For Quick Alerts
ALLOW NOTIFICATIONS  
For Daily Alerts

ಶಿವನ ಆಶೀರ್ವಾದದಿಂದ ಜನಿಸಿದ್ದರೂ ಅಶ್ವತ್ಥಾಮ ಏಕೆ ಪಾಪಿಯಾದ?

|

ಹಣೆಯ ಮೇಲೆ ರತ್ನವನ್ನು ಹೊಂದಿರುವ ಮಗುವನ್ನು ನೀವು ಊಹಿಸಬಲ್ಲಿರಾ? ಆಯಾಸ, ಹಸಿವು, ಬಾಯಾರಿಕೆ ಮತ್ತು ಅಂತಹ ಎಲ್ಲ ದೌರ್ಬಲ್ಯಗಳಿಂದ ಸ್ವಾತಂತ್ರ್ಯವನ್ನು ನೀಡುವ ಒಂದು ರತ್ನವು ಬದುಕಿಗೆ ಅವಶ್ಯಕವಾಗಿದೆ. ಅಂತಹ ಮಾಯಾಜಾಲವನ್ನು ನಾವು ನಿರೀಕ್ಷಿಸಬಹುದೇ? ಇದು ನಿಜವಾಗಿದ್ದರೆ ಅದನ್ನು ಯಾರು ಹೊಂದಿರಬಹುದು ಮತ್ತು ಹೇಗೆ? ಈ ಕಥೆಯು ನಮ್ಮನ್ನು ಮಹಾಭಾರತ ಆರಂಭವಾಗಿಲ್ಲದ ಸಮಯಕ್ಕೆ ನಮ್ಮನ್ನು ಕೊಂಡೊಯ್ಯುತ್ತದೆ....

ಗುರು ದ್ರೋಣ

ಗುರು ದ್ರೋಣಾಚಾರ್ಯರ ಕಥೆಯನ್ನು ನೀವು ಅರಿತಿದ್ದೀರಾ. ಪಾಂಡವ ಮತ್ತು ಕೌರವರ ಗುರುವಾಗಿ ಮಹಾಭಾರತ ಯುದ್ಧ ಕಾಲದಲ್ಲಿ ಅವರು ಕೌರವರ ಪರವಾಗಿ ಹೋರಾಟ ನಡೆಸಿದರು. ಹೆಚ್ಚು ಗೌರವಾನ್ವಿತ ವ್ಯಕ್ತಿಯಾಗಿದ್ದರೂ ಮಹೋನ್ನತ ಸ್ಥಾನದಲ್ಲಿದ್ದರೂ ಕರ್ಣನನ್ನು ಶಿಷ್ಯನಾಗಿ ಸ್ವೀಕರಿಸುವಲ್ಲಿ ನಿರಾಕರಿಸಿದ್ದರು. ಶಿವನನ್ನು ಮೆಚ್ಚಿಸುವ ಸಲುವಾಗಿ ದ್ರೋಣರು ತಪಸ್ಸನ್ನು ಆಚರಿಸುತ್ತಾರೆ. ದ್ರೋಣರು ಈ ತಪಸ್ಸನ್ನು ಆಚರಿಸುವುದು ತಾನು ಮಹಾ ಪರಾಕ್ರಮಿಯಾದ ಪುತ್ರನನ್ನು ಹೊಂದುವುದಕ್ಕಾಗಿರುತ್ತದೆ. ತನ್ನ ಪುತ್ರನನ್ನು ಯಾರೂ ಸೋಲಿಸಬಾರು ಎಂಬಂತಹ ಇಚ್ಛೆಯೊಂದಿಗೆ ಅವರು ಈ ತಪಸ್ಸನ್ನು ಕೈಗೊಳ್ಳುತ್ತಾರೆ. ಯಾವುದೇ ದೌರ್ಬಲ್ಯಗಳನ್ನು ಹೊಂದದೇ ಇರುವ ಪುತ್ರ ತನಗೆ ಬೇಕು ಎಂಬುದು ದ್ರೋಣರ ತಪಸ್ಸಿನ ಉದ್ದೇಶವಾಗಿರುತ್ತದೆ.

Boy Born With A Gem On His Forehead

ತಪಸ್ಸಿಗೆ ಒಲಿದ ಶಿವ

ದ್ರೋಣರ ಪುತ್ರ ಚಿರಂಜೀವಿಯಾಗಿರುತ್ತಾರೆ ಎಂಬಂತಹ ವರವನ್ನು ಶಿವನು ನೀಡುತ್ತಾರೆ. ಚಿರಂಜೀವಿ ಎಂದರೆ ಮರಣ ಇಲ್ಲದವನು ಎಂದಾಗಿದೆ. ಹೀಗೆ ದ್ರೋಣರ ಪತ್ನಿ ಕೃಪಿಯು ಅಶ್ವತ್ಥಾಮನಿಗ ಜನ್ಮವನ್ನು ನೀಡುತ್ತಾರೆ. ಅವರನ್ನು ಅಷ್ಟ ಚಿರಂಜೀವಿಗಳಲ್ಲಿ ಒಬ್ಬರು ಎಂದು ಕರೆಯಲಾಗಿದೆ. ಅಶ್ವತ್ಥಾಮ ಹುಟ್ಟುವ ಮುಂಚೆ ದ್ರೋಣರು ಸಾಮಾನ್ಯ ಋಷಿ ಜೀವನವನ್ನು ನಡೆಸುತ್ತಿದ್ದರು. ಹೇಳಿಕೊಳ್ಳುವಂತಹ ಅನುಕೂಲವನ್ನು ಅವರು ಹೊಂದಿರಲಿಲ್ಲ. ಆದರೆ ಅಶ್ವತ್ಥಾಮನ ಜನ್ಮದ ನಂತರ ದ್ರೋಣರು ಹಸ್ತಿನಾಪುರಕ್ಕೆ ಹೋಗುತ್ತಾರೆ ಹಾಗೂ ಪಾಂಡವರಿಗೆ ಮತ್ತು ಕೌರವರಿಗೆ ಯುದ್ಧ ತರಬೇತಿಯನ್ನು ನೀಡುತ್ತಾರೆ.

ಅಶ್ವತ್ಥಾಮ ದುರ್ಯೋಧನನ ಸ್ನೇಹಿತ

ದುರ್ಯೋಧನನ ಸ್ನೇಹಿತನಾಗಿದ್ದ ಅಶ್ವತ್ಥಾಮ ತನ್ನ ಗೆಳೆಯ ಮಾಡುತ್ತಿದ್ದ ತಪ್ಪುಗಳನ್ನು ಹೇಳುತ್ತಿದ್ದನು. ಪಾಂಡವರ ವಿರುದ್ಧ ಸಂಚುಗಳನ್ನು ಮಾಡುತ್ತಿದ್ದ ದುರ್ಯೋಧನನಿಗೆ ಕಿವಿ ಮಾತು ಹೇಳಲು ಸಾಧ್ಯವಾಗುವುದು ಅಶ್ವತ್ಥಾಮ ಮಾತ್ರವಾಗಿತ್ತು. ಪಾಂಡವರ ಶಕ್ತಿ ಮತ್ತು ಕೃಷ್ಣನ ಕೃಪೆ ಅವರ ಮೇಲೆ ಇದ್ದುದನ್ನು ಅರಿತಿದ್ದ ಅಶ್ವತ್ಥಾಮ ಪ್ರತೀ ಬಾರಿ ದುರ್ಯೋಧನನಿಗೆ ಕಿವಿ ಮಾತು ಹೇಳುತ್ತಿದ್ದ. ಕೋಪಿಷ್ಠನಾದ ದುರ್ಯೋಧನನು ಅಶ್ವತ್ಥಾಮನಿಗೆ ಕೊಂಚ ಬಾಗುತ್ತಿದ್ದ.

ಅಶ್ವತ್ಥಾಮ ಮತ್ತು ಮಹಾಭಾರತ

ಮಹಾಭಾರತ ಯುದ್ಧ ಸಮಯದಲ್ಲಿ ಅಶ್ವತ್ಥಾಮ ಮತ್ತು ಆತನ ತಂದೆ ದ್ರೋಣರು ಕೌರವರನ್ನು ಬೆಂಬಲಿಸುವ ನಿರ್ಧಾರವನ್ನು ಮಾಡುತ್ತಾರೆ. ಯುದ್ಧದಲ್ಲಿ ಸಾವಿರಾರು ಜನರು ಪ್ರಾಣ ಕಳೆದುಕೊಳ್ಳುತ್ತಾರೆ. ಆದರೆ ದುರ್ಯೋಧನ ಅಶ್ವತ್ಥಾಮನ ಮಾತುಗಳನ್ನು ಕಿವಿಗೆ ಹಾಕಿಕೊಳ್ಳುವುದಿಲ್ಲ. ಯುದ್ಧವನ್ನು ತಾವು ಗೆಲ್ಲಲು ಸಾಧ್ಯವಿಲ್ಲವೆಂದೇ ಅಶ್ವತ್ಥಾಮ ದುರ್ಯೋಧನನಿಗೆ ಕಿವಿಮಾತನ್ನು ಹೇಳುತ್ತಾನೆ. ಅವರ ಮಾತಿಗೆ ಕಿವಿಗೊಡದೆ ದುರ್ಯೋಧನನು ಅಶ್ವತ್ಥಾಮನನ್ನು ತನ್ನ ಸೇನೆಯ ಮುಖ್ಯ ಸೇನಾಧಿಪತಿಯಾಗಿ ನೇಮಿಸಿಕೊಳ್ಳುತ್ತಾನೆ. ಈಗ ವಿಧಿಯಿಲ್ಲದೆ ದುರ್ಯೋಧನನು ಯುದ್ಧದಲ್ಲಿ ಗೆಲ್ಲಬೇಕೆಂದು ಹೋರಾಡುತ್ತಾನೆ. ಆದರೆ ಕೊನೆಗೆ ಅಶ್ವತ್ಥಾಮ ಮೂರು ತಪ್ಪುಗಳನ್ನು ಮಾಡುತ್ತಾನೆ.

ಅಶ್ವತ್ಥಾಮನ ಮೂರು ತಪ್ಪುಗಳಿಂದ ಅವನಿಗೆ ಸೋಲಾಗುತ್ತದೆ
ಆತ ಮಾಡುವ ಮೂರು ತಪ್ಪುಗಳಿಂದ ಸೋಲನ್ನು ಅನುಭವಿಸುತ್ತಾನೆ. ಮೊದಲನೆಯದು ಪಾಂಡವರ ಮಕ್ಕಳು ನಿದ್ರಿಸುತ್ತಿರುವಾಗ ಕೊಲ್ಲುತ್ತಾನೆ, ಬ್ರಹ್ಮಾಸ್ತ್ರವನ್ನು ಅರ್ಜುನನ ಮೇಲೆ ಬಿಡುವುದು, ನಂತರ ಅಂತಿಮವಾಗಿ ಬ್ರಹ್ಮಾಸ್ತ್ರವನ್ನು ಅರ್ಜುನನಿಂದ ಅಭಿಮನ್ಯುವಿನ ಗರ್ಭಿಣಿ ಪತ್ನಿಯ ಮೇಲೆ ತಿರುಗಿಸುತ್ತಾನೆ. ಇದೆಲ್ಲವೂ ಅಕ್ಷಮ್ಯ ಅಪರಾಧವಾಗಿದೆ ಎಂದು ಹಿಂದೂ ಧರ್ಮದಲ್ಲಿ ವ್ಯಾಖ್ಯಾನಿಸಲಾಗಿದೆ.

ಸೋಲನ್ನು ಹೇಗೆ ಅನುಭವಿಸುತ್ತಾನೆ

ತಮ್ಮ ಪುತ್ರರ ಸಾವಿನ ಸೇಡು ತೀರಿಸಲು ಪಾಂಡವರು ಅಶ್ವತ್ಥಾಮನ ಕೇಶ ಮುಂಡನ ಮಾಡುತ್ತಾರೆ. ಅಶ್ವತ್ಥಾಮನ ಶಕ್ತಿಯ ಆಗರವಾದ ಪವಿತ್ರ ರತ್ನವನ್ನು ಕಸಿದುಕೊಳ್ಳುತ್ತಾರೆ. ಎಲ್ಲರ ಮುಂದೆ ಕೇಶ ಮುಂಡನ ಮಾಡುವುದು ಎಂದರೆ ಅವರನ್ನು ಕೊಲ್ಲುವುದಕ್ಕೆ ಸಮ ಎಂದಾಗಿದೆ.

ಅದೃಷ್ಟವಂತ ಮಗುವಿನ ಅಸಂತುಷ್ಟಕರ ಹಣೆಬರಹ

ಹೀಗೆ ಶಿವನ ಆಶೀರ್ವಾದದಿಂದ ಜನಿಸಿದ ಅಶ್ವತ್ಥಾಮನು ತನ್ನ ದುಷ್ಟ ಕಾರ್ಯಗಳಿಂದ ಅಸಂತುಷ್ಟಕರ ಹಣೆಬರಹವನ್ನು ಅನುಭವಿಸಬೇಕಾಗುತ್ತದೆ. ಮಾನವ ಎಷ್ಟೇ ಅದೃಷ್ಟವಂತನಾಗಿದ್ದರೂ ಆತ ಮಾಡುವ ಕರ್ಮದಿಂದ ಅವನ ಹಣೆಬರಹ ನಿರ್ಧಾರವಾಗುತ್ತದೆ ಎಂದಾಗಿದೆ ಎಂಬ ಸಂದೇಶವನ್ನು ನಾವು ತಿಳಿದುಕೊಳ್ಳಬಹುದಾಗಿದೆ. ಅವರು ಭೂಮಿಯ ಮೇಲಿನ ಅತ್ಯಂತ ಶಕ್ತಿಶಾಲಿಯಾಗಿರಬಹುದು ಅಥವಾ ಯುದ್ಧದ ಎಲ್ಲಾ ತಂತ್ರಗಳನ್ನು ಕಲಿತಿರುವವರಾಗಿರಬಹುದು, ಅಂತಿಮ ಉದ್ದೇಶವು ನೀತಿಯುಳ್ಳವನಾಗಿರಬೇಕು, ಅದು ಕೇವಲ ತನ್ನ ಜೀವನಕ್ಕೆ ನಿಜವಾದ ಅರ್ಥವನ್ನು ನೀಡುತ್ತದೆ.

English summary

The Boy Born With A Gem On His Forehead

Can you imagine a baby having a gem on his forehead? A gem that would give freedom from fatigue, hunger, thirst and all such weaknesses which are necessary for life otherwise. Can there ever be such a magical thing? If yes, who can have it and how? Well, the story dates back to the times when the Mahabharata had not yet begun.
X
Desktop Bottom Promotion