For Quick Alerts
ALLOW NOTIFICATIONS  
For Daily Alerts

ಮನೆಯಲ್ಲಿ ನೆಮ್ಮದಿ, ಶಾಂತಿ ಇರಬೇಕೆಂದರೆ -ನಗುವ ಬುದ್ಧನ ಮೂರ್ತಿ ಹೀಗೆ ಇಟ್ಟುಕೊಳ್ಳಬೇಕು

By Manu
|
ನಗುವ ಬುದ್ಧನ ಮೂರ್ತಿಯನ್ನ ಮನೆಯಲ್ಲಿ ಯಾಕೆ ಎಲ್ಲಿ ಇಡಬೇಕು? | Oneindia Kannada

ಶತಮಾನಗಳಿಂದಲೂ ವಾಸ್ತುಶಾಸ್ತ್ರವನ್ನು ಭಾರತೀಯರು ಮಾತ್ರವಲ್ಲದೆ ಇತರ ಕೆಲವೊಂದು ದೇಶಗಳಲ್ಲೂ ಅಳವಡಿಸಿಕೊಂಡು ಬರಲಾಗುತ್ತಾ ಇತ್ತು. ವಾಸ್ತುಶಾಸ್ತ್ರವನ್ನು ವಾಸ್ತುಶಿಲ್ಪ ವಿಜ್ಞಾನವೆಂದು ಕರೆಯಲಾಗುತ್ತದೆ. ಮನೆಯನ್ನು ಕಟ್ಟುವ ರೀತಿಯಿಂದ ಮನೆಯ ಒಳಗೆ ಸಂಪೂರ್ಣವಾಗಿ ಧನಾತ್ಮಕವಾಗಿರುವ ಶಕ್ತಿಯೇ ಬರುವಂತೆ ಇರುತ್ತದೆ.

ಹಿಂದಿನ ಮನೆಗಳು ಹಾಗೂ ಕಟ್ಟಡಗಳನ್ನು ನೋಡಿದರೆ ನಮಗೆ ಇದು ತಿಳಿದುಬರುವುದು. ಕೆಲವು ವಸ್ತುಗಳಿಂದ ಕೂಡ ಮನೆಯೊಳಗೆ ಧನಾತ್ಮಕವಾಗಿ ಶಕ್ತಿಯನ್ನು ಸೆಳೆಯಬಹುದು. ಮನೆಯ ಹಾಗೂ ಕಟ್ಟಡದ ಒಳಗೆ ಬರುವಂತಹ ಗಾಳಿ ಕೂಡ ಕೆಲವು ಸಲ ಧನಾತ್ಮಕವಾದ ಪರಿಣಾಮ ಬೀರುವುದು. ಅದೇ ರೀತಿಯಲ್ಲಿ ಇವುಗಳನ್ನು ನಿರ್ಮಾಣ ಮಾಡಲಾಗಿರುತ್ತದೆ. ವಾಸ್ತುಶಾಸ್ತ್ರದ ಪ್ರಕಾರ ಕಟ್ಟಡದ ವಿನ್ಯಾಸ ಹಾಗೂ ಪ್ರದೇಶಕ್ಕೆ ಅನುಗುಣವಾಗಿ ಧನಾತ್ಮಕವಾದ ಶಕ್ತಿಯು ಬರುವುದು. ಉದಾಹರಣೆಗೆ ಪೂರ್ವದಲ್ಲಿ ಸೂರ್ಯನು ಮೂಡುವ ದಿಕ್ಕು ಮತ್ತು ಇಲ್ಲಿ ಧನಾತ್ಮಕತೆ ಇರುವುದು. ಇದರಿಂದ ಪೂರ್ವಭಾಗಕ್ಕೆ ಬಾಗಿಲು ತೆರೆದಿರಬೇಕು ಎಂದು ಹೇಳಲಾಗುತ್ತದೆ.

 ವಾಸ್ತುಪ್ರಕಾರ ಕಟ್ಟಡದ ನಿರ್ಮಾಣವಾಗದೆ ಇದ್ದರೆ…

ವಾಸ್ತುಪ್ರಕಾರ ಕಟ್ಟಡದ ನಿರ್ಮಾಣವಾಗದೆ ಇದ್ದರೆ…

ವಾಸ್ತುಶಾಸ್ತ್ರದ ಪ್ರಕಾರ ಕಟ್ಟಡದ ನಿರ್ಮಾಣವು ಆಗದೆ ಇದ್ದರೆ ಆಗ ನಕಾರಾತ್ಮಕ ಶಕ್ತಿಗಳು ಮನೆಯ ಒಳಗೆ ಬಂದು ಮನೆಯಲ್ಲಿರುವ ಸದಸ್ಯರ ಮೇಲೆ ಪರಿಣಾಮ ಬೀರಬಹುದು. ಇಂತಹ ಪರಿಸ್ಥಿತಿಗೆ ವಾಸ್ತುಶಾಸ್ತ್ರದ ಪ್ರಕಾರ ಕೆಲವೊಂದು ವಸ್ತುಗಳನ್ನು ಮನೆಯಲ್ಲಿ ಇಟ್ಟರೆ ಆಗ ನಕಾರಾತ್ಮಕ ಶಕ್ತಿಯು ದೂರವಾಗುವುದು. ಇದರಲ್ಲಿ ಒಂದು ನಗುತ್ತಿರುವ ಬುದ್ಧ.

ನಗುವ ಬುದ್ಧನ ಮೂರ್ತಿಯನ್ನು ಯಾಕೆ ಇಡಬೇಕು?

ನಗುವ ಬುದ್ಧನ ಮೂರ್ತಿಯನ್ನು ಯಾಕೆ ಇಡಬೇಕು?

ನಗುವ ಬುದ್ಧನ ಮೂರ್ತಿಯನ್ನು ಮನೆಯಲ್ಲಿ ಇಟ್ಟಾಗ ಅದರಿಂದ ಮನೆಯಲ್ಲಿ ಹಣ ಹಾಗೂ ಅದೃಷ್ಟವು ಹರಿದು ಬರುತ್ತದೆ ಎಂದು ನಂಬಲಾಗಿದೆ. ಕೆಲವೊಂದು ಸಲ ನಗುವ ಬುದ್ಧನ ಮೂರ್ತಿಯನ್ನು ಇಡುವಂತಹ ಸರಿಯಾದ ದಿಕ್ಕು ಗೊತ್ತಿಲ್ಲದೆ ಕೆಲವು ಮನೆಯಲ್ಲಿ ಎಲ್ಲೆಲ್ಲೋ ಇಟ್ಟುಬಿಡುವರು. ಇದರಿಂದ ಧನಾತ್ಮಕವಾದ ಶಕ್ತಿ ಪಡೆಯುವಂತಹ ಶ್ರಮವು ವ್ಯರ್ಥವಾಗುವುದು. ಮನೆಯಲ್ಲಿ ನಗುವ ಬುದ್ಧನ ಮೂರ್ತಿಯನ್ನು ಎಲ್ಲಿಡಬೇಕು ಎಂದು ನಾವು ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ.

ಮನೆಯಲ್ಲಿ ನಗುವ ಬುದ್ಧನ ಮೂರ್ತಿ ಯಾಕಿಡಬೇಕು?

ಮನೆಯಲ್ಲಿ ನಗುವ ಬುದ್ಧನ ಮೂರ್ತಿ ಯಾಕಿಡಬೇಕು?

ಶಾಂತಿ ಹಾಗೂ ಸೌಹಾರ್ದತೆಗೆ

ಮನೆಯಲ್ಲಿ ಶಾಂತಿಯ ಕೊರತೆಯಿದ್ದರೆ ಮತ್ತು ಮನೆಯ ಸದಸ್ಯರ ಮಧ್ಯೆ ಪ್ರತಿನಿತ್ಯ ಜಗಳವಾಗುತ್ತಲಿದ್ದರೆ ಆಗ ನೀವು ನಗುವ ಬುದ್ಧನ ಮೂರ್ತಿಯನ್ನು ಮನೆಯ ಪೂರ್ವ ದಿಕ್ಕಿನಲ್ಲಿಡಬೇಕು. ಇದರಿಂದ ಸೌಹಾರ್ದತೆ ಮತ್ತು ಸದಸ್ಯರ ಮಧ್ಯೆ ಹೊಂದಾಣಿಕೆ ಕಂಡುಬರುವುದು.

ಉದ್ಯೋಗದ ಅವಕಾಶಕ್ಕಾಗಿ…

ಉದ್ಯೋಗದ ಅವಕಾಶಕ್ಕಾಗಿ…

ನಗುವ ಬುದ್ಧನ ಮೂರ್ತಿಯು ಉದ್ಯೋಗವನ್ನು ಕೂಡ ದೊರಕಿಸಿಕೊಡುವನು. ಮನೆಯ ಯಾವುದಾದರೂ ಸದಸ್ಯರಿಗೆ ಉದ್ಯೋಗ ಸಿಗಲು ಕಷ್ಟವಾಗುತ್ತಲಿದ್ದರೆ ಆಗ ಮನೆಯ ಆಗ್ನೇಯ ಭಾಗದಲ್ಲಿ ನಗುವ ಬುದ್ಧನ ಮೂರ್ತಿಯನ್ನಿಡಬೇಕು. ಇದರಿಂದ ಬೇಗನೆ ಉದ್ಯೋಗ ಸಿಗುವುದು. ಇದರೊಂದು ಆಗ್ನೇಯ ಭಾಗದಲ್ಲಿ ನಗುವ ಬುದ್ಧನ ಮೂರ್ತಿಯನ್ನು ಇಡುವುದರಿಂದ ಮನೆಯಲ್ಲಿ ಹಣದ ಕೊರತೆಯಾಗದು.

ವೃತ್ತಿ ಜೀವನ ಸುಧಾರಣೆಗೆ

ವೃತ್ತಿ ಜೀವನ ಸುಧಾರಣೆಗೆ

ವೃತ್ತಿಯಲ್ಲಿ ನಿಮಗೆ ಸಮಾಧಾನವಿಲ್ಲದೆ, ಕಚೇರಿಯಲ್ಲಿ ಹಲವಾರು ಸಮಸ್ಯೆಗಳು ಇದ್ದರೆ ಅಥವಾ ಉದ್ಯೋಗಕ್ಕೆ ಯಾವುದೋ ದುಷ್ಟಶಕ್ತಿಯ ಕಣ್ಣು ಬಿದ್ದಿದೆ ಎಂದು ನಿಮಗನಿಸಿದರೆ ಆಗ ನೀವು ನಗುವ ಬುದ್ಧನ ಮೂರ್ತಿಯನ್ನು ಪ್ರತಿಯೊಬ್ಬರು ನೋಡುವಂತಹ ಜಾಗದಲ್ಲಿಡಿ. ಇದು ತುಂಬಾ ಲಾಭಕಾರಿಯಾಗಲಿದೆ. ಇದು ದುಷ್ಟಶಕ್ತಿಯನ್ನು ನಿವಾರಣೆ ಮಾಡಿಕೊಂಡು ವೃತ್ತಿಜೀವನದಲ್ಲಿ ಸುಧಾರಣೆ ಹಾಗೂ ಪ್ರಗತಿ ತರುವುದು.

ಇತರ ಸಮಸ್ಯೆಗಳಿಗೆ

ಇತರ ಸಮಸ್ಯೆಗಳಿಗೆ

ಮನೆಯಲ್ಲಿ ಅಥವಾ ಕಚೇರಿಯಲ್ಲಿ ಯಾವುದೇ ರೀತಿಯ ಸಮಸ್ಯೆಯಿದ್ದರೆ ಆಗ ನೀವು ನಗುವ ಬುದ್ಧನ ಕೈ ಮೇಲೆ ಎತ್ತಿರುವ ಮೂರ್ತಿಯನ್ನು ಪೂರ್ವ ಭಾಗದಲ್ಲಿ ಇಡಬೇಕು. ಇದು ಪರಿಸ್ಥಿತಿ ಸುಧಾರಣೆ ಮಾಡುವುದು. ನೀವು ಹೀಗೆ ಮಾಡಿದರೆ ನಿಮ್ಮ ಎಲ್ಲಾ ರೀತಿಯ ಸಮಸ್ಯೆಗಳು ಬಗೆಹರಿಯುವುದು ಮತ್ತು ಎಲ್ಲವು ಶುಭವಾಗುವುದು.

ಸಂತಾನಭಾಗ್ಯಕ್ಕೆ

ಸಂತಾನಭಾಗ್ಯಕ್ಕೆ

ಸಂತಾನಭಾಗ್ಯ ಬೇಕೆಂದು ಇರುವವರು ನಗುವ ಬುದ್ಧನ ಮಕ್ಕಳೊಂದಿಗೆ ಆಡುತ್ತಿರುವಂತಹ ಮೂರ್ತಿಯನ್ನು ಮನೆಯಲ್ಲಿ ಇಡಬೇಕು. ಅಡುಗೆಮನೆ, ಅಡುಗೆಮನೆ ಅಥವಾ ಶೌಚಾಲಯಕ್ಕೆ ಸಮೀಪದಲ್ಲಿ ಇದನ್ನು ಇಡಬೇಡಿ. ಇದರಿಂದ ಮನೆಗೆ ಅಶುಭ ಉಂಟಾಗುವುದು.

English summary

The Best Direction To Keep Laughing Buddha At Home & Why

The Best Direction To Keep Laughing Buddha At Home & WhyVastu Shastra translates to the science of architecture, which prescribes constructing houses in such a way that just the positive energy radiates around it. It says that every object has a certain aura. Aura here refers to the kind of atmosphere created around an object. This atmosphere is made up of the energies which comprise certain waves which are either positive or negative, thus impacting the surroundings accordingly.
X
Desktop Bottom Promotion