು ತಪ್ಪುಗಳನ್ನು ಮಾಡಲೇಬೇಡಿ. ನಿಮ್ಮ ಮಾತು ಇಲ್ಲವೇ ಪ್ರಕ್ರಿಯೆಯಲ್ಲಿ ಪಾಪ ಕೃತ್ಯವನ್ನು ಮಾಡಬೇಡಿ. ನಿಮ್ಮ ಮನಸ್ಸಿನಲ್ಲಿ ಕೂಡ ಈ ಕುರಿತು ಯೋಚಿಸಬೇಡಿ. ಈ ಮೂರೂ ಅತ್ಯಂತ ಕೆಟ್ಟದ್ದಾಗಿದೆ. ಶಾಸ್ತ್ರಗಳಲ್ಲಿ ನಿಷೇಧಿಸಲಾಗಿರುವ ಕೃತ್ಯಗಳನ್ನು ಮಾನವರು ಮಾಡಲೇಬಾರದು. ತಮ್ಮ ಮಾತುಗಳಿಂದ ಇನ್ನೊಬ್ಬರನ್ನು ನೋಯಿಸ ಬಾರದು. ತನ್ನ ಕೃತ್ಯಗಳಿಂದ ಇನ್ನೊಬ್ಬರನ್ನು ನೋಯಿಸಬಾರದು. ಇದರಿಂದ ಆತ ಈ ಜನ್ಮದಲ್ಲಿ ಮಾತ್ರವಲ್ಲದೆ ನಂತರದ ಜನ್ಮದಲ್ಲಿ ಕೂಡ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ.

ಯಶಸ್ಸಿನ ಮಾರ್ಗ

ಯಶಸ್ಸಿನ ಮಾರ್ಗ

ನಿಮ್ಮ ಮನಸ್ಸಿಗೆ ಮುದ ನೀಡುವ ತಾತ್ಕಾಲಿಕ ಸಂತಸದಿಂದ ದೂರವಿರಬೇಕು ಎಂಬುದಾಗಿ ಶಿವನು ಹೇಳುತ್ತಾರೆ. ಇನ್ನೊಬ್ಬರಿಗಾಗಿ ತಾವು ಏನು ಬೇಕಾದರೂ ಮಾಡುತ್ತೇವೆ ಎಂಬ ಅಂಶವನ್ನು ಬಿಟ್ಟು ಅವರೊಂದಿಗೆ ತಮ್ಮನ್ನು ಅಭಿವೃದ್ಧಿಯ ಪಥದತ್ತ ಮುನ್ನಗ್ಗಬೇಕು. ತನ್ನ ಒಳಿತನ್ನು ಬಯಸುವುದರ ಜೊತೆಗೆ ಪರರ ಒಳಿತನ್ನೂ ಬಯಸಬೇಕು.ಯಾರಿಗೂ ಎಂದಿಗೂ ಕೇಡು ಬಯಸಬಾರದು ಎಂಬುದಾಗಿ ಶಿವನು ಹೇಳುತ್ತಾರೆ. ತಾತ್ಕಾಲಿಕ ಸುಖಕ್ಕೆ ಮನಸ್ಸನ್ನು ಹರಿಯಬಿಡದೆ ಯಶಸ್ಸನ್ನು ಸಾಧಿಸಲು ಕಷ್ಟಪಟ್ಟು ಮುನ್ನುಗ್ಗ ಬೇಕು.

ಜೀವನದ ಮಹಾನ್ ತಿರುವು

ಜೀವನದ ಮಹಾನ್ ತಿರುವು

ಮನುಷ್ಯನು ಹಣ, ಸಂಪತ್ತಿಗಾಗಿ ಮುನ್ನುಗ್ಗುತ್ತಲೇ ಇರುತ್ತಾನೆ. ಇದು ಆಧ್ಯಾತ್ಮಿಕ ಜೀವನದಲ್ಲಿ ತೊಡರಾಗಿದೆ. ನಮ್ಮ ಜೀವನವನ್ನು ಧ್ಯಾನ ಮತ್ತು ಯೋಗದ ಸಹಾಯದಿಂದ ನಿಯಂತ್ರಿಸಬೇಕು ಎಂದಾಗಿದೆ. ಇದರಿಂದ ಜೀವನಕ್ಕೆ ಸಮೀಪವಾಗಿಲು ಮತ್ತು ಮನುಷ್ಯರ ಸಮೀಪದಲ್ಲಿ ಇರಲು ಸಾಧ್ಯವಾಗುತ್ತದೆ ಎಂಬುದು ಶಿವನು ಹೇಳುವ ಮಾತಾಗಿದೆ.ದೇವರ ಸಮೀಪವಾಗಿ ಕೂಡ ಇರಬಹುದಾಗಿದೆ. ನಿಯಂತ್ರಿತ ಮನಸ್ಸು ಎಂದಿಗೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.

English summary

The Five Big Facts Shiva Told Parvati

Shiva was a sage with a high intellect and supreme knowledge. He would often share his knowledge and experiences with Goddess Parvati. He would tell her about the mysteries of the universe and the reasons behind the plight of the people. We have brought to you five important things from the knowledge Lord Shiva shared with Goddess Parvati. Take a look.
X
Desktop Bottom Promotion