For Quick Alerts
ALLOW NOTIFICATIONS  
For Daily Alerts

ವರಮಹಾಲಕ್ಷ್ಮಿ ಪೂಜೆಯ ಮಹತ್ವ ಮತ್ತು ವ್ರತದ ಕುರಿತಾದ ಕಥೆಗಳು

By Jaya Subramanya
|

ಈ ಬಾರಿ ಶ್ರಾವಣ ಮಾಸದ ಶುಕ್ರವಾರ 4 ನೇ ದಿನಾಂಕದಂದು ಈ ಪೂಜೆಯನ್ನು ನಡೆಸಲಾಗುತ್ತಿದೆ. ಧನ ಕನಕದ ಮಾತೆಯಾಗಿರುವ ಲಕ್ಷ್ಮೀಯನ್ನು ಈ ದಿನದಂದು ಪೂಜಿಸುವುದರಿಂದ ಮನದ ಇಷ್ಟಾರ್ಥಗಳು ನೆರವೇರುತ್ತದೆ ಎಂಬ ನಂಬಿಕೆ ಇದೆ. ಈ ಪೂಜೆಯನ್ನು ನಡೆಸುವವರು ಮತ್ತು ವೃತವನ್ನು ಮಾಡುವವರು ಸಂಪೂರ್ಣವಾಗಿ ದೇವಿಯ ಅನುಗ್ರಹಕ್ಕೆ ಭಾಜನರಾಗುತ್ತಾರೆ.

ಶ್ರದ್ಧೆ ಮತ್ತು ಭಕ್ತಿಯಿಂದ ಪೂಜೆಯನ್ನು ನಡೆಸುವುದರಿಂದ ದೇವಿಯು ಕೃಪಾಕಟಾಕ್ಷವನ್ನು ಬೀರುತ್ತಾರೆ ಎಂಬುದು ಭಕ್ತರ ನಂಬಿಕೆಯಾಗಿದೆ. ದೇವಿಯನ್ನು ಪೂಜಿಸುವುದರಿಂದ ಧನ, ಧಾನ್ಯ, ಸಂಪತ್ತು, ಸಂತಾನ, ದೀರ್ಘ ಸುಮಂಗಲಿ ಭಾಗ್ಯವನ್ನು ವ್ರತ ಮತ್ತು ಪೂಜೆ ನಡೆಸುವವರು ಪಡೆದುಕೊಳ್ಳಬಹುದಾಗಿದೆ.

Varamahalakshmi

ವೀರ ಲಕ್ಷ್ಮೀ ದೇವಿ ಮತ್ತು ಗಜ ಲಕ್ಷ್ಮೀ ದೇವಿಯರು ಈ ಪೂಜೆಯನ್ನು ಮಾಡುವುದರಿಂದ ಸಂಪ್ರೀತರಾಗುತ್ತಾರೆ ಎಂಬ ನಂಬಿಕೆ ಇದೆ. ಅಂತೆಯೇ ವರಮಹಾಲಕ್ಷ್ಮಿ ವೃತ ಮತ್ತು ಪೂಜೆಯ ಕುರಿತು ಬಹುತೇಕ ಕಥೆಗಳಿದ್ದು ಇದು ಅದರದ್ದೇ ಆದ ಮಹತ್ವವನ್ನು ಪಡೆದುಕೊಂಡಿದೆ.

ಕ್ಷೀರ ಸಮುದ್ರದಲ್ಲಿ ಲಕ್ಷ್ಮೀಯ ಜನನ
ಕ್ಷೀರ ಸಮುದ್ರದಲ್ಲಿ ದೇವಿಯು ಜನ್ಮ ತಾಳಿದ ಸಂದರ್ಭದಲ್ಲಿಯೇ ವರಮಹಾಲಕ್ಷ್ಮಿ ಪೂಜೆಯನ್ನು ನಡೆಸಲಾಗುತ್ತದೆ. ಒಮ್ಮೆ ಅಸುರರು ಮತ್ತು ದೇವತೆಗಳು ಅಮೃತಕ್ಕಾಗಿ ಕ್ಷೀರ ಮಂಥನವನ್ನು ನಡೆಸುವುದಕ್ಕಾಗಿ ತೀರ್ಮಾನಿಸುತ್ತಾರೆ. ಹೀಗೆ ಮಾಡುವಾಗ ಹೆಚ್ಚಿನ ವಸ್ತುಗಳು ಗೋಚರವಾಗುತ್ತವೆ. ಕೆಟ್ಟದ್ದು ಮತ್ತು ಒಳ್ಳೆಯದನ್ನು ಇದು ಒಳಗೊಂಡಿತ್ತು.

ವ್ರತ ಹಿಡಿಯುವ ಮುನ್ನ ಈ ವಸ್ತುಗಳು ಇದೆಯೇ ಎಂದು ಪರಿಶೀಲಿಸಿಕೊಳ್ಳಿ

ಚಾರುಮತಿ ಮತ್ತು ವರಮಹಾಲಕ್ಷ್ಮಿ ಪೂಜೆ
ಸ್ಕಂದ ಪುರಾಣದಲ್ಲಿ ಈ ಕುರಿತು ಕಥೆ ಇದೆ. ಎಲ್ಲಾ ನಾರೀ ಮಣಿಯರಿಗೂ ಪವಿತ್ರ ಮತ್ತು ವರಪ್ರಸಾದಿತವಾಗಿರುವ ವರವನ್ನು ಶಿಫಾರಸು ಮಾಡುವಂತೆ ಪಾರ್ವತಿ ದೇವಿಯು ಶಿವನಲ್ಲಿ ಕೇಳಿಕೊಳ್ಳುತ್ತಾರೆ. ಈ ಸಮಯದಲ್ಲಿ ಶಿವನು ವರಮಹಾಲಕ್ಷ್ಮಿ ವ್ರತ ಬಗ್ಗೆ ಹೇಳುತ್ತಾರೆ.

ಚಾರುಮತಿ ಎಂಬ ಮಹಿಳೆಯು ತಮ್ಮ ದುರಾದೃಷ್ಟವನ್ನು ನೆನೆದು ಕಣ್ಣೀರು ಹಾಕುತ್ತಿರುತ್ತಾರೆ. ಲಕ್ಷ್ಮೀ ದೇವಿಯ ಭಕ್ತೆಯಾಗಿದ್ದ ಚಾರುಮತಿಯು ತನ್ನ ಕಷ್ಟವನ್ನು ನಿವಾರಿಸುವಂತೆ ದೇವಿಯನ್ನು ಬೇಡಿಕೊಳ್ಳುತ್ತಾಳೆ. ಆ ಸಮಯದಲ್ಲಿ ಲಕ್ಷ್ಮೀ ದೇವಿಯು ಆಕೆಯ ಕನಸಿನಲ್ಲಿ ಬಂದು ವರಮಹಾಲಕ್ಷ್ಮಿ ಪೂಜೆಯ ಮಹತ್ವ ಮತ್ತು ವ್ರತದ ಬಗ್ಗೆ ತಿಳಿಸುತ್ತಾರೆ. ಮರುದಿನ ನಿದ್ದೆಯಿಂದ ಎದ್ದ ಚಾರುಮತಿಯು ಪೂಜೆಗಾಗಿ ಸಿದ್ಧತೆಯನ್ನು ಮಾಡುತ್ತಾಳೆ. ಪೂಜೆಯನ್ನು ಮಾಡುವುದಕ್ಕಾಗಿ ಆಕೆ ಬಂಧುಬಾಂಧವರನ್ನು ಮತ್ತು ಸ್ನೇಹಿತೆಯರನ್ನು ಕರೆಯುತ್ತಾಳೆ. ಹೀಗೆ ಆಕೆ ತನ್ನ ಬಂಧುಬಾಂಧವರಿಗೂ ಮತ್ತು ಸ್ನೇಹಿತೆಯರಿಗೂ ಪೂಜೆಯ ಫಲ ದೊರೆಯುವಂತೆ ಮಾಡುತ್ತಾಳೆ.

ವರಮಹಾಲಕ್ಷ್ಮಿ ಪೂಜೆ ಹೇಗೆ ಮಾಡಬೇಕು?...ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೇಲ್ಸ್‌

ಶ್ಯಾಮಬಲ ಮತ್ತು ವರಮಹಾಲಕ್ಷ್ಮಿ ಪೂಜೆ
ಒಮ್ಮೆ ಭತ್ರಸಿರವಾಸ ಎಂಬ ರಾಜ ರಾಜ್ಯವನ್ನು ಆಳುತ್ತಿದ್ದನು. ಈತನಿಗೆ ಸುರಚಂದ್ರಿಕಾ ಎಂಬ ಪತ್ನಿ ಮತ್ತು ಶ್ಯಾಮಬಲ ಎಂಬ ಪುತ್ರಿ ಇದ್ದರು. ನೆರೆಯ ರಾಜಕುಮಾರನೊಂದಿಗೆ ಶ್ಯಾಮಬಲಳ ವಿವಾಹ ನೆರವೇರಿತ್ತು. ಒಮ್ಮೆ ಆಕೆ ತನ್ನ ತವರು ಮನೆಗೆ ಹೋಗಿದ್ದಾಗ ತನ್ನ ತಾಯಿಯು ಮಹಿಳೆಯೊಬ್ಬರನ್ನು ಅಟ್ಟಿಸುತ್ತಿರುವುದನ್ನು ಆಕೆ ಕಾಣುತ್ತಾಳೆ. ತಾಯಿಯ ಬಳಿ ನೀವು ಏಕೆ ಹೀಗೆ ಮಾಡುತ್ತಿದ್ದೀರಿ ಎಂದು ಕೇಳಿದಾಗ ಆ ಮಹಿಳೆಯು ರಾಣಿಗೆ ವರಮಹಾಲಕ್ಷ್ಮಿ ಪೂಜೆ ಮತ್ತು ಅದರ ನಿಯಮಗಳನ್ನು ತಿಳಿಸಲು ಬರುತ್ತಿದ್ದಾಳೆ ಎಂಬುದಾಗಿ ಆಕೆ ತಿಳಿಸುತ್ತಾಳೆ. ಒಬ್ಬ ಬಡ ಭಿಕ್ಷುಕಿ ತನಗೆ ವೃತ ಮತ್ತು ಪೂಜೆಯ ಬಗ್ಗೆ ತಿಳಿಹೇಳುವುದು ರಾಣಿಗೆ ಇಷ್ಟವಾಗಿರಲಿಲ್ಲ.

ಶ್ಯಾಮಬಲ ಆ ಮಹಿಳೆಯನ್ನು ಸಮೀಪಿಸಿ ಆಕೆಯ ಬಳಿ ವ್ರತದ ಬಗ್ಗೆ ಎಲ್ಲಾ ಮಾಹಿತಿಯನ್ನು ಅರಿತುಕೊಳ್ಳುತ್ತಾಳೆ. ನಿಯಮಿತವಾಗಿ ಶ್ಯಾಮಬಲ ಪೂಜೆಯನ್ನು ಮಾಡುತ್ತಾಳೆ. ಈ ಪೂಜೆಯಿಂದ ಶ್ಯಾಮಬಲಳ ಪತಿ ಅಕ್ಕಪಕ್ಕದ ರಾಜ್ಯಗಳಲ್ಲಿ ಮನ್ನಣೆಯನ್ನು ಗಳಿಸಿಕೊಳ್ಳುತ್ತಾನೆ ಮತ್ತು ಧನಕನಕ ಸಂಪತ್ತು ಅವರನ್ನು ಹುಡುಕಿಕೊಂಡು ಬರುತ್ತದೆ.

ಇದೇ ಸಮಯದಲ್ಲಿ ಭತ್ರಸಿರವಾಸ ಅರಮನೆಯಲ್ಲಿ ಬಡತನ ತಾಂಡವವಾಡುತ್ತದೆ. ತವರಿನ ಸಂಕಷ್ಟವನ್ನು ಹೋಗಲಾಡಿಸುವುದಕ್ಕಾಗಿ ಶ್ಯಾಮಬಲ ಚಿನ್ನದ ನಾಣ್ಯಗಳನ್ನು ಕಳುಹಿಸುತ್ತಾಳೆ. ಆದರೆ ಆಕೆಯ ತಾಯಿ ರಾಣಿಯು ಈ ಕೊಡವನ್ನು ನೋಡುತ್ತಿದ್ದಂತೆ ನಾಣ್ಯಗಳು ಬೂದಿಯಾಗಿ ಮಾರ್ಪಡುತ್ತದೆ. ರಾಣಿಗೆ ತನ್ನ ತಪ್ಪಿನ ಅರಿವಾಗುತ್ತದೆ ಮತ್ತು ಮಗಳಿಂದ ವೃತದ ಬಗ್ಗೆ ಮಾಹಿತಿಯನ್ನು ಪಡೆದುಕೊಂಡು ರಾಣಿ ವೃತ ನಡೆಸುತ್ತಾಳೆ. ಲಕ್ಷ್ಮೀ ಮಾತೆಯಿಂದ ರಾಣಿಯು ಕ್ಷಮೆಯನ್ನು ಕೇಳುತ್ತಾಳೆ ಮತ್ತು ಪೂಜೆ ಹಾಗೂ ವೃತವನ್ನು ಮಾಡಿ ಹಿಂದಿನ ಸ್ಥಿತಿಗೆ ಮರಳುತ್ತಾರೆ.

ಚಿತ್ರನೇಮಿ ಮತ್ತು ವರಮಹಾಲಕ್ಷ್ಮಿ
ಒಮ್ಮೆ ಶಿವ ಮತ್ತು ಪಾರ್ವತಿ ಪಗಡೆ ಆಟವನ್ನು ಆಡುತ್ತಿದ್ದರು. ಆಟದಲ್ಲಿ ಪಾರ್ವತಿಯು ಗೆಲುವನ್ನು ಸಾಧಿಸಿರುತ್ತಾರೆ ಮತ್ತು ಶಿವನು ಪರಾಜಿತಗೊಳ್ಳುತ್ತಿದ್ದರು. ಪಾರ್ವತಿಯು ತನಗೆ ಮೋಸ ಮಾಡುತ್ತಿದ್ದಾರೆಯೇ ಎಂಬುದಾಗಿ ಶಿವನು ಪಾರ್ವತಿ ದೇವಿಯನ್ನು ಆಪಾದಿಸುತ್ತಾರೆ.

ಆಟವು ಸರಿಯಾಗಿದೆಯೇ ಎಂಬುದನ್ನು ಕಂಡುಕೊಳ್ಳಲು ಶಿವನು ತನ್ನ ಗಣದಿಂದ ಚಿತ್ರನೇಮಿಯನ್ನು ನೇಮಿಸಿಕೊಳ್ಳುತ್ತಾರೆ. ಛಲದಿಂದ ಶಿವನಿಗೆ ಅನುಕೂಲಕರವಾಗುವಂತೆ ಮೋಸ ಮಾಡಿ ಶಿವನು ಪಂದ್ಯದಲ್ಲಿ ಗೆಲ್ಲುವಂತೆ ಚಿತ್ರನೇಮಿ ಮಾಡುತ್ತಾನೆ. ಇದನ್ನರಿತ ಪಾರ್ವತಿಯು ಚಿತ್ರನೇಮಿಗೆ ಕುಪ್ಪಳಿಸುವ ಶಾಪವನ್ನು ನೀಡುತ್ತಾರೆ. ಯಾವುದಾದರೂ ಮಹಿಳೆ ಮಾಡುವ ವರಮಹಾಲಕ್ಷ್ಮಿ ಪೂಜೆಯನ್ನು ಚಿತ್ರನೇಮಿ ನೋಡಿದಲ್ಲಿ ಅವನ ಶಾಪ ವಿಮೋಚನೆಯಾಗುತ್ತದೆ ಎಂಬುದಾಗಿ ಪಾರ್ವತಿಯು ಅನುಗ್ರಹಿಸುತ್ತಾರೆ.

English summary

Stories Associated With Varamahalakshmi Pooja

The festival of Varamahalakshmi is dedicated to Goddess Maha Lakshmi, who is the Goddess of wealth and prosperity. Every year, the Varamahalakshmi festival is celebrated on the first Friday of the Shukla Paksha of the Shravan month. This year, the pooja falls on 4th of August. It is said that whoever performs theVaramahalakshmi pooja and the Varamahalakshmi vrat whole-heartedly will be blessed with whatever he/she wishes for. It is believed that when the Varamahalakshmi is worshipped, the results of it are equal to worshipping all the forms of Maha Lakshmi together.
Story first published: Wednesday, August 2, 2017, 20:17 [IST]
X
Desktop Bottom Promotion