For Quick Alerts
ALLOW NOTIFICATIONS  
For Daily Alerts

ಶಿವನ ಮಹಿಮೆಯನ್ನು ಸಾರುವ ರೋಚಕ ಕಥಾನಕ...

ಶಿವನ ಮಹಿಮೆಯನ್ನು ಸಾರುವ ಅಂತೆಯೇ ಶಿವನ ಕಾರುಣ್ಯವನ್ನು ಬಿಂಬಿಸುವ ಹಲವಾರು ಕಥೆಗಳು ಪುರಾಣದಲ್ಲಿದ್ದು ಜಾತಿ ಮತವನ್ನು ಮೀರಿ ಶಿವನು ಹೇಗೆ ತಮ್ಮ ಭಕ್ತರನ್ನು ಅನುಗ್ರಹಿಸುತ್ತಾರೆ ಎಂಬುದನ್ನು ತಿಳಿದುಕೊಳ್ಳೋಣ...

By Jaya Subramanya
|

ದೇಶದೆಲ್ಲೆಡೆ ವಿಜೃಂಭಣೆಯಿಂದ ಆಚರಿಸುವ ಮಹಾಶಿವರಾತ್ರಿಯನ್ನು ಇಂದು ಆಚರಿಸಲಾಗುತ್ತಿದೆ. ಶಿವ ಪಾರ್ವತಿಯ ವಿವಾಹ ದಿನವೆಂದೂ ಈ ದಿನವನ್ನು ಕರೆಯಲಾಗಿದ್ದು ಕೈಲಾಸನಾಥನ ಅನುಗ್ರಹವನ್ನು ಪಡೆಯಲು ಭಕ್ತ ಸಮೂಹವು ದಿನವಿಡೀ ಉಪವಾಸವನ್ನು ಕೈಗೊಂಡು ರಾತ್ರಿ ಪೂರ್ತಿ ಶಿವನ ಭಜನೆಗಳನ್ನು ಮಾಡುತ್ತಾ ಜಾಗರಣೆಯನ್ನು ಮಾಡಿ ಭೋಲೆನಾಥನ ಅನುಗ್ರಹಕ್ಕೆ ಪಾತ್ರರಾಗುವ ಶುಭದಿನವಾಗಿದೆ. ಭಕ್ತರ ಬೇಡಿಕೆಯನ್ನು ಯಾವೊಂದು ಅಭಿಲಾಶೆಯೂ ಇಲ್ಲದೆ ನೆರವೇರಿಸುವ ಮಹಾದೇವನು ಸರಳ ಭಕ್ತಿಗೆ ಮೆಚ್ಚಿ ವರವನ್ನು ನೀಡುವ ಇಷ್ಟದೇವರಾಗಿದ್ದರೆ.

Lord Shiva

ಶಿವರಾತ್ರಿ ಉಪವಾಸವು ಹಗಲಿನಿಂದ ಪ್ರಾರಂಭಗೊಂಡು ರಾತ್ರಿ ಪೂರ್ತಿ ನಡೆದು ಮರುದಿನ ಪ್ರಾತಃ ಕಾಲಕ್ಕೆ ಕೊನೆಗೊಳ್ಳುತ್ತದೆ. ವ್ರತದ ಸಮಯದಲ್ಲಿ ಆಹಾರವಿಲ್ಲದೆ ಕಟ್ಟುನಿಟ್ಟಾಗಿ ದೇವರಲ್ಲಿ ಐಕ್ಯಗೊಳ್ಳಬೇಕು. ವ್ರತಾಧಾರಿಯು ಹಣ್ಣಿನ ರಸ, ಹಣ್ಣುಗಳು ಮತ್ತು ವಿಶೇಷ ವ್ರತ ಆಹಾರಗಳಾದ ವ್ರತದ ಅನ್ನ, ಬೀಜಗಳು, ಈರುಳ್ಳಿ ಬೆಳ್ಳುಳ್ಳಿ ಇಲ್ಲದ ಪದಾರ್ಥಗಳನ್ನು ಸೇವಿಸಬಹುದು. ಮಹಾ ಶಿವರಾತ್ರಿ ಹಬ್ಬದ ಮಹತ್ವ ಹಾಗೂ ರೋಚಕ ಕಥಾನಕ...

ಸೂರ್ಯಾಸ್ತದ ನಂತರವಷ್ಟೇ ಊಟವನ್ನು ಸೇವಿಸಬೇಕು. ಮರುದಿನ ಮುಂಜಾನೆ ಲಿಂಗಕ್ಕೆ ಅಭಿಷೇಕವನ್ನು ಪೂರೈಸಿ ಪ್ರಾರ್ಥನೆಗಳನ್ನು ಸಲ್ಲಿಸಿದ ನಂತರವಷ್ಟೇ ವ್ರತವನ್ನು ಸಂಪನ್ನಗೊಳಿಸಬೇಕು. ವ್ರತ ಸಂಪನ್ನಗೊಳಿಸುವಾಗ ಪ್ರಸಾದ ಇಲ್ಲವೇ, ಶಿವನಿಗೆ ಅರ್ಪಿಸಿದ ಆಹಾರವನ್ನು ಮೊದಲು ತೆಗೆದುಕೊಳ್ಳಬೇಕು, ಶಿವನ ಮಹಿಮೆಯನ್ನು ಸಾರುವ ಅಂತೆಯೇ ಶಿವನ ಕಾರುಣ್ಯವನ್ನು ಬಿಂಬಿಸುವ ಹಲವಾರು ಕಥೆಗಳು ಪುರಾಣದಲ್ಲಿದ್ದು ಜಾತಿ ಮತವನ್ನು ಮೀರಿ ಶಿವನು ಹೇಗೆ ತಮ್ಮ ಭಕ್ತರನ್ನು ಅನುಗ್ರಹಿಸುತ್ತಾರೆ ಎಂಬುದನ್ನು ತಿಳಿದುಕೊಳ್ಳೋಣ. ಸಮುದ್ರ ಮಥನದ ಕಥೆ ಒಮ್ಮೆ ದೇವತೆಗಳು ಮತ್ತು ಅಸುರರು ಕ್ಷೀರ ಸಾಗರವನ್ನು ಮಂಥನ ಮಾಡಲು ಬಯಸಿದರು. ಹಾಲಿನ ಸಮುದ್ರವಾಗಿದೆ 'ಕ್ಷೀರ ಸಾಗರ'. ಅಮೃತವನ್ನು ಮಂಥನದಿಂದ ಹೊರತೆಗೆಯಬೇಕು ಎಂಬುದು ಇವರಿಬ್ಬರ ಉದ್ದೇಶವಾಗಿರುತ್ತದೆ.

ಅಮೃತ ಸೇವಿಸಿದರೆ ಮರಣವೇ ಇಲ್ಲ ಎಂಬುದು ಸತ್ಯವಾಗಿದ್ದರಿಂದ ಮಂಥನವನ್ನು ನಡೆಸಲು ಇಬ್ಬರೂ ನಿರ್ಧರಿಸುತ್ತಾರೆ. ಮೇರು ಪವರ್ತ ಮತ್ತು ಶಿವನ ಹಾರವಾಗಿರುವ ಹಾವು ವಾಸುಕಿಯನ್ನು ಮಂಥನಕ್ಕಾಗಿ ಅಸುರರು ದೇವತೆಗಳು ಬಳಸಿಕೊಳ್ಳುತ್ತಾರೆ. ಅಸುರರು ಹಾವಿನ ಬಾಯನ್ನು ಹಿಡಿದರೆ ದೇವತೆಗಳು ಬಾಲವನ್ನು ಹಿಡಿಯುತ್ತಾರೆ.

ಮಂಥನ ಆರಂಭಗೊಳ್ಳುತ್ತಿದ್ದಂತೆ ವಾಸುಕಿಯು ಹಾಲಾಹಲವನ್ನು ಉಗುಳಲು ಆರಂಭಿಸುತ್ತಾನೆ. ಇದರ ವಿಷ ಭಯಾನಕವಾಗಿದ್ದು ವಿಶ್ವವನ್ನೇ ನಾಶ ಮಾಡುವ ಶಕ್ತಿಯನ್ನುಪಡೆದುಕೊಂಡಿರುತ್ತದೆ. ಈ ಆಪತ್ತಿನಿಂದ ವಿಶ್ವವನ್ನು ಕಾಪಾಡಲು ಶಿವನು ಈ ಹಾಲಾಹಲವನ್ನು ಸೇವಿಸಲು ಆರಂಭಿಸುತ್ತಾರೆ. ಭಗವಾನ್ ಶಿವನ 12 ಪವಿತ್ರ ಜ್ಯೋತಿರ್ಲಿಂಗಗಳ ಮಹಿಮೆ....

ಈ ಸಮಯದಲ್ಲಿ ಪಾರ್ವತಿ ದೇವಿಯು ಶಿವನ ಕುತ್ತಿಗೆಯ ಭಾಗವನ್ನು ಹಿಡಿದು ವಿಷವು ದೇವರ ಶರೀರವನ್ನು ಪ್ರವೇಶಿಸದಂತೆ ತಡೆಯುತ್ತಾರೆ. ವಿಷ್ಣವು ವಿಷವು ದೇವರ ಬಾಯಿಂದ ಹೋಗದಂತೆ ಬಾಯನ್ನು ಹಿಡಿದುಕೊಳ್ಳುತ್ತಾರೆ. ಇದರಿಂದ ಶಿವನ ಕುತ್ತಿಗೆಯ ಭಾಗದಲ್ಲಿ ವಿಷವು ಸಂಗ್ರಹಗೊಳ್ಳುತ್ತದೆ.

ರಾತ್ರಿ ಪೂರ್ತಿ ವಿಷವು ಶಿವನ ಕುತ್ತಿಗೆಯಲ್ಲಿ ಸಂಗ್ರಹವಾಗುತ್ತದೆ ಮತ್ತು ಇದು ನೀಲಿ ಬಣ್ಣಕ್ಕೆ ತಿರುಗುತ್ತದೆ. ಇದರಿಂದ ಶಿವನಿಗೆ 'ನೀಲಕಂಠ' ಎಂಬ ಹೆಸರು ಬರುತ್ತದೆ. ಇದರಿಂದಾಗಿಯೇ ಶಿವರಾತ್ರಿ ಆಚರಣೆ ವೇಳೆಯಲ್ಲಿ ದೇವರ ಈ ಮಹಾಕಾರ್ಯಕ್ಕೆ ಕೃತಜ್ಞತೆಯನ್ನು ಅರ್ಪಿಸುವ ಸಲುವಾಗಿ ಭಕ್ತರು ಇಡೀ ದಿನ ಉಪವಾಸವಿದ್ದು ರಾತ್ರಿ ಜಾಗರಣೆಯನ್ನು ಮಾಡುತ್ತಾರೆ.

ಬ್ರಹ್ಮ ಮತ್ತು ವಿಷ್ಣುವಿಗೆ ಸಂಬಂಧಿಸಿದ ಕಥೆ
ಹೆಚ್ಚು ಜನಜನಿತವಾಗಿರುವ ಶಿವರಾತ್ರಿಯ ಕಥೆಯು ಬ್ರಹ್ಮ ಮತ್ತು ವಿಷ್ಣುವಿಗೆ ಸಂಬಂಧಿಸಿದ್ದಾಗಿದೆ. ತಮ್ಮಲ್ಲಿ ಯಾರು ಶ್ರೇಷ್ಠರು ಎಂಬುದಾಗಿ ಇಬ್ಬರಲ್ಲಿ ಸಂಘರ್ಷ ನಡೆಯುತ್ತಿತ್ತು. ಈ ರೀತಿ ಜಗಳ ಮುಂದುವರಿಯುತ್ತಿದ್ದರೆ ಇದು ವಿನಾಶಕ್ಕೆ ಕಾರಣವಾಗಬಹುದು ಎಂದು ಭಾವಿಸಿದ ದೇವತೆಗಳು ಬ್ರಹ್ಮ ಮತ್ತು ವಿಷ್ಣುವಿನ ವಿರಸದ ಕುರಿತಾಗಿ ಶಿವನಲ್ಲಿ ಮನವಿ ಮಾಡಿಕೊಳ್ಳುತ್ತಾರೆ. ಇಬ್ಬರು ದೇವರನ್ನು ಸಂತೈಸಲು ಶಿವ ಆಗಮಿಸುತ್ತಾರೆ.

ಶಿವನು ಅಗ್ನಿಸ್ತಂಭದ ರೂಪವನ್ನು ತಾಳಿ ಇದರ ಮೇಲ್ಭಾಗ ಮತ್ತು ತಳಭಾಗವನ್ನು ಯಾರು ಬೇಗನೇ ತಲುಪುತ್ತಾರೋ ಅವರೇ ಶ್ರೇಷ್ಠರು ಎಂಬುದಾಗಿ ಸ್ಪರ್ಧೆಯನ್ನು ಯೋಜಿಸುತ್ತಾರೆ. ಬ್ರಹ್ಮನು ಹಂಸ ರೂಪದಲ್ಲಿ ಮೇಲ್ಭಾಗಕ್ಕೂ ವಿಷ್ಣುವು ಹಂದಿಯ ರೂಪದಲ್ಲಿ ಸ್ತಂಭದ ಕೆಳಭಾಗವನ್ನು ತಲುಪಲು ಮುಂದಾಗುತ್ತಾರೆ. ಆದರೆ ಇವರಿಬ್ಬರಿಗೂ ಕೊನೆ ಮತ್ತು ಆರಂಭ ದೊರೆಯುವುದೇ ಇಲ್ಲ.

ಸ್ಪರ್ಧೆಯಲ್ಲಿ ಸೋಲಲು ಇಷ್ಟಪಡದ ಬ್ರಹ್ಮನು ಕಿರಣದಿಂದ ಬಿದ್ದಂತಹ ಕೇತಕಿ ಪುಷ್ಪವನ್ನು ತೆಗೆದುಕೊಂಡು ಬಂದು ಸ್ತಂಭದ ಮೇಲ್ಭಾಗದಲ್ಲಿ ಇದು ದೊರಕಿತು ಎಂದಾಗಿ ಸುಳ್ಳು ಹೇಳುತ್ತಾರೆ. ಕೇತಕಿ ಪುಷ್ಪ ಕೂಡ ಬ್ರಹ್ಮನನ್ನು ಬೆಂಬಲಿಸುತ್ತದೆ. ಇದರಿಂದ ಕೋಪಗೊಂಡ ಶಿವನು ಬ್ರಹ್ಮನು ಸುಳ್ಳು ಹೇಳಿದ್ದಕ್ಕಾಗಿ ಬ್ರಹ್ಮನನ್ನು ಯಾರೂ ಪೂಜಿಸಬಾರದು ಎಂದಾಗಿ ಶಪಿಸುತ್ತಾರೆ. ಅಂತೆಯೇ ಪೂಜೆ ಸಮಯದಲ್ಲಿ ಕೇತಕಿ ಹೂವನ್ನು ಯಾರೂ ಬಳಸಬಾರದು ಎಂಬುದಾಗಿ ಶಾಪವನ್ನೀಯುತ್ತಾರೆ.

ಫಲ್ಗುಣ ಮಾಸದ ಕತ್ತಲ ನಡುವಿನ ಹದಿನಾಲ್ಕನೆಯ ದಿನದ೦ದು ಮಹಾದೇವನು ಲಿ೦ಗರೂಪಿಯಾಗಿ ಪ್ರಥಮ ಬಾರಿಗೆ ಪ್ರತ್ಯಕ್ಷಗೊ೦ಡನಾದ್ದರಿ೦ದ, ಈ ದಿನವು ವಿಶೇಷ ರೀತಿಯಲ್ಲಿ ಅತ್ಯ೦ತ ಮ೦ಗಳಕರವಾಗಿದ್ದು, ಇ೦ದಿನ ದಿನವನ್ನೇ ಶಿವರಾತ್ರಿಯ ಪರ್ವದಿನವಾಗಿ ಆಚರಿಸಲಾಗುತ್ತದೆ. ಈ ಮಹಾಪರ್ವದಿನದ೦ದು ಭಗವಾನ್ ಮಹೇಶ್ವರನನ್ನು ಆರಾಧಿಸುವುದರಿ೦ದ ಆರಾಧಕನು ಆನ೦ದ, ನೆಮ್ಮದಿ, ಹಾಗೂ ಅಭ್ಯುದಯಗಳೊ೦ದಿಗೆ ಹರಸಲ್ಪಡುತ್ತಾನೆ. ಶಿವರಾತ್ರಿ ವ್ರತಕ್ಕಾಗಿ ವಿಶೇಷ ರೆಸಿಪಿ: ಬಾಳೆಹಣ್ಣಿನ ಸಲಾಡ್

ಬುಡಕಟ್ಟು ಜನಾಂಗದ ಮನುಷ್ಯನ ಕಥೆ
ಬುಡಕಟ್ಟು ಜನಾಂಗದ ಬಡ ಶಿವ ಭಕ್ತನನ್ನು ಆಧರಿಸಿ ಇನ್ನೊಂದು ಕಥೆಯಿದೆ. ರಾತ್ರಿ ವೇಳೆಯಲ್ಲಿ ಒಮ್ಮೆ ಆತನು ದಾರಿ ತಪ್ಪುತ್ತಾನೆ. ಕಾಡುಪ್ರಾಣಿಗಳ ಧ್ವನಿಯನ್ನು ಕೇಳಿ ಭಯದಿಂದ ಮರವನ್ನೇರಿ ಈತ ಕುಳಿತುಕೊಳ್ಳುತ್ತಾನೆ. ತಾನು ಮಲಗಿದ ಸಂದರ್ಭದಲ್ಲಿ ಪ್ರಾಣಿಗಳು ತನ್ನ ಮೇಲೆ ದಾಳಿ ನಡೆಸಿದರೆ ಎಂದು ಹೆದರಿ ಆತ ಎಚ್ಚರಗೊಂಡಿರುತ್ತಾನೆ. ಶಿವನ ಸ್ಮರಣೆಯನ್ನು ಮಾಡುತ್ತಿರುತ್ತಾನೆ. ಬೆಳಗ್ಗಿನ ಜಾವ ನೋಡಿದಾಗ ಶಿವಲಿಂಗದ ಮೇಲೆ ಎಲೆಗಳು ಬೀಳುತ್ತಿರುವುದನ್ನು ನೋಡುತ್ತಾನೆ. ಆತ ರಾತ್ರಿಯೆಲ್ಲಾ ಶಿವನ ನಾಮ ಸ್ಮರಣೆ ಮಾಡುತ್ತಿದ್ದುದು ಶಿವನು ಮೆಚ್ಚಿಕೊಳ್ಳುತ್ತಾರೆ ಮತ್ತು ಆತ ಶಿವನ ಕೃಪಾಕಟಾಕ್ಷಕಕ್ಕೆ ಒಳಗಾಗಿರುತ್ತಾನೆ.


ಶಿವರಾತ್ರಿ ಹಬ್ಬಕ್ಕೆ ಸಂಬಂಧಿಸಿದಂತೆ ಜನರು ಹೆಚ್ಚಿನ ಕಥೆಗಳನ್ನು ಹೇಳುತ್ತಿರುತ್ತಾರೆ. ಈ ದಿನವೇ ಶಿವನು ತಾಂಡವ ನೃತ್ಯವನ್ನು ಆಡಿದ್ದು ಮತ್ತು ಪಾರ್ವತಿ ದೇವಿಯನ್ನು ವರಿಸಿರುವುದು ಎಂಬುದಾಗಿ ಕೂಡ ಪುರಾಣಗಳಲ್ಲಿ ಉಲ್ಲೇಖಗೊಂಡಿದೆ. ಅದಾಗ್ಯೂ ಶಿವರಾತ್ರಿಯನ್ನು ದೇಶದೆಲ್ಲೆಡೆ ಒಂದೇ ದಿನ ಸಂಭ್ರಮದಂದು ಆಚರಿಸಲಾಗುತ್ತದೆ. ದೇವರಿಗೆ ಜಾಗರಣೆ, ವೃತಗಳನ್ನು ಈ ದಿನ ನಡೆಸಲಾಗುತ್ತದೆ.
English summary

Stories Associated With Maha Shivratri

The festival of Maha Shivratri is no exception to the rule. Read on to find a few stories that explain why Maha Shivratri is celebrated. These stories are read and narrated during and after the pooja and before breaking the fast. Doing this will surely bring you the grace of Maheshwara. Have a look.
X
Desktop Bottom Promotion