For Quick Alerts
ALLOW NOTIFICATIONS  
For Daily Alerts

ಜ. 7ಕ್ಕೆ ಸ್ಕಂದ ಷಷ್ಠಿ: ರೋಗ, ದುಃಖ ಮತ್ತು ದಾರಿದ್ರ್ಯ ನಿವಾರಣೆಗೆ ಪಾಲಿಸಬೇಕಾದ ಪೂಜಾ ವಿಧಿಗಳೇನು?

|

ಸ್ಕಂದ ಷಷ್ಠಿಯು ದಕ್ಷಿಣ ಭಾರತದಲ್ಲಿ ಆಚರಿಸಲಾಗುವ ಪ್ರಮುಖ ಆಚರನೆಗಳಲ್ಲಿ ಒಂದಾಗಿದೆ. ಈ ದಿನ ಪಾರ್ವತಿ ದೇವಿ ಮತ್ತು ಶಂಕರನ ಮಗನಾದ ಕಾರ್ತಿಕೇಯ/ಮುರುಗ/ ಸುಬ್ರಮಣ್ಯನಿಗೆ ಪೂಜೆಯನ್ನು ಮಾಡಲಾಗುವುದು.

ಸ್ಕಂದ ಷಷ್ಠಿಯನ್ನು ಪೌಷ ಮಾಸದ ಶುಕ್ಲ ಪಕ್ಷದ ಆರನೆಯ ದಿನದಂದು ಆಚರಿಸಲಾಗುವುದು. ಈ ಬಾರಿ ಮಾಸಿಕ ಸ್ಕಂದ ಷಷ್ಠಿಯನ್ನು ಜನವರಿ 7 ರಂದು ಆಚರಿಸಲಾಗುವುದು. ಕಾರ್ತಿಕೇಯನ ಆರಾಧನೆಯಿಂದ ಮಾಡುವುದರಿಂದ ರೋಗ, ದುಃಖ ಮತ್ತು ದಾರಿದ್ರ್ಯ ನಿವಾರಣೆಯಾಗುತ್ತದೆ ಎಂಬು ವುದು ಅವನನ್ನು ನಂಬಿರುವ ಭಕ್ತರ ಅಚಲ ನಂಬಿಕೆ. ಪುರಾಣಗಳ ಪ್ರಕಾರ, ಶಿವನ ತೇಜಸ್ಸಿನಿಂದ ಜನಿಸಿದ ಆರು ಮುಖದ ಮಗು ಸ್ಕಂದನನ್ನು ಆರು ಕೃತಿಕಾರರು ಹಾಲುಣಿಸಿದರು ಆದ್ದರಿಂದ ಆ ಮಗುವಿಗೆ ಕಾರ್ತಿಕೇಯ ಎಂಬ ಹೆಸರು ಬಂತು. ಈ ದಿನ ಸುಬ್ರಮಣ್ಯ ಸ್ವಾಮಿಯ ಪೂಜೆಗೆ ತುಂಬಾ ಶುಭ ದಿನವಾಗಿದ್ದು ಪೂಜೆಗೆ ಶುಭ ಮುಹೂರ್ತ ಯಾವಾಗ, ಪೂಜಾ ವಿಧಿ ನಿಯಮಗಳೇನು ಎಂದು ತಿಳಿಯೋಣ:

ಸ್ಕಂದ ಷಷ್ಠಿ ಮುಹೂರ್ತ

ಸ್ಕಂದ ಷಷ್ಠಿ ಮುಹೂರ್ತ

ಷಷ್ಠಿ ತಿಥಿ ಆರಂಭ: ಜನವರಿ 7ಶುಕ್ರವಾರ, ಬೆಳಗ್ಗೆ 11:10 ರಿಂದ

ಷಷ್ಠಿ ದಿನಾಂಕ ಮುಕ್ತಾಯ: ಜನವರಿ 8, ಶನಿವಾರ ಬೆಳಗ್ಗೆ 10:42 ಕ್ಕೆ

ಸ್ಕಂದ ಷಷ್ಠಿಯ ಮಹತ್ವ

ಸ್ಕಂದ ಷಷ್ಠಿಯ ಮಹತ್ವ

ಸ್ಕಂದ ಷಷ್ಠಿಯ ವ್ರತವನ್ನು ಆಚರಿಸುವುದರಿಂದ ಕಾಮ, ಕ್ರೋಧ, ಹುಚ್ಚು, ಮೋಹ, ಅಹಂಕಾರಗಳಿಂದ ಮುಕ್ತಿ ಪಡೆದು ಸನ್ಮಾರ್ಗ ಪ್ರಾಪ್ತಿಯಾಗುತ್ತದೆ ಎಂದು ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕಾರ್ತಿಕೇಯನು ಷಷ್ಠಿ ತಿಥಿ ಮತ್ತು ಮಂಗಳದ ಅಧಿಪತಿ ಮತ್ತು ಅವನ ವಾಸಸ್ಥಾನವು ದಕ್ಷಿಣ ದಿಕ್ಕಿನಲ್ಲಿದೆ. ಅದಕ್ಕಾಗಿಯೇ ತಮ್ಮ ಜಾತಕದಲ್ಲಿ ಮಂಗಳ ದೋಷವಿದ್ದರೆ, ಮಂಗಳವನ್ನು ಬಲಪಡಿಸಲು ಮತ್ತು ಮಂಗಳಕರ ಫಲಿತಾಂಶಗಳನ್ನು ಪಡೆಯಲು ಈ ದಿನ ಕಾರ್ತಿಕೇಯನ ಉಪವಾಸವನ್ನು ಆಚರಿಸಿದರೆ ಒಳ್ಳೆಯದು. ಸ್ಕಂದ ಷಷ್ಠಿಯನ್ನು ಚಂಪಾ ಷಷ್ಠಿ ಎಂದೂ ಕರೆಯುತ್ತಾರೆ.

ಸ್ಕಂದ ಷಷ್ಠಿಯ ಪೂಜಾ ವಿಧಾನಗಳೇನು?

ಸ್ಕಂದ ಷಷ್ಠಿಯ ಪೂಜಾ ವಿಧಾನಗಳೇನು?

* ಸ್ಕಂದ ಷಷ್ಠಿಯ ದಿನ ಬ್ರಹ್ಮಮುಹೂರ್ತದಲ್ಲಿ ಸ್ನಾನ ಮಾಡಿ ಶುದ್ಧಿ ಮಾಡಿಕೊಳ್ಳಿ.

* ನಂತರ ಒಂದು ಹಲಗೆಯ ಮಲೆ ಕೆಂಪು ಬಟ್ಟೆಯನ್ನು ಹರಡಿ ಮತ್ತು ಭಗವಾನ್ ಕಾರ್ತಿಕೇಯನ ವಿಗ್ರಹವನ್ನು ಸ್ಥಾಪಿಸಿ.

* ಕಾರ್ತಿಕೇಯನ ಜೊತೆಗೆ ಶಂಕರ-ಪಾರ್ವತಿ ಮತ್ತು ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಬೇಕು.

* ಬಳಿಕ ದೆ ಕಲಶವನ್ನು ಸ್ಥಾಪಿಸಿ.

* ಮೊದಲು ಗಣೇಶನಿಗೆ ಪೂಜೆ ಮಾಡಿ.

* ಸಾಧ್ಯವಾದರೆ, ಅಖಂಡ ಜ್ಯೋತಿಯನ್ನು ಬೆಳಗಿಸಿ ಇಲ್ಲಿದದ್ದರೆ ಬೆಳಗ್ಗೆ ಮತ್ತು ಸಂಜೆ ದೀಪವನ್ನು ಬೆಳಗಿಸಿ.

* ಇದಾದ ನಂತರ ಕಾರ್ತಿಕೇಯನಿಗೆ ನೀರನ್ನು ಅರ್ಪಿಸಿ, ಹೊಸ ಬಟ್ಟೆ, ಹೂ, ಹಣ್ಣುಗಳು

ಸಿಹಿತಿಂಡಿಗಳನ್ನು ಅರ್ಪಿಸಿ.

* ಮನಸ್ಸಿನಲ್ಲಿ ಸಂಕ್ಲಪ ಮಾಡಿ

ನಿರ್ದಿಷ್ಟ ಕಾರ್ಯ ಸಿದ್ಧಿಗಾಗಿ ಈ ದಿನ ಮಾಡುವ ಪೂಜೆ ಫಲಪ್ರದವಾಗುವುದು.

English summary

Skanda Shasti 2022 Dates, Timings, Puja Vidhi and Significance in kannada

Skanda Shasti 2022 Dates, Timings, Puja Vidhi and Significance in kannada...
Story first published: Thursday, January 6, 2022, 16:34 [IST]
X
Desktop Bottom Promotion