For Quick Alerts
ALLOW NOTIFICATIONS  
For Daily Alerts

ವಿಷು ಹಬ್ಬದ ಮಹತ್ವ ಹಾಗೂ ಇದರ ಹಿಂದಿನ ರೋಚ ಕಥೆ

|

ಹಿಂದೂ ಹಬ್ಬವಾಗಿರುವ ವಿಷುವನ್ನು ಕೇರಳದಲ್ಲಿ ಹೆಚ್ಚು ಸಂಭ್ರಮದಿಂದ ಆಚರಿಸಲಾಗುತ್ತದೆ. ತುಳುನಾಡು ಪ್ರಾಂತ್ಯಗಳಲ್ಲಿ ಇದೇ ಹಬ್ಬವನ್ನು ಬಿಸು ಎಂದೂ ಕೂಡ ಆಚರಿಸುತ್ತಾರೆ. ಹಿಂದೂ ಹೊಸ ವರ್ಷವನ್ನು ವಿಷು ಕೇಂದ್ರೀಕರಿಸುತ್ತಿದ್ದು ಮಲಯಾಳಮ್ ಕ್ಯಾಲೆಂಡರ್‌ನಲ್ಲಿ ಮೇಡಮ್ ತಿಂಗಳಲ್ಲಿ ಈ ಹಬ್ಬ ಬರುತ್ತದೆ. ಗ್ರೆಗೋರಿಯನ್ ಕ್ಯಾಲೆಂಡರ್‌ನಲ್ಲಿ ಏಪ್ರಿಲ್ ತಿಂಗಳ ಎರಡನೇ ವಾರದಂದು ಈ ಹಬ್ಬವನ್ನು ಆಚರಿಸುತ್ತಾರೆ. ಬೆಳಕಿನ ಹಬ್ಬವಾಗಿ ಕೇರಳದಲ್ಲಿ ಜನಜನಿತವಾಗಿರುವ ವಿಷು ಹಬ್ಬವನ್ನು ವಿಷು ಕೈನೀಟಮ್‌ನಿಂದ ಆಚರಿಸುತ್ತಾರೆ. ಹೊಸ ಬಟ್ಟೆಯನ್ನು ಧರಿಸಿ ಪಟಾಕಿ ಹಚ್ಚಿ ಸಂಭ್ರಮಿಸುತ್ತಾ ಹಿರಿಯರ ಆಶೀರ್ವಾದ ಮತ್ತು ಅವರಿಂದ ನಗದು ರೂಪದಲ್ಲಿ ಕಾಣಿಕೆಯನ್ನು ಪಡೆದುಕೊಳ್ಳುವುದುನ್ನು ವಿಷು ಕೈನೀಟಮ್ ಎಂದು ಕರೆಯುತ್ತಾರೆ. ವಿಷು ದಿನದಂದು ಸೂರ್ಯನು ಸಮಭಾಜಕ ರೇಖೆಯ ಮೇಲೆ ಬರುತ್ತಾನೆ ಎಂಬ ನಂಬಿಕೆ ಕೂಡ ಇದೆ.

ವಿಷು ಹಬ್ಬವನ್ನು ಮೆದಮ್ ನ ಮೊದಲ ದಿನ ಅಥವಾ ಮಲಯಾಳಂ ತಿಂಗಳ ಮೊದಲ ದಿನ, ಜಾರ್ಜಿಯನ್ ಕ್ಯಾಲೆಂಡರ್ ನ ಎಪ್ರಿಲ್ ಮತ್ತು ಮೇ ತಿಂಗಳ ಆರಂಭದ ಮಧ್ಯದಲ್ಲಿ ಇದನ್ನು ಆಚರಿಸಲಾಗುತ್ತದೆ. ವಿಷ್ಣು ವಸಂತ ಮಾಸ ತರುವರು ಎಂದು ನಂಬಲಾಗಿದೆ. ಕೇರಳದಲ್ಲಿ ವಿಷ್ಣು ಹಬ್ಬವನ್ನು ವಸಂತ ಮಾಸವಾಗಿ ಆಚರಣೆ ಮಾಡಲಾಗುತ್ತದೆ ಮತ್ತು ಮಲಯಾಳಿಗೆ ಇದು ಜ್ಯೋತಿಷ್ಯದ ಹೊಸ ವರ್ಷ. ಸೂರ್ಯನು ಮೇಷ ರಾಶಿಗೆ ಪ್ರವೇಶಿಸುವುದನ್ನು ವಿಷ್ಣು ಸೂಚಿಸುವನು. ಇದರ ಬಳಿಕ ಕೃಷಿಕರು ಗದ್ದೆಯನ್ನು ಹದ ಮಾಡಿಕೊಳ್ಳುವರು ಮತ್ತು ವಿವಿಧ ರೀತಿಯ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವರು.

Vishu Festival

ವಿಷು ಹಬ್ಬದ ಮಹತ್ವ

ಸಂಸ್ಕೃತದಲ್ಲಿ ವಿಷು ಎಂದರೆ ಸಮಾನ ಎನ್ನುವ ಅರ್ಥವಿದೆ. ಇದು ದಿನದ ಅವಧಿ ಹಾಗೂ ರಾತ್ರಿ ಅವಧಿಯು ಸಮಾನವಾಗಿರುವುದು ಎಂದು ಹೇಳಲಾಗುತ್ತದೆ. ಮೇಷ ಸಂಕ್ರಮಣದಂದು ವಿಷ್ಣುವಿನ ಹಬ್ಬವನ್ನು ಹೆಚ್ಚಿನ ಮನೆಗಳಲ್ಲಿ ಆಚರಿಸಲಾಗುತ್ತದೆ. ಈ ಅವಧಿಯು ವಿಷ್ಣುವಿಗೆ ಮೀಸಲಿಡಲಾಗಿದೆ ಮತ್ತು ಈ ಹಬ್ಬವನ್ನು ವಿಷ್ಣು ಹಾಗೂ ಕೃಷ್ಣನ ಆರಾಧನೆ ಮಾಡಲು ಮೂಲಕ ಆಚರಿಸಲಾಗುತ್ತದೆ. ವಿಷ್ಣು ಕನಿ, ವಿಷ್ಣು ಕೈನೀಟ್ಟಂ ಮತ್ತು ವಿಶುಭಲಮ್ ಎನ್ನುವುದು ವಿಷ್ಣುವಿನ ಆಚರಣೆಯ ಪ್ರಮುಖ ಮೂರು ಮಹತ್ವದ ಅಂಶಗಳು ಆಗಿವೆ.

ವಿಷು ಹಬ್ಬದ ಪುರಾಣದ ಬಗ್ಗೆ...

ವಿಷು ಹಬ್ಬವನ್ನು ಆಚರಿಸುವ ಬಗ್ಗೆ ಪುರಾಣಗಳಲ್ಲಿ ಹಲವಾರು ಕಥೆಗಳೂ ಇವೆ ಮತ್ತು ಇದರಲ್ಲಿ ಒಂದು ಕಥೆ ಹೀಗೆ ಇದೆ. ನರಕಾಸುರ ಎಂಬ ರಾಕ್ಷಸನನ್ನು ಕೃಷ್ಣನು ವಧೆ ಮಾಡಿರುವ ದಿನವನ್ನು ವಿಷ್ಣು ಹಬ್ಬ ಎಂದು ಆಚರಿಸಲಾಗುತ್ತದೆ. ಇನ್ನೊಂದು ನಂಬಿಕೆಯ ಪ್ರಕಾರ ಸೂರ್ಯ ದೇವರು ಮರಳಿ ಬಂದಿರುವುದನ್ನು ಕೂಡ ವಿಷ್ಣು ಹಬ್ಬವಾಗಿ ಆಚರಣೆ ಮಾಡಲಾಗುತ್ತದೆ. ದುಷ್ಟ ರಾಕ್ಷಸನಾಗಿದ್ದ ರಾವಣನು ರಾಜನಾಗಿದ್ದರಿಂದ ಆತನು ಸೂರ್ಯ ದೇವರಿಗೆ ಪೂರ್ವದಿಂದ ಉದಯಿಸಲು ಅವಕಾಶ ನೀಡುತ್ತಿರಲಿಲ್ಲ ಎಂದು ಹೇಳಲಾಗಿದೆ. ರಾಕ್ಷಸ ರಾವಣನನ್ನು ವಧೆ ಮಾಡಿದ ಬಳಿಕ ಸೂರ್ಯ ದೇವರು ಪೂರ್ವದಿಂದ ಉದಯಿಸಲು ಆರಂಭಿಸಿದರು ಎಂದು ಹೇಳಲಾಗಿದೆ. ಇದರ ಬಳಿಕ ವಿಷ್ಣು ಹಬ್ಬವನ್ನು ತುಂಬಾ ಸಡಗರದಿಂದ ಆಚರಿಸಲಾಗುತ್ತದೆ.

Most Read: ವಿಷು ಹಬ್ಬದ ಮಹತ್ವ, ಹಾಗೂ ಐತಿಹಾಸಿಕ ಹಿನ್ನೆಲೆ

ವಿಷು ಹಬ್ಬದ ನಂಬಿಕೆ ಬಗ್ಗೆ ಇರುವ ಕಥೆ

ಜನರಲ್ಲಿ ಇರುವಂತಹ ಧಾರ್ಮಿಕ ನಂಬಿಕೆಯ ಪ್ರಕಾರ ವಿಷ್ಣು ಹಬ್ಬದ ಹಿಂದಿನ ದಿನ ರಾತ್ರಿ, ಕುಟುಂಬದ ಹಿರಿಯ ಮಹಿಳೆಯೊಬ್ಬರು ಪೂಜಾ ಕೊಠಡಿ ಅಥವಾ ದೇವರ ಕೋಣೆಯಲ್ಲಿ ವಿಷ್ಣು ಕನಿಯನ್ನು ವಿಷ್ಣು ಅಥವಾ ಶ್ರೀಕೃಷ್ಣ ದೇವರ ಮೂರ್ತಿಯ ಮುಂದೆ ಇಡುವರು. ಮಲಯಾಳಿಗಳು ನಂಬಿಕೊಂಡು ಬಂದಿರುವ ಪ್ರಕಾರ ವಿಷ್ಣು ಕನಿಯು ತುಂಬಾ ಅದೃಷ್ಟ ಹಾಗೂ ಸಮೃದ್ಧಿಯ ಸಂಕೇತ ಆಗಿದೆ. ಮಲಯಾಳಂನಲ್ಲಿ ಕನಿ' ಎಂದರೆ ಯಾವುದನ್ನು ನಾವು ಮೊದಲು ನೋಡುತ್ತೇವೆಯಾ ಅದು. ಇದರಿಂದ ವಿಷ್ಣು ಕನಿ'' ಎಂದರೆ ನಾವು ದಿನದ ಆರಂಭದಲ್ಲಿ ಮೊದಲು ನೋಡಿರುವುದು ಅಥವಾ ವೀಕ್ಷಿಸಿರುವುದು. ವಿಷ್ಣು ಕನಿಯನ್ನು ಮೊದಲು ನೋಡಿದರೆ ಆಗ ಹೊಸ ವರ್ಷದಲ್ಲಿ ಸಂಪೂರ್ಣವಾಗಿ ಸಮೃದ್ಧಿ ಸಿಗುವುದು ಎಂದು ಭಕ್ತರು ನಂಬುವರು.

ವಿಷು ಕನಿಯನ್ನು ಎಲ್ಲಾ ದೇವರ ಆಶೀರ್ವಾದದಿಂದ ತಯಾರಿಸಲಾಗುತ್ತದೆ ಮತ್ತು ಇದು ತುಂಬಾ ಅದೃಷ್ಟ ಹಾಗೂ ಸಮೃದ್ಧಿ ನೀಡುವುದು. ವಿಷ್ಣು ಕನಿಯ ತಯಾರಿಕೆಯಲ್ಲಿ ತೆಂಗಿನಕಾಯಿ, ವೀಳ್ಯದೆಲೆ, ಅಡಕೆ, ಹಳದಿ ಕನಿ ಕನ್ನ ಹೂ, ಕಮ್ಮಶಿ, ಕಾಡಿಗೆ, ಅಕ್ಕಿ, ಲಿಂಬೆ, ಬಂಗಾರ ಬಣ್ಣದ ಸೌತೆಕಾಯಿ, ಹಲಸಿನ ಹಣ್ಣು, ಒಂದು ಕನ್ನಡಿ, ಧಾರ್ಮಿಕ ಪುಸ್ತಕ, ಹತ್ತಿಯ ಧೋತಿ ಮತ್ತು ನಾಣ್ಯಗಳು ಹಾಗೂ ನೋಟುಗಳು ಇರುವುದು. ಈ ಎಲ್ಲಾ ವಸ್ತುಗಳನ್ನು ಅಗಲವಾದ ಒಂದು ಪಾತ್ರೆಯಲ್ಲಿ ಹಾಕಲಾಗುತ್ತದೆ. ಇದನ್ನು ಮಲಯಾಳದಲ್ಲಿ "ಉರುಳಿ" ಎಂದು ಕರೆಯಲಾಗುತ್ತದೆ. ಗಂಟೆಯ ಆಕಾರದಲ್ಲಿ ಇರುವಂತಹ ಲೋಹದ ದೀಪವನ್ನು "ನಿಲವಿಲಕ್ಕು" ಎಂದು ಕರೆಯುವರು. ಇದರಲ್ಲಿ ದೀಪ ಹಚ್ಚಿ ವಿಷ್ಣು ಕನಿ ಜತೆಗೆ ವಿಷ್ಣುವಿನ ಮೂರ್ತಿಯ ಮುಂದೆ ಇಡಲಾಗುತ್ತದೆ. ವಿಷ್ಣು ಹಬ್ಬದಂದು ಆಚರಿಸಿಕೊಂಡು ಬಂದಿರುವಂತಹ ಸಂಪ್ರದಾಯದ ಪ್ರಕಾರ ಮನೆಯ ಪ್ರತಿಯೊಬ್ಬ ಸದಸ್ಯನು ಬೆಳಗ್ಗೆ ಬೇಗ ಎದ್ದು, ಕನ್ಣು ಮುಚ್ಚಿಕೊಂಡು ಮನೆಯ ದೇವರ ಕೋಣೆ ಬಳಿಗೆ ಹೋಗಿ ಅಲ್ಲಿ ವಿಷ್ಣು ಕನಿಯನ್ನು ಮೊದಲು ನೋಡಬೇಕು. ಯಾಕೆಂದರೆ ಹೀಗೆ ಮಾಡುವ ಪರಿಣಾಮ ವರ್ಷವಿಡಿ ಅವರಿಗೆ ಒಳ್ಳೆಯ ಅದೃಷ್ಟ ಮತ್ತು ಸಮೃದ್ಧಿ ಸಿಗುವುದು. ಇದರಿಂದಾಗಿ ವಿಷ್ಣು ಕನಿಯನ್ನು ತುಂಬಾ ಎಚ್ಚರಿಕೆಯಿಂದ ಇಡಲಾಗುತ್ತದೆ ಮತ್ತು ಧನಾತ್ಮಕತೆ ಉಂಟಾಗುವಂತೆ ಇದನ್ನು ರಚಿಸಲಾಗುತ್ತದೆ.

Most Read: ವರ್ಷ ಪೂರ್ತಿ ಸುಖ ಸೌಭಾಗ್ಯವನ್ನು ನೀಡುವ 'ವಿಷು ಹಬ್ಬದ' ಮಹತ್ವ

ವಿಷು ಕನಿಯನ್ನು ನೋಡಿದ ಬಳಿಕ ರಾಮಾಯಣದಲ್ಲಿ ಇರುವಂತಹ ಕೆಲವೊಂದು ಶ್ಲೋಕಗಳನ್ನು ಪಠಿಸಲಾಗುತ್ತದೆ. ಇದು ತುಂಬಾ ಪವಿತ್ರ ಎಂದು ಪರಿಗಣಿಸಲಾಗಿದೆ. ರಾಮಾಯಣದ ಮೊದಲ ಪುಟವನ್ನು ತೆರೆಯುವುದರಿಂದ ಅದು ಭಕ್ತರ ಮೇಲೆ ಮುಂಬರುವ ವರ್ಷದಲ್ಲಿ ತುಂಬಾ ಗಾಢ ಪರಿಣಾಮ ಬೀರುತ್ತದೆ ಎಂದು ಮಲಯಾಳಿಗಳು ನಂಬಿದ್ದಾರೆ. ಇದರ ಬಳಿಕ ಮನೆಯ ಹಿರಿಯರು ಹಾಗೂ ಕಿರಿಯರು ಸೇರಿಕೊಂಡು ಹಬ್ಬದ ಸಂಭ್ರಮದಲ್ಲಿ ಪಟಾಕಿ ಸಿಡಿಸುವರು. ಇದು ಬೆಳಗ್ಗಿನಿಂದ ರಾತ್ರಿ ತನಕ ನಡೆಯುವುದು. ಇದನ್ನು ವಿಷ್ಣು ಪದ್ದಕಮ್" ಅಥವಾ ಪಟಾಕಿ ಸಿಡುವುದು ಎಂದು ಕರೆಯಲಾಗುತ್ತದೆ. ಇದು ಈ ಹಬ್ಬದ ತುಂಬಾ ಪ್ರಾಮುಖ್ಯವಾದ ಅಂಶವಾಗಿದೆ. ಇದರ ಬಳಿಕ ವಿಷ್ಣು ಸಾಧ್ಯ" ಎನ್ನುವುದು ಕೂಡ ನಡೆಯುವುದು.

English summary

Story behind Vishu Festival

Celebrated on the first day of Medam or the Malayalam month or between the months of April and May of the Gregorian calendar, Vishu symbolizes the beginning of the spring season. Vishu, a Hindu festival, is celebratedin Kerala as the harvest festival and the astrological New Year of the Malayalis. Vishu indicates the movement of the sun to Aries or the Mesha Rashi and marksthe day from which the farmers begin the ploughing of land and other agricultural activities.
X
Desktop Bottom Promotion