For Quick Alerts
ALLOW NOTIFICATIONS  
For Daily Alerts

ಶನಿ ಅಮವಾಸ್ಯೆಯಂದು ಸೂರ್ಯಗ್ರಹಣ: ಶನಿದೋಷ ನಿವಾರಣೆಗೆ ಏನು ಮಾಡಬೇಕು?

|

ಹಿಂದೂ ಧರ್ಮದಲ್ಲಿ ಅಮವಾಸ್ಯೆ, ಹುಣ್ಣಿಮೆಗೆ ತುಂಬಾನೇ ಮಹತ್ವವಿದೆ. ಸಾಮಾನ್ಯವಾಗಿ ಅಮವಾಸ್ಯೆ ದಿನ ಯಾವ ಶುಭ ಕಾರ್ಯಗಳನ್ನೂ ಮಾಡುವುದಿಲ್ಲ. ಈ ಬಾರಿ ಅಮೆವಾಸ್ಯೆ ಡಿಸೆಂಬರ್‌ 4 ಶನಿವಾರ ಬಂದಿದೆ. ಅಮವಾಸ್ಯೆ ಶನಿವಾರ ಬಂದರೆ ಶನಿ ಅಮವಾಸ್ಯೆ ಎಂದು ಕರೆಯಲಾಗುವುದು. ಆದರೆ ಈ ಬಾರಿ ಈ ಅಮವಾಸ್ಯೆಯ ಮತ್ತೊಂದು ವಿಶೇಷವೆಂದರೆ ಸೂರ್ಯಗ್ರಹಣವೂ ಸಂಭವಿಸಲಿದೆ.

ಧಾರ್ಮಿಕ ದೃಷ್ಟಿಕೋನದಿಂದ ನೋಡುವುದಾದರೆ ಶನಿ ಅಮವಾಸ್ಯೆ ಹಾಗೂ ಸೂರ್ಯಗ್ರಹಣ ಎರಡು ತುಂಬಾನೇ ಪ್ರಾಮುಖ್ಯತೆ ಹೊಂದಿದೆ. ಶನಿಯು ಸೂರ್ಯನ ಮಗ. ಸೂರ್ಯ ಹಾಗೂ ಶನಿ ಎರಡೂ ಗ್ರಹಗಳ ಕೃಪೆಯಿದ್ದರೆ ಬದುಕಿನಲ್ಲಿ ಒಳಿತಾಗುವುದು ಎಂದು ನಂಬಲಾಗಿದೆ. ಈ ಲೇಖನದಲ್ಲಿ ಧಾರ್ಮಿಕ ನಂಬಿಕೆ ಪ್ರಕಾರ ಶನಿ ಅಮವಾಸ್ಯೆಯಂದು ಯಾವ ಕಾರ್ಯಗಳನ್ನು ಮಾಡಿದರೆ ಒಳ್ಳೆಯದು ಎಂದು ಹೇಳಲಾಗಿದೆ ನೋಡಿ:

ಅಮವಾಸ್ಯೆ ಪ್ರಾರಂಭ

ಅಮವಾಸ್ಯೆ ಪ್ರಾರಂಭ

ಹಿಂದೂ ಪಂಚಾಂಗದ ಪ್ರಕಾರ, ಮಾರ್ಗಶಿರ ಮಾಸದ ಕೃಷ್ಣ ಪಕ್ಷದ ಅಮಾವಾಸ್ಯೆಯು ಡಿಸೆಂಬರ್ 03 ರ ಸಂಜೆ 04:55 ರಿಂದ ಪ್ರಾರಂಭವಾಗಿ ದಿನಾಂಕ 04 ಡಿಸೆಂಬರ್ 2021 ರಂದು ಮಧ್ಯಾಹ್ನ 01.12 ರವರೆಗೆ ಇರುತ್ತದೆ.

ಶನಿದೇವನು ಸೂರ್ಯನ ಮಗ, ಆದ್ದರಿಂದ ದಾನ ಮಾಡುವುದು ಅವಶ್ಯಕ

ಶನಿದೇವನು ಸೂರ್ಯನ ಮಗ, ಆದ್ದರಿಂದ ದಾನ ಮಾಡುವುದು ಅವಶ್ಯಕ

ಧಾರ್ಮಿಕ ಗ್ರಂಥಗಳ ಪ್ರಕಾರ, ಶನಿ ದೇವ ಸೂರ್ಯನ ಮಗ ಎಂದು ಹೇಳಲಾಗುತ್ತದೆ. ಸೂರ್ಯ ಮತ್ತು ಶನಿ ಎರಡೂ ಗ್ರಹಗಳು ಒಟ್ಟಿಗೆ ಸಂತೋಷವಾಗಿದ್ದರೆ ಅದು ತುಂಬಾ ಒಳ್ಳೆಯದು. ಆದ್ದರಿಂದ ಶನಿ ಮತ್ತು ಸೂರ್ಯ ಇಬ್ಬರಿಗೂ ದಾನ ಮಾಡುವುದು ಅವಶ್ಯಕ.

ಈ ವಸ್ತುಗಳನ್ನು ದಾನ ಮಾಡಿ

ಈ ವಸ್ತುಗಳನ್ನು ದಾನ ಮಾಡಿ

ಅಮವಾಸ್ಯೆಯ ದಿನದಂ ದಾನಕ್ಕೆ ವಿಶೇಷ ಮಹತ್ವವಿದೆ . ಶನಿ ಅಮಾವಾಸ್ಯೆ ಒಂದೇ ದಿನದಲ್ಲಿ ದಾನ ಮಾಡುವುದು ತುಂಬಾ ಮಂಗಳಕರವಾಗಿರುತ್ತದೆ. ಈ ದಿನ ಪೂಜೆಯ ಪ್ರಕಾರ ದಾನ ಮಾಡಲು ಸಂಕಲ್ಪ ಮಾಡಬೇಕು. ನಂತರ ನಿರ್ಗತಿಕರಿಗೆ ದಾನ ಮಾಡಬೇಕು.

* ಈ ದಿನ ಎಣ್ಣೆ, ಪಾದರಕ್ಷೆ, ಮರದ ಹಾಸಿಗೆ, ಛತ್ರಿ, ಕಪ್ಪು ಬಟ್ಟೆ ಮತ್ತು ಉದ್ದಿನ ಬೇಳೆಯನ್ನು ದಾನ ಮಾಡುವುದರಿಂದ ಜಾತಕದಲ್ಲಿರುವ ಶನಿ ದೋಷವು ಕೊನೆಗೊಳ್ಳುತ್ತದೆ. * ಶನಿದೇವ ದೋಷವಿರುವವರು ಅವರ ನೆರಳನ್ನು ನೋಡಿ ಸಾಸಿವೆ ಎಣ್ಣೆಯನ್ನು ದಾನ ಮಾಡಬೇಕು

* ನಿರ್ಗತಿಕರಿಗೆ ದಾನ ಮಾಡಿ.

ವ್ಯಾಪಾರವನ್ನು ಹೆಚ್ಚಿಸಲು ಈ ಕ್ರಮಗಳನ್ನು ತೆಗೆದುಕೊಳ್ಳಿ

ವ್ಯಾಪಾರವನ್ನು ಹೆಚ್ಚಿಸಲು ಈ ಕ್ರಮಗಳನ್ನು ತೆಗೆದುಕೊಳ್ಳಿ

ನೀವು ವ್ಯಾಪಾರವನ್ನುಹೆಚ್ಚಿಸಲು ಬಯಸಿದರೆ, ಶನಿ ಅಮಾವಾಸ್ಯೆಯ ದಿನದಂದು ನಿಮ್ಮ ಅಂಗಡಿ ಅಥವಾ ಕಾರ್ಖಾನೆಯ ಗೇಟ್‌ನಲ್ಲಿ ಕಪ್ಪು ಕುದುರೆಯನ್ನು ಕಟ್ಟಿ ಅದಕ್ಕೆ ಆಹಾರವನ್ನು ನೀಡಿ. ಕಪ್ಪು ನಾಯಿಗಳಿಗೆ ಆಹಾರ ಹಾಕಿ. ಸಾಯಂಕಾಲ ಪಶ್ಚಿಮ ದಿಕ್ಕಿಗೆ ಎಣ್ಣೆಯ ದೀಪವನ್ನು ಹಚ್ಚಿ ‘ಓಂ ಶನಿಶ್ಚರಾಯ ನಮಃ' ಎಂಬ ಮಂತ್ರವನ್ನು ಪಠಿಸುತ್ತಾ ಪ್ರದಕ್ಷಿಣೆ ಮಾಡಿದರೆ ಲಾಭದಾಯಕ.

ಶನಿ ಅಮವಾಸ್ಯೆಯ ದಿನ ಆಲದ ಮರ ನೆಡಿ ಅಥವಾ ನೀರು ಹಾಕಿ

ಶನಿವಾರದಂದು ಆಲದ ಮರ ಸುತ್ತಿ ಬಂದು ಅದಕ್ಕೆ ನೀರು ಹಾಕಬೇಕು. ಈ ದಿನ ಆಲದ ಮರ ನೆಡುವುದು ಕೂಡ ಒಳ್ಳೆಯದು.

ಸೂರ್ಯಗ್ರಹಣದ ಸಮಯದಲ್ಲಿ ಏನು ಮಾಡಬೇಕು

ಸೂರ್ಯಗ್ರಹಣದ ಸಮಯದಲ್ಲಿ ಏನು ಮಾಡಬೇಕು

ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 12:30ರಿಂದ ಸೂರ್ಯಗ್ರಹಣ ಪ್ರಾರಂಭ, ರಾತ್ರಿ 01:36ಕ್ಕೆ ಮುಕ್ತಾಯ. ಹಾಗಾಗಿ ಈ ಬಾರಿ ಭಾರತಕ್ಕೆ ಸೂರ್ಯಗ್ರಹಣ ಸೂತಕವಿಲ್ಲ.

1. ಗ್ರಹಣ ಪ್ರಾರಂಭವಾಗುವ ಮೊದಲು ನಿಮ್ಮನ್ನು ಶುದ್ಧೀಕರಿಸಿ. ಗ್ರಹಣ ಪ್ರಾರಂಭವಾಗುವ ಮೊದಲು ಸ್ನಾನ ಮಾಡುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ.

2. ಗ್ರಹಣ ಕಾಲದಲ್ಲಿ ನಿಮ್ಮ ಇಷ್ಟ ದೇವ ಅಥವಾ ದೇವಿಯನ್ನು ಪೂಜಿಸುವುದು ಮಂಗಳಕರ.

3. ಸೂರ್ಯಗ್ರಹಣದ ಸಮಯದಲ್ಲಿ ದಾನ ಮಾಡುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ. ಗ್ರಹಣ ಮುಗಿದ ನಂತರ ಮನೆಯಲ್ಲಿ ಗಂಗಾಜಲವನ್ನು ಚಿಮುಕಿಸಬೇಕು.

4. ಗ್ರಹಣ ಮುಗಿದ ನಂತರ ಮತ್ತೊಮ್ಮೆ ಸ್ನಾನ ಮಾಡಬೇಕು. ಅಂತಹ ಶುಭ ಫಲಗಳು ಲಭಿಸುತ್ತವೆ ಎಂದು ಹೇಳಲಾಗುತ್ತದೆ.

5. ಗ್ರಹಣ ಕಾಲದಲ್ಲಿ ತುಳಸಿ ಎಲೆಗಳನ್ನು ಆಹಾರ ಪದಾರ್ಥಗಳಲ್ಲಿ ಹಾಕಬೇಕು.

ಸೂರ್ಯಗ್ರಹಣದ ಸಮಯದಲ್ಲಿ ಈ ವಿಷಯಗಳನ್ನು ನೆನಪಿನಲ್ಲಿಡಿ-

1. ನಂಬಿಕೆಗಳ ಪ್ರಕಾರ, ಗ್ರಹಣ ಸಮಯದಲ್ಲಿ ಆಹಾರ ಅಥವಾ ನೀರನ್ನು ಸೇವಿಸಬಾರದು. ಹೀಗೆ ಮಾಡುವುದರಿಂದ ವ್ಯಕ್ತಿಯ ಜೀರ್ಣಶಕ್ತಿ ದುರ್ಬಲವಾಗುತ್ತದೆ ಎಂದು ಹೇಳಲಾಗುತ್ತದೆ. ಈ ಕಾರಣದಿಂದಾಗಿ, ವ್ಯಕ್ತಿಯು ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚು.

2. ಗ್ರಹಣದ ಸಮಯದಲ್ಲಿ ಯಾವುದೇ ಹೊಸ ಕೆಲಸ ಅಥವಾ ಶುಭ ಕಾರ್ಯಗಳನ್ನು ಮಾಡಬಾರದು ಎಂದು ಹೇಳಲಾಗುತ್ತದೆ. ಹಾಗೆ ಮಾಡುವುದರಿಂದ ಆ ಕೆಲಸದಲ್ಲಿ ಸೋಲು ಉಂಟಾಗುತ್ತದೆ.

3. ಗ್ರಹಣದ ಸಮಯದಲ್ಲಿ ಉಗುರುಗಳನ್ನು ಕತ್ತರಿಸುವುದು, ಕೂದಲನ್ನು ಬಾಚಿಕೊಳ್ಳುವುದು ಮತ್ತು ಹಲ್ಲುಗಳನ್ನು ಸ್ವಚ್ಛಗೊಳಿಸುವುದು ಅಶುಭವೆಂದು ಪರಿಗಣಿಸಲಾಗುತ್ತದೆ. ಗ್ರಹಣದ ಸಮಯದಲ್ಲಿ ಮಲಗಬಾರದು ಎಂದು ಹೇಳಲಾಗುತ್ತದೆ.

4. ಗ್ರಹಣದ ಸಮಯದಲ್ಲಿ ಚಾಕು ಅಥವಾ ಹರಿತವಾದ ವಸ್ತುಗಳನ್ನು ಬಳಸಬಾರದು ಎಂದು ಹೇಳಲಾಗುತ್ತದೆ. ಹೀಗೆ ಮಾಡುವುದರಿಂದ ಅಶುಭ ಫಲ ಸಿಗುತ್ತದೆ ಎಂದು ಹೇಳಲಾಗುತ್ತದೆ.

ಈ ಲೇಖನದಲ್ಲಿ ನೀಡಲಾದ ಮಾಹಿತಿಯನ್ನು ಧಾರ್ಮಿಕ ನಂಬಿಕೆಗಳ ಆಧಾರದ ಮೇಲೆ ನೀಡಲಾಗಿದೆ. ಈ ನಂಬಿಕೆಗಳನ್ನು ಪಾಲಿಸುವುದು, ಬಿಡುವುದು ಅವರವರ ವೈಯಕ್ತಿಕ ವಿಚಾರ.

English summary

Solar Eclipse On Shani Amavasya : Remedies To Please Shani Dev To Remove Shani Dosha in kannada

Solar Eclipse On Shani Amavasya : Remedies To Please Shani Dev To Remove Shani Dosha in kannada, Read on...
Story first published: Thursday, December 2, 2021, 10:30 [IST]
X