For Quick Alerts
ALLOW NOTIFICATIONS  
For Daily Alerts

ಸೂರಸಂಹಾರ: ಸ್ಕಂದ ಷಷ್ಠಿಯ ದಿನಾಂಕ ಹಾಗೂ ಮಹತ್ವ

|

ಮುರುಗ, ಕಾರ್ತಿಕೇಯ ಹೀಗೆ ಹಲವು ನಾಮದಿಂದ ಕರೆಯಲ್ಪಡುವ ಸುಬ್ರಹ್ಮಣ್ಯ ಸ್ವಾಮಿಯ ಭಕ್ತರಿಗೆ ಸೂರಸಂಹಾರ ತುಂಬಾ ಮಹತ್ವವಾದ ದಿನ. ಸೂರ ಸಂಹಾರವನ್ನು ಸ್ಕಂದ ಷಷ್ಟಿಯೆಂದು ಆಚರಿಸಲಾಗುವುದು. ದಕ್ಷಿಣ ಭಾರತದ ಪ್ರಮುಖ ಆಚರಣೆಗಳಲ್ಲಿ ಒಂದಾಗಿರುವ ಸ್ಕಂದ ಷಷ್ಠಿಯನ್ನು 6 ದಿನಗಳವರೆಗೆ ಆಚರಿಸಲಾಗುವುದು. ಈ ವರ್ಷ ನವೆಂಬರ್‌9ರಿಂದು ಆಚರಿಸಲಾಗುವುದು.

ಕಾರ್ತಿಕ ಮಾಸದ ಹುಣ್ಣಿಮೆಯಂದು ಪ್ರಾರಂಭವಾಗುವ ಹಬ್ಬ

ಕಾರ್ತಿಕ ಮಾಸದ ಹುಣ್ಣಿಮೆಯಂದು ಪ್ರಾರಂಭವಾಗುವ ಹಬ್ಬ

ಕಾರ್ತಿಕ ಮಾಸದ ಹುಣ್ಣಿಮೆಯಂದು ಈ ಹಬ್ಬ ಪ್ರಾರಂಭವಾಗುತ್ತದೆ. ಈ ಹಬ್ಬದಲ್ಲಿ ದೇವರಿಗೆ ರಥೋತ್ಸವ ಹಾಗು ವಿಶೇಷ ಪೂಜೆಗಳು ನಡೆಯುತ್ತವೆ. ಸ್ಕಂದ ಅಥವಾ ಸುಬ್ರಹ್ಮಣ್ಯನು ತನ್ನ ಆಯುಧವನ್ನು(ಭರ್ಜಿಯನ್ನು) ಪಡೆಯುವ ಮೂಲಕ ಕತ್ತಲೆಯ ಮೇಲೆ ಆಧ್ಯಾತ್ಮದ ಬೆಳಕಿನ ಗೆಲ್ಲುವ ಹಬ್ಬ ಇದಾಗಿದೆ.

ಸೂರ ಸಂಹಾರ ದಿನಾಂಕ

ಸೂರ ಸಂಹಾರ ದಿನಾಂಕ

ಷಷ್ಠಿ ತಿಥಿ ಪ್ರಾರಂಭ: ನವೆಂಬರ್ 9 ಬೆಳಗ್ಗೆ10:35ಕ್ಕೆ

ಷಷ್ಠಿ ತಿಥಿ ಮುಕ್ತಾಯ: ನವೆಂಬರ್ 10, 8:25ಕ್ಕೆ

ಆಚರಣೆ ಹೇಗೆ ಮಾಡಲಾಗುವುದು?

ಆಚರಣೆ ಹೇಗೆ ಮಾಡಲಾಗುವುದು?

ಈ ಆಚರಣೆಯಲ್ಲಿ ಭಕ್ತರು ಉಪವಾಸವಿದ್ದು ಸುಬ್ರಮಣ್ಯಸ್ವಾಮಿಯ ಜಪ ಮಾಡುತ್ತಾ ನಿಷ್ಠೆಯಿಂದ ಆಚರಿಸುತ್ತಾರೆ. ಸೂರ ಸಂಹಾರ ಆಚರಿಸುವುದರಿಂದ ಭಕ್ತರಿಗೆ ಒಳ್ಳೆಯ ಫಲ ಸಿಗುವುದು ಎಂಬುವುದು ಸುಬ್ರಮಣ್ಯ ಸ್ವಾಮಿಯ ಭಕ್ತರ ಅಚಲ ನಂಬಿಕೆಯಾಗಿದೆ.

ಸೂರ ಸಂಹಾರದ ಹಿಂದಿರುವ ಪೌರಾಣಿಕ ಕತೆ

ಸೂರ ಸಂಹಾರದ ಹಿಂದಿರುವ ಪೌರಾಣಿಕ ಕತೆ

ಅತಿ ದೊಡ್ಡದಾದ ಹಾಗು 18 ಮಹಾಪುರಾಣಗಳಲ್ಲಿ ಒಂದಾದ ಸ್ಕಂದ ಪುರಾಣದ ಪ್ರಕಾರ, ಸೂರಪದ್ಮ, ಸಿಂಹಮುಖ ಹಾಗು ತಾರಕಾಸುರ ರಾಕ್ಷಸರು ತಮ್ಮ ಸೈನ್ಯ ಕಟ್ಟಿಕೊಂಡು ದೇವತೆಗೆಳ ಮೇಲೆ ಯುದ್ಧ ಮಾಡಿ ಭೂಮಿಯನ್ನು ವಶಪಡಿಸಿಕೊಳ್ಳುತ್ತಾರೆ. ರಾಕ್ಷಸರು ದೇವತೆಗಳನ್ನು ಹಾಗೂ ಮನುಷ್ಯರನ್ನು ಹಿಂಸೆ ನೀಡುತ್ತಾರೆ. ರಾಕ್ಷಸ ಸೂರಪದ್ಮನು ಶಿವನು ಸತಿಯ ನಂತರ ಐಹಿಕ ಜೀವನವನ್ನು ತ್ಯಜಿಸಿ, ಗಂಭೀರವಾದ ತಪ್ಪಸ್ಸಿನಲ್ಲಿ ಮುಳುಗಿದ್ದಾನೆಂಬುದನ್ನು ಅರಿತು, ತನಗೆ ಶಿವನ ಮಗನಿಂದಲೇ ಸಾವಾಗ ಬೇಕು ಎಂಬ ವರವನ್ನು ತೆಗೆದುಕೊಂಡಿರುತ್ತಾನೆ. ದೇವತೆಗಳು ತಪ್ಪಸ್ಸಿನಲ್ಲಿದ್ದ ಶಿವನ ಪಾದಕ್ಕೆ ಬಿದ್ದು ತಮ್ಮನ್ನು ರಕ್ಷಿಸುವಂತೆ ಕೇಳುತ್ತಾರೆ. ಬ್ರಹ್ಮ ದೇವನ ಸಲಹೆಯ ಮೇರೆಗೆ ದೇವತೆಗಳು ಮನ್ಮಥನ ಸಹಾಯ ಪಡುತ್ತಾರೆ. ಮನ್ಮಥ ಶಿವನಲ್ಲಿ ಕಾಮದ ಇಚ್ಚೆಯನ್ನು ಪ್ರಚೋದಿಸುತ್ತಾನೆ. ಇದರಿಂದ ಕೋಪಗೊಂಡ ಶಿವನು ಮನ್ಮಥನನ್ನು ಸುಟ್ಟು ಬೂದಿ ಮಾಡುತ್ತಾನೆ.

English summary

Soorasamharam 2021: Time, date, story, significance about the Festival Dedicated to Lord Murugan

Soorasamharam 2021: Time, date, story, significance about the Festival Dedicated to Lord Murugan,
X
Desktop Bottom Promotion