For Quick Alerts
ALLOW NOTIFICATIONS  
For Daily Alerts

ಮನೆಯ ಶ್ರೇಯಸ್ಸಿಗಾಗಿ ಭಾನುವಾರ ಸೂರ್ಯ ಪೂಜೆಯ ವಿಧಿ ವಿಧಾನಗಳೇನು?

|

ಹಿಂದೂ ಧರ್ಮದ ಪ್ರಕಾರ ಭಾನುವಾರ ಎಂಬುವುದು ಸೂರ್ಯ ದೇವನಿಗೆ ಮೀಸಲಾದ ದಿನವಾಗಿದೆ. ಸೂರ್ಯನನ್ನು ಆರಾಧಿಸುವುದರಿಂದ ಸೂರ್ಯ ತೇಜದ ಪ್ರಭೆ ನಮ್ಮ ಬದುಕಿನಲ್ಲೂ ಪ್ರತಿಫಲಿಸುವುದು ಎಂಬ ನಂಬಿಕೆ.

ಸೂರ್ಯನನ್ನು ನವಗ್ರಹಗಳಿಗೂ ಅಧಿಪತಿ ಎಂದು ಗುರುತಿಸಲಾಗಿದೆ. ಸಕಲ ಜೀವರಾಶಿಗಳಿಗೂ ಸೂರ್ಯ ಬೇಕೇಬೇಕು. ಸೂರ್ಯ ಕಿರಣಗಳು ಭೂಮಿಯನ್ನುಸ್ಪರ್ಶಿಸಿದಾಗ ಮಾತ್ರ ಈ ಜಗತ್ತಿಗೆ ಬೆಳಕು ಸಿಗುವುದು. ಸೂರ್ಯನನ್ನು ಆರಾಧಿಸುವುದರಿಂದ ಶಕ್ತಿ ದೊರೆಯುವುದು, ಸಕಲ ದೂರವಾಗುವುದು ಎಂಬ ನಂಬಿಕೆ.

ಅನೇಕ ರೋಗಗಳನ್ನು ಗುಣ ಪಡಿಸುವ ಶಕ್ತಿ ಸೂರ್ಯ ರಶ್ಮಿಯಲ್ಲಿದೆ ಎಂಬುವುದನ್ನು ವಿಜ್ಞಾನವೂ ಹೇಳುತ್ತದೆ. ಸೂರ್ಯನನ್ನು ಆರಾಧಿಸುವ ಪೂಜಾ ವಿಧಿ-ವಿಧಾನಗಳ ಬಗ್ಗೆ ಇಲ್ಲಿ ಹೇಳಲಾಗಿದೆ ನೋಡಿ:

ಸೂರ್ಯ ಪೂಜಾ ವಿಧಿ

ಸೂರ್ಯ ಪೂಜಾ ವಿಧಿ

ಸೂರ್ಯ ಹುಟ್ಟುವ ಮೊದಲೇ ಎದ್ದು ಸ್ನಾನ ಮಡಿ, ಬಿಳಿ ಮಡಿ ಬಟ್ಟೆ ಧರಿಸಿ ಸೂರ್ಯನಿಗೆ ನಮಸ್ಕರಿಸಿ. ನಂತರ ತಾಮ್ರದ ಚೊಂಬಿನಲ್ಲಿ ಶುಭ್ರವಾದ ಣೀರು ತುಂಬಿಕೋಮಡು ನವಗ್ರಹಗಳ ದೇವಾಲಯಕ್ಕೆ ಹೋಗಿ ಅಲ್ಲಿ ಜೊಂಬಿಗೆ ಕುಂಕುಮ, ಚಂದನ, ಮಲ್ಲಿಗೆ ಹೂ ಹಾಕಿ ಸೂರ್ಯನಿಗೆ ಆರ್ಘ್ಯ ಅರ್ಪಿಸಿ. ನಂತರ ಸೂರ್ಯ ದೇವನಿಗೆ ದೀಪವನ್ನು ಹಚ್ಚಿ, ಸೂರ್ಯ ದೇವನನ್ನು ಮನಸ್ಸಿನಲ್ಲಿ ಪ್ರಾರ್ಥಿಸಿ. ನಂತರ ಸೂರ್ಯ ಮಂತ್ರಗಳನ್ನು ಪಠಿಸಿ.

ಸೂರ್ಯನ ಒಲಿಸಿಕೊಳ್ಳಲು ಹೇಳಬೇಕಾದ ಮಂತ್ರಗಳು

ಸೂರ್ಯನ ಒಲಿಸಿಕೊಳ್ಳಲು ಹೇಳಬೇಕಾದ ಮಂತ್ರಗಳು

ಸೂರ್ಯ ಬೀಜ ಮಂತ್ರ:

ಓಂ ಹ್ರಾಂ ಹ್ರೀಂ ಹ್ರೌಂ ಸಹ ಸೂರ್ಯಾಯ ನಮಃ

ಆದಿತ್ಯ ಹೃದಯಂ ಮಂತ್ರ:

ಆದಿತ್ಯ ಹೃದಯ ಪುಣ್ಯಂ ಸರ್ವ ಶತ್ರು ವಿನಾಶನಂ

ಜಯಾವಹಂ ಜಪೇನ್ನಿತ್ಯಂ ಅಕ್ಷಯಂ ಪರಂ ಶಿವಂ

ಸೂರ್ಯ ಗಾಯತ್ರಿ ಮಂತ್ರ

ಓಂ ಅಶ್ವ ಧ್ವಜಯಾ ವಿಷ್ಮಾ ಪಾಶಾ ಹಸ್ತಾಯೆ ಧಿಮಾಹಿ ತನ್ನೋಹ್ ಸೂರ್ಯ ಪ್ರಚೋದಯಾತ್

ಓಂ ಭಾಸ್ಕರಾಯೇ ವಿದ್ಮಯೆ ಮಹಾ ತೇಜಾಯ ಧಿಮಾಹಿ ತನ್ನೋ ಆದಿತ್ಯ ಪ್ರಚೋದಯಾತ್

ಓಂ ಆದಿತ್ಯ ವಿದ್ಮಯೆ ಸಹಸ್ರ ಕಿರಣಾಯೆ ಧಿಮಾಹಿ ತನ್ನೋ ಸೂರ್ಯ ಪ್ರಚೋದಯಾತ್

ನಮಃ ಸೂರ್ಯ ಶಾಂತಯ ಸರ್ವ ರೋಗ ನಿವಾರಣೆ ಆಯುರಾರೋಗ್ಯಂ ಐಶ್ವರ್ಯಂ ದೇಹಿ ದೇವಹ ಜಗತ್ಪತೇ

ಓಂ ನಮೋ ಶ್ರೀ ಸೂರ್ಯಾಯ ಸಹಸ್ರ ಕಿರಣಾಯ ಸಿಧಿ ಸಿದ್ಧ ಕರಾಯ ಮನ ವಂಚಿತ್ ಪುರಾಯ ಕಶ್ಮತಾಮ್ ಚುರಾಯಾಮ್ ಓಂ ಹ್ರೆಮ್ ಸೂರ್ಯ ನಮೋ ನಮಃ

ಆರತಿ ಬೆಳಗಿ, ಪ್ರಸಾದ ಅರ್ಪಿಸಿ

ಆರತಿ ಬೆಳಗಿ, ಪ್ರಸಾದ ಅರ್ಪಿಸಿ

ಮಂತ್ರಗಳನ್ನು ಪಠಿಸಿದ ಬಳಿಕ ಆರತಿಯನ್ನು ಬೆಳಗಿ, ಪ್ರಸಾದವನ್ನು ಅರ್ಪಿಸಿ. ಹೀಗೆ ಮಾಡುವುದರಿಂದ ಸೂರ್ಯ ನಿಮ್ಮ ಪ್ರಾರ್ಥನೆಗಳನ್ನು ಕೇಳುತ್ತಾನೆ, ನಿಮ್ಮ ದುಃಖಗಳು ದೂರವಾಗುವುದು, ನಿಮ್ಮ ಬಯಕೆಗಳು ಈಡೇರುವುದು ಎಂದು ಹೇಳಲಾಗುವುದು.

ದೇವಾಲಯಕ್ಕೆ ಹೋಗಲು ಸಾಧ್ಯವಾಗದಿದ್ದರೆ

ದೇವಾಲಯಕ್ಕೆ ಹೋಗಲು ಸಾಧ್ಯವಾಗದಿದ್ದರೆ

ಸೂರ್ಯನಿಗೆ ಮನೆಯಲ್ಲೂ ಪೂಜೆ ಸಲ್ಲಿಸಬಹುದು. ಬೆಳಗ್ಗೆ ಎದ್ದು ಸ್ನಾನ ಮಾಡಿ, ಬಿಳಿ ಶುಭ್ರ ಬಟ್ಟೆ ಧರಿಸಿ, ಸೂರ್ಯನಿಗೆ ಆರ್ಘ್ಯ ಅರ್ಪಿಸಿ. ನಂತರ ಸೂರ್ಯ ಮಂತ್ರಗಳನ್ನು ಪಠಿಸಿ. ಸೂರ್ಯ ಗಾಯತ್ರಿ ಮಂತ್ರ ತಪ್ಪದೆ ಪಠಿಸಿ. ನಂತರ ತಮ್ಮೆಲ್ಲಾ ಬಯಕೆ ಈಡೇರಿಸಿಕೊಡುವಂತೆ ಸೂರ್ಯನಲ್ಲಿ ಪ್ರಾರ್ಥಿಸಿ.

ಇದರಿಂದ ಕಷ್ಟಗಳು, ಕಾಯಿಲೆಗಳು ದೂರವಾಗುವುದು ಅಲ್ಲದೆ ತಾಳ್ಮೆಯು ಹೆಚ್ಚುವುದು.

ಸೂರ್ಯ ಪೂಜಾ ಮಾಡುವುದರಿಂದ ದೊರೆಯುವ ಪ್ರಯೋಜನಗಳು

ಸೂರ್ಯ ಪೂಜಾ ಮಾಡುವುದರಿಂದ ದೊರೆಯುವ ಪ್ರಯೋಜನಗಳು

* ವ್ಯಕ್ತಿಯನ್ನು ವಿಚಾರವಂತನ್ನಾಗಿ ಮಾಡುವುದು

* ಪ್ರತಿನಿತ್ಯ ಸೂರ್ಯಪೂಜೆ ಮಾಡುವುದರಿಂದ ವ್ಯಕ್ತಿಯು ಬುದ್ಧಿವಂತನೂ ಒಳ್ಳೆಯ ಸಂಸ್ಕಾರವಂತನೂ ಆಗುತ್ತಾನೆ.

* ಸೂರ್ಯ ಪೂಜೆ ಮಾಡುವುದರಿಂದ, ಕೋಪ, ದ್ವೇಷ, ಅಸೂಯೆ, ದುರಾಸೆ, ಕೆಟ್ಟ ಆಲೋಚನೆ ಇವೆಲ್ಲವೂ ದೂರವಾಗುವುದು.

English summary

Surya Puja- Worship Sun God On Sunday to Bring Positive Energy In Your House

Surya puja- worship sun god on sunday to bring positive energy in your house
Story first published: Saturday, June 26, 2021, 18:17 [IST]
X
Desktop Bottom Promotion