For Quick Alerts
ALLOW NOTIFICATIONS  
For Daily Alerts

ಅಮಾವಾಸ್ಯೆ-ಹುಣ್ಣಿಮೆ ನಡುವಿನ ಇಂಟರೆಸ್ಟಿಂಗ್ ಕಥಾಲೋಕ

By Manu
|

ಹಿಂದೂ ಪುರಾಣದಲ್ಲಿ ಚಂದ್ರನ ಬಗ್ಗೆ ಹಲವಾರು ಮಿಥ್ಯೆಗಳಿವೆ. ಅದರಲ್ಲೂ ಚಂದ್ರನಿಲ್ಲದ ಅಥವಾ ಅಮಾವಾಸ್ಯೆಯನ್ನು ವಿವರಿಸುವ ಒಂದು ಕಥೆಯೂ ಇದೆ. ಹಿಂದೂ ಪುರಾಣದ ಪ್ರಕಾರ ಸೋಮದೇವ ಅಥವಾ ಚಂದ್ರದೇವ ಚಂದ್ರನ ಅಧಿಪತಿಯಾಗಿದ್ದಾನೆ. ಈತನ ರಥವನ್ನು ಹತ್ತು ಶ್ವೇತ ಕುದುರೆಗಳು ಅಥವಾ ಜಿಂಕೆಗಳು ಎಳೆಯುತ್ತವೆ. ಈತ ಅತ್ಯಂತ ಸ್ಪುರದ್ರೂಪ ಪಡೆದಿರುವ, ಬೆಳ್ಳಗಿನ ಯುವಕನಾಗಿದ್ದು ಕೈಯಲ್ಲಿ ದಂಡ ಹಾಗೂ ಕಮಲವನ್ನು ಹಿಡಿದಿರುತ್ತಾನೆ.

ಎಲ್ಲಾ ಮೊಲಗಳು ಈತನ ರಕ್ಷಣೆಯಲ್ಲಿವೆ ಹಾಗೂ ಈತ ಸೋಮವಾರದ ಅಧಿಪತಿಯೂ ಆಗಿದ್ದಾನೆ. ಹಾಗಾದರೆ ಚಂದ್ರ ಬೆಳೆಯುವ ಅಥವಾ ಕುಂದುವ ಮೂಲಕ ಅಮಾವಾಸ್ಯೆ ಹುಣ್ಣಿಮೆಯಾಗುವುದೇಕೆ? ಬನ್ನಿ, ಈ ನೈಸರ್ಗಿಕ ವಿದ್ಯಮಾನದ ಬಗ್ಗೆ ಹಿಂದೂ ಪುರಾಣ ಏನು ಹೇಳುತ್ತದೆ ಎಂದು ನೋಡೋಣ...

ಮಹಾಲಯ ಅಮಾವಾಸ್ಯೆಯ ವಿಶೇಷತೆ

ಸೋಮದೇವ ಪ್ರಜಾಪತಿ ದಕ್ಷ ಎಂಬಾತನ ಇಪ್ಪತ್ತೇಳು ಹೆಣ್ಣು ಮಕ್ಕಳೊಂದಿಗೆ ವಿವಾಹ ಮಾಡಿಕೊಂಡಿದ್ದ. ಇವರಲ್ಲಿ ಅತ್ಯಂತ ಸುಂದರಿಯಾಗಿದ್ದ ರೋಹಿಣಿಯನ್ನು ಆತ ಅತಿ ಹೆಚ್ಚಾಗಿ ಪ್ರೀತಿಸುತ್ತಿದ್ದ. ಆಗ ಉಳಿದವರು ಈ ಬಗ್ಗೆ ತಮ್ಮ ತಂದೆ ದಕ್ಷನಲ್ಲಿ ದೂರು ನೀಡಿದರು. ಇದನ್ನು ಕೇಳಿ ದಕ್ಷ ಸಿಟ್ಟಿನಿಂದ ಕುದಿಯತೊಡಗಿದ. ಈ ಕೋಪದಲ್ಲಿ ಆತ ಸೋಮದೇವನನ್ನು ತನ್ನ ಸೌಂದರ್ಯ ಮತ್ತು ಕಾಂತಿಯನ್ನು ಕಳೆದುಕೊಳ್ಳುವಂತೆ ಶಪಿಸಿದ.

Amavasya moon

ಆದರೆ ಈ ಶಾಪದಿಂದ ಭೂಲೋಕಕ್ಕೆ ರಾತ್ರಿ ಪ್ರಕಾಶವೇ ಇಲ್ಲದೇ ಕತ್ತಲಲ್ಲಿ ಮುಳುಗಿತು. ಬಳಿಕ ಚಂದ್ರದೇವ ಭೂಲೋಕಕ್ಕೆ ಇಳಿದು ಭಗವಂತ ಶಿವನನ್ನು ಈ ಶಾಪದಿಂದ ಮುಕ್ತಿಗೊಳಿಸಲು ಪ್ರಾರ್ಥಿಸತೊಡಗಿದ. ಈತನ ಭಕ್ತಿಯನ್ನು ಮೆಚ್ಚಿದ ಶಿವ ಈತನನ್ನು ಶಾಪವಿಮುಕ್ತಿಗೊಳಿಸಿದ ಆದರೆ ಪೂರ್ಣವಾಗಿ ಅಲ್ಲ. ಬದಲಿಗೆ ಪ್ರತಿ ಹದಿನೈದು ದಿನಕ್ಕೊಂದು ಬಾರಿ ತನ್ನ ಸೌಂದರ್ಯವನ್ನು ಪಡೆದುಕೊಳ್ಳುವಂತೆ ಮಾಡಿದ. ಇದೇ ಕಾರಣಕ್ಕೆ ತಿಂಗಳಿಗೊಂದು ಬಾರಿ ಚಂದ್ರ ಸೌಂದರ್ಯರಹಿತನಿಂದ (ಅಮಾವಾಸ್ಯೆ) ಪರಿಪೂರ್ಣ ಸೌಂದರ್ಯ (ಹುಣ್ಣಿಮೆ) ಪಡೆಯುತ್ತಾ ಸಾಗಿದ್ದಾನೆ.

ಹುಣ್ಣಿಮೆ ಅಮಾವಾಸ್ಯೆ ಎನ್ನುವುದು ಚಂದ್ರನಿಗೆ ಗಣೇಶ ಕೊಟ್ಟ ಶಾಪ!

ಇನ್ನೊಂದು ಕಥೆಯಲ್ಲಿ ಪ್ರಾರಂಭ ಒಂದೇ ತರನಾಗಿದ್ದರೂ ಚಂದ್ರ ರೋಹಿಣಿಯ ಪ್ರೇಮದಲ್ಲಿ ತನ್ನ ಉಳಿದ ಇಪ್ಪತ್ತಾರು ಮಕ್ಕಳಿಗೆ ನಿರ್ಲಕ್ಷ್ಯ ತೋರುತ್ತಿದ್ದಾನೆ ಎಂದು ದಕ್ಷ ಅರಿತಾಕ್ಷಣ ಕೋಪಗೊಂಡು ಚಂದ್ರನನ್ನು ಶಪಿಸುತ್ತಾನೆ. ಈತನ ಗರ್ವಕ್ಕೆ ಕಾರಣವಾದ ಸೌಂದರ್ಯವೇ ಇಲ್ಲದಂತಾಗಲಿ ಎಂದು ಶಪಿಸುತ್ತಾನೆ.

ಆ ಪ್ರಕಾರ ಈತ ಯಾವಾಗ ರೋಹಿಣಿಯೊಂದಿಗಿದ್ದು ಇತರ ಪತ್ನಿಯರನ್ನು ಕಡೆಗಣಿಸುತ್ತಾನೋ ಆಗ ಆಗಸದಲ್ಲಿ ಚಂದ್ರನಿರುವುದಿಲ್ಲ. ಬಳಿಕ ತನ್ನ ಇತರ ಪತ್ನಿಯರ ಕಡೆಗೂ ಗಮನ ಹರಿಸಿದರೆ ನಿಧಾನವಾಗಿ ತನ್ನ ಮೊದಲಿನ ಸೌಂದರ್ಯವನ್ನು ಪಡೆದುಕೊಳ್ಳುತ್ತಾ ಬರುತ್ತಾನೆ. ವೈದಿಕ ಕಾಲದಲ್ಲಿ ಕುಡಿಯಲಾಗುತ್ತಿದ್ದ ಸೋಮರಸ ಅಂದಿನ ಕಾಲದ ಪ್ರಬಲ ಮದ್ಯವಾಗಿತ್ತು.

ಕೆಲವು ಮರದ ತೊಗಟೆಗಳನ್ನು ಕುದಿಸಿ ಸೋಸಿ ಈ ರಸವನ್ನು ತಯಾರಿಸಲಾಗುತ್ತಿತ್ತು. ಚಂದ್ರನ ಅಧಿಪತಿಯಾದ ಸೋಮದೇವ ಈ ಸೋಮರಸಕ್ಕೂ ಅಧಿಪತಿಯಾಗಿದ್ದ ಹಾಗೂ ಈತನಲ್ಲಿಯೇ ಇದರ ಸಂಗ್ರಹವಿರುತ್ತಿತ್ತು. ದೇವತೆಗಳು ಈ ಸೋಮರಸವನ್ನು ಕುಡಿದು ಸಂಗ್ರಹವನ್ನು ಬರಿದು ಮಾಡಿದಾಗ ಚಂದ್ರ ತನ್ನ ಕಾಂತಿಯನ್ನು ಕಳೆದುಕೊಂಡು ಅಮಾವಾಸ್ಯೆಯಾಗುತ್ತದೆ.

ಸಂಗ್ರಹ ಮತ್ತೆ ತುಂಬಿಕೊಂಡಾಗ ಹುಣ್ಣಿಮೆಯಾಗುತ್ತದೆ. ಈ ಎಲ್ಲಾ ಕಥೆಗಳು ಹಿಂದೂ ಪುರಾಣದ ಅಂಗವಾಗಿವೆ. ವಾಸ್ತವದಲ್ಲಿ ಅಮಾವಾಸ್ಯೆ ಹುಣ್ಣಿಮೆಗಳಿಗೆ ಸೂಕ್ತವಾದ ವೈಜ್ಞಾನಿಕ ವಿವರಣೆ ಇದೆ ಹಾಗೂ ಇಂದು ಈ ಬಗ್ಗೆ ನಿಖರವಾದ ಲೆಕ್ಕಾಚಾರವನ್ನು ತಿಳಿಸಲು ಸಾಧ್ಯ. ಈ ವೈಜ್ಞಾನಿಕ ಯುಗದಲ್ಲಿಯೂ ಈ ಪುರಾಣದ ಕಥೆಗಳು ರೋಚಕತೆಯನ್ನು ಮೂಡಿಸಿ ಭ್ರಮಾಲೋಕದಲ್ಲೊಂದು ವಿಹಾರ ಮಾಡಲು ಖಂಡಿತಾ ನೆರವಾಗುತ್ತವೆ.

English summary

Surprising Myths About Amavasya

In Hindu mythology there are several myths about moon. Even amavasya or no moon has a mythological explanation behind it. Somdev or Chandra dev is the God of the moon according to Hindu mythology. He is shown riding a chariot pulled by ten white horses or an antelope.
X
Desktop Bottom Promotion