For Quick Alerts
ALLOW NOTIFICATIONS  
For Daily Alerts

ಸಾಂಟಾ ಕ್ಲಾಸ್ ಕಲಿಸುವ ಜೀವನದ ಹತ್ತು ಪಾಠಗಳು

By Hemanth
|

ಕ್ರಿಸ್ಮಸ್ ಬಂತೆಂದರೆ ಅದು ವಿಶ್ವದೆಲ್ಲೆಡೆಯಲ್ಲಿ ಸಂಭ್ರಮವನ್ನು ತರುವುದು. ಯಾಕೆಂದರೆ ವರ್ಷದ ಅಂತ್ಯದಲ್ಲಿ ಬರುವಂತಹ ಕ್ರಿಸ್ಮಸ್ ಹಬ್ಬವು ಹೊಸ ವರ್ಷದ ಸಂಭ್ರಮಕ್ಕೂ ದಾರಿಯಾಗುವುದು. ಇದರಿಂದ ವಿಶ್ವದೆಲ್ಲೆಡೆಯಲ್ಲಿ ಕ್ರಿಸ್ಮಸ್ ಹಬ್ಬವನ್ನು ತುಂಬಾ ಸಡಗರ ಹಾಗು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಕೆಲವೊಂದು ದೇಶಗಳಲ್ಲಿ ಕ್ರಿಸ್ಮಸ್ ಹಬ್ಬವು ಒಂದು ತಿಂಗಳ ಕಾಲ ಇರುವುದು. ಇಲ್ಲಿ ಕ್ರಿಸ್ಮಸ್ ಜತೆಗೆ ಹೊಸವರ್ಷದ ತನಕ ಹೆಚ್ಚಿನವರಿಗೆ ರಜೆಯನ್ನು ಘೋಷಿಸಲಾಗುವುದು. ಅದರಲ್ಲೂ ಕ್ರಿಸ್ಮಸ್ ವೇಳೆ ಮಕ್ಕಳನ್ನು ಹೆಚ್ಚಾಗಿ ಸೆಳೆಯುವ ಅಂಶವೆಂದರೆ ಅದು ಸಾಂಟಾ ಕ್ಲಾಸ್. ಕ್ರಿಸ್ಮಸ್ ವೇಳೆ ಹೆಚ್ಚಾಗಿ ಇಂದಿನ ದಿನಗಳಲ್ಲಿ ವಾಣಿಜ್ಯವಾಗಿಯೂ ಸಾಂಟಾ ಕ್ಲಾಸ್ ನ್ನು ಬಳಸಲಾಗುತ್ತಿದೆ.

Santa

ಯಾವ ಮಾಲ್ ಗಳಿಗೆ ಹೋದರೂ ನಿಮಗೆ ಸಾಂಟಾ ಕ್ಲಾಸ್ ನ ಬಟ್ಟೆಗಳು, ಟೋಪಿ ಇತ್ಯಾದಿ ಕಾಣಸಿಗುವುದು. ಸಾಂಟಾ ಕ್ಲಾಸ್ ಕ್ರಿಸ್ಮಸ್ ಗೆ ವಿಶೇಷ ಮೆರಗು ನೀಡುತ್ತಾನೆ ಎಂದರೆ ತಪ್ಪಾಗದು. ಆದರೆ ನಾವು ಕ್ರಿಸ್ಮಸ್ ಗೆ ಸಂಬಂಧಿಸಿದ ಕೆಲವೊಂದು ಪ್ರಮುಖ ಮೌಲ್ಯಗಳನ್ನು ಹಾಗೂ ನೀತಿಗಳನ್ನು ತಿಳಿದುಕೊಳ್ಳುವುದು ಅತೀ ಅಗತ್ಯವಾಗಿರುವುದು. ಸಾಂಟಾಕ್ಲಾಸ್ ನಿಂದ ನಾವು ಯಾವ ರೀತಿಯ ಪ್ರೇರಣೆ ಪಡೆದುಕೊಳ್ಳಬಹುದು ಎಂದು ಈ ಲೇಖನದಲ್ಲಿ ತಿಳಿದುಕೊಳ್ಳಿ. ಸಾಂಟಾಕ್ಲಾಸ್ ಕೇವಲ ಉಡುಗೊರೆ ಮಾತ್ರ ತರುವುದಲ್ಲದೆ, ಹಲವಾರು ರೀತಿಯ ಪಾಠಗಳನ್ನು ಕೂಡ ನಮಗೆ ಕಲಿಸಿಕೊಡುವನು. ಇಂತಹ ಪಾಠಗಳು ಯಾವುದು ಎಂದು ನೀವು ಈ ಲೇಖನ ಮೂಲಕ ತಿಳಿಯಬಹುದಾಗಿದೆ.

1. ನಗು ಸಂಭ್ರಮವನ್ನು ತರುವುದು

1. ನಗು ಸಂಭ್ರಮವನ್ನು ತರುವುದು

ನಗು ಎನ್ನುವುದು ಪ್ರತಿಯೊಬ್ಬರಿಗೂ ಆರೋಗ್ಯ ತರುವುದು ಎಂದು ಹೇಳಲಾಗುತ್ತದೆ. ಇಷ್ಟು ಮಾತ್ರವಲ್ಲದೆ ನಗುವಿನಿಂದಾಗಿ ಧನಾತ್ಮಕ ಶಕ್ತಿಯು ನಮ್ಮ ಸುತ್ತಲು ಹರಿದಾಡುವುದು. ನಮ್ಮ ವರ್ತನೆಯಂತೆ ಸುತ್ತಲಿನ ಪರಿಸರವು ಇರುವ ಕಾರಣದಿಂದಾಗಿ ನಾವು ನಕ್ಕು, ಸಂತೋಷವಾಗಿದ್ದರೆ ಆಗ ಸುತ್ತಲಿನ ಪರಿಸರ ಕೂಡ ತುಂಬಾ ಧನಾತ್ಮಕವಾಗಿರುವುದು ಎಂದು ಹೇಳಲಾಗುತ್ತದೆ. ಇದರಿಂದಾಗಿ ನಾವು ನಮ್ಮ ಜೀವನವನ್ನು ತುಂಬಾ ಸುಲಭವಾಗಿ ಎದುರಿಸಬಹುದಾಗಿದೆ. ಜೀವನದಲ್ಲಿ ಬರುವಂತಹ ಹಲವಾರು ರೀತಿಯ ಸಮಸ್ಯೆಗಳನ್ನು ನಾವು ನಗುವಿನ ಮೂಲಕವೇ ದೂರ ಮಾಡಿಕೊಳ್ಳಬಹುದು.

Most Read: ಕ್ರಿಸ್ಮಸ್ ವೃಕ್ಷವನ್ನು ಅಲ೦ಕರಿಸುವುದರ ಹಿಂದಿರುವ ರಹಸ್ಯವೇನು?

2. ಕೊಡುವುದನ್ನು ಕಲಿಯಿರಿ

2. ಕೊಡುವುದನ್ನು ಕಲಿಯಿರಿ

ಸಾಂಟಾ ಕ್ಲಾಸ್ ನಮಗೆ ಕಲಿಸಿಕೊಡುವಂತಹ ಎರಡನೇ ಪಾಠವೆಂದರೆ ಕೊಡುವುದು. ಯಾಕೆಂದರೆ ಕೊಡುವುದು ಅಥವಾ ದಾನ ಮಾಡುವುದರಲ್ಲಿ ಸಿಗುವಂತಹ ಖುಷಿಯು ನಿಮಗೆ ಬೇರೆಲ್ಲೂ ಸಿಗದು. ದಾನ ಮಾಡುವುದರಿಂದ ಹಲವಾರು ರೀತಿಯ ಪಾಪಗಳು ಕೂಡ ನಿವಾರಣೆ ಆಗುವುದು ಎಂದು ಹೇಳಲಾಗುತ್ತದೆ. ಬೇರೆಯವರ ಮುಖದಲ್ಲಿ ನಗು ಕಾಣುವುದರಿಂದ ನಮ್ಮನ್ನು ನಾವು ಬಲಿಷ್ಠರಾಗಿಸುವುದು ಮತ್ತು ನಮ್ಮ ಹೃದಯದಲ್ಲಿ ಕೂಡ ಸಂತೋಷವನ್ನು ಉಂಟು ಮಾಡುವುದು. ಬೇರೆಯವರಿಗೆ ನೆರವಾಗುವುದು ಮತ್ತು ಅವರ ಸಂಕಷ್ಟದಲ್ಲಿ ಪಾಲ್ಗೊಂಡಾಗ ಸಿಗುವಷ್ಟು ಖುಷಿ ಬೇರೆಲ್ಲೂ ಸಿಗುವುದಿಲ್ಲವೆಂದು ಇಂತಹ ಪರೋಪಕಾರದಲ್ಲಿ ತೊಡಗಿಸಿಕೊಂಡಿರುವವರಿಗೆ ಖಂಡಿತವಾಗಿಯೂ ತಿಳಿದಿರುವುದು.

3. ಮರಳಿ ಏನನ್ನೂ ನಿರೀಕ್ಷಿಸದೆ ಇರುವುದು

3. ಮರಳಿ ಏನನ್ನೂ ನಿರೀಕ್ಷಿಸದೆ ಇರುವುದು

ಸಾಂಟಾ ಕ್ಲಾಸ್ ಪ್ರತೀ ಸಲ ನಮಗೆ ಉಡುಗೊರೆಗಳನ್ನು ನೀಡುವನು. ಆದರೆ ಅದರ ಪ್ರತಿಯಾಗಿ ಆತ ನಮ್ಮಿಂದ ಬೇರೆ ಏನನ್ನೂ ನಿರೀಕ್ಷೆ ಮಾಡುವುದಿಲ್ಲ. ಬೇರೆಯವರ ಮುಖದಲ್ಲಿ ಸಂತೋಷವನ್ನು ಕಾಣುವುದೇ ಸಾಂಟಾಕ್ಲಾಸ್ ಗೆ ಇರುವಂತಹ ಮುಖ್ಯ ಉದ್ದೇಶ. ಯಾಕೆಂದರೆ ನಾವು ಯಾವುದೇ ನಿರೀಕ್ಷೆ ಇಟ್ಟುಕೊಂಡು ಬೇರೆಯವರಿಗೆ ನೆರವು ನೀಡಿದರೆ ಅದು ಖಂಡಿತವಾಗಿಯೂ ಸರಿಯಲ್ಲ. ನಾವು ನೆರವು ನೀಡುವುದೇ ಆಗಿದ್ದರೆ ಅದು ನಿಸ್ವಾರ್ಥ ಆಗಿರಬೇಕು. ಸಾಂಟಾಕ್ಲಾಸ್ ನಿಸ್ವಾರ್ಥ ಮನೋಭಾವವು ನಮಗೆ ಪ್ರೇರಣೆಯಾಗಿರುವುದು. ಇದು ನಿಜವಾದ ಪ್ರೀತಿಯ ಲಕ್ಷಣವಾಗಿದೆ.

4. ಉಪಯೋಗವಾಗುವುದನ್ನೇ ಕೊಡುವುದು

4. ಉಪಯೋಗವಾಗುವುದನ್ನೇ ಕೊಡುವುದು

ಹಿಂದಿನಿಂದಲೂ ಸಾಂಟಾಕ್ಲಾಸ್ ಮಕ್ಕಳಿಗೆ ಉಡುಗೊರೆಯನ್ನು ಹಿಡಿದುಕೊಂಡು ಬರುತ್ತಿದ್ದ ಮತ್ತು ಅದನ್ನು ಮಕ್ಕಳಿಗೆ ನೀಡುತ್ತಿದ್ದ ಎಂದು ಕಥೆಗಳು ಹೇಳುತ್ತವೆ. ಆದರೆ ಆತ ನೀಡುವಂತಹ ಪ್ರತಿಯೊಂದು ಉಡುಗೊರೆಯು ಯಾವುದಾದರೂ ಉಪಯೋಗಕ್ಕೆ ಬರುತ್ತಲಿತ್ತು. ಆತ ಹಾಗೆ ಕೇವಲ ಕೊಡಬೇಕು ಎನ್ನುವ ಕಾರಣಕ್ಕಾಗಿ ಉಡುಗೊರೆಗಳನ್ನು ಕೊಡುತ್ತಾ ಇರಲಿಲ್ಲ. ನಿಜವಾಗಿಯೂ ಹಸಿವಾಗಿರುವ ಅಥವಾ ಅಗತ್ಯವಾಗಿರುವಂತಹ ಮಕ್ಕಳಿಗೆ ನಾವು ಆಹಾರ, ಚಾಕಲೇಟ್ ಇತ್ಯಾದಿಗಳನ್ನು ನೀಡಬೇಕು. ಇದು ನಾವು ಅನುಸರಿಸುವ ಸರಿಯಾದ ಮಾರ್ಗವಾಗಿದೆ. ಇದರಿಂದ ನಾವು ದಾನ ಮಾಡುವಾಗ ಕೂಡ ಇದರ ಅಗತ್ಯತೆ ಇರುವವರನ್ನು ಗಮನಿಸಿ ದಾನ ಮಾಡಬೇಕು ಮತ್ತು ಸರಿಯಾದ ಉಡುಗೊರೆಯನ್ನೇ ನೀಡಬೇಕು. ಯಾವುದೇ ಅಗತ್ಯವು ಇಲ್ಲದೆ ಇರುವಂತ ಜನರಿಗೆ ದಾನ ನೀಡಿದರೆ ಅದರಿಂದ ಉಪಯೋಗವಿಲ್ಲ.

5. ಕೇಳುವುದರಿಂದ ಜನರಿಗೆ ಹತ್ತಿರವಾಗುವಿರಿ

5. ಕೇಳುವುದರಿಂದ ಜನರಿಗೆ ಹತ್ತಿರವಾಗುವಿರಿ

ನಾವು ನೋಡುವಂತಹ ಕಥೆಗಳಲ್ಲಿ ಸಾಂಟಾಕ್ಲಾಸ್ ಸುತ್ತಲು ಮಕ್ಕಳು ಇರುವುದನ್ನು ನೋಡಿದ್ದೇವೆ. ಸಾಂಟಾಕ್ಲಾಸ್ ತೊಡೆಯಲ್ಲಿ ಮಕ್ಕಳು ಕುಳಿತುಕೊಂಡು ಮಕ್ಕಳು ಆತನೊಂದಿಗೆ ಮಾತನಾಡುವುದನ್ನು ನೋಡಿದ್ದೇವೆ. ಮಕ್ಕಳು ತಮಗೆ ಏನು ಬೇಕೆಂದು ಸಾಂಟಾಕ್ಲಾಸ್ ಗೆ ಹೇಳುತ್ತಲಿದ್ದರು. ಆತ ಮಕ್ಕಳ ಆಸೆ ಮತ್ತು ಅವರ ಯೋಜನೆಗಳಂತೆ ಅವರಿಗೆ ಉಡುಗೊರೆಗಳನ್ನು ನೋಡುತ್ತಲಿದ್ದ. ಪ್ರತಿಯೊಬ್ಬರ ಮಾತನ್ನು ಸಾಂಟಾಕ್ಲಾಸ್ ಕೇಳುತ್ತಲಿದ್ದ. ಇದರಿಂದ ನಾವು ಕಲಿತುಕೊಳ್ಳಬೇಕಾಗಿರುವ ವಿಚಾರವೆಂದರೆ ನಾವು ಜನರ ಮಾತನ್ನು ಕೇಳಿದರೆ ಮತ್ತು ಅವರೊಂದಿಗೆ ಭಾವನೆಗಳನ್ನು ಹಂಚಿಕೊಂಡರೆ ಆಗ ನಾವು ಜನರಿಗೆ ಮತ್ತಷ್ಟು ಹತ್ತಿರವಾಗುತ್ತೇವೆ ಎಂದು ಹೇಳಲಾಗುತ್ತದೆ.

Most Read: ಕ್ರಿಸ್ಮಸ್ ಕುರಿತ ಕುತೂಹಲ ಸಂಗತಿ, ಎಲ್ಲಾ ನಿಮಗಾಗಿ...

6. ನೀವು ಪ್ರೀತಿಸುವುದನ್ನು ಮಾಡಲು ಯಾವತ್ತೂ ಮರೆಯಬೇಡಿ

6. ನೀವು ಪ್ರೀತಿಸುವುದನ್ನು ಮಾಡಲು ಯಾವತ್ತೂ ಮರೆಯಬೇಡಿ

ಸಾಂಟಾಕ್ಲಾಸ್ ತುಂಬಾ ವ್ಯಸ್ತ ವ್ಯಕ್ತಿಯಾಗಿದ್ದರೂ ಪ್ರತಿಯೊಬ್ಬರ ಮನೆಗಳಿಗೆ ಹೋಗಿ ಎಲ್ಲಾ ರೀತಿಯ ತೊಂದರೆಗಳನ್ನು ದಾಟಿ ಆತ ಪ್ರತಿಯೊಬ್ಬರಿಗೂ ಅವರ ಇಷ್ಟದ ಉಡುಗೊರೆ ಮತ್ತು ಸಿಹಿ ತಿನಿಸುಗಳನ್ನು ನೀಡಲು ಮಾತ್ರ ಮರೆಯುವುದಿಲ್ಲ. ಇದರಿಂದಾಗಿ ಅವನನ್ನು ಜನರು ತುಂಬಾ ಇಷ್ಟಪಡುವರು. ಜನರನ್ನು ಖುಷಿ ಪಡುವ ಜತೆಗೆ ತಾನೂ ಕೂಡ ಖುಷಿಯಾಗಿರುವನು. ಇದರಿಂದ ನಾವು ಕಲಿಯಬೇಕಾಗಿರುವುದು ಏನೆಂದರೆ ನಾವು ನಮಗೋಸ್ಕರ ಕೂಡ ಸಮಯ ಮೀಸಲಿಡಬೇಕು.

7. ಸಾಂಟಾ ಪಕ್ಷಪಾತ ಮಾಡಲ್ಲ

7. ಸಾಂಟಾ ಪಕ್ಷಪಾತ ಮಾಡಲ್ಲ

ನೀವು ಎಷ್ಟು ಸುಂದರವಾಗಿದ್ದೀರಿ, ನಿಮ್ಮ ಬಣ್ಣ ಯಾವುದು ಮತ್ತು ನೀವು ಎಲ್ಲಿಂದ ಬಂದಿದ್ದೀರಿ ಎನ್ನುವ ಬಗ್ಗೆ ಸಾಂಟಾ ಕ್ಲಾಸ್ ಯಾವತ್ತೂ ಚಿಂತೆ ಮಾಡಿಲ್ಲ. ಯಾವುದೇ ರೀತಿಯ ಪಕ್ಷಪಾತ ಮಾಡದೆ ಆತ ಪ್ರತಿಯೊಬ್ಬರನ್ನು ಸಮಾನವಾಗಿ ನೋಡಿದ್ದಾನೆ ಮತ್ತು ಪ್ರತಿಯೊಬ್ಬರ ಬಯಕೆ ಪೂರೈಸುವನು. ಇದರಿಂದ ನಮ್ಮ ಹೃದಯವು ಯಾವಾಗಲೂ ಶುದ್ಧವಾಗಿರಬೇಕು ಮತ್ತು ಯಾವುದೇ ಪಕ್ಷಪಾತವು ಮನದಲ್ಲಿ ಇರಬಾರದು.

8. ನಿಮಗೆ ಬೆಂಬಲವಾಗಿ ಇರುವವರು ಸುತ್ತಲು ಇರಲಿ

8. ನಿಮಗೆ ಬೆಂಬಲವಾಗಿ ಇರುವವರು ಸುತ್ತಲು ಇರಲಿ

ಸಾಂಟಾಕ್ಲಾಸ್ ನ ಸುತ್ತಲು ಯಾವಾಗಲೂ ಪರಸ್ಪರ ಪ್ರೀತಿಸುವ ಹಾಗೂ ಬೆಂಬಲ ನೀಡುವಂತಹ ವ್ಯಕ್ತಿಗಳು ಮಾತ್ರ ಕಾಣಿಸಿಕೊಳ್ಳುತ್ತಿದ್ದರು. ಇವರಲ್ಲಿ ಪ್ರಮುಖವಾಗಿ ಸಾಂಟಾಕ್ಲಾಸ್ ಪತ್ನಿ ಕ್ಲಾಸ್, ಎಲ್ವೆಸ್ ಇತರರು ಇರುತ್ತಿದ್ದರು. ಏಕಾಂಗಿಯಾಗಿ ಇರುವುದು ಯಾವಾಗಲೂ ಮಾನಸಿಕ ಆರೋಗ್ಯಕ್ಕೆ ಒಳ್ಳೆಯದಲ್ಲ. ಇದರಿಂದಾಗಿ ಸಾಂಟಾಕ್ಲಾಸ್ ಸುತ್ತಲು ಯಾವಾಗಲೂ ಸಮಾನ ಗುರಿಯನ್ನು ಹೊಂದಿರುವವರು ಇದ್ದರು. ನಮ್ಮ ಸುತ್ತಲು ಯಾವಾಗಲೂ ಆರೋಗ್ಯಕರ ವಾತಾವರಣವನ್ನು ಉಂಟು ಮಾಡುವವರ ಜತೆಗೆ ನಾವು ಇರಬೇಕು ಎನ್ನುವುದು ಇದರರ್ಥ.

9. ಆಶಾದಾಯಕವಾಗಿರುವಂತೆ ನೆನಪಿಸುವನು

9. ಆಶಾದಾಯಕವಾಗಿರುವಂತೆ ನೆನಪಿಸುವನು

ನಮಗೆ ಏನಾದರೂ ಬೇಕು ಎಂದರೆ ಆಗ ಸಾಂಟಾಕ್ಲಾಸ್ ನಮಗೆ ಆಶಯವಾಗಿರುವರು. ನಮ್ಮ ಬಯಕೆಗಳನ್ನು ಈಡೇರಿಸುವಂತಹ ದೇವರ ಸಂದೇಶವಾಹಕ ಸಾಂಟಾಕ್ಲಾಸ್. ದೇವರು ನಮಗೆ ಹಲವಾರು ನಂಬಿಕೆಯ ಕಿರಣ ತೋರಿಸುವರು ಮತ್ತು ಇಂತಹ ಸಂದೇಶವಾಹಕರ ಮೂಲಕವಾಗಿ ನಮಗೆ ದಾರಿ ತೋರಿಸುವರು ಎಂದು ಇದು ಹೇಳುತ್ತದೆ. ನಾವು ಯಾವಾಗಲೂ ಭರವಸೆ ಕಳೆದುಕೊಳ್ಳಬಾರದು ಎಂದು ಇದು ಸಾರುತ್ತದೆ.

10. ಒಳ್ಳೆಯವರಾಗಿರಿ ಮತ್ತು ಯಾವಾಗಲೂ ಸಂತೋಷವಾಗಿರಿ

10. ಒಳ್ಳೆಯವರಾಗಿರಿ ಮತ್ತು ಯಾವಾಗಲೂ ಸಂತೋಷವಾಗಿರಿ

ಸಾಂಟಾ ಕ್ಲಾಸ್ ಗೆ ಕೂಡ ತನ್ನದೇ ಆಗಿರುವಂತಹ ಜೀವನ, ವೈಯಕ್ತಿಕ ಬದುಕು ಎನ್ನುವುದು ಇದ್ದೇ ಇದೆ. ಆದರೆ ಆತ ಮಾತ್ರ ನಮ್ಮ ಮುಂದೆ ಬರುವಾಗ ಯಾವಾಗಲೂ ನಗು ಮುಖದೊಂದಿಗೆ ಇರುವನು. ಆತನ ಹೃದಯದಲ್ಲಿ ಸಂಭ್ರಮವು ಮನೆ ಮಾಡಿರುವುದು. ಸಾಂಟಾ ಕ್ಲಾಸ್ ನಮಗೆ ಕಲಿಸುವ ಪಾಠವೆಂದರೆ ನಾವು ಯಾವಾಗಲೂ ಜೀವನದಲ್ಲಿ ಸಂತೋಷವಾಗಿರಬೇಕು. ಅಸಾಯಕರಾಗಿ ಇದ್ದರೆ ಆಗ ನಮಗೆ ಯಾವುದೇ ರೀತಿಯಿಂದಲೂ ನೆರವಾಗದು. ಮುಖ ಗಂಟಿಕ್ಕಿಕೊಂಡು ಇರುವುದು ನಿಮ್ಮ ಹಾಗೂ ನಿಮ್ಮ ಆರೋಗ್ಯದ ಮೇಲೆ ಕೂಡ ಪರಿಣಾಮ ಬೀರುವುದು. ಆದರೆ ಜೀವನದಲ್ಲಿ ಸಂತೋಷವಾಗಿದ್ದರೆ ಆಗ ಇದು ನಿಮಗೆ, ನಿಮ್ಮ ಸುತ್ತಲು ಇರುವವರಿಗೆ ಹಾಗೂ ನಿಮ್ಮ ಆರೋಗ್ಯಕ್ಕೆ ತುಂಬಾ ನೆರವಾಗುವುದು. ಇದರಿಂದ ನಿಮ್ಮ ಜೀವನದಲ್ಲಿ ತುಂಬಾ ಸಮಸ್ಯೆಗಳು ಇರಬಹುದು. ಅದನ್ನು ನೀವು ನಗು ಮುಖದೊಂದಿಗೆ ನಿವಾರಿಸಿಕೊಂಡು ಹೋದರೆ ಅದರಿಂದ ಸಿಗುವಂತಹ ಸಂಭ್ರಮವೇ ಬೇರೆ.

English summary

Ten Great Life Lessons From Santa

In most of the legends of Santa, we see him often surrounded by lovely kids sitting on his lap and sharing all their wishes and dreams with him. His selfless love had made him popular among all. While he always listened to what they wanted, he decided himself what should be the right gift for each of them. There are various qualities that Santa inspires us with.
Story first published: Monday, December 24, 2018, 17:22 [IST]
X
Desktop Bottom Promotion