For Quick Alerts
ALLOW NOTIFICATIONS  
For Daily Alerts

ಗಣರಾಜ್ಯೋತ್ಸವ ಪರೇಡ್‌ನಲ್ಲಿ ಇತಿಹಾಸ ಸೃಷ್ಟಿಸಲಿದ್ದಾರೆ ಸ್ವಾತಿ ರಾಥೋಡ್

|

ಜನವರಿ 26 ಗಣರಾಜ್ಯೋತ್ಸವ ದಿನ, ಪ್ರತಿಯೊಬ್ಬ ಭಾರತೀಯನು ಹೆಮ್ಮೆ ಪಡಬೇಕಾದ ದಿನ. ನಾವೆಲ್ಲಾ ಸ್ವಾತಂತ್ರ್ಯರು ಎಂದು ಕೊಂಡಾಡುವ ದಿನ.

ಅನೇಕ ಸ್ವಾತಂತ್ರ್ಯ ಹೋರಾಟದ, ಬಲಿದಾನ ಫಲ ನಾವಿಂದು ಅನುಭವಿಸುತ್ತಿರುವ ಸ್ವಾತಂತ್ರ್ಯ. ನಮ್ಮ ದೇಶಕ್ಕೆ ಸಂವಿಧಾನ ಜಾರಿಯಾದ ದಿನ. ಭಾರತೀಯರ ಹಕ್ಕು, ಕರ್ತವ್ಯಗಳನ್ನು ಸಂವಿಧಾನದಲ್ಲಿ ಹೇಳಲಾಗಿದೆ. ಅದರಲ್ಲಿರುವ ಹಕ್ಕುಗಳು ಭಾರತೀಯ ಪ್ರಜೆಯ ಘನತೆಯನ್ನು ಕಾಪಾಡಿದರೆ, ಅದರಲ್ಲಿರುವ ಕರ್ತವ್ಯವನ್ನು ಪಾಲಿಸುವುದು ಪ್ರತಿಯೊಬ್ಬ ಭಾರತೀಯನ ಆದ್ಯ ಕರ್ತವ್ಯವಾಗಿದೆ.

Swati Rathore

ನಾವು ಈ ವರ್ಷ 72ನೇ ಗಣರಾಜ್ಯೋತ್ಸವ ಆಚರಿಸಲಿದ್ದೇವೆ. ಈ ಗಣರಾಜ್ಸೋವದಲ್ಲಿ ಒಬ್ಬ ವೀರ ವನಿತೆ ಇತಿಹಾಸ ಸೃಷ್ಟಿಸಲಿದ್ದಾರೆ. ಅವರೇ ಫ್ಲೈಟ್‌ ಲೆಫ್ಟಿನೆಂಟ್ ಸ್ವಾತಿ ರಾಥೋಡ್.

ಇವರು ಗಣರಾಜ್ಯೋತ್ಸವದಂದು ನಡೆಯುವ ಪರೇಡ್‌ನಲ್ಲಿ ವೈಮಾನಿಕ ಪ್ರದರ್ಶನವನ್ನು ಮುನ್ನಡೆಸುವ ಜವಾಬ್ದಾರಿ ಇವರ ಮೇಲಿದೆ. ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರು ವೈಮಾನಿಕ ಪ್ರದರ್ಶನವನ್ನು ಮುನ್ನಡೆಸುತ್ತಿದ್ದಾರೆ.

ತಮ್ಮ ಮಗಳ ಸಾಧನೆ ಕಂಡು ಪೋಷಕರು ಹರ್ಷ ವ್ಯಕ್ತಪಡಿಸುತ್ತಿದ್ದಾರೆ. ನಮ್ಮ ಮಗಳು ಕಂಡ ಕನಸು ನೆನಸಾಗಿದೆ ಎಂದು ಹರ್ಷ ವ್ಯಕ್ತಪಡಿಸುತ್ತಿದ್ದಾರೆ. ಲೆಫ್ಟಿನೆಂಟ್ ಸ್ವಾತಿ ರಾಥೋಡ್ ಅವರ ತಂದೆ ರಾಜಾಸ್ಥಾನದ ಕೃಷಿ ಇಲಾಖೆಯಲ್ಲಿ ಕಾರ್ಯ ಮಾಡುತ್ತಿದ್ದು, 'ಹೆಣ್ಣು ಮಕ್ಕಳ ಕನಸು ನೆರವೇರಲು ಬೆಂಬಲ ನೀಡಿ' ಎಂದು ಎಲ್ಲಾ ಪೋಷಕರಲ್ಲಿ ಕೇಳಿಕೊಂಡಿದ್ದಾರೆ.

ಪೈಲೆಟ್ ಆಗಬೇಕೆಂಬ ಕನಸು ಕಂಡಿದ್ದ ಸ್ವಾತಿ ಅವರು 2014ರಲ್ಲಿ ಮೊದಲ ಪ್ರಯತ್ನದಲ್ಲಿಯೇ ಭಾರತೀಯ ವಾಯು ಸೇನೆಯಲ್ಲಿ ಪೈಲೆಟ್ ಆಗಿ ನೇಮಕಗೊಂಡರು. ಅವರ ಸಹೋದರ ನೌಕಾ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

2013ರಲ್ಲಿ ಸ್ವಾತಿ ಅವರು ಏರ್ ಫೋರ್ಸ್ ಕಾಮನ್ ಅಡ್ಮಿಷನ್ ಟೆಸ್ಟ್‌ನಲ್ಲಿ ಭಾಗವಹಿಸಿದ್ದರು. 2014 ಮಾರ್ಚ್‌ನಲ್ಲಿ ಏರ್‌ ಫೋರ್ಸ್ ಸೆಲೆಕ್ಷನ್‌ ಬೋರ್ಡ್‌ನಿಂದ ಸಂದರ್ಶನಕ್ಕೆ ಕರೆ ಬಂದಿತ್ತು. ಸುಮಾರು 200 ವಿದ್ಯಾರ್ಥಿನಿಯರು ಸಂದರ್ಶನಕ್ಕೆ ಬಂದಿದ್ದರು, ಅದರಲ್ಲಿ 98 ಮಂದಿಯಷ್ಟೇ ಆಯ್ಕೆಯಾಗಿದ್ದರು, ಅದರಲ್ಲೂ ಸ್ಕ್ರೀನಿಂಗ್ ಬಳಿಕ ಐವರಷ್ಟೇ ಉಳಿದಿದ್ದರು, ಅದರಲ್ಲಿ ಫ್ಲೈಯಿಂಗ್ ಬ್ರಾಂಚ್‌ಗೆ ಆಯ್ಕೆಯಾದವರು ಸ್ವಾತಿ ರಾಥೋಡ್‌ ಮಾತ್ರ.

ಸ್ವಾತಿ ಅವರು ಗಣರಾಜ್ಯೋತ್ಸವ ಪರೇಡ್‌ನಲ್ಲಿ ವೈಮಾನಿಕ ಪ್ರದರ್ಶನವನ್ನು ಮುನ್ನಡೆಸುವ ಕುರಿತು ಮಾತನಾಡಿದ ರಾಜಾಸ್ಥಾನ ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲೆಟ್ ' ಅವರು ರಾಜ್ಯದ ಘನತೆಯನ್ನು ಎತ್ತಿ ಹಿಡಿದಿರುವುದು ಮಾತ್ರವಲ್ಲ, ಮಹಿಳೆಯರ ಸಬಲೀಕರಣಕ್ಕೆ ಒಬ್ಬ ವಿಶೇಷ ಉದಾಹರಣೆಯಾಗಿದ್ದಾರೆ' ಎಂದಿದ್ದಾರೆ.

ಹೆಣ್ಣು ಎಂದರೆ ಅವಳೊಂದು ಅಪೂರ್ವವಾದ ಶಕ್ತಿ, ಆಕೆಗೊಂದು ಸ್ಪೂರ್ತಿ ನೀಡಿದರೆ ಎಷ್ಟು ಎತ್ತರಕ್ಕೆ ಬೇಕಾದರೂ ಬೆಳೆಯುತ್ತಾಳೆ ಎಂಬುವುದಕ್ಕೆ ನಿದರ್ಶನ ಸ್ವಾತಿ ರಾಥೋಡ್‌.

English summary

Swati Rathore, First Woman To Lead Republic Day Parade Flypast in Kannada

Swati Rathore, First Woman To Lead Republic Day Parade Flypast in Kannada
X
Desktop Bottom Promotion