For Quick Alerts
ALLOW NOTIFICATIONS  
For Daily Alerts

ರಾತ್ರಿ ಭಯಾನಕ ಕೆಟ್ಟ ಕನಸುಗಳು ಬೀಳುತ್ತದೆಯೇ? ಇಲ್ಲಿದೆ ನೋಡಿ ಇದಕ್ಕೆಲ್ಲಾ ಸರಳ ಪರಿಹಾರಗಳು

|

ನಿದ್ದೆ ಎಂದರೆ ತಾತ್ಕಾಲಿಕವಾದ ಸಾವಿನ ಅವಧಿ ಎಂದು ಹೇಳುವುದಕ್ಕೆ ಒಂದು ಕಾರಣವಿದೆ. ಈ ಸಯಮದಲ್ಲಿ ನಮ್ಮ ದೇಹದ ಅನೈಚ್ಛಿಕ ಕಾರ್ಯಗಳ ಹೊರತಾಗಿ ಇತರ ಬಹುತೇಕ ಎಲ್ಲಾ ವ್ಯವಸ್ಥೆಗಳು ನಿದ್ರಾವಸ್ಥೆಗೆ ತೆರಳುತ್ತವೆ ಹಾಗೂ ಸರಿಸುಮಾರು ಅರೆ ಪಾರ್ಶ್ವವಾಯು ಬಡಿದಂತಿರುತ್ತದೆ. ಆದರೆ ಗಾಢ ನಿದ್ದೆಯ ಸಮಯದಲ್ಲಿ ಮೆದುಳಿನ ಚಟುವಟಿಕೆ ಮಾತ್ರ ನಡೆಯುತ್ತಿದ್ದು ಈ ಸಮಯದಲ್ಲಿಯೇ ಸ್ವಪ್ನಗಳು ಬೀಳುತ್ತವೆ, ಕೆಲವು ಹೆದರಿಕೆ ಹುಟ್ಟಿಸುವಂತಿದ್ದು ಇವನ್ನು ದುಃಸ್ವಪ್ನ ಎಂದು ಕರೆಯುತ್ತೇವೆ...

ನಿದ್ದೆಯ ಕೊರತೆ

ನಿದ್ದೆಯ ಕೊರತೆ

ಆನಂದ ನೀಡುವಂತಹ ಸ್ವಪ್ನಗಳ ಜೊತೆಗೇ ದುಃಸ್ವಪ್ನಗಳು ಪ್ರತಿದಿನವೂ ಪ್ರತಿ ಮನುಷ್ಯರಿಗೂ ಬೀಳುತ್ತವೆ. ಆದರೆ ಇವುಗಳಲ್ಲಿ ಬಹುತೇಕ ಕನಸುಗಳು ಎದ್ದ ತಕ್ಷಣ ನೆನಪಿದ್ದರೂ ಕೊಂಚ ಹೊತ್ತಿನ ಬಳಿಕ ಮರೆತು ಹೋಗುತ್ತದೆ. ಕೆಲವು ಸ್ವಪ್ನಗಳು ಮಾತ್ರ ನೆನಪಿನಾಳದಲ್ಲಿ ಉಳಿದು ಸ್ವಪ್ನದ ಭೀಕರತೆಯನ್ನು ನೆನೆಸಿದಾಗೆಲ್ಲಾ ಭೀತಿಗೊಳಗಾಗುವಂತೆ ಮಾಡುತ್ತದೆ. ಇನ್ನೂ ಕೆಲವು ಮಾತ್ರ ಭಾರೀ ಹೆದರಿಕೆ ಹುಟ್ಟಿಸುತ್ತಿದ್ದು ಸ್ವಪ್ನ ನೋಡುತ್ತಿದ್ದ ಸಮಯದಲ್ಲಿ ಧಿಗ್ಗನೆದ್ದು ಕುಳಿತುಕೊಳ್ಳುವಂತೆ ಮಾಡುತ್ತವೆ ಹಾಗೂ ಆ ಬಳಿಕ ನಿದ್ದೆ ಆವರಿಸದೇ ಆತಂಕದಲ್ಲಿ ಸಮಯ ಕಳೆಯುವಂತಾಗುತ್ತದೆ.

 ಭಯಾನಕ ದೃಶ್ಯಗಳು

ಭಯಾನಕ ದೃಶ್ಯಗಳು

ಈ ಸ್ವಪ್ನದಲ್ಲಿ ಕಾಣಬರುವ ದೃಶ್ಯಗಳು ಭೀತಿ ಹುಟ್ಟಿಸುವಂತಹ, ಅಸಹ್ಯ, ಅಮಾನವೀಯ ಅಥವಾ ಅತೀಂದ್ರಿಯವಾಗಿದ್ದು ನಿದ್ದೆಯಿಂದೇಳುವಷ್ಟು ಮೆದುಳಿನ ಮೇಲೆ ಒತ್ತಡ ಹೇರುತ್ತವೆ. ಬಳಿಕ ನಮಗೆ ನಿದ್ದೆ ಮಾಡಲೂ ಹೆದರಿಕೆಯಾಗುತ್ತದೆ. ಈ ಸಮಯದಲ್ಲಿ ಅತೀವ ಹೆದರಿದ, ಒಂದು ಬಲೆಯಲ್ಲಿ ಸಿಲುಕಿ ನಿಸ್ಸಾಹಕನಾದ, ಉದ್ವೇಗ ಹಾಗೂ ಇನ್ನೇನು ಈಗ ಎಚ್ಚರ ತಪ್ಪಿ ಬೀಳುತ್ತೇನೆ ಎಂಬಂತಹ ಅನುಭವಗಳು ಎದುರಾಗುತ್ತವೆ. ಕೆಲವರ ಕನಸಿನಲ್ಲಿ ಅಸ್ಥಿಪಂಚಜ, ಕೊಲೆ, ರಕ್ತ, ನೀರಿನಲ್ಲಿ ಮುಳುಗುವುದು, ಪಿಶಾಚಿ, ಸಾವು ಮೊದಲಾದ ದೃಶ್ಯಗಳು ಕಾಣಬಂದರೆ ಆ ಬಳಿಕ ಅವರಲ್ಲಿ ಚಡಪಡಿಕೆ ಕಾಣಬರುತ್ತದೆ.

ಈ ದುಃಸ್ವಪ್ನದಿಂದ ಎದುರಾಗುವ ಭಯ

ಈ ದುಃಸ್ವಪ್ನದಿಂದ ಎದುರಾಗುವ ಭಯ

ಒಟ್ಟಾರೆಯಾಗಿ ಹೇಳಬೇಕೆಂದರೆ ದುಃಸ್ವಪ್ನ ಯಾವುದೇ ಇದ್ದರೂ ಇದು ಆ ವ್ಯಕ್ತಿಯ ನೆಮ್ಮದಿಯನ್ನು ಕಸಿದುಕೊಳ್ಳಬಹುದು. ಒಂದು ವೇಳೆ ಇವು ಸತತವಾಗಿದ್ದರೆ ಮಾನಸಿಕ ಅಸಮತೋಲನ ಹಾಗೂ ಭಾವನಾತ್ಮಕ ಬದಲಾವಣೆಗಳು ಕಂಡುಬಂದು ವ್ಯಕ್ತಿತ್ವದಲ್ಲಿ ಭಾರೀ ವ್ಯತ್ಯಾಸವುಂಟಾಗುತ್ತದೆ. ಈ ವ್ಯಕ್ತಿ ಕತ್ತಲಲ್ಲಿ ಹೊರಹೋಗಲು, ಒಂಟಿಯಾಗಿರಲು ಅಷ್ಟೇ ಅಲ್ಲ, ಮಲಗಿದರೆ ಮತ್ತೆಲ್ಲಿ ದುಃಸ್ವಪ್ನ ಬೀಳುತ್ತದೋ ಎಂದು ಹೆದರಿ ಮಲಗಲೂ ಹೆದರುತ್ತಾರೆ. ಪರಿಣಾಮ ವಾಗಿ ನಿದ್ರೆಯ ಕೊರತೆಯುಂಟಾಗುತ್ತದೆ ಮತ್ತು ಈ ಭಯ ದಿನೇ ದಿನೇ ಹೆಚ್ಚುತ್ತಾ ಮಾನಸಿಕ ತೊಂದರೆಯಾಗಿ ಪರಿಣಮಿಸುತ್ತದೆ.

Most Read: ಮನೆಯಲ್ಲಿ ಎಷ್ಟು ದೇವರ ವಿಗ್ರಹ ಇಟ್ಟರೆ ಮಂಗಳಕರ ಎನ್ನುವುದು ನಿಮಗೆ ಗೊತ್ತಾ?

ದುಃಸ್ವಪ್ನಗಳಿಗೆ ಪರಿಹಾರ

ದುಃಸ್ವಪ್ನಗಳಿಗೆ ಪರಿಹಾರ

ಯಾವಾಗ ಈ ದುಃಸ್ವಪ್ನಗಳು ಪ್ರಾರಂಭವಾದವೋ ಆಗಲೇ ಪಾಲಕರು ಹಾಗೂ ಮನೆಯ ಸದಸ್ಯರು ತಕ್ಷಣವೇ ಈ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಹಾಗೂ ಮೊದಲಿಗೆ ಸರಳ ಮತ್ತು ಸಮರ್ಥ ಮನೆಮದ್ದುಗಳನ್ನು ನೀಡಿ ಇದರಿಂದ ಹೊರತರಲು ಯತ್ನಿಸಬೇಕು. ಈ ತೊಂದರೆಗೆ ಸಮರ್ಥವಾಗಿರುವ ಕೆಲವು ಮನೆಮದ್ದುಗಳು ಇಲ್ಲಿವೆ:

 ಮನೆಯಲ್ಲಿರುವ ಪ್ರೇತಾತ್ಮಗಳನ್ನು ಓಡಿಸಿ

ಮನೆಯಲ್ಲಿರುವ ಪ್ರೇತಾತ್ಮಗಳನ್ನು ಓಡಿಸಿ

ಒಂದು ವೇಳೆ ಸ್ವಪ್ನದಲ್ಲಿ ಅಸ್ಥಿಪಂಜರ, ಮೃತದೇಹ, ದೆವ್ವ, ಸ್ಮಶಾನ, ಬೂದಿ ಮೊದಲಾದವು ಕಂಡು ಬಂದರೆ ಮೊದಲಾಗಿ ನೀವು ಮನೆಯಲ್ಲಿರುವ ಪ್ರೇತಾತ್ಮಗಳನ್ನು ಓಡಿಸಲು ತಕ್ಷಣವೇ ಸೂಕ್ತ ಧಾರ್ಮಿಕ ವಿಧಿಯನ್ನು ನಿರ್ವಹಿಸಬೇಕು.

Most Read: ಅಯ್ಯೋ! ಆಕೆ ಆತ್ಯಹತ್ಯೆ ಮಾಡಿಕೊಂಡಳೇ? ತಾಳಿ, ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡಿ

ದುರ್ಗಾಮಾತೆಗೆ ನಮನ ಸಲ್ಲಿಸಿ

ದುರ್ಗಾಮಾತೆಗೆ ನಮನ ಸಲ್ಲಿಸಿ

ಈ ಸಮಯದಲ್ಲಿ ದುರ್ಗಾಮಾತೆಗೆ ಪೂಜೆ ಸಲ್ಲಿಸಿ. ಪೂಜಾ ಸಮಯದಲ್ಲಿ ಮಂತ್ರಗಳನ್ನು ಉಚ್ಛರಿಸಲು ಬ್ರಾಹ್ಮಣರನ್ನು ಆಹ್ವಾನಿಸಿ. ಈ ಮಂತ್ರಗಳನ್ನು ಬ್ರಾಹ್ಮಣರು ಐವತ್ತೊಂದು ಅಥವಾ ನೂರಾ ಒಂದು ಬಾರಿ ಜಪಿಸುವಂತೆ ವಿನಂತಿಸಿಕೊಳ್ಳಿ.

ಹನುಮಾನ್ ಚಾಲಿಸಾ ಪಠಿಸಿ

ಹನುಮಾನ್ ಚಾಲಿಸಾ ಪಠಿಸಿ

ಸಾಧ್ಯವಾದರೆ ಈ ವಿಧಿಗಳನ್ನು ಅನುಸರಿಸಿ, ಹನುಮಂತನ ಕ್ರಪೆ ಪಡೆದರೆ ಇನ್ನೆಂದೂ ದುಃಸ್ವಪ್ನ ಬೀಳುವುದಿಲ್ಲ. ನಿತ್ಯವೂ ಮಲಗುವ ಮುನ್ನ ಹನುಮಾನ್ ಚಾಲೀಸವನ್ನು ಓದಿಯೇ ಮಲಗಿ. ಇನ್ನೂ ಉತ್ತಮವೆಂದರೆ ನಿಮಗಾಗಿ ಇನ್ನೊಬ್ಬರು ಇದನ್ನು ಓದುಲಿ ಅಥವಾ ಸುಂದರಕಾಂಡವನ್ನು ಪಠಿಸಲು. ಹನುಮಾನ ಚಾಲೀಸಾ ಮಂತ್ರ- ಜಯ ಹನುಮಾನ್ ಜ್ಞಾನ ಗುಣಸಾಗರ ! ಜಯ ಕಪೀಶ ತಿಹುಲೋಕ ವುಜಾಗರ ರಾಮದೂತ ಆತುಲಿತ ಬಲಧಮಾ ಅಂಜನೀಪ್ರತ್ರ- ಪವನಸುತ ನಾಮಾ ಮಹಾವೀರ ವಿಕ್ರಮ ಬಜರಂಗೀ ಕುಮತಿ ನಿವಾರಾ ಸುಮತಿ ಕೇ ಸಂಗೀ ಕಂಚನವರಣ ವಿರಾಜ ಸುವೇಶಾ ಕಾನನ ಕುಂಡಲ ಕುಂಚಿತ ಕೇಶಾ

ದೇವರಿಗೆ ವಸ್ತ್ರವನ್ನು ಅರ್ಪಿಸಿ

ದೇವರಿಗೆ ವಸ್ತ್ರವನ್ನು ಅರ್ಪಿಸಿ

ಹನುಮಾನ್ ಚಾಲೀನ ಪಠಿಸುವ ಜೊತೆಗೇ ಹತ್ತಿರದ ಹನುಮಾನ್ ಮಂದಿರಕ್ಕೆ ಧಾವಿಸಿ ದೇವರಿಗೆ ಸಿಂಧೂರ ತಿಲಕ ಅರ್ಪಿಸಿ ಪೂಜಿಸಿ. ಕಾಣಿಕೆಯಲ್ಲಿ ಹನುಮಂತ ದೇವರಿಗೆ ಅಥವಾ ಬಟುಕ್ ಭೈರವನಿಗೆ ವಸ್ತ್ರವನ್ನು ಕಾಣಿಕೆಯಾಗಿ ಅರ್ಪಿಸಿ.

ತಾಮ್ರದ ಪಾತ್ರೆಯಲ್ಲಿ ನೀರು ಇರಿಸಿ

ತಾಮ್ರದ ಪಾತ್ರೆಯಲ್ಲಿ ನೀರು ಇರಿಸಿ

ಮಲಗುವ ಸಮಯದಲ್ಲಿ ನಿಮ್ಮ ತಲೆದಿಂದಿನ ಎಡಭಾಗದ ಅಡಿಯಲ್ಲಿ ಚಿಕ್ಕ ತಾಮ್ರದ ಪಾತ್ರೆಯೊಂದರಲ್ಲಿ ನೀರು ತುಂಬಿಸಿ ಇರಿಸಿ ಮಲಗಿ.

Most Read: ಬರೋಬ್ಬರಿ 5 ಲೀಟರ್ ಬಿಯರ್ ಕುಡಿಸಿ ವ್ಯಕ್ತಿಯ ಪ್ರಾಣ ಉಳಿಸಿದ ವೈದ್ಯರು!

ರಾತ್ರಿ ದೀಪವೊಂದನ್ನು ಹಚ್ಚಿ

ರಾತ್ರಿ ದೀಪವೊಂದನ್ನು ಹಚ್ಚಿ

ರಾತ್ರಿ ಮಲಗುವ ಮುನ್ನ, ಅಡುಗೆಮನೆಯ ಬಾಗಿಲಿನ ಬಳಿ ದೀವಟಿಗೆಯೊಂದನ್ನು ಹಚ್ಚಿ ಈ ದೀಪಕ್ಕೆ ಕೊಂಚ ಕುಂಕುಮವನ್ನು ಹಚ್ಚಿ. ಈ ದೀಪದ ಎಣ್ಣೆ ಆರಿ ಜ್ವಾಲೆ ನಂದಿದ ಬಳಿಕ ಈ ಸಿಂಧೂರವನ್ನು ಹಣೆಗೆ ಹಚ್ಚಿಕೊಳ್ಳಿ.

ಉದ್ವೇಗವಿದ್ದಾಗ ಅಥವಾ ಮನ ಕಲಕಿದ್ದಾಗ ಮಲಗದಿರಿ

ಉದ್ವೇಗವಿದ್ದಾಗ ಅಥವಾ ಮನ ಕಲಕಿದ್ದಾಗ ಮಲಗದಿರಿ

ಉದ್ವೇಗ, ಸಿಟ್ಟು, ದುಃಖ ಮೊದಲಾದ ಭಾವನೆಗಳು ನಿಮ್ಮ ಮನಸ್ಸನ್ನು ಕಲಕಿದ್ದರೆ ಈ ಸಮಯದಲ್ಲಿ ಮಲಗದಿರಿ, ಏಕೆಂದರೆ ಈ ಭಾವನೆಗಳೇ ದುಃಸ್ವಪ್ನವಾಗಿ ಕಾಡುತ್ತವೆ. ವಿಶೇಷವಾಗಿ ವಾಗ್ವಾದದ ಬಳಿಕ ಅಥವಾ ಮಾನಸಿಕ ಒತ್ತಡವಿದ್ದಾಗ ಮಲಗದಿರಿ. ದುಃಸ್ವಪ್ನಗಳಿಗೆ ಇವು ಪ್ರಮುಖ ಕಾರಣಗಳಾಗಿವೆ.

ಮಾನಸಿಕ ಒತ್ತಡವಿಲ್ಲದ ಸಮಯದಲ್ಲಿಯೇ ಮಲಗಿ

ಮಾನಸಿಕ ಒತ್ತಡವಿಲ್ಲದ ಸಮಯದಲ್ಲಿಯೇ ಮಲಗಿ

ದುಃಸ್ವಪ್ನಗಳು ಎದುರಾಗದೇ ಇರಲು ಮಲಗುವ ಮುನ್ನ ನಿಮ್ಮ ಮನ ಪ್ರಫುಲ್ಲವಾಗಿರುವಂತೆ ನೋಡಿಕೊಳ್ಳಿ. ನಿಮ್ಮ ಸಮಸ್ಯೆಗಳಿಗೆ ಪರಿಹಾರ ಪಡೆದುಕೊಂಡ ಬಳಿಕ ಅಥವಾ ಈ ಸಮಯದಲ್ಲಿ ಸಮಸ್ಯೆಯನ್ನು ಮನಸ್ಸಿಗೆ ಹಚ್ಚಿಕೊಳ್ಳದೇ ನಿರಾಳರಾದರೆ ಮಾತ್ರ ನಿದ್ರಿಸಿ.

ಗಾಢ ನಿದ್ದೆ ಪಡೆಯಲು ಕೆಲವು ಸಲಹೆಗಳು

ಗಾಢ ನಿದ್ದೆ ಪಡೆಯಲು ಕೆಲವು ಸಲಹೆಗಳು

ಗಾಢ, ಆರಾಮದಾಯಕ ನಿದ್ದೆ ಪಡೆಯಲು ಮಲಗುವ ಮುನ್ನ ಮುದನೀಡುವ ಲಘು ಸಂಗೀತವನ್ನು ಆಲಿಸಿ ಅಥವಾ ನಿಮ್ಮ ಮನಸ್ಸಿಗೆ ನಾಟುವ ವಿಷಯವಿರುವ ಪುಸ್ತಕಗೊಂದನ್ನು ಓದಿ. ಇದರ ಜೊತೆಗೇ, ಮಲಗುವ ಮುನ್ನ ಬೆಚ್ಚನೆಯ ನೀರಿನಿಂದ ಸ್ನಾನ ಮಾಡುವುದರಿಂದಲೂ ಸುಖನಿದ್ದೆ ಆವರಿಸುತ್ತದೆ.

 ದಿನದ ಸಮಯದಲ್ಲಿ ನಿಮ್ಮ ಮನಸ್ಸನಲ್ಲಿ ವ್ಯಾಕುಲವುಂಟು ಮಾಡುವ ಯಾವುದೇ ಮಾಧ್ಯಮ ಬೇಡ

ದಿನದ ಸಮಯದಲ್ಲಿ ನಿಮ್ಮ ಮನಸ್ಸನಲ್ಲಿ ವ್ಯಾಕುಲವುಂಟು ಮಾಡುವ ಯಾವುದೇ ಮಾಧ್ಯಮ ಬೇಡ

ಸ್ವಪ್ನಗಳ ಸರಳ ಮೂಲವೆಂದರೆ ನೀವು ದಿನದ ಅವಧಿಯಲ್ಲಿ ಏನನ್ನು ಓದಿರುತ್ತೀರೋ ಅಥವಾ ನೋಡಿರುತ್ತೀರೋ, ಏನನ್ನು ಬಯಸುತ್ತೀರೋ, ಸಾಮಾನ್ಯವಾಗಿ ಈದೇ ವಿಷಯಗಳು ದುಃಸ್ವಪ್ನ ವಾಗಿ ಕಾಡುತ್ತವೆ. ಮನದ ಸ್ವಾಸ್ಥ್ಯ ಕಲಕುವ ವೀಡೀಯೋ ನೋಡುವುದು, ವಾರ್ತೆಗಳನ್ನು ಓದುವುದು ಮೊದಲಾದವು ರಾತ್ರಿ ಮಲಗಿದ ಬಳಿಕ ತೊಂದರೆ ನೀಡಬಹುದು. ಹಾಗಾಗಿ ದಿನದ ಅವಧಿಯಲ್ಲಿ ಇವನ್ನು ಉಪೇಕ್ಷಿಸಿ ಕೇವಲ ನಿಮ್ಮ ಮನಸ್ಸಿಗೆ ಸಂತೋಷ, ನೆಮ್ಮದಿ ನೀಡುವ ವಿಷಯಗಳಲ್ಲಿಯೇ ಮಗ್ನರಾಗಿ.

ರಾತ್ರಿ ತಡವಾಗಿ ಊಟ ಮಾಡದಿರಿ, ಎಣ್ಣೆ-ಕೊಬ್ಬು ಯುಕ್ತ ಆಹಾರವೂ ಬೇಡ

ರಾತ್ರಿ ತಡವಾಗಿ ಊಟ ಮಾಡದಿರಿ, ಎಣ್ಣೆ-ಕೊಬ್ಬು ಯುಕ್ತ ಆಹಾರವೂ ಬೇಡ

ರಾತ್ರಿ ತಡವಾಗಿ ಊಟ ಮಾಡುವುದು, ಎಣ್ಣೆ-ಕೊಬ್ಬು ಯುಕ್ತ ಆಹಾರ ಸೇವನೆಗಳೂ ದುಃಸ್ವಪ್ನಕ್ಕೆ ಕಾರಣವಾಗಿವೆ. ರಾತ್ರಿ ಮೆದುಳಿಗೆ ಗರಿಷ್ಟ ಪ್ರಮಾಣದ ರಕ್ತದ ಅವಶ್ಯಕತೆ ಇರುತ್ತದೆ. ಈ ಸಮಯದಲ್ಲಿ ಜೀರ್ಣಾಂಗಗಳು ತಮಗೆ ತಡವಾಗಿ ದೊರೆತ ಆಹಾರ ಜೀರ್ಣಿಸಲು ಹೆಚ್ಚಿನ ರಕ್ತ ಬೇಡುತ್ತವೆ. ಅನಿವಾರ್ಯವಾಗಿ ಮೆದುಳಿಗೆ ರಕ್ತ ಪೂರೈಕೆ ಕಡಿಮೆಯಾಗುತ್ತದೆ ಹಾಗೂ ಇದೇ ದುಃಸ್ವಪ್ನಗಳಿಗೆ ಕಾರಣವಾಗಿದೆ.

ರಾತ್ರಿ ಮಲಗುವ ಮುನ್ನ ಮದ್ಯಪಾನ ಬೇಡವೇ ಬೇಡ. ವ್ಯಸನಿಗಳು ಕನಿಷ್ಟ ಪ್ರಮಾಣಕ್ಕಿಳಿಸಿ

ರಾತ್ರಿ ಮಲಗುವ ಮುನ್ನ ಮದ್ಯಪಾನ ಬೇಡವೇ ಬೇಡ. ವ್ಯಸನಿಗಳು ಕನಿಷ್ಟ ಪ್ರಮಾಣಕ್ಕಿಳಿಸಿ

ಮದ್ಯಪಾನ ಯಾವುದೇ ಹೊತ್ತಿನಲ್ಲಿದ್ದರೂ ಅನಾರೋಗ್ಯಕರವೇ ಸರಿ. ಹಾಗಾಗಿ ದುಃಸ್ವಪ್ನ ಬೀಳುವವರು ಮದ್ಯಪಾನ ಸಂಪೂರ್ಣವಾಗಿ ತ್ಯಜಿಸಬೇಕು. ಒಂದು ವೇಳೆ ವ್ಯಸನಿಯಾಗಿದ್ದು ಮದ್ಯದ ಹೊರತು ಆಗುವುದೇ ಇಲ್ಲ ಎಂಬ ಸ್ಥಿತಿ ತಲುಪಿದ್ದರೆ ಮಾತ್ರ ಕನಿಷ್ಟ ಪ್ರಮಾಣದಲ್ಲಿ ಮಾತ್ರವೇ ಸೇವಿಸಿ, ಅದೂ ರಾತ್ರಿ ಮಲಗುವ ಕನಿಷ್ಟ ಒಂದು ಘಂಟೆಯಾದರೂ ಮೊದಲಿರಲಿ.

Most Read: ತಾಯಿಗೆ ಸಿಸಿಟಿವಿಯಲ್ಲಿ ಕಾಣಿಸುತ್ತಿದೆಯಂತೆ ಸತ್ತ ಮಗನ ದೆವ್ವದ ಆಕೃತಿಗಳು

ಉತ್ತಮ ಆರೋಗ್ಯಕ್ಕೆ ಧ್ಯಾನವೂ ಅಗತ್ಯ

ಉತ್ತಮ ಆರೋಗ್ಯಕ್ಕೆ ಧ್ಯಾನವೂ ಅಗತ್ಯ

ಉತ್ತಮ ಮಾನಸಿಕ ಮತ್ತು ದೈಹಿಕ ಆರೊಗ್ಯಕ್ಕೆ ಧ್ಯಾನವೂ ಅಗತ್ಯವಾಗಿದೆ. ಇದರಿಂದ ಉತ್ತಮ ನಿದ್ದೆ ಆವರಿಸುತ್ತದೆ ಹಾಗೂ ದುಃಸ್ವಪ್ನಗಳೂ ಇರುವುದಿಲ್ಲ.

ಮಾನಸಿಕ ಹಾಗೂ ದೈಹಿಕವಾಗಿ ದೃಢರಾಗಿರಲು ವ್ಯಾಯಾಮ ಮಾಡಿ

ಮಾನಸಿಕ ಹಾಗೂ ದೈಹಿಕವಾಗಿ ದೃಢರಾಗಿರಲು ವ್ಯಾಯಾಮ ಮಾಡಿ

ದೈಹಿಕರಾಗಿ ಮತ್ತು ಮಾನಸಿಕರಾಗಿ ದೃಢರಾಗಿರಲು ನಿತ್ಯವೂ ವ್ಯಾಯಾಮ, ಯೋಗಾಸನ ಮೊದಲಾದವನ್ನು ಅನುಸರಿಸಿ. ಅಲ್ಲದೇ ನಿತ್ಯವೂ ಕೊಂಚ ಸಮಯವಾದರೂ ಏಕಾಂತದಲ್ಲಿ, ನಿಸರ್ಗದ ನಡುವೆ ಕಳೆಯುವುದು ಅಗತ್ಯ. ಮುಂಜಾನೆಯ ನಡಿಗೆಯ ಮೂಲಕ ಮನಸ್ಸು ತಿಳಿಯಾಗುವುದು ಮಾತ್ರವಲ್ಲ ದೇಹವೂ ಚೈತನ್ಯವನ್ನು ಪಡೆಯುತ್ತದೆ.

English summary

Suffering from nightmares? here are the solutions

There is a reason why sleep is known as temporary death! Not only does the body into a rest mode that puts us in interim paralysis, it brings forth vivid nightmares!
Story first published: Saturday, January 19, 2019, 19:01 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more