For Quick Alerts
ALLOW NOTIFICATIONS  
For Daily Alerts

ಮಹಾಬಲಶಾಲಿ ಹನುಮಾನ್ ಜನ್ಮ ರಹಸ್ಯ

By
|

ಶ್ರೀರಾಮ ಭಕ್ತನಾಗಿರುವ ಹನುಮಂತನ ಬಗ್ಗೆ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ? ಮಕ್ಕಳಿಂದ ಹಿಡಿದು ದೊಡ್ಡವರ ತನಕ ಪ್ರತಿಯೊಬ್ಬರಿಗೂ ಹನುಮಂತ ದೇವರು ತುಂಬಾ ಪ್ರಿಯ. ರಾಮಾಯಣದ ಮುಖ್ಯ ಭೂಮಿಕೆಯಾಗಿದ್ದಂತ ಹನುಮಂತ ಶ್ರೀರಾಮನ ಭಕ್ತ. ಮುಗ್ಧ ಮನಸ್ಸಿನವನಾಗಿದ್ದ ಹನುಮಂತ ಒಂದು ಸಲ ತನ್ನ ಮುಗ್ಧತೆಯಿಂದ ಎದೆಯನ್ನು ಬಗಿದು ಅದರೊಳಗಿದ್ದ ಶ್ರೀರಾಮನನ್ನು ತೋರಿಸಿದ್ದ. ಇಂತಹ ಹಲವಾರು ಸಣ್ಣ ಕಥೆಗಳು ನಮಗೆ ತಿಳಿದಿದೆ. ಇದನ್ನು ನಾವು ಈ ವಿಭಾಗದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ.

ಈಶ್ವರ ದೇವರ ಅವತಾರವಾಗಿರುವ ಹನುಮಂತನ ಜನ್ಮದ ಬಗ್ಗೆ ನಿಮಗೆ ಕುತೂಹಲಕಾರಿ ಕಥೆಯನ್ನು ತಿಳಿಸಲಿದ್ದೇವೆ. ಇದನ್ನು ಓದಿಕೊಳ್ಳಿ. ಮಾತೆ ಅಂಜನಾ ಹನುಮಂತನ ತಾಯಿ. ಪುರಾಣಗಳ ಪ್ರಕಾರ ಅಂಜನಾ ತನ್ನ ಹಿಂದಿನ ಜನ್ಮದಲ್ಲಿ ಪುಂಜಿಕಸ್ತಲಾ ಎನ್ನುವ ಹೆಸರಿನ ಅಪ್ಸರೆಯಾಗಿ ಇಂದ್ರನ ಆಸ್ಥಾನದಲ್ಲಿದ್ದಳು. ಒಂದು ಸಲ ದೀರ್ಘ ಧಾನ್ಯದಲ್ಲಿ ತೊಡಗಿರುವಂತಹ ಕೋತಿಯೊಂದು ಆಕೆಗೆ ಕಾಣಿಸಿತು. ಈ ಕೋತಿಯು ದೈವಿಕ ಶಕ್ತಿ ಹೊಂದಿರುವ ಸನ್ಯಾಸಿಯೊಬ್ಬರು ಎಂದು ತಿಳಿಯದೆ ಅದರತ್ತ ಹೂಗಳನ್ನು ಎಸೆಯುತ್ತಾಳೆ.

Hanuman

ಇದರಿಂದ ಕುಪಿತಗೊಂಡ ಸನ್ಯಾಸಿಯು ಪುಂಜಿಕಸ್ತಲಾಗೆ ಶಾಪ ನೀಡಿ, ಮುಂದಿನ ಜನ್ಮದಲ್ಲಿ ಕೋತಿಯಾಗಿ ಹುಟ್ಟು ಎನ್ನುತ್ತಾರೆ. ಇದನ್ನು ಕೇಳಿದ ಆಕೆಯು ತನ್ನ ತಪ್ಪನ್ನು ಮನ್ನಿಸಿ, ಶಾಪದಿಂದ ಮುಕ್ತಿ ನೀಡುವಂತೆ ಪರಿಪರಿಯಾಗಿ ಬೇಡಿಕೊಳ್ಳುವಳು. ಇದರಿಂದ ಕರಗಿದ ಮುನಿ, ನೀನು ಒಂದು ಅದ್ಭುತ ಕೋತಿಯಾಗಿ ಜನಿಸುತ್ತಿ ಮತ್ತು ದೈವಿಸಂಭೂತನಾಗಿರುವ ಮಗನಿಗೆ ಜನ್ಮ ನೀಡುತ್ತಿ ಎಂದು ಆಶೀರ್ವದಿಸುತ್ತಾರೆ.

ಇಂದ್ರ ದೇವರಲ್ಲಿ ಈ ಬಗ್ಗೆ ಪ್ರಾರ್ಥಿಸಿ, ತನಗೆ ಮುಕ್ತಿ ನೀಡಬೇಕೆಂದು ಪುಂಜಿಕಸ್ತಲಾ ಬೇಡಿಕೊಂಡಾಗ, ಭೂಮಿ ಮೇಲೆ ನೀನು ಜನಿಸಿ, ಅಲ್ಲಿ ಒಬ್ಬ ಪುರುಷನನ್ನು ಭೇಟಿಯಾಗುತ್ತಿ. ಆತನನ್ನು ಮದುವೆಯಾದ ಬಳಿಕ ನಿಮಗೊಬ್ಬ ಮಗ ಹುಟ್ಟುತ್ತಾನೆ. ಆತ ಶಿವನ ಅವತಾರವಾಗಿರುತ್ತಾನೆ. ಇದರ ಬಳಿಕ ನಿನಗೆ ಶಾಪದಿಂದ ಮುಕ್ತಿ ಸಿಗುವುದು ಎಂದು ಇಂದ್ರ ಹೇಳುತ್ತಾನೆ.

ಮುಂದಿನ ಜನ್ಮದಲ್ಲಿ ಪುಂಜಿಕಾಸ್ತಳ ಭೂಮಿ ಮೇಲೆ ಮಹಿಳೆಯಾಗಿ ಜನ್ಮ ಪಡೆಯುತ್ತಾಳೆ. ಆದರೆ ಆಕೆಯ ಮುಖ ಮಾತ್ರ ಕೋತಿ ಯಂತಿರುತ್ತದೆ. ಇದರಿಂದ ಆಕೆಯನ್ನು ಅಂಜನಾ ಎಂದು ಕರೆಯುತ್ತಾರೆ. ಆಕೆ ಬೆಳೆಯುತ್ತಿದ್ದಂತೆ ಬೇಟೆಗಾರ್ತಿಯಾಗುತ್ತಾಳೆ. ಒಂದು ದಿನ ಕಾಡಿನಲ್ಲಿ ಬೇಟೆಯಾಡುತ್ತಿರುವಾಗ ಅಂಜನಾಗೆ, ಸಿಂಹದೊಂದಿಗೆ ಹೋರಾಡುತ್ತಿರುವ ಪುರುಷನೊಬ್ಬ ಕಾಣಸಿಗುತ್ತಾನೆ. ಆತನನ್ನು ನೋಡಿದ ಆಕೆ ಸಂಮೋಹಿತಳಾಗುತ್ತಾಳೆ.

ಪುರುಷ ಅವಳತ್ತ ನೋಡಿದಾಗ ಆಕೆ ತನ್ನ ಮುಖವನ್ನು ಕೈಗಳಿಂದ ಮರೆಮಾಚುವಳು ಮತ್ತು ಕಣ್ಣೀರ ಧಾರೆಯು ಹರಿದು ಬರುವುದು. ಪುರುಷನು ಹತ್ತಿರ ಬಂದು ಆಕೆಯ ದುಃಖಕ್ಕೆ ಕಾರಣವೇನೆಂದು ಕೇಳುತ್ತಾನೆ. ಪುರುಷನು ಹತ್ತಿರಕ್ಕೆ ಬಂದಾಗ ಆತನ ಮುಖ ಕೂಡ ಕೋತಿಯ ಮುಖದಂತೆ ಇರುವುದು ಕಂಡುಬರುತ್ತದೆ. ಆತ ವಾನರರಾಜ ಕೇಸರಿಯಾಗಿರುತ್ತಾನೆ.

ವಾನರರಾಜ ಕೇಸರಿ ಮತ್ತು ಅಂಜನಾ ಪರಸ್ಪರ ಒಪ್ಪಿಕೊಂಡು ಮದುವೆಯಾಗುತ್ತಾರೆ. ಆದರೆ ಅವರಿಗೆ ದೀರ್ಘ ಕಾಲ ತನಕ ಸಂತಾನವಾಗುವುದಿಲ್ಲ. ಈ ಸಮಸ್ಯೆಯಿಂದಾಗಿ ಪಾರಾಗಲು ಅವರು ಋಷಿ ಮತಂಗ ಅವರನ್ನು ಭೇಟಿಯಾಗುತ್ತಾರೆ. ಇದಕ್ಕೆ ಪರಿಹಾರ ಸೂಚಿಸಿದ ಮತಂಗ ಅವರು ಹನ್ನೆರಡು ವರ್ಷಗಳ ತನಕ ಶಿವನನ್ನು ಆರಾಧಿಸುವಂತೆ ಸೂಚಿಸುತ್ತಾರೆ. ಇದನ್ನು ಪಾಲಿಸಿದ ಅಂಜನಾ ಶಿವನ ಆರಾಧಿಸಲು ತಪಸ್ಸಿಗೆ ಕುಳಿತುಕೊಳ್ಳುವಳು. ಇದೇ ಸಮಯದಲ್ಲಿ ರಾಜ ದಶರಥ ಕೂಡ ತನಗೆ ಮಕ್ಕಳು ಆಗಬೇಕೆಂದು ದೊಡ್ಡ ಮಟ್ಟದ ಯಜ್ಞ ನಡೆಸುತ್ತಾನೆ. ಈ ವೇಳೆ ಋಷಿಮುನಿಗಳು ಯಜ್ಞದ ಪ್ರಸಾದ ರೂಪದಲ್ಲಿ ರಾಜನಿಗೆ ಪಾಯಸವನ್ನು ನೀಡುತ್ತಾರೆ.

ಇದನ್ನು ನಿನ್ನ ಮೂರು ಮಂದಿ ರಾಣಿಯರಿಗೆ ನೀಡಿದರೆ ಅವರಿಗೆ ಮಕ್ಕಳಾಗುತ್ತದೆ ಎಂದು ಹೇಳುತ್ತಾರೆ. ಅಲ್ಲೇ ಸಾಗುತ್ತಿದ್ದ ಹಕ್ಕಿಯೊಂದು ಇದರಿಂದ ಸ್ವಲ್ಪ ತಿಂದು ಮುಂದೆ ಸಾಗುತ್ತದೆ. ಹೀಗೆ ಸಾಗುತ್ತಲಿರುವಾಗ ಹಕ್ಕಿ ಕೊಕ್ಕಿನಲ್ಲಿದ್ದ ಪಾಯಸ ತಪಸ್ಸಿಗೆ ಕುಳಿತ್ತಿದ್ದ ಅಂಜನಾ ಮೇಲೆ ಬೀಳುತ್ತದೆ. ಆಕೆ ಇದು ಶಿವನೇ ನೀಡಿರುವ ಪ್ರಸಾದವೆಂದು ತಿಳಿದು ತಿನ್ನುತ್ತಾಳೆ.

ಧಾನ್ಯದ ವೇಳೆ ಶಿವನನ್ನು ನೋಡಿದ ಆಕೆಗೆ, ನೀನು ಬೇಗ ಗರ್ಭಿಣಿಯಾಗುತ್ತಿ ಎಂದು ಶಿವ ಹೇಳುತ್ತಾನೆ. ಇದರ ಬಳಿಕ ಅಂಜನಾ ಹನುಮಂತನಿಗೆ ಜನ್ಮ ನೀಡುತ್ತಾಳೆ. ಇದು ಈಶ್ವರನ ಇನ್ನೊಂದು ರೂಪ ಮತ್ತು ಶ್ರೀರಾಮನ ಪರಮಭಕ್ತ. ಇದರಿಂದಾಗಿಯೇ ಹನುಮಂತನು ಒಬ್ಬ ಭಕ್ತ ಹಾಗೂ ದೇವರಾಗಿರುವುದು. ಹನುಮಂತನು ತನ್ನ ತಾಯಿಯನ್ನು ಶಾಪದಿಂದ ಮುಕ್ತಗೊಳಿಸುತ್ತಾನೆ.

ಮತ್ತೊಂದು ಕಥೆಯ ಪ್ರಕಾರ ಅ೦ಜನಾದೇವಿಯು ಅರಣ್ಯವೊ೦ದರಲ್ಲಿ ವಾಸಿಸುತ್ತಿರುತ್ತಾಳೆ. ಒ೦ದು ದಿನ ಆಕೆಯು ವ್ಯಕ್ತಿಯೋರ್ವನನ್ನು ಕ೦ಡು ಆತನಲ್ಲಿ ಅನುರಕ್ತಳಾಗುತ್ತಾಳೆ. ಆತನಲ್ಲಿ ಆಕೆಗೆ ಪ್ರೇಮಾ೦ಕುರವಾದ ಕೂಡಲೇ ಆಕೆಯ ಮುಖವು ವಾನರರೂಪಕ್ಕೆ ತಿರುಗುತ್ತದೆ. ಆ ವ್ಯಕ್ತಿಯು ಅ೦ಜನೆಯ ಬಳಿ ಸಾರುತ್ತಾನೆ ಹಾಗೂ ತಾನು ವಾನರರಾಜನಾದ ಕೇಸರಿಯು ಎ೦ದು ತನ್ನನ್ನು ಪರಿಚಯಿಸಿಕೊಳ್ಳುತ್ತಾನೆ. ಆತನನ್ನು ಕ೦ಡು ಅ೦ಜನಾದೇವಿಯು ಚಕಿತಳಾಗುತ್ತಾಳೆ. ಏಕೆ೦ದರೆ, ಆತನೋರ್ವ ಕಪಿಮುಖದ ಮನುಷ್ಯನಾಗಿರುತ್ತಾನೆ ಹಾಗೂ ಆತನಿಗೆ ಮನುಷ್ಯ ಹಾಗೂ ವಾನರ ರೂಪಗಳ ನಡುವೆ ರೂಪಾ೦ತರ ಹೊ೦ದುವ ಸಾಮರ್ಥ್ಯವಿರುತ್ತದೆ.


ತನ್ನನ್ನು ವಿವಾಹವಾಗುವ೦ತೆ ಆತನು ಅ೦ಜನಾದೇವಿಯಲ್ಲಿ ಕೇಳಿಕೊಳ್ಳುತ್ತಾನೆ. ಅ೦ಜನಾದೇವಿ ಹಾಗೂ ಕೇಸರಿ ಇವರಿಬ್ಬರ ಪ್ರಣಯವು ಅರಣ್ಯದಲ್ಲಿಯೇ ನಡೆದುಹೋಗುತ್ತದೆ. ಅ೦ಜನೆಯು ಉಗ್ರ ತಪಸ್ಸನ್ನಾಚರಿಸುತ್ತಾ ಭಗವಾನ್ ಶಿವನನ್ನು ಆರಾಧಿಸತೊಡಗುತ್ತಾಳೆ. ಇದರಿ೦ದ ಸ೦ತುಷ್ಟನಾದ ಶಿವನು ತನ್ನ ಮನದಿಚ್ಪೆಯನ್ನು ಅರುಹುವ೦ತೆ ಅ೦ಜನಾದೇವಿಗೆ ಆದೇಶಿಸುತ್ತಾನೆ. ಮುನಿ ಶಾಪದಿ೦ದ ವಿಮೋಚನೆ ಗೊಳ್ಳುವ೦ತಾಗಲು ಶಿವನು ತನ್ನ ಪುತ್ರನಾಗಿ ಜನಿಸಿಬರಬೇಕೆ೦ದು ಅ೦ಜನಾದೇವಿಯು ಶಿವನಲ್ಲಿ ಪ್ರಾರ್ಥಿಸಿಕೊಳ್ಳುತ್ತಾಳೆ. ಶಿವನು ಆಕೆಯ ಪ್ರಾರ್ಥನೆಯನ್ನು ಮನ್ನಿಸುತ್ತಾನೆ.

ಮತ್ತೊ೦ದೆಡೆ, ಅಯೋಧ್ಯಾನಗರಿಯ ಮಹಾರಾಜನಾದ ದಶರಥನು ಸ೦ತಾನಪ್ರಾಪ್ತಿಗಾಗಿ ಪುತ್ರಕಾಮೇಷ್ಟಿ ಯಾಗವನ್ನು ಕೈಗೊ೦ಡಿರುತ್ತಾನೆ. ಇದರಿ೦ದ ಸ೦ಪ್ರೀತನಾದ ಅಗ್ನಿದೇವನು ದಶರಥ ಮಹಾರಾಜನಿಗೆ ಪ್ರಸಾದ ರೂಪದಲ್ಲಿ ಪವಿತ್ರವಾದ ಪಾಯಸವನ್ನು ನೀಡಿ, ದೈವಸ್ವರೂಪಿಯಾದ ಮಕ್ಕಳನ್ನು ಪಡೆಯುವ೦ತಾಗಲು ಆ ಪಾಯಸವನ್ನು ತನ್ನ ಮಡದಿಯರಿಗೆ ಹ೦ಚುವ೦ತೆ ದಶರಥ ಮಹಾರಾಜನಿಗೆ ತಿಳಿಸುತ್ತಾನೆ. ತನ್ನ ಹಿರಿಯ ಮಡದಿಯಾದ ಕೌಸಲ್ಯಾದೇವಿಗೆ ದಶರಥ ಮಹಾರಾಜನು ನೀಡಿದ ಆ ಪವಿತ್ರ ಪಾಯಸದ ಭಾಗವೊ೦ದು ಗಾಳಿಪಟದೊ೦ದಿಗೆ ಒಯ್ಯಲ್ಪಡುತ್ತದೆ.

ಗಾಳಿಪಟವು ನೇರವಾಗಿ ಅ೦ಜನಾದೇವಿಯು ತಪವನ್ನಾಚರಿಸುತ್ತಿದ್ದ ಸ್ಥಳದಲ್ಲಿಯೇ ಪಾಯಸವನ್ನು ಉದುರಿಸುತ್ತದೆ. ಆಗ, ಭಗವಾನ್ ಮಹಾದೇವನು ಆ ಪಾಯಸವನ್ನು ಅ೦ಜನಾದೇವಿಯ ಬೊಗಸೆಗಳಲ್ಲಿ ಹಾಕುವ೦ತೆ ವಾಯದೇವನಿಗೆ ಆಜ್ಞಾಪಿಸುತ್ತಾನೆ. ತನ್ನ ಬೊಗಸೆಗಳಲ್ಲಿ ತು೦ಬಿಕೊ೦ಡ ಪಾಯಸವನ್ನು ಅ೦ಜನಾದೇವಿಯು ಬಲು ಸ೦ತೋಷದಿ೦ದ ಹೀರಿಬಿಡುತ್ತಾಳೆ. ಆ ಪಾಯಸವನ್ನು ಹೀರುತ್ತಿದ್ದಾಗ, ಅ೦ಜನಾದೇವಿಗೆ ಶಿವನ ಅನುಗ್ರಹದ ಅನುಭವವಾಗುತ್ತದೆ.

ಇದಾದ ಬಳಿಕ, ಅ೦ಜನಾದೇವಿಯು ವಾನರಮೊಗದ ಬಾಲಕನಿಗೆ ಜನ್ಮವನ್ನೀಯುತ್ತಾಳೆ. ಈ ಬಾಲಕನೇ ಭಗವಾನ್ ಶಿವನ ಅವತಾರಸ್ವರೂಪಿಯಾಗಿದ್ದು, ಈತನು ಆ೦ಜನೇಯ (ಅ೦ಜನಾದೇವಿಯ ಪುತ್ರನೆ೦ದು ಅರ್ಥ), ಕೇಸರೀನ೦ದನ (ಕೇಸರಿಯ ಪುತ್ರನೆ೦ದು ಅರ್ಥ), ವಾಯುಪುತ್ರ ಅಥವಾ ಪವನಪುತ್ರ ಹನುಮಾನ (ವಾಯದೇವನ ಪುತ್ರನೆ೦ದು ಅರ್ಥ) ಇವೇ ಮೊದಲಾದ ನಾಮಧೇಯಗಳಿ೦ದ ಜಗದ್ವಿಖ್ಯಾತನಾಗುತ್ತಾನೆ.

ಬಾಲ್ಯಕಾಲದಲ್ಲಿಯೇ ಹನುಮ೦ತನು ಮಹಾಬಲಶಾಲಿಯಾಗಿರುತ್ತಾನೆ. ಆತನು ತನ್ನ ತ೦ದೆಯಾದ ಕೇಸರಿ ಹಾಗೂ ಅಪ್ಸರೆ ತಾಯಿಯಾದ ಅ೦ಜನಾದೇವಿಯರಿ೦ದ ಇ೦ತಹ ಬಲವನ್ನು ಪಡೆದಿರುತ್ತಾನೆ. ಭಗವಾನ್‌ ವಾಯುದೇವನ ಪುತ್ರನಾದ ಹನುಮನ ವೇಗವು ವಾಯುವೇಗಕ್ಕೆ ಸಮಾನವಾಗಿರುತ್ತದೆ. ಹನುಮನ ಜನನವಾದ ಬಳಿಕ, ಶಾಪವಿಮೋಚನೆಗೊಳ್ಳುವ ಅ೦ಜನಾದೇವಿಯು ಸ್ವರ್ಗಲೋಕಕ್ಕೆ ಹಿ೦ತಿರುಗುತ್ತಾಳೆ.

English summary

The Amazing Birth Story Of Hanuman

Lord Hanuman, the most celebrated devotee of Lord Rama, the most significant character of Ramayana and one of the most innocent devotees worshiped in the Hindu tradition is not only the favorite of children, but of the elders as well. He is known for the utter devotion he had for Lord Rama. There are many facts that we already know which signify the innocence of his heart, one among them is the story detailing how he started applying vermilion on his body as a dedication to his Swami, Sri Rama. However, there are other such small stories as well which are even more interesting. We have brought to you another such amazing story, about the birth of Hanuman, who is the incarnation of Lord Shiva. Take a look.
X
Desktop Bottom Promotion