For Quick Alerts
ALLOW NOTIFICATIONS  
For Daily Alerts

ಶಬರಿಮಲೆಯ 18 ಪವಿತ್ರ ಮೆಟ್ಟಿಲುಗಳು ಏನನ್ನು ಸೂಚಿಸುತ್ತದೆ?

|

ಕೇರಳದ ಪುಣ್ಯ ಕ್ಷೇತ್ರಗಳಲ್ಲೊಂದು ಶಬರಿಮಲೆ ಅಯ್ಯಪ್ಪ. ಅಯ್ಯಪ್ಪನ ದರ್ಶನಕ್ಕೆ ಅದರಲ್ಲೂ ಮಕರ ಜ್ಯೋತಿಯಂದು ಲಕ್ಷಾಂತರ ಜನರು ಭೇಟಿ ನೀಡುತ್ತಾರೆ. ಶಬರಿ ಮಲೆಗೆ ಹೋಗುವವರು 41 ದಿನಗಳ ಕಠಿಣ ವ್ರತವನ್ನು ಪಾಲಿಸಬೇಕು. ಸಾತ್ವಿಕ ಆಹಾರಗಳನ್ನಷ್ಟೇ ಸೇವಿಸಬೇಕು, ಬ್ರಹ್ಮಚರ್ಯ ಕಾಪಾಡಿಕೊಳ್ಳಬೇಕು, ಮಾಂಸ-ಮದ್ಯ, ಧೂಮಪಾನ ಇವುಗಳಿಂದ ದೂರವಿರಬೇಕು.

ಅಯ್ಯಪ್ಪ ಭಕ್ತರು ಈ ವ್ರತದ ಸಮಯದಲ್ಲಿ ಕಾಲಿಗೆ ಚಪ್ಪಲಿ ಕೂಡ ಧರಿಸುವುದಿಲ್ಲ, ಕಪ್ಪು ಅಥವಾ ಖಾವಿ ಪಂಚೆ, ಕುತ್ತಿಗೆಗೆ ಒಂದು ಒಂದು ಟವಲ್‌ ಸುತ್ತಿರುತ್ತಾರೆ, ಕೊರಳಿಗೆ ರುದ್ರಾಕ್ಷಿಯ ಮಾಲೆಗಳನ್ನು ಧರಿಸುತ್ತಾರೆ. ಸ್ವಾಮಿ ಅಯ್ಯಪ್ಪನಿಗೆ ಮಾಲೆ ಹಾಕಿದವರನ್ನು ಯಾರೂ ಹೆಸರಿಡಿದು ಕೂಗುವಿದಿಲ್ಲ, ಅವರನ್ನು ಸ್ವಾಮಿಯೆಂದೇ ಗೌರವಿಸುತ್ತಾರೆ. ಕನ್ನಿ ಸ್ವಾಮಿಗಳು ಕಪ್ಪು ಪಂಚೆ ಧರಿಸಿದರೆ, ಗುರು ಸ್ವಾಮಿಗಳು ಖಾವಿ ವಸ್ತ್ರವನ್ನು ಧರಿಸಿರುತ್ತಾರೆ.

ಅಯ್ಯಪ್ಪ ಸ್ವಾಮಿ ದೇವಾಲಯದ ಮೆಟ್ಟಿಲುಗಳನ್ನು ಏರಲು 10 ವರ್ಷಕ್ಕಿಂತ ಚಿಕ್ಕ ಪ್ರಾಯದ ಹುಡುಗಿಯರಿಗೆ ಹಾಗೂ 50 ವರ್ಷ ಮೇಲ್ಪಟ್ಟ ಮಹಿಳೆಯರಿಗಷ್ಟೇ (ಮುಟ್ಟು ನಿಂತ) ಅವಕಾಶ. ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ತಣ್ನೀರ ಸ್ನಾನ ಮಾಡಿ ಅಯ್ಯಪ್ಪನ ಭಜನೆಗಳನ್ನು ಹಾಡುತ್ತಾ ಸದಾ ಅಯ್ಯಪ್ಪನ ಧ್ಯಾನದಲ್ಲಿಯೇ ಇರುತ್ತಾರೆ ಅಯ್ಯಪ್ಪ ಭಕ್ತರು. 41ನೇ ದಿನ ಇರುಮುಡಿ ಹೊತ್ತುಕೊಂಡು ಅಯ್ಯಪ್ಪನ ದರ್ಶನಕ್ಕೆ ಬರುತ್ತಾರೆ. ಪಂಪಾ ನದಿಯಲ್ಲಿ ಮಿಂದು, ಶಬರಿ ಮಲೆಯನ್ನು ಏರಿ, 18 ಮೆಟ್ಟಿಲುಗಳನ್ನು ಹತ್ತಿ ಅಯ್ಯಪ್ಪ ಸ್ವಾಮಿ ದರ್ಶನ ಪಡೆಯಬೇಕು.

ಅಯ್ಯಪ್ಪ ಸ್ವಾಮಿಯ 18 ಮೆಟ್ಟಿಲುಗಳಲ್ಲಿ ಪ್ರತಿಯೊಂದು ಮೆಟ್ಟಿಲು ಒಂದೊಂದು ಅರ್ಥವನ್ನು ಸೂಚಿಸುತ್ತದೆ:

ಮೊದಲ ಐದು ಮೆಟ್ಟಿಲುಗಳು

ಮೊದಲ ಐದು ಮೆಟ್ಟಿಲುಗಳು

ಇದು ಪಂಚೇಂದ್ರೀಯಗಳ ಕೆಲಸದ ಬಗ್ಗೆ ಹೇಳುತ್ತೆ

1. ಕಣ್ಣು: ಒಳ್ಳೆಯದನ್ನು ನೋಡಬೇಕು

2. ಕಿವಿ: ಒಳ್ಳೆಯದನ್ನು ಕೇಳಲು

3. ಮೂಗು: ತಾಜಾ ಗಾಳಿಯನ್ನು ಉಸಿರಾಡಬೇಕು, ದೇವರಿಗೆ ಅರ್ಪಿಸುವ ಸುಗಂಧವನ್ನು ತೆಗೆದುಕೊಳ್ಳಬೇಕು

4. ನಾಲಗೆ: ಒಳ್ಳೆಯದನ್ನೇ ಮಾತನಾಡಬೇಕು

5. ತ್ವಚೆ: ಜಪ ಮಾಲೆಯ ಸ್ಪರ್ಶ ಮಾತ್ರ ದೇಹವನ್ನು ತಾಗಬೇಕು

ಅಷ್ಟ ರಾಗಗಳನ್ನು ಸೂಚಿಸುವ ಮುಂದಿನ 8 ಮೆಟ್ಟಿಲುಗಳು

ಅಷ್ಟ ರಾಗಗಳನ್ನು ಸೂಚಿಸುವ ಮುಂದಿನ 8 ಮೆಟ್ಟಿಲುಗಳು

ಈ ಮೆಟ್ಟಿಲುಗಳು ಮನುಷ್ಯನಿಗೆ ದೈವತ್ವದ ಅನುಭವ ಉಂಟಾಗಲು ಇವುಗಳನ್ನು ತ್ಯಜಿಸಬೇಕೆಂದು ಸೂಚಿಸುತ್ತದೆ

6. ಕಾಮ

7. ಕ್ರೋಧ

8. ಲೋಭ

9. ಮೋಹ

10. ಮಧ

11. ಮತ್ಸರ

12. ಅಸೂಯೆ

13. ಕುತಂತ್ರ

ಅದರ ಮುಂದಿನ 3 ಮೆಟ್ಟಿಲುಗಳು

ಅದರ ಮುಂದಿನ 3 ಮೆಟ್ಟಿಲುಗಳು

ಇದು ಮನುಷ್ಯನ ತ್ರಿಗುಣಗಳ ಬಗ್ಗೆ ಹೇಳುತ್ತದೆ

* ವ್ಯಕ್ತಿ ಯಾವಾಗಲೂ ಚಟುವಟಿಕೆಯಿಂದ ಇರಬೇಕು

* ಉದಾಸೀನ ಬಿಡಬೇಕು

* ಅಹಂಕಾರ ಇರಬಾರದು

ತನ್ನ ಕಾರ್ಯದ ಮೂಲಕ ದೈವವನ್ನು ಒಲಿಸಿಕೊಳ್ಳಬೇಕು.

ಕೊನೆಯ 2 ಮೆಟ್ಟಿಲುಗಳು

ಕೊನೆಯ 2 ಮೆಟ್ಟಿಲುಗಳು

ಇದು ವಿದ್ಯೆ ಹಾಗೂ ಅವಿದ್ಯೆಯ ಕುರಿತು ಹೇಳಿತು ಹೇಳುತ್ತದೆ

ವಿದ್ಯೆಯೆಂಬ ಜ್ಞಾನದಿಂದ ಅವಿದ್ಯೆ ಎಂಬ ಅಹಂ ಅನ್ನು ತೊಡೆದು ಹಾಕಬೇಕು. ತಾನು ಸಂಪೂರ್ಣವಾಗಿ ದೇವರಿಗೆ ಶರಣಾಗಬೇಕು ಎಂದು ಹೇಳುತ್ತದೆ.

English summary

Spiritual Significance of 18 Sacred Steps of Sabarimala Ayyappa Temple in kannada

Spiritual Significance of 18 Sacred Steps of Sabarimala Ayyappa Temple in kannada,
X
Desktop Bottom Promotion