For Quick Alerts
ALLOW NOTIFICATIONS  
For Daily Alerts

ನಾವು ಕಲಿಯಬೇಕಾದ ಬುದ್ಧನ ತತ್ವಗಳು

By CM Prasad
|

ಭಗವಾನ್ ಬುದ್ಧ ಎಂಬ ಹೆಸರು ಕೇಳಿದಂತೆ ಥಟ್ಟನೆ ನೆನಪಾಗುವುದು ಆಸೆಯೇ ದು:ಖಕ್ಕೆ ಮೂಲವೆಂಬ ಸಿದ್ಧ ಮಂತ್ರ. ಈತ ಮಹಾನ್ ಆಧ್ಯಾತ್ಮಿಕ ಚಿಂತಕ ಹಾಗೂ ದಾರ್ಶನಿಕ. ಬೌದ್ಧ ಧರ್ಮದ ಸಂಸ್ಥಾಪಕನಾದ ಬುದ್ಧನ ಮೂಲ ಹೆಸರು ಸಿದ್ಧಾರ್ಥ. ಹುಟ್ಟಿದ ಸ್ಥಳ ನೇಪಾಳ. ಇಡೀ ಜಗತ್ತಿಗೇ ಜ್ಞಾನದ ಹಿರಿಮೆಯನ್ನು ತೋರಿಸಲು ಜನಿಸಿದವನು. ಈತ ಪ್ರಚಾರ ಮಾಡಿದ ಬೌದ್ಧ ಧರ್ಮವು ಎಲ್ಲರಿಗೂ ಸ್ಫೂರ್ತಿಧಾಯಕವಾಗಿದ್ದು, ವಿಶ್ವದಾದ್ಯಂತ ಸ್ವೀಕರಿಸಲ್ಪಟ್ಟಿತು. ತಾನು ಬೋಧಿಸುತ್ತಿರುವುದರಲ್ಲಿ ಹೊಸದೇನೂ ಇಲ್ಲವೆಂದೂ ಹಾಗೂ ಈ ಸತ್ಯವನ್ನು ಕಂಡುಕೊಂಡವರಲ್ಲಿ ತಾನು ಮೊದಲನೆಯವರೂ ಅಲ್ಲ. ಕೊನೆಯವನೂ ಅಲ್ಲವೆಂದು ಜಗತ್ತಿಗೇ ಸಾರಿದನು. ದು:ಖದಿಂದ ಮುಕ್ತಿಹೊಂದಲು ಈತನ ಬೊಧನೆಗಳು ಸಂಜೀವಿನಿಯಿದ್ದಂತೆ. ಝೆನ್ ಕಥೆ: ಬುದ್ಧ ನೀ ತಪ್ಪು ಭಾವಿಸಬೇಡ!

ಬುದ್ಧನು ಬೋಧಿವೃಕ್ಷದ ಕೆಳಗೆ ಸ್ವಯಂ ಜ್ಞಾನೋದಯಗೊಂಡು, ಆತ ಪ್ರಚುರಪಡಿಸಿದ ತತ್ವಗಳು ಇಡೀ ಮಾನವಕುಲಕ್ಕೆ ಪ್ರೇರಣೆಯನ್ನು ನೀಡಲಿದ್ದು, ಆತನ ಹೇಳಿಕೆಗಳು ಪ್ರಪಂಚ ಇರುವ ತನಕ ಅಜರಾಮರವಾಗಿ ಉಳಿಯಲಿದೆ. ಇಡೀ ಮನುಕುಲಕ್ಕೇ ಮಹಾನ್ ಶಿಕ್ಷಕನಾಗಿರುವ ಭಗವಾನ್ ಬುದ್ಧನ ಜೀವನ ಚರಿತ್ರೆಯನ್ನು ಒಮ್ಮೆ ತಿರುವಿ ನೋಡಿದರೆ, ಆತನ ಜೀವನದ ಪ್ರತಿಯೊಂದು ಹಂತವೂ ಸಹ ವಿಶೇಷವಾಗಿ ಎಲ್ಲರಿಗೂ ಪ್ರೇರಣೆ ನೀಡಿ ಜ್ಞಾನೋದಯ ಮಾಡುವಂತಹದ್ದು ಎಂದರೆ ತಪ್ಪಾಗಲಾರದು. ಶಾಂತ ಮೂರ್ತಿ ಬುದ್ಧನ ಕುರಿತ ಇಂಟರೆಸ್ಟಿಂಗ್ ಕಹಾನಿ

ವಾಸ್ತವಿಕ ಅರಿವಿನ ಸ್ಥಿತಿಯಲ್ಲಿರುವ ಮನುಷ್ಯನೇ ಹೆಚ್ಚು ಸುಖಿ ಎಂದು ಸಾರಿದನು. ಕ್ಷಣಿಕ ಸುಖಕ್ಕಾಗಿ ಸಾಗರದಷ್ಟು ದು:ಖವನ್ನು ಪಡುವವರು ಅನೇಕರಿದ್ದು, ಬುದ್ಧನ ಉಪದೇಶಗಳನ್ನು ಒಮ್ಮೆ ಓದಿದರೆ ಅವರಿಗೆ ಬದುಕಿನ ನಿಜವಾದ ಅರ್ಥ ದೊರೆಯುತ್ತದೆ. ನಮ್ಮ ಭಾರತದ ಸಂವಿಧಾನ ಕರ್ತೃ ಡಾ.ಬಿ.ಆರ್.ಅಂಬೇಡ್ಕರ್ ರವರೂ ಸಹ ಬುದ್ಧನ ತತ್ವಗಳಿಗೆ ಮನಸೋತು ಬುದ್ಧ ಧರ್ಮಕ್ಕೆ ಮತಾಂತರಗೊಂಡಿದ್ದು ಎಲ್ಲರಿಗೂ ತಿಳಿದ ವಿಷಯವಾಗಿದೆ. ಈ ಲೇಖನದಲ್ಲಿ ಆತನ ತತ್ವಗಳ ಕುರಿತು ಈಗಿನ ಮನುಕುಲವು ಅನುಸರಿಸಬಹುದಾದ ಕೆಲವು ವಿಚಾರಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲಾಗಿದೆ.

ಪ್ರೀತಿಯಿಂದ ಮಾತ್ರ ಪರಿಹಾರ

ಪ್ರೀತಿಯಿಂದ ಮಾತ್ರ ಪರಿಹಾರ

ಬುದ್ಧನ ಅನೇಕ ಬೋಧನೆಗಳು ಪ್ರೀತಿಯ ಮಹತ್ವ ಮತ್ತು ತೆರೆದ ಮನಸ್ಸಿನ ಸ್ಥಿತಿಯ ಸುತ್ತ ಸುತ್ತುವರಿದಿರುತ್ತದೆ. ನೀವು ಮತ್ತು ನಿಮ್ಮ ಮನಸ್ಸು ಸದಾ ಪ್ರೀತಿಯಿಂದ ಕೂಡಿದ್ದರೆ, ನಕಾರಾತ್ಮಕ ಚಿಂತನೆಗಳಿಗೆ ಜಾಗವೇ ಇರುವುದಿಲ್ಲವೆಂಬ ಸತ್ಯ ನಿಮಗೆ ತಿಳಿದಿರಲಿ.

ವರ್ತಮಾನ ಕಾಲದ ನಿಜ ಶಕ್ತಿ

ವರ್ತಮಾನ ಕಾಲದ ನಿಜ ಶಕ್ತಿ

ಬುದ್ಧನು ಆತನ ಉಪದೇಶಗಳಲ್ಲಿ ವರ್ತಮಾನ ಕಾಲದ ಬಗ್ಗೆ ಹೆಚ್ಚು ಉಲ್ಲೇಖಿಸಿದ್ದಾನೆ. ಮನುಷ್ಯನು ಭೂತಕಾಲ ಮತ್ತು ಭವಿಷ್ಯತ್ ಕಾಲಗಳ ಬಗ್ಗೆ ಚಿಂತಿಸದೆ ವರ್ತಮಾನ ಕಾಲದಲ್ಲಿ ಒದಗಿರುವ ಸ್ಥಿತಿಯನ್ನು ತೃಪ್ತಿ ಮನೋಭಾವದಿಂದ ಸ್ವೀಕರಿಸಿದ ವ್ಯಕ್ತಿ ಪ್ರಪಂಚದಲ್ಲೇ ಹೆಚ್ಚು ಸುಖಮಯ ವ್ಯಕ್ತಿಯಾಗುತ್ತಾನೆ ಹಾಗೂ ವಾಸ್ತವಿಕವಾಗಿ ಜೀವನವನ್ನು ಅನುಸರಿಸುವ ವಿಧಾನವನ್ನು ಅಭ್ಯಾಸ ಮಾಡಿಕೊಂಡರೆ ಬದುಕು ಸುಂದರ. ಈ ವಿಚಾರವು ಇತ್ತೀಚಿನ ಕಾರ್ಪೊರೇಟ್ ಜಗತ್ತಿನಲ್ಲಿ ನಮಗೆ ನೀಡುವ ಗುರಿಯನ್ನು ಸುಲಭವಾಗಿ ಸಾಧಿಸಲು ಅತ್ಯುತ್ತಮ ಸಾಧನವಾಗಿದೆ.

ಒಳಮನಸ್ಸನ್ನು ಒಮ್ಮೆ ಅವಲೋಕಿಸಿ

ಒಳಮನಸ್ಸನ್ನು ಒಮ್ಮೆ ಅವಲೋಕಿಸಿ

ಬುದ್ಧನು ಎಲ್ಲರಿಗೂ ತಮ್ಮ ಒಳಮನಸ್ಸನ್ನು ಮೊದಲು ಅವಲೋಕಿಸಲು ತಿಳಿಸುತ್ತಾನೆ. ಏಕೆಂದರೆ, ನಿಜವಾದ ಐಶ್ವರ್ಯ ಇರುವುದು ನಮ್ಮೊಳಗೇ ಹೊರತು ಹೊರಗಲ್ಲ. ಎಷ್ಟೇ ಹೊರಜಗತ್ತಿನಲ್ಲಿ ಪ್ರಾಪಂಚಿಕವಾಗಿ ಸುಖವನ್ನು ಕಂಡುಕೊಂಡರೂ ಸಹ ನಿಜವಾದ ಶಾಂತಿ ಸಿಗುವುದು ಒಳಮನಸ್ಸಿನ ಸಂತೋಷದಿಂದ ಎಂಬುದು ಎಷ್ಟೋ ಜನರಿಗೆ ಅರಿವೇ ಇರುವುದಿಲ್ಲ.

ಬಯಕೆಗಳು ತೊರೆಯಲಿ

ಬಯಕೆಗಳು ತೊರೆಯಲಿ

ಜ್ಞಾನೋದಯಕ್ಕೆ ನಿಜವಾದ ಮಾರ್ಗವೆಂದರೆ ನಿಮ್ಮ ಬಯಕೆ ಅಥವಾ ಆಸೆಗಳನ್ನು ನಿಮ್ಮಿಂದ ತೊರೆಯಲು ಅವಕಾಶ ಕೊಡಿ. ಆಸೆ ಇಟ್ಟುಕೊಂಡು ಜ್ಞಾನೋದಯಕ್ಕೆ ಪ್ರಯತ್ನಿಸುವವನು ನಿಜವಾದ ಮೂರ್ಖ.

ಮನಸ್ಸನ್ನು ಶಿಸ್ತಿನೆಡೆಗೆ ಕೊಂಡೊಯ್ಯಿರಿ

ಮನಸ್ಸನ್ನು ಶಿಸ್ತಿನೆಡೆಗೆ ಕೊಂಡೊಯ್ಯಿರಿ

ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳದಿದ್ದರೆ, ಅದು ನಮ್ಮನ್ನು ಆಳುತ್ತದೆ. ಇದರಿಂದ ಅಪಾಯ ಕಟ್ಟಿಟ್ಟ ಬುತ್ತಿ. ನೀವು ಎಷ್ಟೇ ಬುದ್ಧಿವಂತರಾದರೂ ನಿಮ್ಮ ಮನಸ್ಸು ನಿಮ್ಮ ಹತೋಟಿಯಲ್ಲಿಲ್ಲದಿದ್ದರೆ ನಿಮ್ಮ ಸಾಧನೆ ಶೂನ್ಯಕ್ಕೆ ಸಮ. ಆದ್ದರಿಂದ ಮನಸ್ಸನ್ನು ಶಿಸ್ತಿನ ಹಾದಿಯಲ್ಲಿ ಕ್ರಮಿಸಿ. ವಾಸ್ತವಿಕವಾಗಿ ಅದರಿಂದ ಲಾಭವಾಗದಿದ್ದರೂ

ಇತರರ ಮೇಲಿನ ಸಹಾನುಭೂತ

ಇತರರ ಮೇಲಿನ ಸಹಾನುಭೂತ

ಭೂಮಿ ಮೇಲಿನ ಪ್ರತಿಯೊಂದ ಜೀವಿಯೂ ಒಬ್ಬರಿಗೊಬ್ಬರು ಪರಸ್ಪರ ಸಂಪರ್ಕದಲ್ಲಿರಲೇಬೇಕು. ಜೀವಿತ ಮತ್ತು ನಿರ್ಜೀವಿತ ವಸ್ತುಗಳೂ ಸಹ ಪ್ರಾಕೃತಿಕವಾಗಿ ಸಹಜೀವನ ನಡೆಸಲು ಪರಸ್ಪರ ಅವಲಂಬಿಸಿರುವುದನ್ನು ನೀವು ಗಮನಿಸಬಹುದು. ಇತರರ ಸಹಕಾರವಿಲ್ಲದೇ ನಾವು ಬದುಕಲು ಸಾಧ್ಯವಿಲ್ಲ. ಹೀಗಿರುವಾಗ, ಸ್ವಾರ್ಥವನ್ನು ಮೈಗೂಡಿಸಿಕೊಂಡರೆ ಪ್ರಯೋಜನವೇನು. ಇತರರ ಮೇಲೆ ನಾವು ತೋರಿಸುವ ನಿಜವಾದ ಸಹಾನುಭೂತಿಯಿಂದ ಪ್ರಾಪಂಚಿಕ ಸಮಸ್ಯೆಗಳನ್ನು ಸುಲಭಾವಾಗಿ ಪರಿಹರಿಸಬಹುದು. ಬುದ್ಧನ ಬೋಧನೆಗಳು ಪ್ರೀತಿಯ ಸುತ್ತ ಸುತ್ತುವರಿದಿದ್ದು, ಅದಕ್ಕೆ ಇನ್ನೊಂದು ಆಯಾಮವೇ ಸಹಾನುಭೂತಿ. ಒಬ್ಬರ ಮೇಲೆ ಮತ್ತೊಬ್ಬರು ತೋರಿಸುವ ಸಹನಾ ಮನೋಭಾವವೇ ವಿಶ್ವದ ಅತ್ಯತ್ತಮ ಮಾನವ ಶಕ್ತಿ. ಇದರಿಂದ ಮಾತ್ರ ಪ್ರಪಂಚದ ವಿಕೋಪಗಳನ್ನು ಸುಲಭವಾಗಿ ನಿವಾರಿಸಬಹುದು.

English summary

The Essence Of Buddha's Teachings

Siddhartha or Guatama Buddha was one of the world's greatest spiritual figure. He originated from Nepal. He started Buddhism which spread to many parts of the world and inspired many. Yes, Buddha was indeed an enlightened soul who preached compassion to humanity. Let us look at some lessons that we can learn form this great teacher. What Can We Learn From Buddha?
X
Desktop Bottom Promotion